ಕಾಂತಾರ ಬಿಡುಗಡೆ ಸಮಯದಿಂದಲೇ ಆರ್ಜಿವಿ ಹಲವಾರು ಟ್ಟೀಟ್ಗಳನ್ನು ಮಾಡಿದ್ದಾರೆ.ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರು ಕಾಂತಾರ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ.ಇಂದು ಮಾಡಿರುವ ಅವರ ಟ್ವೀಟ್ಗೆ ಪರ ಮತ್ತು ವಿರೋಧ ವ್ಯಕ್ತವಾಗುತ್ತಿದೆ. ಆರ್ಜಿವಿಗೆ ಕಾಂತಾರ ಸಖತ್ ಇಷ್ಟವಾದಂತೆ ಕಾಣುತ್ತಿದೆ. ಕಾಂತಾರದ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಧ್ಯ ರಾಮ್ ಗೋಪಾಲ್ ವರ್ಮಾ ಕಾಂತಾರ ಕುರಿತು ಟ್ಟೀಟ್ ಮಾಡಿ, ಹೇ ರಿಷಬ್ ಸಿನಿಮಾ ರಂಗಕ್ಕೆ ಕಾಂತಾರ ಎಂಬ ಅದ್ಭುತ ಪಾಠವನ್ನು ಹೇಳಿಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು ಚಿತ್ರರಂಗದ ಎಲ್ಲರೂ ನಿಮಗೆ ಬೋಧಾನಾ ಶುಲ್ಕ ಕಟ್ಟಬೇಕಾಗುತ್ತದೆ .
ನಿಮ್ಮ ಸಿನಿಮಾ ಮೂಲಕ ಶಿವನು ಗುಳಿಗ ದೈವದಿಂದ ಹೇಗೆ ಎಚ್ಚರಗೊಳ್ಳುತ್ತಾನೋ ಹಾಗೆ ಎಲ್ಲಾ ದೊಡ್ಡ ಬಜೆಟ್ ಸಿನಿಮಾ ತಯಾರಕರು ನಡುರಾತ್ರಿ ಹಠಾತ್ತನೆ ಎಚ್ಚರಗೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಬಿಗ್ ಬಜೆಟ್ ಚಿತ್ರಗಳಿಗೆ ಮಾತ್ರ ಸಿನಿ ಪ್ರಿಯರು ಬರುತ್ತಾರೆಂಬ ವಿಚಾರವನ್ನು ನಟ ರಿಷಬ್ ಶೆಟ್ಟಿ ಅವರು ನಾಶಮಾಡಿದ್ದಾರೆ. ಮುಂದಿನ ದಶಕದವರೆಗೂ ಕಾಂತಾರ ಚಿತ್ರ ಚಲನಚಿತ್ರೋದ್ಯಮಕ್ಕೆ ಅತಿ ದೊಡ್ಡ ಪಾಠವಾದಲಿದೆ ಎಂದು ಹೇಳಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ 300, 400, 500 ಕೋಟಿ ಸಿನಿಮಾ ಮೇಕರ್ಸ್ಗೆ ಕಾಂತಾರ ಕಲೆಕ್ಷನ್ನಿಂದ ಹೃದಯಾಘಾತವಾಗಿದೆ ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ಟ್ವೀಟ್ನಲ್ಲಿ ರಿಷಬ್ ಶೆಟ್ಟಿ ಅವರ ಸಂದರ್ಶನ ಶೇರ್ ಮಾಡಿ, ‘ಈ ಸಂದರ್ಶನ ನೋಡಲೇ ಬೇಕು. ಕಾಂತಾರ ಸಿನಿಮಾ ಮೂಡಿಬಂದಿದ್ದು ಸರಳತೆ ಮತ್ತು ಮುಗ್ದತೆಯಿಂದನೇ ಹೊರತು ಅತಿಯಾದ ಯೋಚನೆಯಿಂದ ಅಲ್ಲ ಎನ್ನುವುದನ್ನು ರಿಷಬ್ ಶೆಟ್ಟಿ ಸಾಬೀತು ಪಡಿಸಿದ್ದಾರೆ’ ಎಂದು ಹೇಳಿದ್ದಾರೆ.
ಈ ಹಿಂದೆ ನಿರ್ದೇಶಕ ಸೂರಿ ಮನವಿಗೆ ಸ್ಪಂದಿಸಿ ಅವರ ನಿರ್ದೇಶನದ ‘ಟಗರು’ ಸಿನಿಮಾ ವೀಕ್ಷಿಸಿದ್ದ ರಾಮ್ ಗೋಪಾಲ್ ವರ್ಮಾ, ಡಾಲಿ ಧನಂಜಯ್ ನಟನೆಯನ್ನು ಬಹುವಾಗಿ ಮೆಚ್ಚಿದ್ದಲ್ಲದೆ, ತೆಲುಗಿನಲ್ಲಿ ‘ಭೈರವಗೀತಂ’ ಸಿನಿಮಾ ಅವಕಾಶವನ್ನೂ ಅವರಿಗೆ ಕೊಡಿಸಿದ್ದರು. ಈಗ ಡಾಲಿಯ ಹೊಸ ಸಿನಿಮಾಕ್ಕೆ ಶುಭಾಷಯ ಕೋರಿದ್ದಾರೆ. ರಾಮ್ ಗೋಪಾಲ್ ವರ್ಮಾ ಕನ್ನಡ ಸಿನಿಮಾಗಳನ್ನು ಹೊಳುತ್ತಿರುತ್ತಾರೆ.
ಈ ಮೊದಲು ಕೆಜಿಎಫ್ -2 ಮತ್ತು ವಿಕ್ರಾಂತ್ ರೋಣ ಸಿನಿಮಾವನ್ನು ಹಾಡಿ ಹೊಗಳಿದ್ದರು. ಇದೀಗ ಕಾಂತಾರ ಸಿನಿಮಾಗೆ ಫಿದಾ ಆಗಿದ್ದಾರೆ.’ಕಾಂತಾರ’ ಸಿನಿಮಾವನ್ನು ಹೊಗಳಿರುವ ಜೊತೆಗೆ ಮತ್ತೊಂದು ಕನ್ನಡ ಸಿನಿಮಾ ‘ಹೆಡ್ ಬುಷ್’ ಸಿನಿಮಾದ ಟ್ರೈಲರ್ ಹಂಚಿಕೊಂಡು ತಲೆಗೆ ಹೊಡೆದಂಥಹಾ ‘ಹೆಡ್ ಬುಷ್’ ಸಿನಿಮಾದ ಟ್ರೈಲರ್ ಎಂದಿದ್ದಾರೆ. ಜೊತೆಗೆ ನಟ ಡಾಲಿ ಧನಂಜಯ್ಗೆ ಶುಭ ಹಾರೈಕೆಗಳನ್ನು ಸಹ ನೀಡಿದ್ದಾರೆ.