ಚಂದನವನದ ದೇವರು, ಚಂದನವನದ ದಂತಕಥೆ ಎಂದೇ ಹೆಸರುವಾಸಿ ಆಗಿರುವವರು ಡಾ. ರಾಜ್ ಕುಮಾರ್. ಇವರ ಬಗ್ಗೆ ಹೇಳುತ್ತಾ ಹೋದರೆ, ಪುಟಗಳೇ ಸಾಕಾಗೋದಿಲ್ಲ. ಡಾ. ರಾಜ್ ಕುಮಾರ್ ಅವರು ತಮ್ಮ ನಟನೆಯ ಮೂಲಕ ಮಾತ್ರ ಅಭಿಮಾನಿಗಳನ್ನು ಹೊಂದಿರಲಿಲ್ಲ, ಅವರಲ್ಲಿರುವ ಒಳ್ಳೇತನ, ಸರಳತೆ, ಅಭಿಮಾನಿಗಳನ್ನು ದೇವರು ಎಂದು ಭಾವಿಸಿದ ಅವರ ವ್ಯಕ್ತಿತ್ವ ಇದೆಲ್ಲವೂ ಸಹ ಅವರನ್ನು ಅಷ್ಟು ಎತ್ತರಕ್ಕೆ ಕೊಂಡೊಯ್ಯಿತು. ಆದರೆ ರಾಜ್ ಕುಮಾರ್ ಅವರು ಮಾತ್ರ ಸರಳತೆ ಇಂದಲೇ ಇದ್ದವರು. ಡಾ. ರಾಜ್ ಕುಮಾರ್ ಅವರಿಗೆ ಇರುವ ಅಭಿಮಾನಿ ಬಳಗ ಹೇಗಿತ್ತು ಎಂದು ಗೊತ್ತೇ ಇದೆ..
ಇಂದಿಗೂ ಕೋಟ್ಯಾಂತರ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವವರು ಡಾ. ರಾಜ್ ಕುಮಾರ್. ಡಾ. ರಾಜ್ ಕುಮಾರ್ ಅವರ ಸಿನಿಮಾಗಳು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತಿತ್ತು, ಜನರಿಗೆ ಬದುಕಿನ ಪಾಠ ಕಲಿಸುತ್ತಿತ್ತು, ಈ ಕಾರಣಕ್ಕೆ ಅವರ ಸಿನಿಮಾಗಳು ಜನರ ಮೇಲೆ ಅಷ್ಟು ಪರಿಣಾಮ ಬೀರುತ್ತಿತ್ತು ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಡಾ. ರಾಜ್ ಕುಮಾರ್ ಅಂದರೆ ಅಭಿಮಾನಿಗಳಿಗೆ ಹುಚ್ಚು ಅಭಿಮಾನ, ಜನರಿಗೆ ಅವರ ಮೇಲೆ ಎಷ್ಟು ಪ್ರೀತಿ ಇತ್ತು ಎನ್ನುವುದಕ್ಕೆ ಅನೇಕ ಘಟನೆಗಳು ಸಾಕ್ಷಿ ಆಗಿದೆ. ಅವುಗಳಲ್ಲಿ ಒಂದು ಘಟನೆಯ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ..
ಇದು ಹಳೆಯ ಸಂದರ್ಶನ ಒಂದರಲ್ಲಿ ಖುದ್ದು ಪಾರ್ವತಮ್ಮ ರಾಜ್ ಕುಮಾರ್ ಅವರೇ ಹೇಳಿಕೊಂಡಿರುವ ಘಟನೆ ಆಗಿದೆ. ಡಾ. ರಾಜ್ ಕುಮಾರ್ ಅವರ ಜ್ವಾಲಾಮುಖಿ ಸಿನಿಮಾ ಶೂಟಿಂಗ್ ನಂದಿಬೆಟ್ಟದಲ್ಲಿ ನಡೆಯುವಾಗ, ಒಬ್ಬ ಗಂಡ ಹೆಂಡತಿ ಜೋಡಿ ಪಾರ್ವತಮ್ಮನವರ ಬಳಿ ಬಂದು, ನನ್ನ ಹೆಂಡತಿ ಡಾ. ರಾಜ್ ಕುಮಾರ್ ಅವರ ಕೈಗೆ ಮುತ್ತು ಕೊಡುತ್ತಾಳೆ ದಯವಿಟ್ಟು ತಪ್ಪಾಗಿ ತಿಳ್ಕೋಬೇಡಿ ಎಂದರಂತೆ.. ಆಗ ಪಾರ್ವತಮ್ಮನವರು ಅಲ್ಲಾ ಕಣಯ್ಯಾ ನೀನು ಅವಳ ಗಂಡ ನೀನೇ ಒಪ್ಪಿಕೊಂಡಿರೋವಾಗ ನಂದೇನು, ಕೊಡ್ಲಿ ಬಿಡು ಅಂದರಂತೆ… ಆಗ ಆ ವ್ಯಕ್ತಿ ಆಕೆಯ ಹೆಂಡತಿ ಹಾಗೆ ಕೇಳಿದ್ದು ಯಾಕೆ ಎಂದು ತಿಳಿಸಿದ್ದಾನೆ. ಮದುವೆಗಿಂತ ಮೊದಲು ಆಕೆ ಇದನ್ನು ಹೇಳಿದ್ದರಂತೆ.
ರಾಜ್ ಕುಮಾರ್ ಎಲ್ಲೇ ಸಿಕ್ಕರೂ ನಾನು ಅವರ ಕೈಗೆ ಮುತ್ತು ಕೊಡ್ತೀನಿ ಎಂದು, ಇದಕ್ಕೆ ಹುಡುಗ ಒಪ್ಪಿದ ನಂತರವೇ ಮದುವೆ ಆಯ್ತಂತೆ. ಆ ಕಾರಣಕ್ಕೆ ಹೆಂಡ್ತಿ ಮುತ್ತು ಕೊಡ್ತಾಳೆ ಅಂತ ಆತ ಹೇಳಿದರು. ಆದರೆ ಆಕೆ ಡಾ. ರಾಜ್ ಕುಮಾರ್ ಅವರನ್ನ ನೋಡಿ, ಮುತ್ತು ಕೊಡದೇ ಅವರನ್ನು ಅಣ್ಣಾ ಎಂದು ಕರೆದು, ಕಾಲಿಗೆ ಬಿದ್ದು ನಮಸ್ಕರಿಸಿ, ಕಣ್ಣೀರು ಹಾಕಿದರಂತೆ. ಬಳಿಕ ಇಬ್ಬರು ರಾಜ್ ಕುಮಾರ್ ಅವರನ್ನು ನೋಡಿದ ಸಂತೋಷದಲ್ಲಿ ಹೊರಟರಂತೆ. ಆಗ ರಾಜ್ ಕುಮಾರ್ ಅವರು ಪಾರ್ವತಮ್ಮನವರಿಗೆ ನೋಡು ಜನ ಈ ತರಾನು ಇರ್ತಾರೆ ಎಂದು ಹೇಳಿದರಂತೆ. ಈ ಒಂದು ಘಟನೆಯನ್ನು ಹಳೆಯ ಸಂದರ್ಶನದಲ್ಲಿ ಪಾರ್ವತಮ್ಮ ಅವರು ತಿಳಿಸಿದ್ದಾರೆ.
ಒಂದು ಮದುವೆ ಆಗಬೇಕು ಎಂದರೆ, ರಾಜ್ ಕುಮಾರ್ ಫ್ಯಾನ್ ಆಗಿದ್ರೆ ಮದುವೆ ಆಗ್ತೀನಿ, ರಾಜ್ ಕುಮಾರ್ ನ ಮದುವೆಗೆ ಕರೆಸಿದ್ರೆ ಮದುವೆ ಆಗ್ತೀನಿ ವರದಕ್ಷಿಣೆ ಬೇಕಾದ್ರು ಬಿಟ್ಟುಬಿಡ್ತೀನಿ ಎಂದು ಹೇಳುತ್ತಿದ್ದರಂತೆ. ರಾಜ್ ಕುಮಾರ್ ಅವರನ್ನು ಮದುವೆಗೆ ಕರೆದಾಗ, ಅಭಿಮಾನಿಗಳಿಗೆ ತೊಂದರೆ ಕೊಡಬಾರದು ಎಂದು ತಮ್ಮ ಸ್ವಂತ ಖರ್ಚಿನಲ್ಲಿ ಅಭಿಮಾನಿಯ ಮದುವೆಗೆ ಹೋಗಿ ಬರುತ್ತಿದ್ದರಂತೆ. ಡಾ. ರಾಜ್ ಕುಮಾರ್ ಅವರ ವ್ಯಕ್ತಿತ್ವ ಎಂಥದ್ದು, ಅಭಿಮಾನಿಗಳಿಗೆ ಅವರ ಬಗ್ಗೆ ಎಷ್ಟು ಕ್ರೇಜ್ ಇತ್ತು ಅನ್ನೋದಕ್ಕೆ ಇದೊಂದು ಉದಾಹರಣೆ ಅಷ್ಟೇ. ಆದರೆ ಇಂಥ ಹಲವು ಘಟನೆಗಳು ಬಹಳ ಹಿಂದೆಯೇ ನಡೆದು ಹೋಗಿದೆ.