ಸಾಮಾನ್ಯವಾಗಿ ಮನೆಯ ಅಕ್ಕ ಪಕ್ಕದಲ್ಲಿ ನಾವು ವಿಷ ಜಂತುಗಳಿಂದ ಕಚ್ಚಿಸಿಕೊಳ್ಳುತ್ತೇವೆ. ಇಂತಹ ಸಂದರ್ಭದಲ್ಲಿ ಗಾಬರಿ ಆಗುತ್ತೆ, ಏನು ಮಾಡಬಹುದು ತಕ್ಷಣಕ್ಕೆ ಎನ್ನುವ ಅನೇಕ ಪ್ರಶ್ನೆ ನಮ್ಮಲ್ಲಿ ಕಾಡುತ್ತೆ. ಚೇಳು, ಹಾವು, ಇನ್ನಿತರ ವಿಷ ಜಂತುಗಳು ನಮಗೆ ಕಚ್ಚಿದಾಗ ಮನೆ ಮದ್ದು ಉಪಯೋಗಿಸಿ ನಿವಾರಣೆ ಮಾಡುವುದು ಹೇಗೆ ಎನ್ನುವ ಪ್ರಶ್ನೆಗೆ ಇಂದು ನಾವು ಉತ್ತರ ನೀಡುತ್ತೇವೆ. ಹಾವು ಕಚ್ಚಿದ ತಕ್ಷಣವೇ ಒಂದಿಷ್ಟು ಚಿಕಿತ್ಸೆಗಳನ್ನು ನೀವು ಮನೆ ಮದ್ದಿನ ಮೂಲಕವೇ ಪಡೆದುಕೊಳ್ಳಬಹುದು. ವಿಷ ಜಂತುಗಳು ಕಡಿದಾಗ ಗಾಯ ಅಥವಾ ನೋವುಗಳು ಕಾಣಿಸಬಹುದು. ಆ ತಕ್ಷಣವೇ ತುಳಸಿ ರಸವನ್ನ ಲೇಪನ ಮಾಡುವುದರಿಂದ ಗಾಯ ವಾಸಿಯಾಗಲು ಸಹಕಾರಿಯಾಗುತ್ತೆ.
ಇನ್ನೂ ಅರಸಿನ ಗಂಧವನ್ನ ಗೋಮುತ್ರದೊಂದಿಗೆ ಸೇವನೆ ಮಾಡುವುದರಿಂದ ಇಲಿ, ಚೇಳು, ಹಾವು ಕಡಿತ ಪರಿಣಾಮದಿಂದ ಪಾರಾಗಬಹುದು. ಹೊನ್ನಗೆನೆ ಸೊಪ್ಪಿನ ರಸವನ್ನ ಏನಾದ್ರು ವಿಷದ ಹಾವು ಕಚ್ಚಿದ್ರೆ ಈ ಒಂದು ರಸದಿಂದ ಹಾವಿನ ವಿಷವನ್ನು ಹೊರಹಾಕಲು ಸಾಧ್ಯವಾಗುತ್ತೆ. ಅಷ್ಟೇ ಅಲ್ಲದೆ ಆಡು ಮುಟ್ಟದ ಸೊಪ್ಪು ಇದರ ಕಷಾಯವನ್ನು ಕುಡಿಸುವುದರಿಂದ ಹಾವು ಕಡಿದ ವ್ಯಕ್ತಿಗೆ ವಾಂತಿಯಾಗುತ್ತೆ, ಈ ಮೂಲಕ ದೇಹದ ಒಳಗಿನ ವಿಷವನ್ನು ಹೊರಹಾಕಲು ಸಹಕಾರಿಯಾಗುತ್ತದೆ.
ಹಾಗೇ ಇನ್ನೊಂದು ವಿಷ ಜಂತು ಚೇಳು ಸಾಮಾನ್ಯವಾಗಿ ಮನುಷ್ಯರಿಗೆ ಕಚ್ಚುತ್ತದೆ ಹಾಗಾದ್ರೆ ಅದಕ್ಕೆ ಪರಿಹಾರ ಏನು ಎಂದು ನೋಡುದಾದ್ರೆ ಚೇಳು ಕಚ್ಚಿ ಗಾಯವಾದ ಜಾಗಕ್ಕೆ ಬೆಳ್ಳುಳ್ಳಿ ಹಚ್ಚುವುದರಿಂದ ನೋವುಗಳು ಕಮ್ಮಿಯಾಗಿ ವಿಷ ನಿಯಂತ್ರಣಕ್ಕೆ ಬರುತ್ತೆ. ಬೆಳ್ಳುಳ್ಳಿ ಸಿಪ್ಪೆಯ ಹೊಗೆಯನ್ನ ಮನೆಯಲ್ಲಿ ಹಾಕೋದ್ರಿಂದ ವಿಷ ಜಂತುಗಳು ಮನೆ ಹತ್ತಿರ ಬರೋದಿಲ್ಲ, ಒಂದಿದ್ರು ಕೂಡ ಹೊಗೆ ಹಾಕಿದ ತಕ್ಷಣವೇ ಮನೆಯಿಂದ ಹೊರ ಹೋಗುತ್ತದೆ.
ಇನ್ನೂ ಜೇನು ಹುಳುಗಳು ಕಚ್ಚಿದ್ರೆ ಏನು ಮಾಡೋದು ಅಂತಾ ನೋಡುವುದಾದ್ರೆ ಈರುಳ್ಳಿಯನ್ನು ವಿಷ ಜಂತುಗಳು ಕಚ್ಚಿರುವ ಜಾಗಕ್ಕೆ ಮೃದುವಾಗಿ ಉಜ್ಜುವುದರಿಂದ ನೋವು ಕಡಿಮೆಯಾಗುತ್ತೆ. ಇನ್ನೊಂದು ಮನೆ ಮದ್ದು ಕೂಡ ಜೇನುಗಳು ಕಚ್ಚಿದ್ರೆ ನೀವು ಉಪಯೋಗಿಸಬಹುದು,10 ಕಾಳುಮೆಣಸನ್ನ ಹರಳೆಣ್ಣೆಯಲ್ಲಿ ಅರೆದು ಹಾವು ಹಚ್ಚಿದ ಅಥವಾ ಜೇನು ಕಚ್ಚಿದ ವ್ಯಕ್ತಿಗೆ ಕುಡಿಸುವುದರಿಂದ ವಾಂತಿಯಾಗಿ ವಿಷ ಹೊರಬರಲು ಸಹಾಯವಾಗುತ್ತೆ.
ಹಾವುಗಳು ಕಚ್ಚಿದ ತಕ್ಷಣ ಗರಿಕೆಯ ರಸವನ್ನು ತಗೆದು ಪ್ರತಿ 20 ನಿಮಿಷಕ್ಕೆ ಒಂದು ಬಾರಿ ಕುಡಿಸಿದ್ರೆ ವಿಷ ನಿವಾರಣೆ ಆಗುತ್ತೆ. ಒಂದು ವೇಳೆ ವಿಷ ಸರ್ಪ ಕಚ್ಚಿದರೆ ಆ ಜಾಗಕ್ಕೆ ವೀಳ್ಯದೆಲೆ ರಸವನ್ನ ಅರೆದು ಗಟ್ಟಿಯಾಗಿ ಕಟ್ಟುವುದರಿಂದ ವಿಷ ನಿಯಂತ್ರಣಕ್ಕೆ ಬರಲು ಸಹಕಾರಿಯಾಗುತ್ತದೆ. ನಾಯಿಗಳು ಕೂಡ ಸಾಮಾನ್ಯವಾಗಿ ಮನುಷ್ಯರಿಗೆ ಕಚ್ಚುವ ಮೂಲಕ ರೈಬಿಸ್ ಎನ್ನುವ ಕಾಯಿಲೆ ಬರುವುದನ್ನ ಕೇಳಿದ್ದೇವೆ ಹಾಗಾದ್ರೆ ನಾಯಿ ಕಚ್ಚಿದ್ರೆ ಮನೆ ಮದ್ದಿನಿಂದ ಹೇಗೆ ಸುಧಾರಿಸಿ ಕೊಳ್ಳಬಹುದು ಎನ್ನುವ ಪ್ರಶ್ನೆ ಉತ್ತರ ಇಲ್ಲಿದೆ.
ಹುಚ್ಚು ನಾಯಿ ಕಚ್ಚಿದಲ್ಲಿ ಇದರ ರಸವನ್ನು ಹೊರಗೆ ತೆಗೆಯಬೇಕಾದ್ರೆ ಭಾಗಿ ಮರದ ಚಕ್ಕೆಯನ್ನು 50 ಗ್ರಾಂ ತಗೆದುಕೊಂಡು ಇದರ ಚಕ್ಕೆಯನ್ನ ಕುಟ್ಟಿ ಕಷಾಯ ಮಾಡಿ ನಿತ್ಯ ಮೂರು ಬಾರಿ ಕುಡಿತ ಬರಬಹುದು ಹಾಗೂ ಬಾಗೇ ಮರದ ರಸವನ್ನ ನಿಂಬೆ ರಸದಲ್ಲಿ ತೆಯ್ದು ಗಾಯದ ಭಾಗಕ್ಕೆ ಹಚ್ಚಬಹುದಾಗಿದೆ. ಒಟ್ಟಾರೆ ಇದಿಷ್ಟು ವಿಷ ಜಂತುಗಳು ಕಚ್ಚಿದ್ರೆ ಹೇಗೆ ಮನೆ ಮದ್ದಿನ ಮೂಲಕ ಗುಣಪಡಿಸಬಹುದು ಎನ್ನುವುದರ ಬಗೆಗಿನ ಮಾಹಿತಿ.