Toxic Teaser-Yash Birthday: ಇಂದು ಜನವರಿ 8 ರಾಕಿಂಗ್ ಸ್ಟಾರ್ ಯಶ್ ಅವರ 39ನೇ ಹುಟ್ಟುಹಬ್ಬ. ಈ ವಿಶೇಷ ಸಂದರ್ಭದಲ್ಲಿ “ಟಾಕ್ಸಿಕ್” ಮ್ಯೂಸಿಕಲ್ ಟೀಸರ್ ಅನ್ನು ಚಿತ್ರ ನಿರ್ಮಾಪಕರು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಯಶ್ ಅವರ ಲುಕ್ ನೋಡಿ ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ.
ಕೆಜಿಎಫ್ ಸ್ಟಾರ್ ಯಶ್ ತಮ್ಮ ನಟನೆ, ಸ್ಟೈಲ್ನಿಂದಲೇ ಅಭಿಮಾನಿಗಳ ಮನ ಗೆದ್ದಿದ್ದಾರೆ. ಅವರನ್ನು ವರ್ಷಕ್ಕೊಮೆಯಾದರೂ ಹಿರಿತೆರೆಯಲ್ಲಿ ನೋಡಲೇಬೇಕೆಂಬ ಕ್ರೇಜ್ ಆಗಾಗ ಅಭಿಮಾನಿಗಳಲ್ಲಿ ಕಂಡುಬರುತ್ತದೆ. ಇನ್ನು ಅವರ ಮುಂಬರುವ ಪ್ರಾಜೆಕ್ಟ್ಗಳ ವಿಷಯಕ್ಕೆ ಕೇಳಿದರೆ ಸಿನಿ ಪ್ರೇಮಿಗಳ ಸಂತೋಷಕ್ಕೆ ಪಾರವೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಈ ಜನಪ್ರಿಯ ನಟ ತಮ್ಮ ಮುಂಬರುವ ಚಿತ್ರ ಟಾಕ್ಸಿಕ್ನಿಂದಾಗಿ ಹೆಚ್ಚು ಸುದ್ದಿ ಮಾಡುತ್ತಿದ್ದಾರೆ.
ಹೌದು , ಕೆಜಿಎಫ್ 1 ಮತ್ತು ಕೆಜಿಎಫ್ 2 ರಲ್ಲಿ ತಮ್ಮ ಅತ್ಯುತ್ತಮ ಅಭಿನಯದ ಮೂಲಕ ಎಲ್ಲರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿರುವ ಯಶ್ ಅವರ ಮುಂಬರುವ ಆಕ್ಷನ್ ಚಿತ್ರ ಟಾಕ್ಸಿಕ್ನ ಟೀಸರ್ ಈಗಷ್ಟೇ ಬಿಡುಗಡೆಯಾಗಿದೆ. ಕೆವಿಎನ್ ಪ್ರೊಡಕ್ಷನ್ ಟಾಕ್ಸಿಕ್ ಚಿತ್ರದ ಮ್ಯೂಸಿಕಲ್ ಟೀಸರ್ ಬಿಡುಗಡೆ ಮಾಡಿದ್ದು, ಚಿತ್ರ ನಿರ್ಮಾಪಕರು Instagram ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಯಶ್ ಅವರ ಚಿತ್ರದ ಪೋಸ್ಟರ್ ಸಹ ನೋಡಬಹುದು. ಈ ಪೋಸ್ಟರ್ನ ಲುಕ್ ಕೆಂಪು ಬಣ್ಣದ್ದಾಗಿದೆ, ಇದರಲ್ಲಿ ಯಶ್ ಕ್ಯಾಪ್ ಧರಿಸಿ ಕಾಣಿಸಿಕೊಂಡಿದ್ದಾರೆ. ಈ ಲುಕ್ ಜೊತೆಗೆ Welcome to the untamed world of #ToxicTheMovie ಎಂದು ನಿರ್ಮಾಪಕರು ಬರೆದಿದ್ದಾರೆ. ಇದರೊಂದಿಗೆ, ಟಾಕ್ಸಿಕ್ ಚಿತ್ರದ ಮ್ಯೂಸಿಕಲ್ ಟೀಸರ್ನ ಯೂಟ್ಯೂಬ್ ಲಿಂಕ್ ಅನ್ನು #TocixBirthdayPeek ನೀಡಲಾಗಿದೆ.
Welcome to the untamed world of #ToxicTheMovie❤️ #ToxicBirthdayPeek :
– https://t.co/hs6OhzQyfp #TOXIC @TheNameIsYash #GeetuMohandas @KVNProductions #MonsterMindCreations @Toxic_themovie pic.twitter.com/KfcHjwyjFB
— KVN Productions (@KvnProductions) January 8, 2025

ಪೋಸ್ಟರ್ ನೋಡಿ ಪ್ರೀತಿಯ ಸುರಿಮಳೆಗೈದ ಫ್ಯಾನ್ಸ್
ಯಶ್ ಅವರ ಮುಂಬರುವ ಚಿತ್ರದ ಪೋಸ್ಟರ್ ನೋಡಿ ಅಭಿಮಾನಿಗಳು ತಮ್ಮ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಿದ್ದಾರೆ. “ಜನ್ಮದಿನದ ಶುಭಾಶಯಗಳು ಬಾಸ್”, “ಬಾಸ್ ಈಸ್ ಬ್ಯಾಕ್”, “ಹುಟ್ಟುಹಬ್ಬದ ಶುಭಾಶಯಗಳು ಬಾಸ್, ಟಾಕ್ಸಿಕ್ ಪ್ರಪಂಚ ನೋಡಲು ನಾವು ಕುತೂಹಲದಿಂದ ಕಾಯುತ್ತಿದ್ದೇವೆ”, ಎಂದು ಕಾಮೆಂಟ್ ವಿಭಾಗದಲ್ಲಿ ಅಭಿಮಾನಿಗಳು ಯಶ್ ಟಾಕ್ಸಿಕ್ ಚಿತ್ರದ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಒಂದು ವಾರದ ಮುಂಚೆಯೇ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿರುವುದನ್ನು ನಾವಿಲ್ಲಿ ಕಾಣಬಹುದು.