ಭಾರತದ ಹಲವು ವರ್ಷಗಳ ಮಹಾನ್ ಕನಸಿನಂತಿದ್ದ ಚಂದ್ರಯಾನ-3 ಕೊನೆಗೂ ಯಶಸ್ಸಿಯಾಗಿ ಭಾರತೀಯರೆಲ್ಲ ಹೆಮ್ಮೆ ಪಡುವಂತಾಗಿದೆ. ಅಂದಿನ ದಿನ ಇಡೀ ಭಾರತವೇ ಆ ಕ್ಷಣವನ್ನು ಸಂಭ್ರಮಿಸಿತ್ತು. ಟಿ.ವಿ. ಮೊಬೈಲ್ ಗಳ ಮೂಲಕ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ವೀಕ್ಷಿಸುತ್ತಿದ್ದರು. ಇದೀಗ ಮಾಜಿ ನೀಲಿಚಿತ್ರ ತಾರೆ, ನಟಿ ಸನ್ನಿ ಲಿಯೋನ್ ಕೂಡ ಚಂದ್ರಯಾನ-3ರ ಲ್ಯಾಂಡಿಂಗ್ ವೀಕ್ಷಿಸಿದ್ದು, ಈ ವಿಡಿಯೋ ಸಕ್ಕತ್ ವೈರಲ್ ಆಗುತ್ತಿದೆ.
ಚಂದ್ರಯಾನ-3 ಯಶಸ್ವಿಯಾಗಿದೆ. ಚಂದ್ರನ ಕಡೆಗೆ ಕಳುಹಿಸಲಾಗಿದ್ದ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಮೂಲಕ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿದೆ. ಭಾರತೀಯ ಬಾಹ್ಯಾಕಾಶದ ಪ್ರತಿಷ್ಠೆ ಇಡೀ ವಿಶ್ವದಲ್ಲಿ ಮತ್ತಷ್ಟು ಪ್ರಜ್ವಲಿಸುತ್ತಿದೆ. ಭಾರತೀಯರೆಲ್ಲರೂ ಹೆಮ್ಮೆ ಪಡುತ್ತಿದ್ದಾರೆ. ಇತರೆ ದೇಶಗಳೂ ಕೂಡ ಭಾರತದ ಏಳಿಗೆಯನ್ನು, ಈ ಮಹಾನ್ ಸಾಧನೆಯನ್ನು ಕೊಂಡಾಡುತ್ತಿದ್ದಾರೆ.
ಇದೇ ವೇಳೆ ನಟಿ ಸನ್ನಿ ಲಿಯೋನ್ ಕೂಡ ಚಂದ್ರಯಾನ ಸಾಫ್ಟ್ ಲ್ಯಾಂಡಿಂಗ್ ಅನ್ನು ಲೈವ್ನಲ್ಲಿ ನೋಡಿ ವೀಕ್ಷಿಸಿದ್ದು, ಅದರೊಂದಿಗೆ ಬಾಹ್ಯಾಕಾಶ ಸಂಸ್ಥೆಗೆ ಅಭಿನಂದನೆ ತಿಳಿಸಿದ್ದಾರೆ. ಆ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸನ್ನಿ ಲಿಯೋನ್ ಚಂದ್ರಯಾನವನ್ನು ನೋಡುತ್ತಿರೋ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.