ನಮ್ಮ ಸಮಾಜದಲ್ಲಿ ಎಲ್ಲದಕ್ಕೂ ಒಂದೊಂದು ದಿನ ಇದೆ, ನಾವು ಎಲ್ಲವನ್ನೂ ಸಂಭ್ರಮಿಸುತ್ತೇವೆ. ಅದೇ ರೀತಿ ಪ್ರೀತಿ ಪ್ರೇಮಕ್ಕೂ ಒಂದು ದಿನ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ. ಫೆಬ್ರವರಿ 14 ಪ್ರೇಮಿಗಳ ದಿನಾಚರಣೆ ಮಾಡಲಾಗುತ್ತದೆ. ಪ್ರೀತಿಸಲು ಒಂದು ನಿರ್ದಿಷ್ಟ ದಿನ ಬೇಕಿಲ್ಲ, ಆದರೂ ನೂರಾರು ವರ್ಷಗಳಿಂದ ಪ್ರೇಮಿಗಳ ದಿನದ ಇತಿಹಾಸ ನಮಗೆ ಈ ಆಚರಣೆಯ ಪ್ರಾಮುಖ್ಯತೆಯನ್ನು ತೋರಿಸುತ್ತದೆ.
ಬೇರೆ ದಿನಗಳಲ್ಲಿ ಪ್ರೇಮ ನಿವೇದನೆ ಮಾಡಲು ಸಾಧ್ಯವಾಗದವರಿಗೆ, ಪ್ರೇಮಿಗಳ ದಿನ ಒಂದು ವಿಶೇಷ ಅವಕಾಶ. ಈಗಾಗಲೇ ಪ್ರೀತಿಯ ಸಂಬಂಧದಲ್ಲಿರುವವರು ಈ ದಿನವನ್ನು ಹಬ್ಬದಂತೆ ಸಂಭ್ರಮಿಸುತ್ತಾರೆ. ಫೆಬ್ರವರಿ 14 ಪ್ರೇಮಿಗಳಿಗೆ ಬಹುಮುಖ್ಯ ದಿನ, ಆದರೆ ಇದರ ಹಿಂದಿನ ನಿಜವಾದ ಕಥೆ ಏನು? ಪ್ರೇಮಿಗಳ ದಿನದ ಇತಿಹಾಸ ಯಾವಾಗ ಆರಂಭವಾಯಿತು?
ಫೆಬ್ರವರಿ ಬಂತೆಂದರೆ ಪ್ರೇಮಿಗಳಿಗೆ ಹಬ್ಬ. ವ್ಯಾಲೆಂಟೈನ್ಸ್ ವೀಕ್ ಮತ್ತು ವ್ಯಾಲೆಂಟೈನ್ಸ್ ಡೇ ಅನ್ನು ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ಪ್ರತಿ ದಿನಕ್ಕೆ ವಿಶೇಷ ಅರ್ಥವಿದೆ. ಪ್ರೇಮಿಗಳ ದಿನದ ಇತಿಹಾಸ ಹಲವಾರು ತತ್ವಗಳನ್ನು ಒಳಗೊಂಡಿದೆ, ಇದನ್ನು ತಿಳಿಯಲು ಈ ಲೇಖನ ಓದಿ!

ಪ್ರೇಮಿಗಳ ದಿನ ಹೇಗೆ ಪ್ರಾರಂಭವಾಯಿತು?;
ಪ್ರೇಮಿಗಳ ದಿನ ಹೇಗೆ ಪ್ರಾರಂಭವಾಯಿತು?; ಸೇಂಟ್ ವ್ಯಾಲೆಂಟೈನ್ ಕ್ರಿ.ಶ. 3ನೇ ಶತಮಾನದ ರೋಮನ್ ಕ್ಯಾಥೋಲಿಕ್. ಅವರು ಫೆಬ್ರವರಿ 14, 270 AD ರಂದು ನಿಧನರಾದರು. ಅವರ ನೆನಪಿಗಾಗಿ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ.
ಗುಟ್ಟಾಗಿ ಮದುವೆಯಾದ ಸೈನಿಕ;
ಗುಟ್ಟಾಗಿ ಮದುವೆಯಾದ ಸೈನಿಕ; ಆಗಿನ ಕಾಲದಲ್ಲಿ ಸೈನಿಕರು ಮದುವೆಯಾಗುವಂತಿರಲಿಲ್ಲ. ಆದ್ರೆ ಕೆಲ ಸೈನಿಕರು ಚಕ್ರವರ್ತಿಗಳ ಆದೇಶವನ್ನು ಧಿಕ್ಕರಿಸಿ ರಹಸ್ಯವಾಗಿ ಮದುವೆಯಾಗುತ್ತಿದ್ದರು. ಆದ್ರೆ ಮದುವೆಯಾದರೆ, ಬದ್ಧತೆಯಿಂದ ಕೆಲಸ ಮಾಡೋದಿಲ್ಲ ಎಂಬ ಕಾರಣಕ್ಕೆ ಸೈನಿಕರು ಮದುವೆಯಾಗಬಾರದು ಎಂದು ಹೇಳಲಾಗಿತ್ತು. ಆದರೂ ಗುಟ್ಟಾಗಿ ಮದುವೆಯಾಗುತ್ತಿದ್ದರು.. ಈ ಹಿನ್ನೆಲೆಯಲ್ಲಿ ಪ್ರೇಮಿಗಳ ಹಬ್ಬ ಬಂತು ಎಂದೂ ಹೇಳಲಾಗುತ್ತದೆ. ಆದ್ರೆ ಇದಕ್ಕೆ ಫೆಬ್ರವರಿ 14 ಅನ್ನೇ ಯಾಕೆ ನಿಗದಿ ಮಾಡಿದರು ಅನ್ನೋದಕ್ಕೆ ಸಾಕ್ಷ್ಯ ಇಲ್ಲ.

ವ್ಯಾಲೆಂಟೈನ್ ಶಿರಚ್ಛೇದ ಮಾಡಿದ ಚಕ್ರವರ್ತಿ;
ವ್ಯಾಲೆಂಟೈನ್ ಶಿರಚ್ಛೇದ ಮಾಡಿದ ಚಕ್ರವರ್ತಿ; ಹೀಗೆ ಯೋಧರು ಚಕ್ರವರ್ತಿಯ ಆದೇಶವನ್ನು ದಿಕ್ಕರಿಸಿ ಮದುವೆಯಾಗುತ್ತಿದ್ದರು. ಪ್ರೀತಿ ಮಾಡುತ್ತಿದ್ದರು. ಇದನ್ನು ತಿಳಿದ ಚಕ್ರವರ್ತಿ ಕ್ಲಾಡಿಯಸ್ ಗೋಥಿಕಸ್ ವ್ಯಾಲೆಂಟೈನ್ಗೆ ಮರಣದಂಡನೆ ವಿಧಿಸುತ್ತಾನೆ. ಅದೇ ದಿನವನ್ನು ಪ್ರೇಮಿಗಳ ದಿನವಾಗಿ ಆಚರಿಸಲಾಗುತ್ತದೆ ಎಂದು ಹೇಳಲಾಗುತ್ತದೆ.
ಎರಡು ದಶಕಗಳ ನಂತರ ಏನಾಯ್ತು..?;
ಎರಡು ದಶಕಗಳ ನಂತರ ಏನಾಯ್ತು..?; ಈ ಘಟನೆ ನಡೆದು ಎರಡು ದಶಕಗಳ ನಂತರ, ಆಗಿನ ಪೋಪ್ ಗಲಾಟಿಯನ್ಸ್ ವ್ಯಾಲೆಂಟೈನ್ಸ್ ಮರಣದ ದಿನವನ್ನು ಪ್ರೇಮಿಗಳ ದಿನವೆಂದು ಘೋಷಿಸಿದರು. ಅಂದಿನಿಂದ, ಈ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಈ ದಿನದಂದು ಪ್ರೇಮಿಗಳು ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಸಂತೋಷದಿಂದ ಕಳೆಯುತ್ತಾರೆ.