ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ಗೆ ರಾಜ್ಯ ಸರ್ಕಾರದಿಂದ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸೂಪರ್ ಸ್ಟಾರ್ ರಜನಿಕಾಂತ್, ತೆಲುಗು ಖ್ಯಾತ ನಟ ಜ್ಯೂನಿಯರ್ ಎನ್ಟಿಆರ್ ಹಾಗೂ ಇನ್ಫೋಸಿಸ್ನ ಸುಧಾಮೂರ್ತಿ ನೇತೃತ್ವದಲ್ಲಿ ಅಪ್ಪುಗೆ ಮ*ರ*ಣೋತ್ತರವಾಗಿ ಕರ್ನಾಟಕ ರತ್ನ ನೀಡಲಾಯ್ತು. ಈ ವೇದಿಕೆ ಮೇಲೆ ಮಾತನಾಡಿದ ರಜನಿಕಾಂತ್, ಪುನೀತ್ ರಾಜ್ಕುಮಾರ್ ನಿ*ಧ*ನರಾದಾಗ ತಾವ್ಯಾಕೆ ಅವರನ್ನು ನೋಡೋದಕ್ಕೆ ಬರಲಿಲ್ಲ. ತಾವ್ಯಾಕೆ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿಲ್ಲ ಎನ್ನುವ ಬಗ್ಗೆ ಕಾರಣ ತಿಳಿಸಿದ್ದಾರೆ. ಪುನೀತ್ ರಾಜ್ಕುಮಾರ್ ಅವರ ಪ್ರೀತಿಗೆ ಪಾತ್ರರಾಗಿದ್ದ ತಲೈವಾ ಹಾಗ್ಯಾಕೆ ಮಾಡಿದ್ರು? ಇದೀಗ ಈ ಪ್ರಶ್ನೆಗೆ, ಕುತೂಹಲಕ್ಕೆ ಖುದ್ದು ರಜನಿಕಾಂತ್ ಅವರೇ ಉತ್ತರಿಸಿದ್ದಾರೆ.
ಪುನೀತ್ ರಾಜ್ಕುಮಾರ್ ಕಳೆದ 2021ರ ಅಕ್ಟೋಬರ್ 29ರಂದು ನಿ*ಧ*ನರಾದರು. ಅದೇ ಟೈಮ್ನಲ್ಲಿ ಅತ್ತ ರಜನಿಕಾಂತ್ ಅನಾರೋಗ್ಯಕ್ಕೆ ಒಳಗಾಗಿದ್ದರು. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಆಪರೇಷನ್ ಕೂಡ ಮಾಡಲಾಗಿತ್ತಂತೆ. ರಜನಿಕಾಂತ್ ಫ್ಯಾಮಿಲಿಯವರಿಗೆ ಪುನೀತ್ ರಾಜ್ಕುಮಾರ್ ನಿ*ಧ*ನರಾದ ವಿಚಾರ ಗೊತ್ತಾಗಿದೆ. ಆದರೆ ರಜನಿಕಾಂತ್ ಐಸಿಯುನಲ್ಲಿ ಇರುವುದರಿಂದ ಅವರಿಗೆ ಹೇಳಿದರೆ ಆಘಾತಕ್ಕೆ ಒಳಗಾಗಬಹುದು ಅಂತ ಈ ವಿಚಾರ ತಿಳಿಸದೇ ಇರಲು ಕುಟುಂಬಸ್ಥರು ನಿರ್ಧರಿಸಿದ್ದರಂತೆ. ಹೀಗಾಗಿ ಅಪ್ಪು ಇನ್ನಿಲ್ಲ ಎಂಬ ವಿಚಾರ ರಜನಿ ಕಾಂತಗೆ ಗೊತ್ತಾಗಿದ್ದು 3 ದಿನಗಳ ನಂತರವಂತೆ!
ವಿಚಾರ ಗೊತ್ತಾದಾಗ ನನಗೆ ನಂಬೋದಕ್ಕೇ ಆಗೋದಿಲ್ಲ. ನಾನು ಪುನೀತ್ಗೆ 35ರಿಂದ 37 ವರ್ಷ ಇರಬೇಕು ಅಂದಕೊಂಡಿದ್ದೆ. ಆದ್ರೆ ಅವರು ತೀ*ರಿಕೊಂಡಾಗಲೇ 46 ವರ್ಷವಾಗಿತ್ತು ಅಂತ ಗೊತ್ತಾಯಿತು ಅಂತ ರಜನಿಕಾಂತ್ ಅಚ್ಚರಿಪಟ್ರು. ಅನಾರೋಗ್ಯದಿಂದಾಗಿ ಪುನೀತ್ ತೀರಿಕೊಂಡಾಗ ನಾನು ಬರಲಿಲ್ಲ ಎಂದ ರಜನಿಕಾಂತ್, ನಾನು ಬಂದಿದ್ದರೂ ಅವರನ್ನು ನೋಡೋದಕ್ಕೆ ಧೈರ್ಯವಾಗುತ್ತಿರಲಿಲ್ಲ.
ನಾನು ಅವರನ್ನು ಮೊದಲು ನೋಡಿದ್ದು 4 ವರ್ಷದ ಮಗುವಾಗಿದ್ದಾಗ. ಅವರಿನ್ನೂ ಮಗುವಿನಂತೆ ನನ್ನ ಮನಸ್ಸಿನಲ್ಲಿ ಇದ್ದಾರೆ. ಆ ನೋಟವನ್ನು ಕಳೆದುಕೊಳ್ಳಲು ನಾನು ಇಷ್ಟಪಡುವುದಿಲ್ಲ ಅಂತ ರಜನಿಕಾಂತ್ ವೇದಿಕೆ ಮೇಲೆ ಭಾವುಕರಾದರು. ಪುನೀತ್ ರಾಜ್ಕುಮಾರ್ ಎಲ್ಲಿಯೂ ಹೋಗಿಲ್ಲ. ಅಪ್ಪು ದೇವರ ಮಗು. ಆ ದೇವರ ಮಗು ನಮ್ಮ ಜೊತೆ ಬಂದು, ಸ್ವಲ್ಪ ದಿನ ಆಟ ಆಡಿ, ತನ್ನ ಲೀಲೆಯನ್ನು ತೋರಿ ಮತ್ತೆ ದೇವರ ಬಳಿಯೇ ಹೋಗಿದೆ. ಆತ ಎಲ್ಲಿಯೂ ಹೋಗಿಲ್ಲ, ನಮ್ಮ ನಡುವೆಯೇ ಇದ್ದಾನೆ. ಆ ತನ್ನ ಸಿನಿಮಾದ ಮೂಲಕ, ತನ್ನ ಸಮಾಜ ಸೇವೆ ಮೂಲಕ ಅಮರರಾಗಿ ಇರುತ್ತಾನೆ ಅಂತ ರಜನಿ ಶ್ಲಾಘಿಸಿದರು.