ಮಾಜಿ ಸಿಎಂ, ಕೇಂದ್ರ ಸಚಿವ ಕುಮಾರಸ್ವಾಮಿ ಕೇವಲ ರಾಜಕೀಯಕ್ಕಷ್ಟೆ ಸೀಮಿತ ಅಲ್ಲ ಅನ್ನೋದು ಗೊತ್ತಿರುವ ವಿಚಾರವೇ. ಯಾಕಂದ್ರೆ ರಾಜಕೀಯಕ್ಕೆ ಬರುವ ಮೊದಲೇ ಸಿನಿಮಾ ನಿರ್ಮಾಣ ಕಾರ್ಯದಲ್ಲಿ ಇದ್ದರು ಹೆಚ್ ಡಿ ಕುಮಾರಸ್ವಾಮಿ ಅವರು. ಅವರ ನಿರ್ಮಾಣ ಸಂಸ್ಥೆಯ ಎಷ್ಟೋ ಸಿನಿಮಾನಗಳು ಸಾಕಷ್ಟು ಸೂಪರ್ ಹಿಟ್ ಆಗಿವೆ. ಸಿನಿಮಾ ರಂಗದವರ ಪರಿಚಯ ಕುಮಾರಸ್ವಾಮಿ ಅವರಿಗೆ ಬಹಳ ಹಿಂದಿನದು. ಅದೇ ಈಗ ತಮ್ಮ ಪುತ್ರನಿಗೆ ರಾಜಕೀಯದ ಜೊತೆಗೆ ಸಿನಿಮಾ ಮುನ್ನಡೆಸೋದಕ್ಕೆ ದಿಕ್ಸೂಚಿಯಾಗಿದೆ ಅಂದರೆ ತಪ್ಪಾಗಲ್ಲ.
ಸದ್ಯ ಕೇಂದ್ರ ಮಂತ್ರಿಯಾಗಿರೋ ಕುಮಾರಸ್ವಾಮಿ ವರನಟ ರಾಜ್ ಕುಮಾರ್ ಅವರ ಜೊತೆಗಿನ ಒಂದು ಒಡನಾಟದ ಬಗ್ಗೆ ಮಾತನಾಡಿದ್ದಾರೆ. ಅಷ್ಟೆ ಅಲ್ಲ ಅವರ ಸಿನಿಮಾಗಳನ್ನು ಯಾವ ರೀತಿ ನೋಡುತ್ತಾರೆ ಅನ್ನೋದರ ಬಗ್ಗೆಯೂ ಸಂದರ್ಶನ ಒಂದರಲ್ಲಿ ಮಾತನಾಡಿದ್ದರು. ಈ ವಿಚಾರ ಸದ್ಯ ವೈರಲ್ ಆಗುತ್ತಿದೆ.

ಹೌದು, ರಾಜ್ ಕುಮಾರ್ ಸಿನಿಮಾ ಬಗ್ಗೆ ಅತೀ ಪ್ರೀತಿ ಹೊಂದಿದ್ದರಂತೆ ಕುಮಾರಸ್ವಾಮಿ. ಮಧ್ಯ ರಾತ್ರಿಯ ವರೆಗೂ ರಾಜ್ ಕುಮಾರ್ ಅವರ ಹಳೆಯ ಸಿನಿಮಾಗಳನ್ನ ನೋಡ್ತಾರಂತೆ ಕುಮಾರಸ್ವಾಮಿ. ಈಗಲೂ ಅವರ ಬ್ಲಾಕ್ ಅಂಡ್ ವೈಟ್ ಸಿನಿಮಾ ಅಂದ್ರೆ ಸಿಕ್ಕಾಪಟ್ಟೆ ಹುಚ್ಚಂತೆ. ರಾತ್ರಿ 11 ಗಂಟೆಗೆ ಅವರ ಸಿನಿಮಾಗಳನ್ನ ನೋಡಲು ಶುರು ಮಾಡ್ತಾರಂತೆ ಕೇಂದ್ರ ಸಚಿವ.
ಇನ್ನು ರಾಜ್ ಕುಮಾರ್ ಅವರ ಕೆಲವು ಸಿನಿಮಾಗಳ ಹಾಡುಗಳನ್ನ ಇಂದಿಗೂ ಕೇಳುತ್ತಾರಂತೆ ಕುಮಾರಸ್ವಾಮಿ. ಅನೇಕ ಹಳೆಯ ಹಾಡುಗಳ ಪೈಕಿ “ಕಲ್ಲಾದೆ ಏಕೆಂದು ಬಲ್ಲೆ..” ಎಂಬ ಹಾಡು ನನಗೆ ತುಂಬಾ ಇಷ್ಟ. ಪಿಬಿ ಶ್ರೀನಿವಾಸ್ ಹಾಡಿಗೆ ಡಾ ರಾಜ್ಕುಮಾರ್ ಅಭಿನಯಿಸಿದ್ದಾರೆ. ಇದೆಲ್ಲವನ್ನೂ ನಾನು ನನ್ನ ಹೃದಯದಲ್ಲಿ ಇಟ್ಟುಕೊಂಡಿದ್ದೇನೆ ಎಂದೆಲ್ಲಾ ಹಳೆಯ ಹಾಡುಗಳ ಹಾಗೂ ತಮ್ಮ ಇಷ್ಟದ ಹಾಡುಗಳ ಕುರಿತು ಮಾತನಾಡಿರೋದು ಈಗ ವೈರಲ್ ಆಗಿದೆ.

ಸಾಕಷ್ಟು ಸಂದರ್ಶನಗಳಲ್ಲಿ ತಮ್ಮ ವೈಯಕ್ತಿಕ ಬದುಕಿನ ಕೆಲವು ವಿಶೇಷತೆಗಳನ್ನ ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ. ಅದರಲ್ಲೂ ತಮ್ಮ ಹಿಂದಿನ ದಿನಗಳಲ್ಲಿ ತಾವು ನಿರ್ಮಾಣ ಮಾಡುತ್ತಿದ್ದ ಸಿನಿಮಾಗಳು, ಆಗಿನ ಸಿನಿಮಾ ಪ್ರೀತಿ, ಸಿನಿಮಾಗಳನ್ನ ನೋಡುವ ಹುಚ್ಚು ಹೀಗೆ ಅನೇಕ ವಿಚಾರಗಳನ್ನ ಹೇಳಿಕೊಂಡಿದ್ದಾರೆ. ಸದ್ಯ ರಾಜ್ ಕುಮಾರ್ ಅವರ ಕುರಿತಾದ ಕೆಲವೊಂದು ವಿಶೇಷ ಸಂಗತಿಗಳು ಹಾಗೂ ಅವರ ನಟನಾ ಶೈಲಿಯ ಬಗ್ಗೆ ಮಾತನಾಡಿರುವುದು ವೈರಲ್ ಆಗಿದೆ.
ಹೆಚ್ ಡಿ ಕುಮಾರಸ್ವಾಮಿ ವಿಷ್ಣುವರ್ಧನ್ ನಟನೆಯ ಸೂರ್ಯವಂಶ, ಪ್ರೇಮೋತ್ಸವ, ಗಲಾಟೆ ಅಳಿಯಂದ್ರು, ಜಗ್ಗೇಶ್ ಅಭಿನಯದ ಜಿತೇಂದ್ರ, ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಚಂದ್ರಚಕೋರಿ, ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಯ ಜಾಗ್ವಾರ್ ನಂತರ ಸೀತಾರಾಮ ಕಲ್ಯಾಣ ಸಿನಿಮಾ ಕೂಡ ನಿರ್ಮಾಣ ಮಾಡಿದ್ದಾರೆ.