ಸಾಹಸಸಿಂಹ ವಿಷ್ಣುವರ್ಧನ್ ಅವರು ಕನ್ನಡದ ಮೇರು ನಟ. ಸಾಸಹಸಿಂಹ ಅನ್ನೋ ಹೆಸರು ಇವರಿಗೆ ಬಿಟ್ಟು ಮತ್ಯಾರಿಗೂ ಸೂಟ್ ಆಗೋದಿಲ್ಲ ಎಂದು ಹೇಳಿದರೂ ತಪ್ಪಲ್ಲ. ವಿಷ್ಣುದಾದ ಅವರು ಕನ್ನಡ ಚಿತ್ರರಂಗಕ್ಕೆ ಎಷ್ಟು ಸೇವೆ ಮಾಡಿದ್ದಾರೆ ಎಂದು ನಮಗೆಲ್ಲಾ ಗೊತ್ತೇ ಇದೆ. ಇಂಥ ವಿಷ್ಣುದಾದ ಅವರು ತಮ್ಮ ವ್ಯಕ್ತಿತ್ವದ ಮೂಲಕ ಎಲ್ಲರಿಗೂ ಇಷ್ಟ ಆಗುವ ವ್ಯಕ್ತಿ. ಇವರ ಸರಳತೆ, ಸರಳ ವ್ಯಕ್ತಿತ್ವ, ಮಹಿಳೆಯರಿಗೆ ಇವರು ಕೊಡುತ್ತಿದ್ದ ಗೌರವ ಇದೆಲ್ಲವೂ ಅವರಿಗೆ ಇರುವ ಫ್ಯಾನ್ ಬೇಸ್ ಅನ್ನು ಹೆಚ್ಚು ಮಾಡಿತ್ತು. ಒಬ್ಬ ವ್ಯಕ್ತಿಯಾಗಿ, ನಟನಾಗಿ ವಿಷ್ಣುದಾದ ಅವರು ಎಷ್ಟು ಹೆಸರು ಮಾಡಿದ್ದಾರೆ, ಅವರು ಎಲ್ಲಾ ಅಭಿಮಾನಿಗಳ ನೆನಪಲ್ಲಿ ಹಾಗೆಯೇ ಇದ್ದಾರೆ, ಇಂದಿಗೂ ದಾದಾ ಅವರನ್ನು ಯಾರು ಕೂಡ ಮರೆತಿಲ್ಲ ಎಂದು ನಮಗೆಲ್ಲಾ ಗೊತ್ತೇ ಇದೆ. ಆದರೆ ಪತ್ನಿ ಭಾರತಿ ಅವರ ಬಗ್ಗೆ ದಾದಾ ಅವರಿಗೆ ಹೆಚ್ಚು ಪೊಸೆಸಿವ್ ನೆಸ್ ಇತ್ತು ಅನ್ನೋ ವಿಷಯ ಹೆಚ್ಚಿನ ಜನರಿಗೆ ಗೊತ್ತಿಲ್ಲ.. ಇದರಿಂದ ಆಗಿದ್ದೇನು ಗೊತ್ತಾ?

ವಿಷ್ಣುದಾದ ಅವರು ಭಾರತಿ ಅಮ್ಮನವರ 50ನೇ ವರ್ಷದ ವಿವಾಗ ವಾರ್ಷಿಕೋತ್ಸವ ಒಂದೆರಡು ದಿನಗಳ ಹಿಂದೆಯಷ್ಟೇ ನಡೆಯಿತು. ಈ ವಿಶೇಷ ದಿನದಂದು ಅವರ ಮಗಳು ಕೀರ್ತಿ ಅವರು ಹಾಗೂ ಅನಿರುದ್ಧ ಅವರು ಮದುವೆಯ ಇನ್ವಿಟೇಶನ್ ಕಾರ್ಡ್ ಹಾಗೂ ಕೆಲವು ಫೋಟೋಗಳನ್ನು ಶೇರ್ ಮಾಡಿ, ಮದುವೆ ವಾರ್ಷಿಕೋತ್ಸವಕ್ಕೆ ಸುಂದರವಾಗಿ ವಿಶ್ ಕೂಡ ಮಾಡಿದ್ದರು. ಈ ಪೋಸ್ಟ್ ವೈರಲ್ ಆಗಿದ್ದು, ದಾದಾ ಅವರು ಈಗ ಇದ್ದಿದ್ದರೆ ತುಂಬಾ ಚೆನ್ನಾಗಿರುತ್ತಿತ್ತು, ಇಬ್ಬರು ಜೊತೆಯಾಗಿ 50ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಸುಂದರವಾಗಿ ಆಚರಣೆ ಮಾಡುತ್ತಿದ್ದರು ಎಂದು ಅನ್ನಿಸದೇ ಇರದು. ಈ ವೇಳೆ ವಿಷ್ಣುದಾದ ಹಾಗೂ ಭಾರತಿ ಅಮ್ಮನವರ ಬಗ್ಗೆ ಕೆಲವು ವಿಚಾರಗಳು ವೈರಲ್ ಆಗಿದೆ. ವಿಷ್ಣುದಾದ ಅವರು ಭಾರತಿ ಅಮ್ಮನವರ ವಿಚಾರದಲ್ಲಿ ಎಷ್ಟು ಪೊಸೆಸಿವ್ ಆಗಿದ್ದರು ಎಂದು ತಿಳಿದು ಬಂದಿದೆ..

ಇನ್ನು ವಿಷ್ಣುವರ್ಧನ್ ಹಾಗೂ ಭಾರತಿ ಅವರದ್ದು ಲವ್ ಮ್ಯಾರೇಜ್. ಮದುವೆಗಿಂತ ಮೊದಲು ದಾದಾ ಅವರು ಭಾರತಿ ಅವರ ದೊಡ್ಡ ಫ್ಯಾನ್ ಆಗಿದ್ದರಂತೆ. ಹಲವು ಥಿಯೇಟರ್ ಗಳಲ್ಲಿ ಹುಡುಕಿಕೊಂಡು ಹೋಗಿ ಭಾರತಿ ಅವರ ಸಿನಿಮಾಗಳನ್ನು ನೋಡುತ್ತಿದ್ದರಂತೆ. ಇಬ್ಬರು ಜೊತೆಯಾಗಿ ಕೆಲವು ಸಿನಿಮಾಗಳಲ್ಲಿ ಕೆಲಸ ಮಾಡಿದ ನಂತರ, ಭಾರತಿ ಅಮ್ಮನವರನ್ನು ಪ್ರೀತಿಸುವುದಕ್ಕೆ ಶುರು ಮಾಡಿ, ಮೊದಲಿಗೆ ವಿಷ್ಣುದಾದ ಅವರು ಭಾರತಿ ಅಮ್ಮನವರ ತಂದೆ ತಾಯಿಯ ಪರಿಚಯ ಮಾಡಿಕೊಂಡು, ಅವರ ಜೊತೆಗೆ ಕ್ಲೋಸ್ ಅದರಂತೆ. ಅವರ ಮೂಲಕ ಮದುವೆಯ ಪ್ರೊಪೋಸ್ ಮಾಡಿ, 50 ವರ್ಷಗಳ ಹಿಂದೆ ಅದ್ಧೂರಿಯಾಗಿ ಮದುವೆಯಾದರು. ಇವರಿಬ್ಬರ ಮದುವೆಗೆ ಜನಸಾಗರವೇ ಹರಿದು ಬಂದಿತ್ತಂತೆ. ಸಿನಿಮಾ ಕಲಾವಿದರು ಬರೋದಕ್ಕೆ ಕೂಡ ಜಾಗ ಸಿಗಲಿಲ್ಲವಂತೆ. ಹಾಗೆಯೇ ಮದುವೆಯ ದಿವಸ ಇವರಿಬ್ಬರಿಗೂ ಊಟ ಮಾಡೋದಕ್ಕೆ ಊಟ ಸಿಗಲಿಲ್ಲವಂತೆ.

ಅಂದು ಜನಸಂದಣಿ ಎಷ್ಟರ ಮಟ್ಟಿಗೆ ಇತ್ತು ಎಂದರೆ, ಇವರಿಬ್ಬರು ಹಿಂದುಗಡೆ ಬಾಗಿಲಿನಿಂದ ಹೊರಗಡೆ ಹೋಗುವ ಹಾಗೆ ಆಗಿತ್ತಂತೆ. ಅಂದು ಜನ ಹಾಗೂ ಗಲಾಟೆಯನ್ನು ಕಂಟ್ರೋಲ್ ಮಾಡುವುದಕ್ಕೆ ಅಂಬರೀಶ್ ಅವರಿಂದ ಕೂಡ ಆಗಿರಲಿಲ್ಲವಂತೆ. ಇನ್ನು ಮದುವೆಯ ದಿವಸ ಮೊದಲ ರಾತ್ರಿಯ ದಿವಸ ಅವರ ರೂಮ್ ಹೊರಗಡೆ ಫ್ರೆಂಡ್ಸ್ ಇರಬೇಕು ಎಂದು ಹೇಳಿದ್ದರಂತೆ. ರೂಮ್ ಹೊರಗಡೆ ಇದ್ದ ಸೋಫಾದಲ್ಲಿ ಅಂಬರೀಶ್ ಅವರು ಮತ್ತು ರಾಜೇಂದ್ರ ಸಿಂಗ್ ಬಾಬು ಅವರು ಮಲಗಿದ್ದರಂತೆ. ದಾದಾ ಅವರ ಮದುವೆ ಕಥೆ ಈ ರೀತಿ ಆಗಿತ್ತು. ಇನ್ನು ಮದುವೆಯ ನಂತರ ಭಾರತಿ ಅವರನ್ನು ಮದುವೆಯಾದ ನಂತರ್ ಕೆಲವು ವರ್ಷಗಳ ಕಾಲ ನಟನೆ ಇಂದ ದೂರವೇ ಉಳಿದು ಬಿಟ್ಟರು. ಅದಕ್ಕೆ ಕಾರಣ ಒಂದು ಮದುವೆಯ ನಂತರ ಮನೆಯ ಬಗ್ಗೆ ಗಮನ ಕೊಡಬೇಕು, ಸಂಸಾರ ನೋಡಿಕೊಳ್ಳಬೇಕು ಎನ್ನುವುದಾಗಿತ್ತು..

ಮತ್ತೊಂದು ವಿಚಾರ ಏನು ಎಂದರೆ ವಿಷ್ಣುದಾದ ಅವರು ಭಾರತಿ ಅಮ್ಮನವರ ಬಗ್ಗೆ ತುಂಬಾ ಪೊಸೆಸಿವ್ ಆಗಿದ್ದರಂತೆ. ಅವರನ್ನು ಇನ್ನೊಬ್ಬರ ಜೊತೆಗೆ ನೋಡುವುದಕ್ಕೆ ಇಷ್ಟ ಪಡುತ್ತಿರಲಿಲ್ಲವಂತೆ. ಅದು ಕೂಡ ಒಂದು ಕಾರಣ ಆಗಿದೆ. ಒಟ್ಟಿನಲ್ಲಿ ವಿಷ್ಣುದಾದ ಅವರು ತಮ್ಮ ಪತ್ನಿ ಭಾರತಿ ಅವರ ವಿಷಯದಲ್ಲಿ ಎಷ್ಟು ಪೊಸೆಸಿವ್ ಆಗಿದ್ದರು, ಅವರನ್ನು ಎಷ್ಟು ಪ್ರೀತಿ ಮಾಡುತ್ತಿದ್ದರು ಎಂದು ಈ ಒಂದು ವಿಚಾರದಿಂದ ಗೊತ್ತಾಗುತ್ತದೆ. ಇವರಿಬ್ಬರೂ ಆದರ್ಶ ಜೋಡಿಗಳು ಎಂದರೂ ತಪ್ಪಲ್ಲ. ಮಹಿಳೆಯರಿಗೆ ಅಷ್ಟು ಗೌರವ ಕೊಡುವ ವಿಷ್ಣುದಾದ ಅವರು, ಭಾರತಿ ಅಮ್ಮನವರನ್ನು ಅಷ್ಟೇ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಇಬ್ಬರ ನಡುವೆ ಅಷ್ಟು ಪ್ರೀತಿ, ವಿಶ್ವಾಸ, ನಂಬಿಕೆ ಎಲ್ಲವೂ ಇತ್ತು. ಈ ವರ್ಷ ಈ ಮದುವೆಯಾಗಿ 50 ವರ್ಷಗಳು ಪೂರೈಸಿರುವುದು ಬಹಳ ಹೆಮ್ಮೆಯ ವಿಷಯ.
ವಿಷ್ಣುದಾದ ಅವರು ಎಂಥಾ ಅದ್ಭುತವಾದ ನಟ ಎಂದು ನಮಗೆಲ್ಲಾ ಗೊತ್ತೇ ಇದೆ. ಇನ್ನು ಭಾರತಿ ಅಮ್ಮನವರ ಸಾಧನೆ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಒಂದು ಕಾಲದ ಅತ್ಯಂತ ಸುಂದರವಾದ ನಾಯಕಿಯರ ಪೈಕಿ ಇವರು ಒಬ್ಬರು. 1966ರಲ್ಲಿ ನಟನೆ ಶುರು ಮಾಡಿದ ಭಾರತಿ ಅಮ್ಮನವರು ಕನ್ನಡ ಮಾತ್ರವಲ್ಲದೇ, ತಮಿಳು ತೆಲುಗು ಮಲಯಾಳಂ ಹಿಂದಿ ಹೀಗೆ ಎಲ್ಲಾ ಭಾಷೆಗಳಲ್ಲಿ 200 ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ಸ್ಟಾರ್ ನಟಿ ಆಗಿದ್ದವರು. ಭಾರತಿ ಅಮ್ಮನವರು ಎಲ್ಲಾ ಭಾಷೆಯ ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ನಾಯಕಿಯಾಗಿ ನಟಿಸಿದ್ದಾರೆ. ಅಷ್ಟು ಜನಪ್ರಿಯತೆ ಹೊಂದಿದ್ದ ಇವರು ವಿಷ್ಣುದಾದ ಅವರೊಡನೆ ಮದುವೆಯಾದ ನಂತರ ಕೆರಿಯರ್ ಗೆ ಬ್ರೇಕ್ ನೀಡಿ, ಸಂಸಾರದ ಕಡೆಗೆ ಗಮನ ಕೊಟ್ಟಿದ್ದು ನಿಜಕ್ಕೂ ಮೆಚ್ಚುಗೆ ನೀಡಬೇಕಾದ ವಿಚಾರ.

ಇನ್ನು ವಿಷ್ಣುದಾದ ಅವರು ಸಿನಿಮಾಗಳಲ್ಲಿ ನಟಿಸುತ್ತಿದ್ದರು, ಮದುವೆಯಾದ ನಂತರ ಕೂಡ ವಿಷ್ಣುದಾದ ಅವರು ಸಿನಿಮಾ ಗಳಲ್ಲಿ ಬಿಡುವಿಲ್ಲದ ಹಾಗೆ ಬ್ಯುಸಿ ಆಗಿಬಿಟ್ಟರು. ಆಗ ವಿಷ್ಣುದಾದ ಅವರ ಜೊತೆಗೆ ಸಪೋರ್ಟಿವ್ ಆಗಿ ನಿಂತಿದ್ದು ಭಾರತಿ ಅಮ್ಮ. ವಿಷ್ಣುದಾದ ಅವರನ್ನು ನೋಡಿಕೊಂಡು ಜೊತೆಗೆ ಸಂಸಾರ ಮಕ್ಕಳು ಎಲ್ಲವನ್ನು ಸಹ ಸರಿದೂಗಿಸಿಕೊಂಡು ಹೋದರು. ಈಗಲೂ ಕೂಡ ಭಾರತಿ ಅಮ್ಮನವರು ವಿಷ್ಣುದಾದ ಅವರ ಸಮಾಧಿಯ ವಿಷಯದ ಬಗ್ಗೆ ಹೋರಾಡುತ್ತಲೇ ಇದ್ದಾರೆ. ಮೈಸೂರಿನಲ್ಲಿ ಕೊನೆಗೂ ವಿಷ್ಣುದಾದ ಅವರ ಸ್ಮಾರಕ ಅದ್ಭುತವಾಗಿ ಮೂಡಿ ಬಂದಿದೆ. ಭಾರತಿ ಅಮ್ಮನವರು ಇದೇ ರೀತಿ ಒಳ್ಳೆಯ ಕೆಲಸಗಳನ್ನು ಮಾಡುತ್ತಾ, ಆರೋಗ್ಯವಾಗಿ ಸಂತೋಷವಾಗಿ ಇರಲಿ ಎಂದು ನಾವು ಕೂಡ ದೇವರಲ್ಲಿ ಪ್ರಾರ್ಥಿಸೋಣ.