ಕೆಲ ದಶಕಗಳ ಹಿಂದೆ ಬಿಕಿನಿ ಧರಿಸುವುದು ವಿದೇಶಿಗರಿಗೆ ಮಾತ್ರ ಫ್ಯಾಷನ್ ಆಗಿತ್ತು. ಆದರೆ ಈಗ ಭಾರತೀಯರಿಗೆ ಅದರಲ್ಲೂ ದಕ್ಷಿಣ ಭಾರತದ ಹಿರಿತೆರೆ ಮತ್ತು ಕಿರುತೆರೆ ನಟಿಯರು ಕೂಡ ಬಿಕಿನಿ ಧರಿಸಿ ಫೋಟೋಗಳಿಗೆ ಫೋಸ್ ನೋಡಲು ಆರಂಭಿಸಿದ್ದಾರೆ. ಇದೀಗ ಕನ್ನಡ ಕಿರುತೆರೆ ಧಾರವಾಹಿಯ ನಟಿಯೊಬ್ಬರು ಬಿಕಿನಿ ಧರಿಸಿ ಫೋಟೋಶೂಟ್ ನಡೆಸಿದ್ದು, ತಮ್ಮ ಹಾಟ್ & ಬೋಲ್ಡ್ ಫೋಟೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.ಯಾರು ಈ ನಟಿ ಅಂತಿರಾ? ಈ ವರದಿ ಓದಿ.

ನಾಗಿಣಿಯ ಬಿಕಿನಿ ಫೋಟೋಶೂಟ್!
ಕನ್ನಡದ ಖಾಸಗಿ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ-2 ಧಾರವಾಹಿಯ ನಟಿ ನಮೃತಾ ಗೌಡ ಇದೀಗ ಬಿಕಿನಿ ಫೋಟೋಶೂಟ್ ನಡೆಸಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ. ಜಲಪಾತವೊಂದರ ಬಳಿ ಬಿಕಿನಿ ತೊಟ್ಟು ಫೋಟೋಗಳಿಗೆ ನಮೃತ ಪೋಸ್ ನೀಡಿದ್ದಾರೆ. ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ನಮೃತ ಗೌಡ ತಮ್ಮ ಬಿಕಿನಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಈಕೆಯ ಹೊಸ ಅವತಾರಕ್ಕೆ ಫಿದಾ ಆಗಿದ್ದಾರೆ. ಇನ್ನೂ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಬಿಕಿನಿ ತೊಡುವುದು ಪಾಶ್ಚಾತ್ಯ ಸಂಸ್ಕೃತಿ. ಇಂತಹ ಫೋಟೋಗಳನ್ನು ಹಂಚಿಕೊಳ್ಳಬೇಡಿ’ ಎಂದು ಬುದ್ದಿ ಮಾತು ಹೇಳಿದ್ದಾರೆ. ಪುಟ್ಟಗೌರಿಯ ಮದುವೆ ಮೂಲಕ ನಟನೆ ಆರಂಭಿಸಿದ ನಮೃತ ಸದ್ಯ ನಾಗಿಣಿ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ನಡುವೆ ನಟಿಯ ಬಿಕಿನಿ ಪುರಾಣ ದೊಡ್ಡ ಸದ್ದು ಮಾಡುತ್ತಿದೆ.