ಜೀಕನ್ನಡ ವಾಹಿನಿಯ ಶ್ರೀರಸ್ತು ಶುಭಮಸ್ತು ಧಾರಾವಾಹಿ ದಿನದಿಂದ ದಿನಕ್ಕೆ ಕಥೆಯ ಮೂಲಕ ಸುದ್ದಿಯಾಗುತ್ತಲೇ ಇದೆ. ಇದು ವಿಭಿನ್ನ ಕಥಾಹಂದರ ಹೊಂದಿರುವ ಧಾರಾವಾಹಿ ಆಗಿರುವ ಕಾರಣ ವೀಕ್ಷಕರು ಈ ಕಥೆಯನ್ನು ಒಪ್ಪಿಕೊಳ್ಳುವುದು ಅಷ್ಟು ಸುಲಭ ಅಂತೂ ಅಲ್ಲ. ಇದು ಮಧ್ಯವಯಸ್ಸಿನ ಪ್ರೇಮಕಥೆ. ಈ ಕಥೆಯನ್ನು ಒಪ್ಪಿಕೊಳ್ಳೋದು ಎಲ್ಲರಿಂದಲೂ ಸಾಧ್ಯವಿಲ್ಲ. ಹಾಗಾಗಿ ಈ ಕಥೆ ಸಿಕ್ಕಾಪಟ್ಟೆ ಟ್ರೋಲ್ ಆಯಿತು. ಇದೀಗ ತುಳಸಿಗೆ ಮಗುವಾದ ಬಳಿಕ ಇನ್ನಷ್ಟು ಟ್ರೋಲ್ ಆಗುತ್ತಿದೆಯೇ. ಇದೆಲ್ಲವೂ ಇಷ್ಟು ಬೇಗ ಹೇಗೆ ಸಾಧ್ಯ? ಮಗು ಏನೋ ಜನಿಸಿದೆ, ತುಳಸಿನ ದೆವ್ವ ಮಾಡ್ತೀರಾ? ಅಂತಿದ್ದಾರೆ ವೀಕ್ಷಕರು. ಅಷ್ಟಕ್ಕೂ ಕಥೆಯಲ್ಲಿ ನಡೀತಿರೋದಾದ್ರು ಏನು? ಫುಲ್ ಡೀಟೇಲ್ಸ್ ಇಲ್ಲಿದೆ ನೋಡಿ..
ನಟಿ ಸುಧಾರಾಣಿ ಹಾಗೂ ಅಜಿತ್ ಹಂದೆ, ವೆಂಕಟ್ ರಾವ್ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಧಾರಾವಾಹಿ ಶ್ರೀರಸ್ತು ಶುಭಮಸ್ತು. ಇದು ಮರಾಠಿಯ ಅಗ್ಗಾಬಾಯಿ ಸಾಸುಬಾಯಿ ರಿಮೇಕ್ ಆಗಿದೆ. ಅತ್ತೆಗೆ ತನ್ನದೇ ಆದ ಸ್ವಂತ ಜೀವನ ಇರಬೇಕು ಎಂದು ಸೊಸೆಗೆ ಅನ್ನಿಸಿ, ಅತ್ತೆಯ ಬದುಕಿಗೆ ಸಪೋರ್ಟ್ ಮಾಡಿ, ಆಕೆಗೆ ಇನ್ನೊಂದು ಮದುವೆ ಮಾಡಿಸುವ ಕಥೆ ಇದಾಗಿತ್ತು. ಶುರುವಿನಲ್ಲಿ ತುಳಸಿ ಮಾಧವರ ಫ್ರೆಂಡ್ಶಿಪ್ ಇದೆಲ್ಲವನ್ನು ಸಹ ವೀಕ್ಷಕರು ಇಷ್ಟಪಟ್ಟು ಒಪ್ಪಿಕೊಂಡರು. ಆದರೆ ಇಬ್ಬರ ಮದುವೆಯ ಹಂತ ಎಂದು ಬಂದಾಗ ಹಲವಾರು ಜನರಿಗೆ ಇದನ್ನು ಒಪ್ಪಿಕೊಳ್ಳುವ ಮನಸ್ಥಿತಿ ಇರಲಿಲ್ಲ. ತುಳಸಿ ಮಾಧವರ ಮದುವೆ ನಡೆದಾಗ, ಸಾಕಷ್ಟು ಟ್ರೋಲ್ ಆಗಿದ್ದಿದೆ. ಅದೇ ಟ್ರೋಲ್ ಕಥೆ ಮುಂದುವರೆಯುತ್ತಿದ ಹಾಗೆ ಜಾಸ್ತಿಯಾಗಿದೆ.
ತುಳಸಿ ಮಾಧವರ ಮದುವೆ ಏನೋ ಆಯಿತು, ಇಬ್ಬರು ಸ್ನೇಹಿತರಾಗಿಯೇ ಇದ್ದವರು. ಸ್ನೇಹಿತರಾಗಿಯೇ ಮುಂದುವರೆಸಿಕೊಂಡು ಹೋಗಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ಕಥೆಯನ್ನು ಇನ್ನೆತ್ತಲೋ ತೆಗೆದುಕೊಂಡು ಹೋಗಿ, ಇಬ್ಬರು ತಂದೆ ತಾಯಿ ಆಗುತ್ತಿದ್ದಾರೆ, ತುಳಸಿ ಗರ್ಭಿಣಿ ಆಗಿದ್ದಾರೆ ಎಂದು ತೋರಿಸಲಾಯಿತು. ಈ ವಯಸ್ಸಲ್ಲಿ ಮಗು ಬೇಕಿತ್ತಾ ಎಂದು ಈ ಟ್ರ್ಯಾಕ್ ಸಿಕ್ಕಾಪಟ್ಟೆ ಟ್ರೋಲ್ ಆಯಿತು. ಈ ವಯಸ್ಸಲ್ಲಿ ತುಳಸಿಯನ್ನು ಗರ್ಭಿಣಿ ಮಾಡಿ, ಸೀರಿಯಲ್ ಹೋಗುತ್ತಿದ್ದ ದಿಕ್ಕನ್ನೇ ಹಾಳು ಮಾಡಿಬಿಟ್ಟಿರಿ ಎಂದು ವೀಕ್ಷಕರು ಜೀಕನ್ನಡ ವಾಹಿನಿಯನ್ನು ತರಾಟೆಗೆ ತೆಗೆದುಕೊಂಡರು. ಈ ಕಥೆ ಸಾಗುವುದರ ಜೊತೆಗೆ ಇನ್ನಷ್ಟು ಟ್ರ್ಯಾಕ್ ಗಳು ಸಹ ಸೇರಿಕೊಂಡವು. ಒಟ್ಟಿನಲ್ಲಿ ಚೆನ್ನಾಗಿ ಹೋಗುತ್ತಿದ್ದ ಕಥೆ ವೀಕ್ಷಕರಿಗೆ ಇಷ್ಟವಾಗದ ಹಂತ ತಲುಪಿತು.
ಹೇಗೋ ವೀಕ್ಷಕರು ನೋಡಿಕೊಂಡು ಹೋಗುತ್ತಿರುವ ವೇಳೆಯಲ್ಲಿ, ತುಳಸಿಗೆ ಆರೋಗ್ಯದಲ್ಲಿ ಸಮಸ್ಯೆ ಇದೆ ಎಂದು ಹೇಳಿ, ತಾಯಿಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ಕೊನೆಗೆ ತುಳಸಿಗೆ ಮಗು ಜನಿಸಿದೆ. ಹೆಣ್ಣುಮಗುವಿಗೆ ತುಳಸಿ ಜನ್ಮ ನೀಡಿದ್ದಾಳೆ. ಮಗುವೇನೋ ಸುರಕ್ಷಿತವಾಗಿದೆ, ತಾಯಿಯ ಆರೋಗ್ಯದ ಬಗ್ಗೆ ತಕ್ಷಣವೇ ಏನು ಹೇಳಲು ಆಗೋದಿಲ್ಲ ಎಂದು ಡಾಕ್ಟರ್ ಹೇಳಿದರು. ಕೆಲ ಸಮಯದ ಬಳಿಕ ತುಳಸಿ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳುತ್ತಾರೆ. ಇದನ್ನು ಸಹಿಸದ ಶಾರ್ವರಿ, ತುಳಸಿ ಜೀವಂತವಾಗಿ ಮನೆಗೆ ಬರಬಾರದು ಎಂದು ಹೇಳಿ, ಆಸ್ಪತ್ರೆಯಲ್ಲಿ ಕೆಲಸ ಮಾಡುವ ನರ್ಸ್ ಗೆ ತುಳಸಿಯನ್ನು ಸಾಯಿಸಿಬಿಡಬೇಕು ಎಂದು ಸೂಚನೆ ಕೊಡುತ್ತಾಳೆ. ನರ್ಸ್ ಕೂಡ ಪ್ರಜ್ಞೆ ಬಂದ ತುಳಸಿಗೆ ಏನೋ ಮಾಡುತ್ತಾಳೆ.
ಮುಂದಿನ ಸಂಚಿಕೆಯ ಪ್ರೊಮೋದಲ್ಲಿ ತುಳಸಿಯನ್ನು ಉಳಿಸಿಕೊಳ್ಳಲು ಸಾಧ್ಯ ಆಗಲಿಲ್ಲ, ತುಳಸಿ ಇಸ್ ನೋ ಮೋರ್ ಎನ್ನುತ್ತಾರೆ ವೈದ್ಯರು. ಈ ಪ್ರೊಮೋ ನೋಡಿದ ವೀಕ್ಷಕರು ಇದ್ಯಾವ ಕಥೆ ಎಂದು ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಮಗುವನ್ನು ಶಾರ್ವರಿ ಇಂದ ಕಾಪಾಡೋದಕ್ಕೆ ತುಳಸಿ ದೆವ್ವ ಆಗ್ತಾಳಾ ಎನ್ನುವ ಕುತೂಹಲ ವೀಕ್ಷಕರಲ್ಲಿ ಶುರುವಾಗಿದೆ. ಈಗಾಗಲೇ ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ಕಥೆ ಹೀಗೆ ಆಗಿದೆ. ಸಿಹಿ ಸತ್ತು ದೆವ್ವ ಆಗಿದ್ದಾಳೆ. ಸೀತಮ್ಮಗಾಗಿ ಸುಬ್ಬಿಯನ್ನು ಹುಡುಕಿದಳು. ಈಗ ಸುಬ್ಬಿ ಸೀತಾ ಜೊತೆಗೆ ಸಿಹಿಯ ಹಾಗಿದ್ದಾಳೆ. ಶ್ರೀರಸ್ತು ಶುಭಮಸ್ತುವಿನಲ್ಲು ಕಥೆಯನ್ನು ಇದೇ ರೀತಿ ತೆಗೆದುಕೊಂಡು ಹೋಗುತ್ತಿರಾ ಎಂದು ವೀಕ್ಷಕರು ಕಥೆಗಾರರಿಗೆ ಮತ್ತು ನಿರ್ದೇಶಕರಿಗೆ ಪ್ರಶ್ನೆ ಮಾಡುತ್ತಿದ್ದಾರೆ.
ಇನ್ನು ಜೀಕನ್ನಡ ವಾಹಿನಿಯಲ್ಲಿ ಇತ್ತೀಚೆಗೆ ಶುರುವಾಗಿರುವ ಹೊಸ ಧಾರಾವಾಹಿ ನಾ ನಿನ್ನ ಬಿಡಲಾರೆ. ಈ ಧಾರಾವಾಹಿ ಜನರಿಗೆ ಬಹಳ ಕಡಿಮೆ ಸಮಯದಲ್ಲೇ ತುಂಬಾ ಇಷ್ಟವಾಗಿದೆ.. ಕರ್ನಾಟಕದ ನಂಬರ್1 ಧಾರಾವಾಹಿ ಸ್ಥಾನಕ್ಕೆ ಬಂದಿದೆ ನಾ ನಿನ್ನ ಬಿಡಲಾರೆ. ಈ ಧಾರಾವಾಹಿಯಲ್ಲಿ ಕೂಡ ಕಥಾನಾಯಕಿ ಅಂಬಿಕಾ ದೆವ್ವ, ವಿಲ್ಲನ್ ಗಳಿಂದ ಸತ್ತಿರುವ ಅಂಬಿಕಾ, ತನ್ನ ಮಗುವನ್ನು ಉಳಿಸಿಕೊಳ್ಳಲು ದೆವ್ವವಾಗಿ ಬಂದಿದ್ದಾಳೆ. ಈ ಕಥೆ ಸಖತ್ ಆಗಿ ಸಾಗುತ್ತಿದೆ. ವೀಕ್ಷಕರಿಗೆ ಕೂಡ ಬಹಳ ಇಷ್ಟವಾಗಿದೆ. ಈ ಕಥೆಯನ್ನು ನೋಡಿರುವ ವೀಕ್ಷಕರು, ಶ್ರೀರಸ್ತು ಶುಭಮಸ್ತು ಧಾರಾವಾಹಿಯನ್ನ ಕೂಡ ಇದೇ ರೀತಿ ಹಾರರ್ ಕಥೆಯಾಗಿ ಮಾಡುತ್ತಿದ್ದೀರಾ? ಎಂದು ಪ್ರಶ್ನೆ ಮಾಡುವುದಕ್ಕೆ ಶುರು ಮಾಡಿದ್ದಾರೆ. ಜೀಕನ್ನಡದಲ್ಲಿ ಎಲ್ಲಾ ಧಾರವಾಹಿಗಳು ಹಾರರ್ ಆಗುತ್ತಿದೆ ಎನ್ನುತ್ತಿದ್ದಾರೆ ವೀಕ್ಷಕರು.
ನಿಜಕ್ಕೂ ವೀಕ್ಷಕರು ಅಂದುಕೊಳ್ಳುತ್ತಿರುವ ರೀತಿಯಲ್ಲೇ ಕಥೆ ಸಾಗುತ್ತಿದೆಯಾ? ತುಳಸಿ ದೆವ್ವ ಆಗ್ತಾಳ? ಈ ಬಗ್ಗೆ ಗೊತ್ತಾಗಬೇಕು ಎಂದರೆ ಮುಂದಿನ ಸಂಚಿಕೆಗಳಲ್ಲಿ ಕಥೆ ಹೇಗೆ ಸಾಗುತ್ತದೆ ಎಂದು ಕಾದು ನೋಡಬೇಕಿದೆ. ಜನರು ಮಾತ್ರ ತುಳಸಿ ಗರ್ಭಿಣಿ ಆದಾಗ ಟ್ರೋಲ್ ಮಾಡಿದರು, ತುಳಸಿಯ ಸೀಮಂತ ನಡೆದಾಗ ಟ್ರೋಲ್ ಮಾಡಿದರು. ಈಗ ತುಳಸಿಗೆ ಮಗು ಹುಟ್ಟಿದ ಮೇಲೆ ಕೂಡ ಟ್ರೋಲ್ ಮಾಡುತ್ತಿದ್ದಾರೆ. ಎಲ್ಲಾ ವಿಲ್ಲನ್ ಗಳ ಹಾವಳಿಯಲ್ಲಿ ಬದುಕಿ ಉಳಿದಿದ್ದು ಇದೊಂದೇ ಮಗು ಎನ್ನುತ್ತಿದ್ದಾರೆ ವೀಕ್ಷಕರು. ಧಾರಾವಾಹಿ ತಯಾರಕರಿಗೆ ಕಥೆಯ ಬಗ್ಗೆ ಕಾಳಜಿ ಇರುವುದಿಲ್ಲವಾ ಎನ್ನುವ ಒಂದು ಪ್ರಶ್ನೆ ಕೂಡ ಇದರಲ್ಲಿ ಮೂಡುತ್ತದೆ. ಏನೇ ಆದರೂ ಧಾರಾವಾಹಿ ಗಳು ಮನರಂಜನೆಯ ಒಂದು ಮಾಧ್ಯಮ ಅಷ್ಟೇ. ಅಷ್ಟಕ್ಕೇ ಸೀಮಿತಗೊಳಿಸಿಕೊಂಡರೆ ಎಲ್ಲರಿಗೂ ಒಳ್ಳೆಯದು.