ನಟ ಧನುಷ್ ಅವರು ಹೆಚ್ಚು ಹೆಚ್ಚು ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನಟಿ ನಯನತಾರ ಅವರ ವೆಬ್ ಡಾಕ್ಯುಮೆಂಟರಿ ವಿಚಾರದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ನಯನತಾರ ಅವರಿಗೆ ಐಪಿಆರ್ ನಲ್ಲಿ 10 ಕೋಟಿ ನೀಡುವಂತೆ ಕೇಸ್ ಹಾಕಿ, ಕೆಲವರಿಂದ ನೆಗಟಿವ್ ಒಪಿನಿಯನ್ ಪಡೆದರೆ, ಇನ್ನು ಕೆಲವರು ಪಾಸಿಟಿವ್ ಅಭಿಪ್ರಾಯ ನೀಡಿದ್ದರು. ಇದೆಲ್ಲವೂ ಒಂದು ಹಂತಕ್ಕೆ ಮುಗಿಯುತ್ತಿದೆ ಎನ್ನುವ ಹೊತ್ತಲ್ಲೇ ಇದೀಗ ವಿಚ್ಛೇದನದ ವಿಚಾರಕ್ಕೆ ನಟ ಧನುಷ್ ಅವರು ಸುದ್ದಿಯಾಗಿದ್ದಾರೆ. ಕೋರ್ಟ್ ಇಂದ ನಟ ಧನುಷ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಅವರ ಮಗಳು ಐಶ್ವರ್ಯ ಇಬ್ಬರಿಗೂ ವಿಚ್ಛೇದನ ನೀಡಲಾಗಿದೆ.

ನಟ ಧನುಷ್ ಅವರು ಐಶ್ವರ್ಯ ಧನುಷ್ ಅವರನ್ನು ಪ್ರೀತಿಸಿ ಮದುವೆಯಾದರು. ಸೂಪರ್ ಸ್ಟಾರ್ ರಜನಿಕಾಂತ್ ಅವರ ಮಗಳನ್ನು ಕಾಡಿಸಿ, ಪೀಡಿಸಿ, ಒಂದಷ್ಟು ವರ್ಷಗಳ ಕಾಲ ಲವ್ ಮಾಡಿ, ಮದುವೆಯಾದರು. ಈ ಜೋಡಿ ಬಹಳ ಚೆನ್ನಾಗಿ ಜೀವನ ನಡೆಸುತ್ತಿದ್ದರು. ಇವರಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ, ಮಕ್ಕಳು ಕೂಡ ಚಿಕ್ಕವರಲ್ಲ, ಬೆಳೆದು ದೊಡ್ಡವರಾಗಿದ್ದಾರೆ. ಈ ಜೋಡಿ 15 ವರ್ಷಗಳ ಕಾಲ ಜೊತೆಯಾಗಿ ಸಂಸಾರ ಮಾಡಿದವರು. ಆದರೆ 2022ರಲ್ಲಿ ತಾವಿಬ್ಬರು ಬೇರೆ ಆಗಿದ್ದೇವೆ ಎನ್ನುವಂಥ ವಿಷಯವನ್ನು ಬಹಿರಂಗವಾಗಿ ತಿಳಿಸಿ, ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದ್ದರು.
ಧನುಷ್ ಹಾಗೂ ಐಶ್ವರ್ಯ ದಂಪತಿ ಇಬ್ಬರು ಕೆರಿಯರ್ ನಲ್ಲಿ ಜೊತೆಯಾಗಿ ಬೆಳೆದವರು ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಧನುಷ್ ಅವರು ನಟನೆಯಲ್ಲಿ ಮುಂದುವರೆದರೆ, ಐಶ್ವರ್ಯ ಅವರು ನಿರ್ದೇಶನದಲ್ಲಿ ತೊಡಗಿಕೊಂಡರು. ಧನುಷ್ ಅಭಿನಯದ 3 ಸಿನಿಮಾವನ್ನು ನಿರ್ದೇಶನ ಮಾಡಿದ್ದು ಐಶ್ವರ್ಯ ಅವರೇ. ಧನುಷ್ ಅವರ ಪ್ರೊಡಕ್ಷನ್ ಕಂಪನಿಗೆ ಐಶ್ವರ್ಯ ಅವರು ಸಾಥ್ ನೀಡಿದ್ದರು. ಹೀಗೆ ಬಹಳ ಅನ್ಯೋನ್ಯವಾಗಿದ್ದ ಈ ಜೋಡಿ, ಇದ್ದಕ್ಕಿದ್ದಂತೆ ವಿಚ್ಛೇದನ ಪಡೆಯುವ ನಿರ್ಧಾರ ಮಾಡಿದ್ದು, ಅವರ ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿತ್ತು, ಇದಕ್ಕೆ ಕಾರಣ ಏನಿರಬಹುದು ಎಂದು ಯೋಚಿಸುವುದಕ್ಕೂ ಶುರು ಮಾಡಿದ್ದರು.

ಇವರ ಕುಟುಂಬದ ಹಿರಿಯರು ಅಂದರೆ ಧನುಷ್ ಅವರ ತಂದೆ ಮತ್ತು ಐಶ್ವರ್ಯ ಅವರ ತಂದೆ ತಾಯಿ ಅಂದರೆ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಅವರ ಪತ್ನಿ ಇಬ್ಬರು ಸಹ ಮಕ್ಕಳ ಸಂಸಾರ ಒಂದು ಮಾಡಲು, ವಿಚ್ಛೇದನ ಪಡೆಯದೇ ಇರುವಂತೆ ಮಾಡಲು ಬಹಳ ಪ್ರಯತ್ನ ಪಡುತ್ತಿದ್ದಾರೆ ಎನ್ನುವ ಮಾತುಗಳು ಸಹ ಕೇಳಿಬಂದಿತ್ತು. ರಜನಿಕಾಂತ್ ಅವರು ಮಗಳ ಜೊತೆಗೆ ಮಾತ್ರವಲ್ಲದೇ, ಧನುಷ್ ಅವರ ಜೊತೆಗೆ ಸಹ ಮಾತನಾಡುವ ಪ್ರಯತ್ನ ಮಾಡಿದ್ದರು ಎನ್ನಲಾಗಿದೆ. ಆದರೆ ಅವರೆಲ್ಲರು ಮಾಡಿದ ಪ್ರಯತ್ನಕ್ಕೆ ಯಾವುದೇ ಪ್ರತಿಫಲ ಸಿಕ್ಕಿಲ್ಲ. ಎಲ್ಲವೂ ನೀರಿನಲ್ಲಿ ಹೋಮ ಮಾಡಿ ಹಾಗೆ ಆಗಿದೆ..
ಇತ್ತ ಸೋಶಿಯಲ್ ಮೀಡಿಯಾದಲ್ಲಿ ಕೂಡ ಅಭಿಮಾನಿಗಳು ಧನುಷ್ ಐಶ್ವರ್ಯ ಇಬ್ಬರು ಒಂದಾಗಲಿ ಎಂದು ಅನೇಕ ಪೋಸ್ಟ್ ಗಳನ್ನು ಮಾಡಿದ್ದರು. ಆದರೆ ಯಾವುದು ಸಹ ಕೆಲಸ ಮಾಡಲಿಲ್ಲ. ಇದೀಗ ಈ ಜೋಡಿಗೆ ಚೆನ್ನೈ ಫ್ಯಾಮಿಲಿ ಕೋರ್ಟ್ ಇಂದ ಅಧಿಕೃತವಾಗಿ ವಿಚ್ಛೇದನ ಸಿಕ್ಕಿದೆ. ಇಬ್ಬರು ಬೇರೆ ಬೇರೆ ಆಗಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಬಹಳ ಬೇಸರ ತಂದಿದೆ, ಅಷ್ಟೇ ಅಲ್ಲದೇ ಕುಟುಂಬದವರಿಗೂ ಬೇಸರ ತಂದಿದೆ. ಏಕೆಂದರೆ ಇವರಿಬ್ಬರು ಒಂದಾಗಬಹುದು ಎಂದು ಎಲ್ಲರಲ್ಲೂ ಒಂದು ಸಣ್ಣ ನಿರೀಕ್ಷೆ ಇತ್ತು, ಆದರೆ ಈಗ ಅವೆಲ್ಲವೂ ಹುಸಿ ಆಗಿದೆ. ಇನ್ನೆಂದಿಗೂ ಈ ಜೋಡಿ ಒಂದಾಗುವುದಿಲ್ಲ. ಇಬ್ಬರು ಇನ್ನುಮುಂದೆ ತಮ್ಮ ಕೆರಿಯರ್ ಬಗ್ಗೆ ಗಮನ ಹರಿಸಲಿದ್ದಾರೆ.