ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಎಲ್ಲಾ ಕಡೆ ವ್ಯಾಪಿಸಿದೆ. ಸಿಟಿ ಇಂದ ಹಿಡಿದು ಹಳ್ಳಿ ಹಳ್ಳಿಗಳ ವರೆಗು ಎಲ್ಲರ ಕೈಗು ಸ್ಮಾರ್ಟ್ ಫೋನ್ ಬಂದಿದೆ. ಓದಿದವರು, ಓದದವರು ಎಲ್ಲರೂ ಸಹ ಫೇಸ್ ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಎಲ್ಲವನ್ನು ಬಳಸುವುದಕ್ಕೆ ಶುರು ಮಾಡಿದ್ದಾರೆ. ಎಲ್ಲರೂ ತಮ್ಮ ಫೋಟೋಸ್ ಗಳನ್ನು ಅಪ್ಲೋಡ್ ಮಾಡುವುದಕ್ಕೆ ಶುರು ಮಾಡಿದ್ದಾರೆ, ರೀಲ್ಸ್ ಮಾಡುತ್ತಾರೆ, Vlogs ಮಾಡುತ್ತಾರೆ, ಎಲ್ಲವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ, ಇವುಗಳಲ್ಲಿ ಹಲವು ಫೋಟೋಸ್ ಮತ್ತು ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಅದೇ ರೀತಿ ಈ ಮಹಿಳೆಯ ಫೋಟೋ ನೋಡುತ್ತೇವೆ..
ಇತ್ತೀಚಿನ ಕೆಲವು ದಿನಗಳಲ್ಲಿ ಮೈಸೂರು, ಬೆಂಗಳೂರು, ಮಂಡ್ಯ ಈ ಊರುಗಳು ಮತ್ತು ಹತ್ತಿರ ಇರುವ ಇನ್ನು ಹಲವು ಊರುಗಳು, ಹಳ್ಳಿಗಳಲ್ಲಿ ಈ ಒಬ್ಬ ಮಹಿಳೆಯ ಫೋಟೋಗಳನ್ನು ನೋಡಬಹುದು. ಹೊಸ ಮನೆಯ ಮುಂದೆ, ತೋಟಗಳಲ್ಲಿ, ಇನ್ನು ನಿರ್ಮಾಣದ ಹಂತದಲ್ಲಿ ಇರುವ ಮನೆ, ಕಟ್ಟಡಗಳ ಎದುರು, ವ್ಯವಸಾಯ ಮಾಡುವ ಗದ್ದೆಗಳಲ್ಲಿ ಎಲ್ಲಾ ಕಡೆ ಈ ಒಬ್ಬ ಮಹಿಳೆಯ ಫೋಟೋಸ್ ಗಳನ್ನು ನೋಡಿರುತ್ತೇವೆ. ಈ ಮಹಿಳೆಯ ಫೋಟೋ ನೋಡಿದ ತಕ್ಷಣ ಒಂದು ರೀತಿ ಭಯ ಆಗುವುದು ಹೌದು, ಅಷ್ಟರ ಮಟ್ಟಿಗೆ ಇದೆ ಈ ಮಹಿಳೆಯ ಫೋಟೋ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ದೊಡ್ಡ ದೊಡ್ಡ ಕಣ್ಣುಗಳನ್ನು ಬಿಟ್ಟುಕೊಂಡು ನೋಡುತ್ತಿರುವ ಈ ಮಹಿಳೆಯ ಫೋಟೋ ಈಗ ಎಲ್ಲೆಡೆ ಕಾಣ ಸಿಗುತ್ತಿರುವುದು ಒಂದು ರೀತಿ ಆಶ್ಚರ್ಯ ಎಂದು ಹೇಳಿದರು ಕೂಡ ತಪ್ಪಲ್ಲ. ಈ ಮಹಿಳೆ ಯಾರು ಎಲ್ಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಹಲವಾರು ಜನರು ಈ ಮಹಿಳೆ ಯಾರು ಎಂದು ಹುಡುಕುವುದಕ್ಕೆ ಕೂಡ ಪ್ರಯತ್ನ ಪಟ್ಟಿದ್ದಾರೆ. ನಿಜಕ್ಕೂ ಹೇಳಬೇಕು ಎಂದರೆ, ಈ ಫೋಟೋದಲ್ಲಿ ವೈರಲ್ ಆಗಿರುವ ಮಹಿಳೆ ನಿಜಕ್ಕೂ ಯಾರು ಎನ್ನುವ ವಿಷಯ ಇನ್ನು ಕೂಡ ತಿಳಿದುಬಂದಿಲ್ಲ. ಈಕೆಯ ಬಗ್ಗೆ ಯಾವ ಮಾಹಿತಿ ಕೂಡ ಇಲ್ಲ. ಆದರೆ ಈ ಫೋಟೋ ಮಾತ್ರ ಎಲ್ಲಾ ಕಡೆ ವೈರಲ್ ಆಗಿದೆ.

ಬಹಳಷ್ಟು ಜನರು ಈ ಫೋಟೋವನ್ನೇ ಬಳಸುತ್ತಿದ್ದಾರೆ. ಅಷ್ಟಕ್ಕೂ ಈ ಫೋಟೋ ಬಳಕೆ ಮಾಡುತ್ತಿರುವುದು ಯಾತಕ್ಕೆ ಎಂದು ನೋಡುವುದಾದರೆ, ದೃಷ್ಟಿ ಆಗಬಾರದು ಎನ್ನುವ ಕಾರಣಕ್ಕೆ ಹಲವು ಕಡೆ ಮೊದಲೆಲ್ಲಾ ದೃಷ್ಟಿ ಬೊಂಬೆ ಇಡುತ್ತಿದ್ದರು, ಈಗಲೂ ಹಲವು ಕಡೆ ದೃಷ್ಟಿ ಬೊಂಬೆಗಳನ್ನು ಇಡುತ್ತಾರೆ, ಆದರೆ ಇದೀಗ ದೃಷ್ಟಿ ಬೊಂಬೆಯ ಬದಲಾಗಿ ಈ ಮಹಿಳೆಯ ಫೋಟೋ ಇಡಲಾಗುತ್ತಿದೆ. ಈ ಕಾರಣಕ್ಕೆ ಈ ಮಹಿಳೆಯ ಫೋಟೋ ಎಲ್ಲೆಡೆ ವೈರಲ್ ಆಗಿದೆ. ಈ ಮಹಿಳೆ ಯಾರು ಎಂದು ಗೊತ್ತಿಲ್ಲದೇ ಇದ್ದರೂ ಸಹ, ಇಷ್ಟರ ಮಟ್ಟಿಗೆ ಈ ಫೋಟೋ ವೈರಲ್ ಆಗಿರುವುದು ಸೋಶಿಯಲ್ ಮೀಡಿಯಾ ಇಂದ ಎಂದು ಹೇಳಿದರು ಕೂಡ ತಪ್ಪಲ್ಲ.
ಒಟ್ಟಿನಲ್ಲಿ ಇಂಥದ್ದನ್ನೆಲ್ಲಾ ನೋಡಿದರೆ ಸೋಶಿಯಲ್ ಮೀಡಿಯಾ ಜನರ ಮೇಲೆ ಎಷ್ಟು ಪರಿಣಾಮ ಬೀರಿದೆ ಎಂದು ಗೊತ್ತಾಗುತ್ತದೆ. ಪ್ರಪಂಚಕ್ಕೆ ಅವರು ಯಾರು ಎಂದು ಗೊತ್ತಿಲ್ಲದೇ ಇದ್ದರೂ ಸಹ, ಸೋಶಿಯಲ್ ಮೀಡಿಯಾದಲ್ಲಿ ಅವರ ಫೋಟೋ ಅಥವಾ ರೀಲ್ಸ್ ವೈರಲ್ ಆಗುವ ಕಾರಣ ಅವರ ಬಗ್ಗೆ ಎಲ್ಲರಿಗೂ ಗೊತ್ತಾಗುತ್ತದೆ. ಸೋಶಿಯಲ್ ಮೀಡಿಯಾ ಯಾವಾಗಲೂ ಕೆಟ್ಟದ್ದೇ ಆಗುವುದಿಲ್ಲ. ನಾವು ಈ ಪೋರ್ಟಲ್ ಗಳನ್ನು ಯಾವ ರೀತಿ ಬಳಸುತ್ತಿವೋ, ಅದೇ ರೀತಿ ಇರುತ್ತದೆ. ನಾವು ಪಾಸಿಟಿವ್ ಆಗಿ ತೆಗೆದುಕೊಂಡರೆ, ಅದು ಕೂಡ ಪಾಸಿಟಿವ್ ಆಗಿಯೇ ಇರುತ್ತದೆ.