ಟಾಲುವುಡ್ ಬೆಡಗಿ ನಟಿ ಸಮಂತಾ ನಾಗಚೈತನ್ಯ ಅವರಿಂದ ಡಿವೋರ್ಸ್ ಪಡೆದುಕೊಂಡ ನಂತರ ಹಾಗೂ ಅನಾರೋಗ್ಯದ ಕಾರಣದಿಂದ ಚಿತ್ರರಂಗದಿಂದ ಕೊಂಚ ದೂರವಿದ್ದರು. ಇದೀಗ ‘ಖುಷಿ’ ಸಿನಿಮಾದ ಮೂಲಕ ಮತ್ತೆ ಸಮಂತಾ ನಟನೆಗೆ ಮರಳಿದ್ದಾರೆ. ‘ಖುಷಿ’ ಸಿನಿಮಾ ರೋಮ್ಯಾಂಟಿಕ್ ಲವ್ ಸ್ಟೋರಿಯಾಗಿದ್ದು, ವಿಜಯ ದೇವರಕೊಂಡ ಅವರಿಗೆ ಸಮಂತಾ ಜೋಡಿಯಾಗಿದ್ದಾರೆ. ಇದೀಗ ಸಿನಿಮಾ ಕಾರ್ಯಕ್ರಮದಲ್ಲಿ ಇವರಿಬ್ಬರು ವೇದಿಕೆಯ ಮೇಲೆಯೇ ರೋಮ್ಯಾನ್ಸ್ ಮಾಡಿದ್ದು, ಫೋಟೋಗಳು ವೈರಲ್ ಆಗುತ್ತಿವೆ.


ಸಮಂತಾ ಹಾಗೂ ವಿಜಯ ದೇವರಕೊಂಡ ನಟನೆಯ ‘ಖುಷಿ’ ಸಿನಿಮಾದ ಶೂಟಿಂಗ್ ಈಗಾಗಲೇ ಮುಕ್ತಾಯವಾಗಿದೆ. ಸೆ.15ಕ್ಕೆ ಚಿತ್ರ ತೆರೆಗೆ ಬರಲಿದೆ. ಈ ನಡುವೆ ಇತ್ತೀಚೆಗಷ್ಟೇ ಸಿನಿಮಾದ ಪ್ರಚಾರಾರ್ಥವಾಗಿ ಮ್ಯೂಸಿಕ್ ನೈಟ್ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಟ ವಿಜಯ ದೇವರಕೊಂಡ ವೇದಿಕೆಯ ಮೇಲೆ ಶರ್ಟ್ ಬಿಚ್ಚಿ ಸಮಂತಾ ಅವರೊಂದಿಗೆ ರೋಮ್ಯಾನ್ಸ್ ನಡೆಸಿದಿದ್ದು, ಇದನ್ನು ಕಂಡು ಫ್ಯಾನ್ಸ್ ಫುಲ್ ಫೀದಾ ಆಗಿದ್ದಾರೆ.
ಮ್ಯೂಸಿಕಲ್ ನೈಟ್ ಕಾರ್ಯಕ್ರಮದಲ್ಲಿ ಸಮಂತಾ ಹಾಗೂ ವಿಜಯ ದೇವರಕೊಂಡ ‘ಖುಷಿ’ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದರು. ಈ ವೇಳೆ ವಿಜಯ ದೇವರಕೊಂಡ ಶರ್ಟ್ ಬಿಚ್ಚಿ ಸಮಂತಾ ಅವರನ್ನು ಗಟ್ಟಿಯಾಗಿ ಹಗ್ ಮಾಡಿಕೊಂಡಿದ್ದಾರೆ. ವೇದಿಕೆಯ ಮೇಲೆ ಇವರಿಬ್ಬರ ರೋಮ್ಯನ್ಸ್ ಕಂಡು ಫ್ಯಾನ್ಸ್ ಹುಚ್ಚೆದ್ದು ಕುಣಿದಿದ್ದಾರೆ. ಸದ್ಯ, ಇವರಿಬ್ಬರ ಬೋಲ್ಡ್ ಫೋಟೋಗಳಯ ಸಕ್ಕತ್ ವೈರಲ್ ಆಗುತ್ತಿವೆ.