ನಮ್ಮೆಲ್ಲರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಎಷ್ಟೇ ಹೇಳಿದರು ಕಡಿಮೆ. ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಅನೇಕ ವಿಚಾರಗಳು ಅವರು ಇದ್ದದ್ದಕ್ಕಿಂತ ಅವರು ಹೋದಮೇಲೆಯೇ ಬೆಳಕಿಗೆ ಬಂದಿದೆ ಎಂದರು ತಪ್ಪಲ್ಲ. ಇಂದು ಅವರು ದೈಹಿಕವಾಗಿ ನಮ್ಮ ಜೊತೆಗೆ ಇರದೇ ಹೋದರು ಸಹ, ಮಾನಸಿಕವಾಗಿ ಅಪ್ಪು ಅವರು ನಮ್ಮೊಡನೆ ಸದಾ ಇದ್ದಾರೆ ಎನ್ನುವುದೇ ನಮ್ಮೆಲ್ಲರ ನಂಬಿಕೆ. ಅಭಿಮಾನಿಗಳು ಇವತ್ತಿಗೂ ಸಹ ಅವರ ಸಿನಿಮಾಗಳನ್ನು, ಅವರ ಮಾತುಗಳನ್ನು ಮರೆತಿಲ್ಲ. ಇಂಥ ಅಪ್ಪು ಅವರು ಹುಟ್ಟೋ ಮೊದಲೇ ಅವರು ದೊಡ್ಡ ಸ್ಟಾರ್ ಆಗ್ತಾರೆ ಅಂತ ಹೇಳಿದ್ದರಂತೆ ಹಿರಿಯನಟಿ ಬಿ. ಸರೋಜಾ ದೇವಿ ಅವರು.

ಈ ವಿಷಯ ಇತ್ತೀಚೆಗೆ ಗೊತ್ತಾಗಿದೆ. ಹಿರಿಯನಟಿ ಬಿ. ಸರೋಜಾ ದೇವಿ ಅವರು ಅಣ್ಣಾವ್ರ ಜೊತೆಗೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ಕಾರಣ ಅವರ ಕುಟುಂಬದ ಜೊತೆಗೆ ಒಳ್ಳೆಯ ಒಡನಾಟ ಇದೆ. ಪಾರ್ವತಮ್ಮನವರ ಜೊತೆಗೆ ಬಹಳ ಆತ್ಮೀಯವಾಗಿ ಇದ್ದವರಲ್ಲಿ ಸರೋಜಾ ದೇವಿ ಅವರು ಕೂಡ ಒಬ್ಬರು. ಪಾರ್ವತಮ್ಮ ರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗದ ಧೀಮಂತ ನಿರ್ಮಾಪಕಿಯಾಗಿ ಹೆಸರು ಮಾಡಿದವರು. ತಮ್ಮದೇ ನಿರ್ಮಾಣ ಸಂಸ್ಥೆ ಶುರು ಮಾಡಿ, ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಿಸಿ, ಹಲವರಿಗೆ ಕೆಲಸ ಕೊಟ್ಟವರು, ಹಲವು ನಾಯಕಿಯರನ್ನು ಚಿತ್ರರಂಗಕ್ಕೆ ಪರಿಚಯಿಸಿದವರು.
ಅಪ್ಪು ಅವರು ಹುಟ್ಟುವ ವೇಳೆಯೇ ಆಗಷ್ಟೇ ನಿರ್ಮಾಪಕಿಯಾಗಿ ಕೆಲಸ ಶುರು ಮಾಡಿದ್ದ ಪಾರ್ವತಮ್ಮನವರು ಒಂದು ದಿನ ಶೂಟಿಂಗ್ ಸೆಟ್ ಗೆ ಬರುವಾಗ ಭಾರ ಹೊತ್ತುಕೊಂಡು ಬಂದರಂತೆ. ತಾವು ನಿರ್ಮಾಪಕಿಯಾಗಿ ಅಲ್ಲಿಗೆ ಬರುವಾಗ, ಸೆಟ್ ನಲ್ಲಿ ಇರುವ ಎಲ್ಲರಿಗೂ ಸಹ ಊಟವನ್ನು ತಾವೇ ಹೊತ್ತುಕೊಂಡು ಬಂದರಂತೆ ಪಾರ್ವತಮ್ಮ. ಬಳಿಕ ಸುಸ್ತಾಗಿ ಒಂದು ಕಡೆ ಕುಳಿತುಕೊಂಡರಂತೆ, ಆಗ ಬಿ. ಸರೋಜಾದೇವಿ ಅವರು ಪಾರ್ವತಮ್ಮನವರನ್ನು ಮಾತನಾಡಿಸಿ ವಿಚಾರಿಸಿಕೊಂಡಾಗ, ತಾವು ಗರ್ಭಿಣಿ ಆಗಿದ್ದು ಆ ಕಾರಣಕ್ಕೆ ಹೆಚ್ಚು ಸುಸ್ತಾಗುತ್ತಿದೆ ಎಂದು ಪಾರ್ವತಮ್ಮನವರು ಸರೋಜಾದೇವಿ ಅವರ ಬಳಿ ಹೇಳಿದರಂತೆ.
ಆಗ ಸರೋಜಾದೇವಿ ಅವರು, ನೀವು ಗರ್ಭಿಣಿ ಆಗಿರುವಾಗಲು ಇಷ್ಟು ಕಷ್ಟಪಡುತ್ತಿದ್ದೀರಿ, ನಿಮ್ಮ ಈ ಸಂತಾನ ಸ್ಟಾರ್ ಆಗುತ್ತದೆ ನೋಡ್ತಾ ಇರಿ ಎಂದು ಹೇಳಿದ್ದರಂತೆ. ಅದಾದ ಕೆಲ ಸಮಯಕ್ಕೆ ಹುಟ್ಟಿದ ಮಗುವೆ, ಮುಂದೊಂದು ದಿವಸ ಪವರ್ ಸ್ಟಾರ್ ಆಗಿ ಬೆಳೆದು, ಕನ್ನಡದ ಮನೆಮಗನಾಗಿ ಹೆಸರು ಮಾಡಿದ್ದು. ಇನ್ನು ಬಿ. ಸರೋಜಾದೇವಿ ಅವರು ಮತ್ತು ಅಪ್ಪು ಅವರು ಕೂಡ ಜೊತೆಯಾಗಿ ಎರಡು ಸಿನಿಮಾದಲ್ಲಿ ನಟಿಸಿದ್ದಾರೆ. ಒಂದು ಅಪ್ಪು ಅವರು ಬಾಲನಟನಾಗಿ ಅಭಿನಯಿಸಿದ ಯಾರಿವನು ಸಿನಿಮಾದಲ್ಲಿ ಸರೋಜಾದೇವಿ ಅವರು ಅಪ್ಪು ಅವರ ತಾಯಿಯ ಪಾತ್ರದಲ್ಲಿ ಅಭಿನಯಿಸಿದ್ದರು..

ಇತ್ತೀಚೆಗೆ ತೆರೆಕಂಡ ನಟಸಾರ್ವಭೌಮ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಸರೋಜಾದೇವಿ ಅವರು ಕಾಣಿಸಿಕೊಂಡಿದ್ದರು. ಹೀಗೆ ಇವರಿಬ್ಬರ ಬಾಂಧವ್ಯ ಕೂಡ ಅಷ್ಟೇ ಚೆನ್ನಾಗಿತ್ತು. ಒಟ್ಟಿನಲ್ಲಿ ಸರೋಜಾದೇವಿ ಅವರು ಅಂದು ನುಡಿದಿದ್ದ ಭವಿಷ್ಯ ಅಂತೂ ಅಕ್ಷರಶಃ ಸತ್ಯವಾಗಿದೆ. ಆದರೆ ಇಂದು ಅಪ್ಪು ಅವರು ನಮ್ಮ ಜೊತೆಗೆ ಇಲ್ಲ ಎನ್ನುವುದು ಮಾತ್ರ ಯಾರಿಂದಲು ಸಹಿಸಿಕೊಳ್ಳಲು, ಅರಗಿಸಿಕೊಳ್ಳಲು ಇಂದಿಗೂ ಸಾಧ್ಯವಾಗದ ಒಂದು ನೋವಿನ ವಿಚಾರ. ಅಪ್ಪು ಅವರು ಎಲ್ಲೇ ಇದ್ದರೂ, ಮಾನಸಿಕವಾಗಿ ಈ ಪ್ರಕೃತಿಯ ರೂಪವಾಗಿ ನಮ್ಮ ಜೊತೆಗೆ ಯಾವಾಗಲೂ ಇರುತ್ತಾರೆ ಎನ್ನುವುದನ್ನು ಎಲ್ಲಾ ಅಭಿಮಾನಿಗಳು ಗಟ್ಟಿಯಾಗಿ ನಂಬಿದ್ದಾರೆ.