ಮಕ್ಕಳಿಂದ ಹಿರಿಯರ ತನಕ ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ತಮ್ಮ ಹೆಚ್ಚಿನ ಸಮಯವನ್ನು ಮೊಬೈಲ್ನಲ್ಲಿಯೇ ಕಳೆಯುತ್ತಿದ್ದಾರೆ. ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್ಫೋನ್ಗಳಿವೆ. ಈಗ ಅದೇ ಅವರ ಪ್ರಪಂಚವಾಗಿದೆ. ನೀವು ನೋಡುವ ಪ್ರತಿಯೊಬ್ಬರ ಕಣ್ಣುಗಳು ಮೊಬೈಲ್ ಪರದೆಯ ಮೇಲಿರುತ್ತವೆ. ಚಿಕ್ಕ ಮಕ್ಕಳೂ ಕೂಡ ಹಿರಿಯರನ್ನು ನೋಡುತ್ತಾ ಫೋನ್ ನಲ್ಲೇ ಸಮಯ ಕಳೆಯುತ್ತಿದ್ದಾರೆ. ಮೊಬೈಲ್ ಫೋನ್ಗಳಿಂದಾಗಿ ಮಕ್ಕಳು ಹೊರಗೆ ಹೋಗುವುದು ಮತ್ತು ಆಟವಾಡುವುದನ್ನು ಸಹ ನಿಲ್ಲಿಸಿದ್ದಾರೆ. ಮಕ್ಕಳು ಹೊರಾಂಗಣ ಆಟಗಳನ್ನು ಬಿಟ್ಟು ಮೊಬೈಲ್ ಮತ್ತು ಕಂಪ್ಯೂಟರ್ ಪರದೆಯ ಮೇಲೆ ಆಟವಾಡುತ್ತಿದ್ದಾರೆ. ಇದೆಲ್ಲವೂ ಮಕ್ಕಳ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತಿದೆ. ಮಕ್ಕಳ ಮೊಬೈಲ್ ಚಟದಿಂದ ಪೋಷಕರೂ ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳನ್ನು ಈ ಚಟದಿಂದ ಮುಕ್ತಗೊಳಿಸಲು ವಿಶೇಷವಾದ ವಿಧಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಹೌದು, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅದೇನೆಂದು ನೋಡೋಣ ಬನ್ನಿ…
ಮಕ್ಕಳನ್ನು ಹೆದರಿಸುವ ದೆವ್ವ
ಇಡೀ ದಿನ ಮೊಬೈಲ್ ಫೋನ್ ಗಳಲ್ಲಿ ಬ್ಯುಸಿಯಾಗಿರುವ ಮಕ್ಕಳನ್ನು ಹೆದರಿಸಲು ಇದೀಗ ಭೂತ ಬಳಗ ರೆಡಿಯಾಗಿದೆ. ಹೌದು ಆದರೆ ಇವು ನಿಜವಾದ ಭೂತವಲ್ಲ. ಟ್ಯಾಬ್ಲೋ. ಟ್ಯಾಬ್ಲೋವನ್ನು ಭೂತದ ರೀತಿ ಸಿದ್ಧಪಡಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದರಲ್ಲಿ ದೈತ್ಯ ಪ್ರೇತವು ತನ್ನ ಕೈಯಲ್ಲಿ ಹುಡುಗಿಯನ್ನು ತಲೆಕೆಳಗಾಗಿ ನೇತಾಡಿಸುತ್ತಿರುವುದನ್ನು ಕಾಣಬಹುದು. ಟ್ಯಾಬ್ಲೋದಲ್ಲಿ ಮಾಡಿದ ದೆವ್ವಗಳನ್ನು ಯಂತ್ರದಲ್ಲಿ ಹೊಂದಿಸಲಾಗಿದ್ದು, ತಿರುಗಾಡುತ್ತಿದೆ. ಭಯಾನಕ ಬಟ್ಟೆಗಳನ್ನು ಧರಿಸುವುದರ ಜೊತೆಗೆ ಅವುಗಳ ಲುಕ್ ಚಿತ್ರಗಳಲ್ಲಿ ನೋಡಿದ ದೆವ್ವದಂತೆಯೇ ಭಾಸವಾಗುತ್ತದೆ. ದೈತ್ಯ ಪ್ರೇತವೊಂದು ಹುಡುಗಿ ಬೊಂಬೆಯನ್ನು ತಲೆಕೆಳಗಾಗಿ ಹಿಡಿದಿದೆ. ಬಾಲಕಿಯ ಪ್ರತಿಮೆಯೊಳಗೆ ಧ್ವನಿಮುದ್ರಿತ ಧ್ವನಿಯನ್ನೂ ಅಳವಡಿಸಲಾಗಿದೆ. ಬಾಲಕಿ “ನನ್ನನ್ನು ಬಿಟ್ಟುಬಿಡಿ, ನನ್ನನ್ನು ಬಿಟ್ಟುಬಿಡಿ, ಈಗ ನಾನು ಎಂದಿಗೂ ಮೊಬೈಲ್ ಬಳಸುವುದಿಲ್ಲ, ಮಮ್ಮಿ, ನನ್ನನ್ನು ಪಾರು ಮಾಡಿ” ಎಂದು ಹೇಳುವುದನ್ನು ಕೇಳಬಹುದು.
ಇಲ್ಲಿ ದೈತ್ಯ ಪ್ರೇತವು ತುಂಬಾ ಭಯಾನಕವಾಗಿ ಕಾಣುತ್ತದೆ. ಅವನ ಕಣ್ಣುಗಳಲ್ಲಿ ಎರಡು ಉರಿಯುವ ದೀಪಗಳನ್ನು ಇರಿಸಲಾಗಿದೆ. ಅಲ್ಲದೆ, ತಲೆಯ ಮೇಲೆ ಎರಡು ಕೊಂಬುಗಳನ್ನು ಸಹ ಮಾಡಲಾಗಿದೆ ಮತ್ತು ಬಾಯಿಯಲ್ಲಿ ನಾಲಿಗೆಗೆ ಹೊಳೆಯುವ ಲೈಟ್ ಟ್ಯೂಬ್ ಅನ್ನು ಸಹ ಇರಿಸಲಾಗಿದೆ. ಇದನ್ನು ನೋಡಿದರೆ ಮಕ್ಕಳ ಸ್ಥಿತಿ ಹೇಗಾಗಬಾರದು ನೆನಪಿಸಿಕೊಳ್ಳಿ. ಈ ಟ್ಯಾಬ್ಲೋ ಮೂಲಕ, ಮೊಬೈಲ್ ಫೋನ್ ಬಳಸುವ ಮಕ್ಕಳ ಮನಸ್ಸಿನಲ್ಲಿ ಭಯವನ್ನು ಮೂಡಿಸಲಾಗುತ್ತಿದೆ. ಮೊಬೈಲ್ ಬಳಸುವ ಮಕ್ಕಳನ್ನು ದೆವ್ವ ತಲೆಕೆಳಗಾಗಿ ನೇತುಹಾಕಿ ಸಾಯಿಸುತ್ತದೆ ಎಂದು ಮಕ್ಕಳ ಮನಸ್ಸಿನಲ್ಲಿ ಭಾವನೆ ಮೂಡಿಸಲಾಗುತ್ತಿದೆ. ಇದರಿಂದ ಮಕ್ಕಳು ಮೊಬೈಲ್ ಬಳಸಿದಾಗಲೆಲ್ಲ ಅವರ ಮನಸ್ಸಿನಲ್ಲಿ ದೆವ್ವದ ಭಯ ಬೆಳೆದು ಮೊಬೈಲ್ ಬಳಸುವುದನ್ನು ನಿಲ್ಲಿಸುತ್ತಾರೆ.
ಎಲ್ಲಿದೆ ಈ ಟ್ಯಾಬ್ಲೋ?
ದೆವ್ವಗಳ ಈ ಭಯಾನಕ ವೀಡಿಯೊವನ್ನು Instagram ನಲ್ಲಿ @ joharranchi ಹೆಸರಿನ ಪೇಜ್ನಲ್ಲಿ ಹಂಚಿಕೊಳ್ಳಲಾಗಿದೆ . ಸುದ್ದಿ ಬರೆಯುವವರೆಗೂ ಇದನ್ನು 7 ಮಿಲಿಯನ್ಗಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ ಮತ್ತು 6.5 ಲಕ್ಷಕ್ಕೂ ಹೆಚ್ಚು ಜನರು ಅದನ್ನು ಲೈಕ್ ಮಾಡಿದ್ದಾರೆ. ವಿಡಿಯೋದ ಶೀರ್ಷಿಕೆಯಲ್ಲಿ ಕಂಡುಬರುವ ಟ್ಯಾಬ್ಲೋ ಬಗ್ಗೆ ಕೆಲವು ಮಾಹಿತಿಯನ್ನು ಸಹ ನೀಡಲಾಗಿದೆ. ಜಾರ್ಖಂಡ್ನ ರಾಂಚಿಯಲ್ಲಿರುವ ಬಿಹಾರ್ ಕ್ಲಬ್ ಬಳಿ ಈ ಟ್ಯಾಬ್ಲೋವನ್ನು ಮಾಡಲಾಗಿದೆ ಎಂದು ಹೇಳಲಾಗಿದೆ.