ಸೌತ್ ಇಂಡಸ್ಟ್ರಿಯ ಸೂಪರ್ ಸ್ಟಾರ್ ಕಮಲ್ ಹಾಸನ್ ತಮ್ಮ ನಟನೆಯ ಮೂಲಕ ಆರು ದಶಕಗಳ ಕಾಲ ಚಿತ್ರರಂಗವನ್ನು ಆಳಿದರು. ಅವರ ಆಕ್ಟಿಂಗ್ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ಅವರಂತೆ ಅವರ ಮಗಳು ಶ್ರುತಿ ಹಾಸನ್ ಕೂಡ ಚಿತ್ರರಂಗಕ್ಕೆ ಪ್ರವೇಶಿಸಿದರು. ಆದರೆ ಹೆಚ್ಚಾಗಿ ಸೋಲನ್ನೇ ಎದುರಿಸಿದರು. ನಿನ್ನೆಯಷ್ಟೇ ನಟಿ ಶ್ರುತಿ ಹಾಸನ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಇಂದು ಟಾಲಿವುಡ್ನ ಅತ್ಯಂತ ನೆಚ್ಚಿನ ನಟಿಯರಲ್ಲಿ ಒಬ್ಬರಾಗಿರುವ ಶ್ರುತಿ ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಅಂದಹಾಗೆ ಶ್ರುತಿ ಅವರಿಗೆ ಸಂಬಂಧಿಸಿದ ಕೆಲವು ವಿಶೇಷ ವಿಷಯಗಳನ್ನು ಇಂದು ನಾವು ನಿಮಗೆ ಹೇಳುತ್ತಿದ್ದೇವೆ.
ಸೌತ್ ಚಿತ್ರಗಳತ್ತ ಚಿತ್ತ
ಎಲ್ಲರಿಗೂ ತಿಳಿದಿರುವಂತೆ ಸೂಪರ್ ಸ್ಟಾರ್ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಸೌತ್ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ಅವರ ನಟನೆಯನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ. ಶೃತಿ ತಮ್ಮ ಪ್ರತಿಭೆಯ ಆಧಾರದ ಮೇಲೆ ಇಂಡಸ್ಟ್ರಿಯಲ್ಲಿ ತನ್ನದೇ ಆದ ಐಡೆಂಟಿಟಿ ಕ್ರಿಯೇಟ್ ಮಾಡಿದ್ದಾರೆ. ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಶ್ರುತಿ ಬಾಲಿವುಡ್ಗೂ ಪಾದಾರ್ಪಣೆ ಮಾಡಿದರು. ಹಿಂದಿಯಲ್ಲಿ ದಿಲ್ ತೋ ಬಚ್ಚಾ ಹೈ ಜಿ, ಡಿ-ಡೇ, ತೇವರ್, ವೆಲ್ಕಮ್ ವೀಕ್, ಯಾರಾ ಚಿತ್ರಗಳನ್ನು ಶ್ರುತಿ ಮಾಡಿದ್ದಾರೆ. ಆದರೆ, ಆಕೆಗೆ ಬಾಲಿವುಡ್ನಲ್ಲಿ ಹೆಚ್ಚು ಖ್ಯಾತಿ ಸಿಗಲಿಲ್ಲ. ಆದರೆ ತೆಲುಗಿನ ‘ಓ ಮೈ ಫ್ರೆಂಡ್’ ಮತ್ತು ‘ರೇಸ್ ಗುರ್ರಂ’ ಪಾತ್ರಗಳು ಅವರಿಗೆ ಜನಪ್ರಿಯತೆ ತಂದುಕೊಟ್ಟವು.
ಈಗ ಅವರು ಸೌತ್ ಚಿತ್ರಗಳಲ್ಲಿ ಸಕ್ರಿಯರಾಗಿದ್ದಾರೆ. ಕೂಲಿ, ಟ್ರೇನ್ ನಂತರ ಸಲಾರ್ ಭಾಗ 2 ರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಖ್ಯವಾಗಿ ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ತನ್ನ ಛಾಪು ಮೂಡಿಸಿರುವ ಶ್ರುತಿ ಹಾಸನ್, ಈ ಮೊದಲೇ ಹೇಳಿದಂತೆ ಹಿಂದಿ, ತೆಲುಗು ಮತ್ತು ತಮಿಳು ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಬಾಲಿವುಡ್ನಲ್ಲಿ ಯಶಸ್ಸನ್ನು ಸಾಧಿಸದ ಶ್ರುತಿ ಹಾಸನ್ ಸೌತ್ ಚಿತ್ರಗಳತ್ತ ಮುಖ ಮಾಡಿದರು.

ಚೆನ್ನೈನಲ್ಲಿ ಜನಿಸಿದ ಶ್ರುತಿ
ಶ್ರುತಿ ಹಾಸನ್ ಜನವರಿ 28, 1986 ರಂದು ಮದ್ರಾಸ್ನಲ್ಲಿ ಜನಿಸಿದರು. 1999 ರಲ್ಲಿ ನಟನಾ ಜಗತ್ತಿನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಈಗ ಅವರು ದಕ್ಷಿಣ ಭಾರತದ ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರು. ಶ್ರುತಿ ಅದ್ಭುತ ಗಾಯಕಿಯೂ ಹೌದು. ಶ್ರುತಿ ಚೆನ್ನೈನಲ್ಲಿ ಶಾಲಾ ಶಿಕ್ಷಣ ಪಡೆದರು. ನಂತರ ಅವರು ಮುಂಬೈನ ಸೇಂಟ್ ಆಂಡ್ರ್ಯೂಸ್ ಕಾಲೇಜಿನಲ್ಲಿ ಮನೋವಿಜ್ಞಾನದಲ್ಲಿ ತಮ್ಮ ಕಾಲೇಜು ಪದವಿಯನ್ನು ಪೂರ್ಣಗೊಳಿಸಿದರು. ಶೃತಿ ಕೂಡ ಸಂಗೀತ ಕಲಿಯಲು ಅಮೆರಿಕದ ಕ್ಯಾಲಿಫೋರ್ನಿಯಾಗೆ ಹೋಗಿದ್ದರು. ಅವರು ತಮ್ಮ ತಂದೆಯ ಚಾಚಿ 420 ಚಿತ್ರದಲ್ಲೂ ಹಾಡನ್ನು ಹಾಡಿದ್ದಾರೆ. ‘ಹೇ ರಾಮ್’ ಚಿತ್ರದ ಮೂಲಕ ಶೃತಿ ಬಾಲ ಕಲಾವಿದೆಯಾಗಿ ಸಿನಿಮಾ ವೃತ್ತಿ ಆರಂಭಿಸಿದ್ದರು. ಇದಾದ ನಂತರ ಅವರು ಬಾಲಿವುಡ್ ಚಿತ್ರ ‘ಲಕ್’ ಮೂಲಕ ನಾಯಕ ನಟಿಯಾಗಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು.
ಶ್ರುತಿ ಜನಿಸಿದ ಮೇಲೆ ಮದುವೆ
ಶ್ರುತಿ ತನ್ನ ತಂದೆ ತಾಯಿಯ ಮದುವೆಗೆ ಎರಡು ವರ್ಷ ಮೊದಲು ಜನಿಸಿದರು. ವಾಸ್ತವವಾಗಿ ಕಮಲ್ ಹಾಸನ್ ಮತ್ತು ಸಾರಿಕಾ ಇಬ್ಬರೂ ‘ಲಿವ್ ಇನ್ ರಿಲೇಶನ್ ಶಿಪ್’ನಲ್ಲಿದ್ದರು. ಈ ನಡುವೆ ಅವರ ಪತ್ನಿ ಸಾರಿಕಾ ಗರ್ಭಿಣಿಯಾಗಿ ಶ್ರುತಿ ಹಾಸನ್ಗೆ ಜನ್ಮ ನೀಡಿದ್ದಾರೆ. ಮಗಳು ಹುಟ್ಟಿದ ಎರಡು ವರ್ಷಗಳ ನಂತರ ಸಾರಿಕಾ 1988 ರಲ್ಲಿ ಕಮಲ್ ಹಾಸನ್ ಅವರನ್ನು ವಿವಾಹವಾದರು. ಮದುವೆಯ ನಂತರ ಸಾರಿಕಾ ಚಿತ್ರರಂಗದಿಂದ ದೂರ ಉಳಿದಿದ್ದರು. 1991 ರಲ್ಲಿ, ಅವರ ಎರಡನೇ ಮಗಳು ಅಕ್ಷರ ಜನಿಸಿದರು.

ಬ್ರೇಕಪ್ ಆದ ಬಳಿಕ ಕುಡಿತದ ಚಟಕ್ಕೆ ಬಿದ್ದ ಶ್ರುತಿ
ಅನೇಕ ದೊಡ್ಡ ಬಾಲಿವುಡ್ ಚಿತ್ರಗಳನ್ನು ಮಾಡಿರುವ ಶ್ರುತಿ ಹಾಸನ್ ಅವರದ್ದು ತುಂಬಾ ಸಂಕೀರ್ಣವಾದ ಪ್ರೇಮ ಜೀವನ. ವಿದೇಶಿ ಗೆಳೆಯ ಮೈಕೆಲ್ ಕೊರ್ಸೆಲ್ ಜತೆ ಕೆಲಕಾಲ ಸಂಬಂಧ ಹೊಂದಿದ್ದರು. ಆದರೆ ಪರಸ್ಪರ ಭಿನ್ನಾಭಿಪ್ರಾಯದಿಂದ ಅವರ ಸಂಬಂಧ ಮುರಿದುಬಿತ್ತು. ಸಂದರ್ಶನವೊಂದರಲ್ಲಿ ಶ್ರುತಿ, “ನನ್ನ ಕಡೆಯಿಂದ ಯಾವುದೇ ರೀತಿಯ ದೂರು ಇಲ್ಲ. ಇದು ನನಗೆ ಒಳ್ಳೆಯ ಅನುಭವವಾಗಿದೆ. ನಾನು ಬಹಳಷ್ಟು ಕಲಿತಿದ್ದೇನೆ ಮತ್ತು ಇದು ನನಗೆ ಒಂದು ದೊಡ್ಡ ಕಲಿಕೆಯ ಅನುಭವವಾಗಿದೆ. ಆದರೆ ನಾನು ಯಾವಾಗಲೂ ಒಳ್ಳೆಯ ಪ್ರೀತಿಯನ್ನು ಹುಡುಕುತ್ತಿದ್ದೇನೆ ಮತ್ತು ಅದು ನಾನು ಕಾಯುತ್ತಿರುವ ಒಂದು ವಿಷಯ ಎಂದು ಘೋಷಿಸಲು ನನಗೆ ಸಂತೋಷವಾಗಿದೆ” ಎಂದಿದ್ದರು. ಬ್ರೇಕಪ್ ಆದ ಬಳಿಕ ಶ್ರುತಿ ಕುಡಿತದ ಚಟಕ್ಕೆ ಬಿದ್ದಿದ್ದರು. ಸಂದರ್ಶನವೊಂದರಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ ಅವರು, ನಾನು ಕುಡಿತದ ಚಟಕ್ಕೆ ಬಿದ್ದಿದ್ದೇನೆ ಎಂದು ಹೇಳಿದ್ದರು. ಕುಡಿತದ ಚಟದಿಂದಾಗಿ ಅವರ ವೃತ್ತಿಜೀವನದ ಮೇಲೆ ಪರಿಣಾಮ ಬೀರಿತು. ಇದರ ಪರಿಣಾಮ ಎಷ್ಟಿತ್ತೆಂದರೆ ಅವರು ಕೆಲಕಾಲ ನಟನೆಯಿಂದ ವಿರಾಮ ತೆಗೆದುಕೊಳ್ಳಬೇಕಾಯಿತು.

ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದು ನಿಮಗೆ ಗೊತ್ತೇ?
ಸದ್ಯ ಅವರ ಲುಕ್ ಈಗ ಸುದ್ದಿಯಲ್ಲಿದೆ. ಏಕೆಂದರೆ ಅವರ ರೂಪಾಂತರದಿಂದ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಶ್ರುತಿ ಹಾಸನ್ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದು ನಿಮಗೆ ಗೊತ್ತೇ?. ಹೌದು, ಶಸ್ತ್ರಚಿಕಿತ್ಸೆಯ ನಂತರ ನಟಿಯ ಲುಕ್ ಸಾಕಷ್ಟು ಬದಲಾಗಿದೆ. ಅವರ ರೂಪಾಂತರವನ್ನು ನೋಡಿದ ನಂತರ ಅವರನ್ನು ಗುರುತಿಸುವುದು ತುಂಬಾ ಕಷ್ಟ. ಶ್ರುತಿ ಮೂಗಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ ಎಂಬ ವರದಿಗಳು ಇವೆ. ಏಕೆಂದರೆ ಶೃತಿಯ ಹಳೆಯ ಫೋಟೋಗಳನ್ನು ನೋಡಿದ ನಂತರ ಅವರನ್ನು ಗುರುತಿಸುವುದು ತುಂಬಾ ಕಷ್ಟ. ಅವರ ಸ್ಟೈಲ್ ಮತ್ತು ಲುಕ್ ಕೂಡ ಸಾಕಷ್ಟು ಬದಲಾಗಿದೆ. ಅಂದರೆ ಶೃತಿ ಹಾಸನ್ ಈಗ ಮೊದಲಿಗಿಂತ ಹೆಚ್ಚು ಸುಂದರವಾಗಿದ್ದಾರೆ.
ಶ್ರುತಿ ನಟನೆಯಲ್ಲಿ ಸೋತಿದ್ದರೂ ಫ್ಯಾಷನ್ ಸ್ಟೇಟ್ಮೆಂಟ್ಗಳಿಂದ ಸುದ್ದಿಯಾಗುತ್ತಲೇ ಇರುತ್ತಾರೆ. ಆಕೆಯ ಪ್ರತಿಯೊಂದು ಲುಕ್ ಇಂಟರ್ನೆಟ್ನಲ್ಲಿ ಬಂದ ತಕ್ಷಣ ಅಭಿಮಾನಿಗಳಲ್ಲಿ ಟ್ರೆಂಡಿಂಗ್ ಶುರುವಾಗುತ್ತದೆ. ಅವರ ಫಿಟ್ನೆಸ್ ನೋಡಿ ಅಭಿಮಾನಿಗಳು ಕೂಡ ಅವರ ಡಯಟ್ ಪ್ಲಾನ್ ಬಗ್ಗೆ ಆಗಾಗ ಕೇಳುತ್ತಾರೆ. ಶ್ರುತಿ ಹಾಸನ್ ತನ್ನ ನೋಟದಿಂದ ಆಗಾಗ್ಗೆ ಸುದ್ದಿಯಲ್ಲಿದ್ದಾರೆ. ಆಕೆಯ ಇನ್ಸ್ಟಾಗ್ರಾಮ್ ಖಾತೆಯೂ ಮನಮೋಹಕ ಚಿತ್ರಗಳಿಂದ ತುಂಬಿದೆ.