ಪ್ರತಿಯೊಬ್ಬರಿಗೂ ತಮ್ಮ ಸೌಂದರ್ಯ ತುಂಬಾ ಮುಖ್ಯ. ಈ ಕಣ್ಣಿನ ಸುತ್ತ ಕಪ್ಪು ಅನ್ನುವಂತದ್ದು ಒಂದು ರೀತಿ ತೊಂದರೆ ಅನ್ನುವ ರೀತಿ ಕಾಣುತ್ತದೆ. ಈ ಕಣ್ಣಿನ ಕೆಳಗೆ ಕಪ್ಪು ಯಾಕೆ ಬರುತ್ತದೆ. ಮತ್ತು ಕಣ್ಣಿನ ಕೆಳ ಭಾಗ ಊತ ಗಳು ಯಾಕೆ ಬರುತ್ತದೆ ಮತ್ತು ಇವುಗಳಿಗೆ ಕಾರಣಗಳೇನು? ಇದಕ್ಕೆ ಮುಖ್ಯ ಕಾರಣ ರಕ್ತಹೀನತೆ ಸಮಸ್ಯೆಗಳಿದ್ದರೆ ಕಣ್ಣಿನ ಸುತ್ತ ಕಪ್ಪಾಗಲು ಕಾರಣವಾಗುತ್ತದೆ. ವಿಪರೀತ ನಿದ್ರಾಹೀನತೆ ಅಂದರೆ ಓದುವ ಮಕ್ಕಳು, ಕೆಲಸದ ಒತ್ತಡದಲ್ಲಿರುವವರು ಹೆಚ್ಚಾಗಿ ಇಂತವರಿಗೆ ಕಂಡು ಬರುತ್ತದೆ, ಯಾರು ಹೆಚ್ಚಾಗಿ ಟ್ರಾವೆಲ್ ಗಳನ್ನು ಮಾಡುತ್ತಾರೆ. ಒಂದು ಊರಿನಿಂದ ಮತ್ತೊಂದು ಊರಿಗೆ ಪ್ರಯಾಣಗಳನ್ನು ಮಾಡುವಂತವರಿಗೆ ಇದು ಹೆಚ್ಚಾಗಿ ಕಂಡುಬರುತ್ತದೆ.
ಕಾಫಿ, ಟೀ ಸೇವನೆಗಳನ್ನು ಹೆಚ್ಚಾಗಿ ಸೇವಿಸುವುದರಿಂದ, ಶಕ್ತಿ ಹೀನತೆ ಸಮಸ್ಯೆಯನ್ನು ತೋರಿಸುತ್ತದೆ. ದುಶ್ಚಟಗಳ ಅಭ್ಯಾಸಗಳು ಯಾರಿಗೆ ಇದೆ ಅವರಿಗೂ ಹೆಚ್ಚಾಗಿ ಕಂಡುಬರುತ್ತದೆ. ಇವೆಲ್ಲದಕ್ಕೂ ಕಾರಣ ಮನುಷ್ಯ. ಇದು ಮುಖದ ಮೂಲಕ ಗೋಚರವಾಗುತ್ತದೆ. ಕಣ್ಣಿನ ಕೆಳಭಾಗ ಊತವೆನಿಸುವುದು ಯಕೃತ್ನ ಉದ್ಬವವಾಗಿದೆ. ಇದು ಸಾಮಾನ್ಯ ಮಧುಮೇಹಗಳಲ್ಲಿ ಕಂಡುಬರುತ್ತದೆ. ಯಾರೆಲ್ಲ ಮಧ್ಯಪಾನ, ಧೂಮಪಾನ ತಂಬಾಕುಗಳನ್ನು ಹೆಚ್ಚಾಗಿ ಮಾಡುವವರಿಗೆ ಈ ಸಮಸ್ಯೆ ಕಂಡು ಬರುತ್ತದೆ, ಇವರಿಗೂ ಸಹ ಕಣ್ಣಿನ ಊತಗಳು ಕಂಡುಬರುವುದು ಸಾಮಾನ್ಯ.
ಇದು ಲಿವರ್ ನ ಸಮಸ್ಯೆ ಆಗಿರುವುದರಿಂದ ಈ ತೊಂದರೆಗಳು ಕಂಡು ಬರುತ್ತದೆ. ಈ ಎಲ್ಲಾ ಸಮಸ್ಯೆಗಳಿಗೆ ನೀವೇ ಪರಿಹಾರಗಳನ್ನು ಕಂಡುಕೊಳ್ಳಬೇಕು. ಮುಖ್ಯವಾಗಿ ಮಾಡುತ್ತಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಿ. ದಿನಕ್ಕೆ ಸರಿಯಾದ 8 ಗಂಟೆಗಳ ನಿದ್ದೆ ,ದೇಹವನ್ನು ಸರಿಯಾಗಿ ತಂಪಾಗಿದ್ದರೆ ಸರಿಯಾಗುತ್ತದೆ. ಇವುಗಳನ್ನು ಬದಲಾಯಿಸಬೇಕು. ದಾಳಿಂಬೆ ಹಣ್ಣನ್ನು ಸೇವನೆ ಮಾಡುವುದರಿಂದ ಒಳ್ಳೆಯದು. ಇದು ಆರೋಗ್ಯಕ್ಕೆ ಒಳ್ಳೆಯದು ಹಾಲಿನ ಉತ್ಪನ್ನಗಳು ನಿಮಗೆ ತಂಪನ್ನು ನೀಡುತ್ತದೆ.
ಶ್ರೀಗಂಧವನ್ನು ನೀರು ಅಥವಾ ಹಾಲಲ್ಲಿ ಸೇರಿಸಿ ಸೇವನೆ ಮಾಡುವುದರಿಂದ ದೇಹಕ್ಕೆ ತಂಪು ಮಾಡುತ್ತದೆ, ಬಿಲ್ವ ಪತ್ರ ಎಲೆಯನ್ನು ಅರಿದು ಮಜ್ಜಿಗೆ ಜೊತೆ ಬೆರೆಸಿ ಕುಡಿದರೆ ಒಳ್ಳೆಯದು. ಇದು ಒಂದು ರೀತಿಯ ಔಷಧಿಯಾಗಿ ಕಣ್ಣಿನ ದೃಷ್ಟಿಗೆ ಒಳ್ಳೆಯದು. ಇದೇ ರೀತಿ ದಾಳಿಂಬೆ ಹಣ್ಣನ್ನು ರುಬ್ಬಿ ಕುಡಿಯುವುದು ಒಳ್ಳೆಯದು, ಕ್ಯಾರೆಟ್ ಸೇವನೆ ಉಪಯುಕ್ತ ಇವುಗಳನ್ನು ಪ್ರತಿನಿತ್ಯ ಸೇವನೆ ಮಾಡಬಹುದು. ರಕ್ತ ಶುಕ್ತಿ ಕಷಾಯದಿಂದ ಇಡೀ ದೇಹದ ಸಮಸ್ಯೆಗಳನ್ನು ಪರಿಹಾರ ಮಾಡಬಹುದು. ಮತ್ತು ಸೌಂದರ್ಯವರ್ದಕ ತೈಲಗಳನ್ನು ಬಳಸುವುದರಿಂದ ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.