ನಟ ದರ್ಶನ್ ಅವರು ಏನೇ ಮಾಡಿದರು ಸುದ್ದಿ ಆಗುತ್ತದೆ. ಕಳೆದ ಆರೇಳು ತಿಂಗಳುಗಳಿಂದ ದರ್ಶನ್ ಅವರು ಮೀಡಿಯಾದಲ್ಲೇ ಸಿಕ್ಕಾಪಟ್ಟೆ ಸುದ್ದಿಯಾದ ನಟ. ಎಲ್ಲಾ ಒಂದೊಂದಾಗಿ ಮರೆಯಾಗಿ ಈಗ ಎಲ್ಲವೂ ನಾರ್ಮಲ್ ಆಗುವ ಹಂತದಲ್ಲಿದೆ. ಆ ವೇಳೆ ದರ್ಶನ್ ಅವರು ಒಂದು ವಿಡಿಯೋ ಮಾಡಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿ, ಕ್ಷಮೆಯನ್ನು ಸಹ ಕೇಳಿದ್ದಾರೆ. ಈ ವೇಳೆ ದರ್ಶನ್ ಅವರ ಬಗ್ಗೆ ಒಂದು ವಿಷಯಕ್ಕೆ ಕೆಲವರಲ್ಲಿ ಅಸಮಾಧ ಇದೆ. ದರ್ಶನ್ ಅವರು ಆ ಮೂವರಿಗೆ ಮಾತ್ರ ವಿಶೇಷ ಧನ್ಯವಾದ ತಿಳಿಸಿದರು, ಆದರೆ ಈ ಕೆಲಸದಲ್ಲಿ ತಮ್ಮ ಜೊತೆಗಿದ್ದ 16 ಜನರನ್ನ ಯಾಕೆ ನೆನಪು ಮಾಡಿಕೊಳ್ಳಲಿಲ್ಲ? ಅವರಿಗೆಲ್ಲ ಯಾಕೆ ಏನನ್ನು ಹೇಳಲಿಲ್ಲ? ರೇಣುಕಾಸ್ವಾಮಿ ಕುಟುಂಬದ ಬಗ್ಗೆ ಒಂದು ಮಾತನ್ನ ಯಾಕೆ ಆಡಲಿಲ್ಲ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಅಷ್ಟಕ್ಕೂ ದರ್ಶನ್ ಅವರು ಈ ರೀತಿ ಮಾಡಿದ್ದು ಯಾಕೆ?

ನಟ ದರ್ಶನ್ ಅವರು ಕಳೆದ ವರ್ಷ ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿದ ವಿಷಯ ನಮಗೆಲ್ಲ ಗೊತ್ತೇ ಇದೆ. ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಎನ್ನುವ ವ್ಯಕ್ತಿ ಅಸಭ್ಯವಾಗಿ ಮೆಸೇಜ್ ಹಾಕಿದ್ದಾನೆ ಎನ್ನುವ ಕಾರಣಕ್ಕೆ ಆತನನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆಸಿ, ಆತನಿಗೆ ತೊಂದರೆ ಕೊಟ್ಟು ಕೊನೆಗೆ ಮುಗಿಸಲಾಯಿತು. ಇದರಿಂದ ತಪ್ಪಿಸಿಕೊಳ್ಳಬಹುದು ಎಂದು ಪ್ರಯತ್ನಪಟ್ಟರೂ ಸಹ ಅದು ಆಗಲಿಲ್ಲ. ನಟ ದರ್ಶನ್, ಪವಿತ್ರಾ ಗೌಡ ಹಾಗೂ ಇನ್ನು 16 ಜನರು ಈ ಕೇಸ್ ನಲ್ಲಿ ಜೈಲು ಸೇರಿದರು. ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಅವರಿಗೆ ವಿಐಪಿ ಟ್ರೀಟ್ಮೆಂಟ್ ಸಿಗುತ್ತಿರುವ ಫೋಟೋಸ್ ವೈರಲ್ ಆದ ನಂತರ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಯಿತು ಎಂದು ನಮಗೆಲ್ಲ ಗೊತ್ತೇ. ಅಲ್ಲಿಯೂ ಒಂದಷ್ಟು ದಿವಸ ಇರಬೇಕಾಯಿತು ನಟ ದರ್ಶನ್.

ಬಳಿಕ ಆರೋಗ್ಯದ ಸಮಸ್ಯೆ ಇದ್ದ ಕಾರಣ, ಸರ್ಜರಿ ಮಾಡಿಸಿಕೊಳ್ಳುವುದಕ್ಕಾಗಿ ಅವರಿಗೆ ಜಾಮೀನು ಸಿಕ್ಕಿತು. ಎರಡು ವಾರಗಳ ನಂತರ ದರ್ಶನ್ ಅವರಿಗೆ ಮತ್ತು ಕೇಸ್ ನಲ್ಲಿ ಒಳಗಿದ್ದ ಎಲ್ಲರಿಗೂ ಪೂರ್ಣ ಪ್ರಮಾಣದಲ್ಲಿ ಜಾಮೀನು ಸಿಕ್ಕಿತು. ಈಗ ಎಲ್ಲರೂ ಹೊರಗಡೆ ಇದ್ದಾರೆ. ತಮ್ಮ ಲೈಫ್ ನಲ್ಲಿ ಚೆನ್ನಾಗಿಯೇ ಇದ್ದಾರೆ..ಆದರೆ ಇಲ್ಲಿ ಕಷ್ಟ ಅನುಭವಿಸುತ್ತಿರುವುದು ರೇಣುಕಾಸ್ವಾಮಿ ಕುಟುಂಬ. ಆತನ ಹೆಂಡತಿ ಮತ್ತು ತಂದೆಯನ್ನೇ ಕಾಣದ ಆ ಮಗುವನ್ನು ನೋಡಿಕೊಳ್ಳೋಕೆ ಯಾರು ಇಲ್ಲ. ರೇಣುಕಾಸ್ವಾಮಿ ಪತ್ನಿಗೆ ಸರ್ಕಾರಿ ಕೆಲಸ ಕೊಡಬೇಕು ಎಂದು ಅವರ ಮಾವ ಪ್ರಯತ್ನಪಡುತ್ತಿದ್ದಾರೆ. ಆದರೆ ಸರ್ಕಾರ ಇದಕ್ಕೆ ಒಪ್ಪಿಲ್ಲ. ಇದರಿಂದ ರೇಣುಕಾಸ್ವಾಮಿ ಕುಟುಂಬಕ್ಕೆ ನಿರಾಸೆ ಆಗಿದೆ. ಆತನ ಮಗುವಿಗೆ ದಿಕ್ಕಿಲ್ಲದ ಹಾಗೆ ಆಗಿದೆ.
ಇನ್ನು ಡಿಬಾಸ್ ಅವರು ಮೊನ್ನೆಯಷ್ಟೇ ಒಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಈ ವರ್ಷ ಆರೋಗ್ಯದಲ್ಲಿ ಸಮಸ್ಯೆ ಇರುವ ಕಾರಣ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಆಚರಿಸುವುದಕ್ಕೆ ಆಗೋದಿಲ್ಲ ಎಂದು ಹೇಳಿ, ಅಭಿಮಾನಿಗಳು ತಮ್ಮನ್ನು ಇದೊಂದು ಸಾರಿ ಕ್ಷಮಿಸಬೇಕು ಎಂದು ತಿಳಿಸಿದ್ದಾರೆ. ಪ್ರತಿಯೊಬ್ಬ ಅಭಿಮಾನಿಯನ್ನು ಭೇಟಿ ಮಾಡಿ, ಎಲ್ಲರಿಗೂ ಧನ್ಯವಾದ ತಿಳಿಸಬೇಕು ಅನ್ನೋ ಆಸೆ ಇದೆ. ಆದರೆ ಹೆಚ್ಚು ಹೊತ್ತು ನಿಲ್ಲೋಕೆ ಆಗೋದಿಲ್ಲ, ಆಪರೇಶನ್ ಮಾಡಿಸಲೇಬೇಕು, ನಿಮಗೆ ಗೊತ್ತಿಲ್ಲದೇ ಇರೋದು ಏನು ಇಲ್ಲ. ನನ್ನಂಥವನ ಮೇಲೆ ನಿಮ್ಮ ಪ್ರೀತಿ ಇರೋದು ನನ್ನ ಅದೃಷ್ಟ, ಇದೊಂದು ಸಾರಿ ನನ್ನನ್ನು ಕ್ಷಮಿಸಿಬಿಡಿ ಎಂದು ನಟ ದರ್ಶನ್ ಕೇಳಿದ್ದಾರೆ.

ದರ್ಶನ್ ಅವರ ಈ ವಿಡಿಯೋ ಅವರ ಅಭಿಮಾನಿಗಳಿಗೆ ಬಹಳ ಸಂತೋಷ ತಂದಿದೆ. ಆದರೆ ಇಲ್ಲಿ ಒಂದು ವಿಷಯ ಜನರಿಗೆ ಇಷ್ಟವಾಗಿಲ್ಲ. ಅದು ಏನು ಎಂದರೆ, ವಿಡಿಯೋದಲ್ಲಿ ದರ್ಶನ್ ಅವರು ಧನವೀರ್, ರಚಿತಾ ರಾಮ್ ಹಾಗೂ ರಕ್ಷಿತಾ ಈ ಮೂವರಿಗೂ ವಿಶೇಷವಾಗಿ ಧನ್ಯವಾದ ತಿಳಿಸಿದ್ದಾರೆ. ಹಾಗೆ ಎಲ್ಲಾ ವದಂತಿಗಳಿಗೂ ಸ್ಪಷ್ಟನೆ ನೀಡಿದ್ದಾರೆ. ಈ ವೇಳೆ ದರ್ಶನ್ ಅವರು ರೇಣುಕಾಸ್ವಾಮಿ ಬಗ್ಗೆ ಆಗಲಿ, ತಮ್ಮ ಜೊತೆಗೆ ಒಳಗಡೆ ಇದ್ದ ಇನ್ನು 16 ಜನ ಆ*ರೋಪಿಗಳ ಬಗ್ಗೆ ಒಂದೇ ಒಂದು ಮಾತನ್ನು ಸಹ ಆಡಿಲ್ಲ. ಇವರೆಲ್ಲರನ್ನು ದರ್ಶನ್ ಅವರು ಮರೆತೇ ಬಿಟ್ರ? ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗೋದು ಹೇಗೆ? ಇವರ ಜೊತೆಗೆ ಹೋದ ಎಲ್ಲರ ಕುಟುಂಬವನ್ನ ನೋಡಿಕೊಳ್ಳೋರು ಯಾರು? ಈ ಎಲ್ಲಾ ಪ್ರಶ್ನೆ ಶುರುವಾಗಿದೆ..

ದರ್ಶನ್ ಅವರು ಈ ರೀತಿ ಮಾಡಿದ್ದು ಯಾಕೆ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ದರ್ಶನ್ ಅವರು ಈಗ ಅವರು ಯಾರ ಬಗ್ಗೆ ಕೂಡ ಮಾತಾಡೋಕೆ ಆಗೋದಿಲ್ಲ. ಇನ್ನು ಕೇಸ್ ಕೋರ್ಟ್ ನಲ್ಲೇ ಇದೆ, ಇನ್ನು ಇತ್ಯರ್ಥ ಆಗಿಲ್ಲ. ಆ ಕಾರಣಕ್ಕೆ ದರ್ಶನ್ ಅವರು ತಮ್ಮ ಜೊತೆಗಿದ್ದವರ ಬಗ್ಗೆ ಆಗಲಿ, ರೇಣುಕಾಸ್ವಾಮಿ ಅಥವಾ ಅವರ ಕುಟುಂಬದ ಬಗ್ಗೆ ಆಗಲಿ ಎಲ್ಲಿಯೂ ಮಾತನಾಡುವ ಹಾಗಿಲ್ಲ. ಒಂದು ವೇಳೆ ಮಾತನಾಡಿದರೆ ಕೇಸ್ ಮೇಲೆ ನೆಗಟಿವ್ ಪರಿಣಾಮ ಬೀರುತ್ತದೆ. ಸಾಕ್ಷಿಗಳ ಮೇಲೆ ಕೂಡ ಪರಿಣಾಮ ಬೀರುತ್ತದೆ. ಹಾಗಾಗಿ ದರ್ಶನ್ ಈ ಎಲ್ಲಾ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡು ಇವರು ಯಾರ ಬಗ್ಗೆ ಕೂಡ ಯಾವುದೇ ಮಾತನಾಡಿಲ್ಲ. ಯಾರು ತಪ್ಪು ತಿಳಿದುಕೊಳ್ಳಬಾರದು ಎನ್ನುತ್ತಿದ್ದಾರೆ ಅವರ ಫ್ಯಾನ್ಸ್.
ಇನ್ನು ದರ್ಶನ್ ಅವರು ಫ್ಯಾನ್ಸ್ ಜೊತೆಗೆ ಬರ್ತ್ ಡೇ ಆಚರಿಸುತ್ತಿಲ್ಲ ಎನ್ನುವ ಅಸಮಾಧಾನ ಸಹ ಅಭಿಮಾನಿಗಳಲ್ಲಿ ಇದೆ. ಆದರೆ ದರ್ಶನ್ ಅವರ ಫ್ಯಾನ್ಸ್ ಗಾಗಿ ಡೆವಿಲ್ ಚಿತ್ರತಂಡ ಒಂದು ಸರ್ಪ್ರೈಸ್ ರೆಡಿ ಮಾಡಿದೆ. ದರ್ಶನ್ ಅವರ ಹುಟ್ಟುಹಬ್ಬದ ದಿವಸ ಡೆವಿಲ್ ಸಿನಿಮಾದ ಟೀಸರ್ ಬಿಡುಗಡೆ ಆಗಲಿದ್ದು, ಇದರಿಂದ ಡಿಬಾಸ್ ಫ್ಯಾನ್ಸ್ ಖುಷಿಯಾಗಿದ್ದಾರೆ. ಆದಷ್ಟು ಬೇಗ ತಮ್ಮ ಮೆಚ್ಚಿನ ಡಿಬಾಸ್ ಅವರನ್ನು ನೋಡುವ ಸಂತೋಷ ವ್ಯಕ್ತಪಡಿಸಿದ್ದಾರೆ. ಇನ್ನು ದರ್ಶನ್ ಅವರ ಹುಟ್ಟುಹಬ್ಬಕ್ಕೆ ಫ್ಯಾನ್ಸ್ ಕೂಡ, ಕೆಲವು ಹೊಸ ಹಾಡುಗಳನ್ನು ರೆಡಿ ಮಾಡಿದ್ದು, ಅದೆಲ್ಲವೂ ಹುಟ್ಟುಹಬ್ಬದ ದಿವಸ ರಿವಿಲ್ ಆಗಲಿದೆ. ಇದನ್ನು ಹೊರತುಪಡಿಸಿ ಹೊಸ ಸಿನಿಮಾ ಬಗ್ಗೆ ಏನಾದರೂ ಅಪ್ಡೇಟ್ ಸಿಗುತ್ತಾ ಎಂದು ಕಾದು ನೋಡಬೇಕಿದೆ..