ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಟಿ20 ಸರಣಿ ಆಗಸ್ಟ್ 13 ಕ್ಕೆ ನಡೆಯಲಿದೆ, ಅದಾದ ನಂತರ ಐರ್ಲ್ಯಾಂಡ್ ವಿರುದ್ಧ ಟಿ20 ಸರಣಿ ಶುರುವಾಗುತ್ತದೆ, ಅದರಲ್ಲಿ ಟೀಂ ಇಂಡಿಯಾದ ನಾಯಕನಾಗಿ ಜಸ್ಪ್ರಿತ್ ಬೂಮ್ರ ಅವರು ಕಂ ಬ್ಯಾಕ್ ಮಾಡಲಿದ್ದಾರೆ, ಐರ್ಲ್ಯಾಂಡ್ ಸರಣಿಯನ್ನು ನೀವು ಟಿವಿಯಲ್ಲಿ ಯಾವ ಚಾನೆಲ್ ನಲ್ಲಿ ನೋಡಬೇಕು, ಮೊಬೈಲ್ ನಲ್ಲಿ ಯಾವ ಅಪ್ಲಿಕೇಶನ್ ನಲ್ಲಿ ನೀವು ಫ್ರೀ ಯಾಗಿ ನೋಡಬಹುದು ಎಂದು ಈ ವೀಡಿಯೋದಲ್ಲಿ ತಿಳಿಸುತ್ತೇವೆ. ಏಕೆಂದರೆ ಬ್ರಾಡ್ ಕ್ಯಾಸ್ಟರ್ ಯಾರು ಎಂಬ ಮಾಹಿತಿಯನ್ನು ಅನೌನ್ಸ್ ಮಾಡಲಾಗಿದೆ.

ಟಿವಿಯಲ್ಲಿ ನೀವು ಮ್ಯಾಚ್ ನೋಡುವುದಾದರೆ, ಸ್ಪೋರ್ಟ್ಸ್ 18 ಚಾನಲ್ ನಲ್ಲಿ ನೀವು ನೋಡಬಹುದು, ಅದೇ ನೀವು ಮೊಬೈಲ್ ನಲ್ಲಿ ಅಥವಾ ಕಂಪ್ಯೂಟರಿನಲ್ಲಿ ನೋಡುವುದಾದರೆ ಜಿಯೋ ಸಿನಿಮಾ ಆಪ್ ನಲ್ಲಿ ನೀವು ಫ್ರೀಯಾಗಿ ಐರ್ಲ್ಯಾಂಡ್ ವಿರುದ್ಧದ ಸರಣಿಯನ್ನು ನೋಡಬಹುದು, ಇದರ ಜೊತೆಗೆ ಇಂಡಿಯಾ ಹಾಗೂ ಐರ್ಲ್ಯಾಂಡ್ ಸರಣಿಯ ವೇಳಾಪಟ್ಟಿಯನ್ನು ಕೂಡ ತಿಳಿಸುತ್ತೇವೆ, ಮೊದಲ ಟಿ20 ಆಗಸ್ಟ್ 18 ಸಂಜೆ 7.30ಕ್ಕೆ ಶುರುವಾಗಲಿದೆ. ಎರಡನೇ ಟಿ20 ಆಗಸ್ಟ್ 20 ಸಂಜೆ 7.30ಕ್ಕೆ ಶುರುವಾಗಲಿದೆ, ಮೂರನೇ ಟಿ20 ಆಗಸ್ಟ್ 23 ಸಂಜೆ 7.30ಕ್ಕೆ ಶುರುವಾಗಲಿದೆ.

ಭಾರತದಲ್ಲಿ ನಡೆಯುವ ಐ ಪಿ ಎಲ್ ಸಮಯದಲ್ಲಿ ರೀತಿಯಲ್ಲಿಯೇ ಸಂಜೆ 7.30 ರ ನಂತರ ಮೂರು ಪಂದ್ಯಗಳು ಶುರುವಾಗಲಿದೆ, ಇದರ ಜೊತೆಗೆ ಐರ್ಲ್ಯಾಂಡ್ ವಿರುದ್ಧದ ಸರಣಿಗೆ ಭಾರತದ ಟಿ 20 ತಂಡವನ್ನು ಕೂಡ ಅನೌನ್ಸ್ ಮಾಡಲಾಗಿತ್ತು, ತಂಡ ಹೀಗಿದೆ : ನಾಯಕನಾಗಿ ಜಸ್ಪ್ರಿತ್ ಬೂಮ್ರ ವಾಪಸ್ ಆಗಿದ್ದಾರೆ, ಉಪನಾಯಕನಾಗಿ ಋತುರಾಜ್ ಗಾಯಕ್ ವಾಡ್, ಯಶಸ್ವಿ ಜಯಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ ಸನ್ ವಿಕೆಟ್ ಕೀಪರ್, ರಿತೇಶ್ ಶರ್ಮಾ ವಿಕೆಟ್ ಕೀಪರ್, ಶಿವಂ ದೂಬೆ, ವಾಷಿಂಗ್ಟನ್ ಸುಂದರ್, ಶಬಾಜ್ ಅಹಮ್ಮದ್, ರವಿ ಬಿಶ್ನೋಯ್ , ಪ್ರಸಿದ್ಧ್ ಕೃಷ್ಣ, ಹರ್ಷದೀಪ್ ಸಿಂಗ್, ಮುಖೇಶ್ ಕುಮಾರ್ ಹಾಗೂ ಆವೇಶ್ ಖಾನ್.
ಈ ತಂಡದಲ್ಲಿ ಎಲ್ಲಾ ಯುವಕರಿಗೆ ಅವಕಾಶ ನೀಡಲಾಗಿದೆ, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಶುಬ್ನಮ್ ಗಿಲ್ ಅಂತಹ ಸೀನಿಯರ್ ಪ್ಲೇಯರ್ ಗಳಿಗೆ ರೆಸ್ಟ್ ನೀಡಲಾಗಿದೆ, ಕಳೆದ ಬಾರಿ ಐರ್ಲ್ಯಾಂಡ್ ಗೆ ಇಂಡಿಯಾ ಹೋಗಿದ್ದಾಗ, ದೀಪಕ್ ಹುಡ್ಡ ಅವರು ಕೂಡ ಶತಕ ಬಾರಿಸಿದರು, ಈ ಸಲ ತಿಲಕ್ ವರ್ಮಾ ಹಾಗೂ ರಿಂಕೂ ಸಿಂಗ್ ಸ್ಪೆಷಲ್ ಆಟಗಾರರಾಗಿದ್ದಾರೆ, ಅವರು ಕೂಡ ಅದ್ಭುತ ಪ್ರದರ್ಶನ ವನ್ನು ನೀಡಬಹುದು, ಏಕೆಂದರೆ ತಿಲಕ್ ವರ್ಮಾ ಹೀಗಾಗಲೇ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಅದ್ಭುತವಾಗಿ ಪ್ರದರ್ಶನ ನೀಡುತ್ತಿದ್ದಾರೆ.
ರಿಂಕು ಸಿಂಗ್ ಕೂಡ 2023 ರ ಐಪಿಎಲ್ ನಲ್ಲಿ ಅದ್ಭುತವಾಗಿ ಪ್ರದರ್ಶನ ನೀಡಿದ್ದರು, ಜೊತೆಗೆ ಕರ್ನಾಟಕದ ಫಾಸ್ಟ್ ಬೌಲರ್ ಪ್ರಸಿದ್ಧ ಕೃಷ್ಣ ಕೂಡ ಈ ತಂಡಕ್ಕೆ ತಮ್ಮ ಇಂಜುರಿಯಿಂದ ವಾಪಸ್ ಮರಳಿದ್ದಾರೆ, ಅವರು ಕೂಡ ಹೇಗೆ ಪ್ರದರ್ಶನ ಮಾಡುತ್ತಾರೆ ಎಂದು ನೋಡಬೇಕಿದೆ.