ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಾಗುತ್ತಲೇ ಇದೆ. ವಾಹನಗಳ ಸಂಖ್ಯೆಯೇ ಬೆಂಗಳೂರು ಒಂದರಲ್ಲಿ ಕೋಟಿ ದಾಟಿದೆ. ವಾಹನ ಸಂಖ್ಯೆ ಹೆಚ್ಚಾದಂತೆ ಟ್ರಾಫಿಕ್ ಸಮಸ್ಯೆ ಕೂಡ ಹೆಚ್ಚಾಗುತ್ತಿದೆ. ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಬೇಕು ಅಂದರೆ ಸಾಕು ಸಾಕಾಗಿ ಹೋಗುವ ಪರಿಸ್ಥಿತಿ ಇದೆ. ಮೆಟ್ರೋ, ಬಸ್, ಟ್ರೈನ್ ಇದ್ದರೂ ರಸ್ತೆ ಮೇಲೆ ಕಾರ್ ಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದಕ್ಕೊಂದು ಪರಿಹಾರ ನೀಡಬೇಕು ಅಂತ ಕಾಂಗ್ರೆಸ್ ಸರ್ಕಾರ ಹಲವು ಉಪಾಯ ಹುಡುಕಿದೆ.
ಹಿಂದೆ ಎಲಿವೇಟರ್ ಕಾರಿಡಾರ್ ಸೇರಿದಂತೆ ಅನೇಕ ಯೋಜನೆಗೆ ಕೈ ಹಾಕಿದ್ದರೂ ಅದು ಸಾಕಾರ ಗೊಂಡಿರಲಿಲ್ಲ. ಆದರೆ ಏನಾದ್ರೂ ಮಾಡಿ ಈ ಟ್ರಾಫಿಕ್ ಸಮಸ್ಯೆ ಬಗೆಹರಿಸೇಕು ಅಂತ ಸುರಂಗ ರಸ್ತೆ ಮಾಡಲು ಮುಂದಾಗಿದೆ ಕಾಂಗ್ರೆಸ್ ಸರ್ಕಾರ. ಪ್ರಮುಖವಾಗಿ ಹೆಬ್ಬಾಳ ಟು ಸಿಲ್ಕ್ ಬೋರ್ಡ್ ಸುರಂಗ ರಸ್ತೆ ಆರಂಭಕ್ಕೆ ಡಿಕೆ ಶಿವಕುಮಾರ್ ಸಿದ್ದತೆ ನಡೆಸಿದ್ದಾರೆ. ಇದು ಅವರ ಕನಸಿನ ಕೂಸು ಕೂಡ ಹೌದು. ನಗರದಲ್ಲಿ ಎರಡು ಸುರಂಗ ಮಾರ್ಗಗಳನ್ನು ನಿರ್ಮಿಸಲು ನಿರ್ಧಾರ ಮಾಡಲಾಗಿದೆ. ಒಂದು ಉತ್ತರ ದಕ್ಷಿಣ ಸುರಂಗವು ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಅವರಿಗೆ ಮತ್ತು ಪಶ್ಚಿಮ ಸುರಂಗವು ಕೆಆರ್ ಪುರಂನಿಂದ ನಾಯಂಡಳ್ಳಿಯ ವರೆಗೆ ಸಂಪರ್ಕ ಮಾಡುತ್ತದೆ.

ಸದ್ಯ ಈ ಸುರಂಗ ಮಾರ್ಗಕ್ಕೆ ಒಟ್ಟು 40,000 ಕೋಟಿ ರೂ ವೆಚ್ಚದಲ್ಲಿ ಟೆಂಡರ್ ಕರೆಯಲು ಸರ್ಕಾರ ಸಿದ್ಧತೆ ನಡೆಸಿದೆ. ಈ ಎರಡು ಸುರಂಗ ಮಾರ್ಗವೂ ಆದರೆ ನಗರದಲ್ಲಿ ಟ್ರಾಫಿಕ್ ಸಮಸ್ಯೆಯನ್ನು ಕಂಟ್ರೋಲ್ ಮಾಡಬಹುದು ಎಂಬುದು ಡಿಕೆ ಶಿವಕುಮಾರ್ ಅವರ ಯೋಚನೆ. ಉತ್ತರ ದಕ್ಷಿಣ ಸುರಂಗವು ಹೆಬ್ಬಾಳ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ನಡುವೆ 16 745 ಕಿಲೋ ಮೀಟರ್ ದೂರವನ್ನ ಕ್ರಮಿಸುತ್ತದೆ. ಪೂರ್ವ ಮತ್ತು ಪಶ್ಚಿಮ ಸುರಂಗ ಮಾರ್ಗ 28 ಕಿಲೋಮೀಟರ್ ಉದ್ದ ಇರಲಿದೆ. ಇದು ಕೆಆರ್ ಪುರಂ ಅನ್ನ ನಾಯಂಡಳ್ಳಿ ಯೊಂದಿಗೆ ಸಂಪರ್ಕ ಮಾಡುತ್ತದೆ. ಇನ್ನು ಉತ್ತರ ದಕ್ಷಿಣ ಸುರಂಗ ಮಾರ್ಗ ಎಸ್ಟೀಮ್ ಮಾಲ್ ನಿಂದ ಆರಂಭವಾಗಿ ಹೊಸೂರು ರಸ್ತೆಯ ಸಿಲ್ಕ್ ಬೋರ್ಡ್ ಅನ್ನ ಸಂಪರ್ಕ ಮಾಡಲಿದೆ. ಟ್ಯೂಬ್ ಟ್ವಿನ್ ವಿನ್ಯಾಸದ ಸುರಂಗ ಮಾರ್ಗಗಳಾಗಿದೆ.
ಮುಂಬೈ ನಗರದಲ್ಲಿ ಈಗಾಗಲೇ ಟ್ವಿನ್ ಟ್ಯೂಬ್ ವಿನ್ಯಾಸದ ಸುರಂಗ ಮಾರ್ಗಗಳನ್ನ ಸಾರ್ವಜನಿಕರು ಉಪಯೋಗಿಸುತ್ತಿದ್ದಾರೆ. ಅಲ್ಲಿ ವರ್ಕ್ ಆದ ಬೆನ್ನಲ್ಲೇ ಇಲ್ಲೂ ಕೂಡ ಅದೇ ರೀತಿಯಲ್ಲಿ ಸುರಂಗ ನಿರ್ಮಿಸಲು ಸಂಪುಟದಲ್ಲಿ ತಾತ್ವಿಕ ಅನುಮೋದನೆ ನೀಡಲಾಗಿತ್ತು. ಈ ಸುರಂಗಗಳ ನಿರ್ಮಾಣಕ್ಕೆ ಡಿಪಿಆರ್ ತಯಾರಿಕೆ ಮಾಡಲು ಫೆಬ್ರವರಿ ಅಂತ್ಯದೊಳಗೆ ಟೆಂಡರ್ ಕರೆಯಬೇಕಿತ್ತು. ಆದರೆ ಡಿಪಿಆರ್ ಅಂತಿಮಗೊಳಿಸಿದ ಹಿನ್ನೆಲೆ ಹಾಗೂ ಕೆಲವೊಂದು ಟೆಕ್ನಿಕಲ್ ಸಮಸ್ಯೆಯಿಂದ ತಡವಾಗಿತ್ತು. ಈ ಕಾರ್ಡಾರ್ಗಳನ್ನು ನಿರ್ಮಾಣ ಮಾಡೋದಿಕ್ಕೆ 19,000 ಕೋಟಿ ರೂಪಾಯಿಗಳನ್ನ ನೀಡೋದಾಗಿ 2025-26 ನೇ ಸಾಲಿನ ಬಜೆಟ್ ನಲ್ಲಿ ಸಿದ್ದರಾಮಯ್ಯ ಘೋಷಿಸಿದ್ದರು.

ಎಷ್ಟು ವೆಚ್ಚದಲ್ಲಿ ಸುರಂಗ ಮಾರ್ಗ ಆಗಲಿದೆ
ಹೆಬ್ಬಾಳ ಸಮೀಪದ ಎಸ್ಟೀಮ್ ಮಾಲ್ ನಿಂದ ಆರಂಭವಾಗುವಂತಹ ಸುಮಾರು 17,780.13 ಕೋಟಿ ರೂಪಾಯಿ ವೆಚ್ಚ ಎಂದು ಅಂದಾಜಿಸಲಾಗಿದೆ. ಇನ್ನು ಈ ಯೋಜನೆಗೆ 9303.6 ಕೋಟಿ ರೂಗಳನ್ನು ಬರಿಸಲು ಹುಡ್ಕೋ ಸಂಸ್ಥೆಯಿಂದ ಶೇಕಡಾ 8.95ರ ಬಡ್ಡಿ ದರದಲ್ಲಿ ಸಾಲ ಪಡೆಯಲು ಸರ್ಕಾರ ತೀರ್ಮಾನ ಮಾಡಿದೆ.
ಎಲ್ಲಿ ಪ್ರವೇಶ ಎಲ್ಲಿ ನಿರ್ಗಮನ
ಎಸ್ಟೀಮ್ ಮಾಲ್ ಬಳಿ ಸುರಂಗ ಮಾರ್ಗದ ಪ್ರವೇಶ ಇರಲಿದೆ. ಸಿಲ್ಕ್ ಬೋರ್ಡ್ ನ ಕೆಎಸ್ಆರ್ಪಿ ಜಂಕ್ಷನ್ ಬಳಿ ಎಕ್ಸಿಟ್ ಇರಲಿದೆ. ಇತ್ತ ಈ ಸುರಂಗ ಹಾದು ಹೋಗೋ ರಸ್ತೆಯಲ್ಲಿ ಮೂರು ಕಡೆಗಳಲ್ಲಿ ಪ್ರವೇಶ ಹಾಗೂ ನಿರ್ಗಮನ ಇರಲಿದೆ. ಒಂದು ಅರಮನೆ ಮೈದಾನದ ಬಳಿ, ಚಾಲುಕ್ಯ ಸರ್ಕಲ್ ಬಳಿ, ಲಾಲ್ ಬಾಗ್ ಬಳಿಯ ಅಶೋಕ ಪಿಲ್ಲರ್ ಬಳಿ. ಒಟ್ಟು ಮೂರು ಎಕ್ಸಿಟ್ ಅನ್ನ ನಿರ್ಮಿಸಲಾಗಿದೆ. ಈ ಸುರಂಗ ಮಾರ್ಗ ಹಾದು ಹೋಗುವ ರಸ್ತೆ ಸುರಂಗವು 180 ಅಡಿ ಅಷ್ಟು ಆಳದಲ್ಲಿ ಸಾಗಲಿದೆ. ಒಟ್ಟು ಟ್ವಿನ್ ಟ್ಯೂಬ್ ಸುರಂಗದ ರಸ್ತೆಗಳು 6 ಪಥಗಳಲ್ಲಿ ಇರಲಿದೆ. ಎರಡು ಪಥಗಳನ್ನು ಆಂಬುಲೆನ್ಸ್, ಪೊಲೀಸ್ ವಾಹನಗಳ ಸಂಚಾರಕ್ಕೆ ಮೀಸಲಿಡಲು ನಿರ್ಧಾರ ಮಾಡಲಾಗಿದೆ.
ಎಷ್ಟು ಸಮಯದ ಉಳಿತಾಯ ಆಗಲಿದೆ
ಬೆಂಗಳೂರು ಅಂತ ಬಂದರೆ ಸಮಯದ ಉಳಿತಾಯ ತುಂಬಾ ಮುಖ್ಯ. ಅದೇ ರೀತಿ ಈ ಸುರಂಗ ರಸ್ತೆಗಳಿಂದ ಸಮಯ ಉಳಿತಾಯವೂ ಕೂಡ ಆಗಲಿದೆ. ಅದರಲ್ಲೂ ಸ್ಪೀಕರ್ ರಸ್ತೆಗಳಲ್ಲಿ ಈ ಸುರಂಗ ಮಾರ್ಗ ಹೋಗುತ್ತಿರುವುದರಿಂದ ಸಾಕಷ್ಟು ಸಮಯ ಉಳಿಯುತ್ತೆ ಎನ್ನುವಂತಹದ್ದು ಸರ್ಕಾರದ ಲೆಕ್ಕಚಾರ. ದಕ್ಷಿಣದ ಸಿಲ್ಕ್ ಬೋರ್ಡ್ ನಿಂದ ಉತ್ತರ ದಿಕ್ಕಿನ ಹೆಬ್ಬಾಳ ತಲುಪಲು ಸದ್ಯ 90 ನಿಮಿಷ ಬೇಕಾಗುತ್ತದೆ. ಆದರೆ ಈ ಸುರಂಗ ಮಾರ್ಗ ನಿರ್ಮಿಸಿದ ಬಳಿಕ ಈ ರಸ್ತೆಯಲ್ಲಿ ಹೋದರೆ 16 ಕಿಲೋಮೀಟರ್ ದೂರವನ್ನು 20 ನಿಮಿಷಗಳಲ್ಲಿ ತಲುಪಬಹುದು ಎಂದು ಅಂದಾಜಿಸಲಾಗಿದೆ. ಸುಮಾರು 70 ನಿಮಿಷದ ಪ್ರಯಾಣದ ಅವಧಿ ಉಳಿಯುತ್ತದೆ.
ಟೋಲ್ ಸಂಗ್ರಹ
ಈ ಸುರಂಗ ಮಾರ್ಗದಲ್ಲೂ ಕೂಡ ಸಂಚರಿಸುವ ವಾಹನಗಳಿಗೆ ಟೋಲ್ ಸಂಗ್ರಹಿಸಲು ತೀರ್ಮಾನಿಸಲಾಗಿದೆ. ಟೆಂಡರ್ ಪಡೆಯುವ ಸಂಸ್ಥೆಯೇ 30 ವರ್ಷಗಳ ಕಾಲ ಟೋಲ್ ಸಂಗ್ರಹ ಮಾಡುತ್ತದೆ. ಪ್ರತಿ ಕಿಲೋಮೀಟರ್ ಈ ಎರಡು ಸುರಂಗ ಮಾರ್ಗಗಳು ನಿರ್ಮಾಣ ಮಾಡುವುದಕ್ಕೆ ಸುಮಾರು 38 ತಿಂಗಳು ಬೇಕಾಗುತ್ತೆ ಅಂತ ಸರ್ಕಾರ ಅಂದಾಜು ಮಾಡಲಾಗಿದೆ.



