ಕನ್ನಡ ಬಿಗ್ ಬಾಸ್ ಶೋ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋ ಗಳಲ್ಲಿ ನಂಬರ್ ವನ್ ಎನಿಸಿಕೊಂಡಿದೆ. ಈ ಬಾರಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 12 ರ ಸ್ಪರ್ದಿ ಗಳು ಅತ್ಯುತ್ತಮವಾಗಿ ಆಟವಾಡಿ ಪ್ರೇಕ್ಷಕರನ್ನ ಮನರಂಜಿಸುತ್ತಿದ್ದಾರೆ. ಅದರಲ್ಲೂ ಗಿಲ್ಲಿ ನಟ ಆಡುತ್ತಿರುವ ರೀತಿ ಯನ್ನು ಜನತೆ ಮೆಚ್ಚಿಕೊಂಡಿದ್ದಾರೆ. ತನ್ನ ಕಾಮಿಡಿಯ ಮೂಲಕ ಜನರನ್ನು ನಕ್ಕಿ ನಗಿಸುತ್ತಿರುವ ಗಿಲ್ಲಿ ನಟ ರವರನ್ನು ಜನತೆ ಈ ಸೀಸನ್ ನ ವಿನ್ನರ್ ಆಗಬೇಕು ಎಂದು ಬಯಸುತ್ತಿದ್ದಾರೆ. ಕನ್ನಡ ಬಿಗ್ ಬಾಸ್ 12 ಶುರುವಾದಾಗಿಂದ ಹಿಡಿದು ಇದುವರೆಗೆ ಟ್ವಿಸ್ಟ್ ಗಳ ಮೇಲೆ ಟ್ವಿಸ್ಟ್ ಗಳಿಂದ ಕೂಡಿದ್ದು ಭರ್ಜರಿಯಾಗಿ ಕಾರ್ಯಕ್ರಮ ಮುಂದುವರಿಯುತ್ತಿದೆ.

ಒಂದಿಷ್ಟು ಸ್ಪರ್ಧಿಗಳು ಎಲಿಮಿನೇಟ್ ಆಗಿ ಹೋಗಿದ್ದಾರೆ. ಮೊದಲು ಮೂವರು ಸ್ಪರ್ಧಿಗಳು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆ ಪ್ರವೇಶ ಮಾಡಿದರು. ಆನಂತರ ಅತಿಥಿಸ್ಪರ್ಧಿಗಳಾಗಿ ಮನೆಗೆ ಪ್ರವೇಶಿಸಿ ಆನಂತರ ವೈಲ್ಡ್ ಕಾರ್ಡ್ ಮೂಲಕ ರಜತ್ ಮತ್ತು ಚೈತ್ರ ಅವರು ಮನೆಯನ್ನು ಪ್ರವೇಶ ಮಾಡಿದ್ದಾರೆ. ಹೀಗಾಗಿ ಆಟ ತುಂಬಾ ರೋಚಕತೆಯಿಂದ ನಡೆಯುತ್ತಿದೆ. ಆದರೂ ಎಲ್ಲಾ ಸ್ಪರ್ಧಿಗಳು ಒಂದು ತೂಕವಾದರೆ ಗಿಲ್ಲಿ ನಟನ ತೂಕವೇ ಮತ್ತೊಂದು ಕಡೆ. ಗಿಲ್ಲಿಯನ್ನು ಯಾರು ಬೀಟ್ ಮಾಡಿ ಮುಂದೆ ಹೋಗಲು ಸಾಧ್ಯವಿಲ್ಲ ಎಂಬಂತೆ ತಮ್ಮ ಆಟವನ್ನು ಅದ್ಭುತವಾಗಿ ಆಡುತ್ತಿದ್ದಾರೆ.
ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ಬಳಲಿದ ಜನರಿಗೆ ನಗುವನ್ನು ತರಿಸುವ ಮೂಲಕ ಆಟವಾಡುತ್ತ ಜನರ ಮೆಚ್ಚುಗೆಯನ್ನ ಗಿಲ್ಲಿ ನಟ ಪಡೆದುಕೊಂಡಿದ್ದಾರೆ. ಹೀಗಾಗಿ ವಯಸ್ಸಿನ ಮಿತಿ ಇಲ್ಲದೆ ಚಿಕ್ಕವರಿಂದ ಹಿಡಿದು ವಯಸ್ಸಾದ ಹಿರಿಯರವರೆಗೂ ಬಿಗ್ ಬಾಸ್ ಕಾರ್ಯಕ್ರಮವನ್ನು ನೋಡುವವರ ಸಂಖ್ಯೆ ಹೆಚ್ಚಾಗಿದೆ. ಕಾರ್ಯಕ್ರಮವನ್ನು ನೋಡುವಷ್ಟು ಸಮಯ ಎಲ್ಲರೂ ತಮ್ಮ ನೋವುಗಳನ್ನು ಮರೆತು ನಗುವುದಕ್ಕೆ ಕಾರಣ ಗಿಲ್ಲಿ ನಟ ಹೀಗಾಗಿ ಜನರು ಅಧಿಕೃತವಾಗಿ ಗಿಲ್ಲಿ ನಟ ರವರೆ ವಿನ್ ಆಗಬೇಕು ಎಂದು ತಮ್ಮ ಮನಸ್ಸಿನ ಇಚ್ಛೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಬರಿಗಾಲಿನಲ್ಲಿ ಪಾದಯಾತ್ರೆ ಮಾಡಿ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುವ ಮೂಲಕ ಗಿಲ್ಲಿರವರು ಗೆಲ್ಲುವುದನ್ನು ಬಯಸುತ್ತಿದ್ದಾರೆ. ಮತ್ತೆ ಕೆಲವರು ಆಟೋಗಳ ಹಿಂದೆ ಕರ್ನಾಟಕದ ಜನತೆಯ ಮನಸ್ಸು ಗೆದ್ದಿರುವ ಮನೆ ಮಗ ನೀನು ಈ ಸಲ ಬಿಗ್ ಬಾಸ್ ಗೆದ್ದು ಬಾ ಗಿಲ್ಲಿ ಎಂಬ ಪೋಸ್ಟರ್ ಅಂಟಿಸಿಕೊಂಡು ತಮ್ಮ ಅಭಿಮಾನವನ್ನು ಇಚ್ಛೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನೇನು ಫಿನಾಲೆಗೆ ಕೆಲವೇ ವಾರಗಳಿದ್ದು ಪ್ರಾರಂಭದಿಂದ ಹಿಡಿದು ಇಲ್ಲಿಯವರೆಗೂ ಜನರ ಮೆಚ್ಚುಗೆ ಹೆಚ್ಚುತ್ತಲೆ ಇದೆ, ಅಪಾರ ಅಭಿಮಾನಿಗಳನ್ನು ಸಂಪಾದನೆ ಮಾಡಿರುವ ಗಿಲ್ಲಿ ನಟ ಗೆದ್ದು ಬರಲಿ ಎಂಬುದು ನಮ್ಮ ಆಶಯ ಕೂಡ. ಆದರೆ ಈ ಬಾರಿ ಗಿಲ್ಲಿ ಬಿಗ್ ಬಾಸ್ ವಿನ್ನರ್ ಆಗಲ್ಲ ಎಂದು ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ಭವಿಷ್ಯ ನುಡಿದಿದ್ದಾರೆ.
ಈಗಾಗಲೇ ಎಲಿಮಿನೇಟ್ ಆಗಿ ಹೊರಬಂದಿರುವ ಸ್ಪರ್ಧಿಗಳು ಕೂಡ ಗಿಲ್ಲಿಯೇ ವಿನ್ನರ್ ಆಗುತ್ತಾನೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಷ್ಟರಮಟ್ಟಿಗೆ ಗಿಲ್ಲಿ ಕಾರ್ಯಕ್ರಮದ ಎಂಟರ್ ಟೈನರ್ ಆಗಿ ಕಮಾಲು ಮಾಡುತ್ತಿದ್ದಾನೆ. ಕೆಲವೊಮ್ಮೆ ಅತಿಯಾಗಿ ಜೋಕ್ ಮಾಡುತ್ತಾನೆ ಎಂಬುದನ್ನು ಬಿಟ್ಟರೆ ಎಂದು ತಪ್ಪಾಗಿ ಮಾತನಾಡಿಲ್ಲ ಅವರವರ ತಪ್ಪುಗಳನ್ನ ಕಾಮಿಡಿಯ ಮೂಲಕ ಮನಮುಟ್ಟುವಂತೆ ಕಾಲೆಳೆಯುವ ಮೂಲಕ ತಪ್ಪು ಮಾಡಿದವರಿಗೆ ತಿಳಿಸುತ್ತಾರೆ.

ಪ್ರಶಾಂತ್ ಕಿಣಿ ರವರ ಕೆಲವೊಂದು ಭವಿಷ್ಯವಾಣಿ ನಿಜವಾಗಿದೆ ಅದರಲ್ಲಿ ಸಮಂತಾ ಪ್ರಭು ಎರಡನೇ ಮದುವೆಯಾಗುತ್ತಾರೆ ಎಂದು ಹೇಳಿದ್ದರು ಅದು ಈಗ ನಿಜವಾಗಿದೆ. ಟಾಪ್ ಮೂರರ ಹಂತಕ್ಕೆ ಗಿಲ್ಲಿ ರಕ್ಷಿತಾ ಕಾವ್ಯ ಶೈವ ಮೂವರು ಸ್ಪರ್ಧಿಗಳು ಹೋಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಇನ್ನು ತೆಲುಗು ಬಿಗ್ ಬಾಸ್ ಸೀಸನ್ 8 ರಲ್ಲಿ ಪವನ್ ಕಲ್ಯಾಣ್ ಮತ್ತು ತನುಜ ಇಬ್ಬರು ಟಾಪ್ ಎರಡರ ಹಂತಕ್ಕೆ ತಲುಪುತ್ತಾರೆ ಎಂದು ಹೇಳಿದ್ದರು.
ಇದುವರೆಗೆ ನಡೆದ ಬಿಗ್ ಬಾಸ್ ಸೀಸನ್ಗಳಲ್ಲಿ ಒಂದೇ ಒಂದು ಬಾರಿ ಮಾತ್ರ ಮಹಿಳಾ ಸ್ಪರ್ದಿ ಶೃತಿ ರವರು ವಿನ್ನರ್ ಆಗಿದ್ದಾರೆ. ಆದರೆ ಇದೀಗ ಮಹಿಳಾ ಸ್ಪರ್ಧಿಗಳೊಬ್ಬರು ಈ ಸೀಸನ್ ವಿನ್ನರ್ ಆಗುತ್ತಾರೆ ಎಂದು ಪ್ರಶಾಂತ್ ಕಿಣಿ ಅವರು ಭವಿಷ್ಯ ನಡೆದಿದ್ದಾರೆ. ಬಿಗ್ ಬಾಸ್ನ ಪ್ರಬಲ ಸ್ಪರ್ಧಿಗಳಲ್ಲಿ ಮಹಿಳಾ ಅಭ್ಯರ್ಥಿಯಾದ ಅಶ್ವಿನಿ ವಿನ್ ಆಗಬಹುದೆಂದು ಕೆಲವರು ಅದರಲ್ಲೂ ಜಾನವಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಯಾರು ಎಷ್ಟೇ ಭವಿಷ್ಯ ನುಡಿದರು ಕೂಡ ದೇವರ ನಿರ್ಧಾರವನ್ನು ಯಾರು ಬದಲಿಸಲು ಆಗುವುದಿಲ್ಲ. ದೇವರನ್ನ ಮೆಚ್ಚಿಸಿದರು ಕೂಡ ಜನಾರ್ಧನನ ಮೆಚ್ಚಿಸಲಾಗುವುದಿಲ್ಲ ಎಂಬ ಗಾದೆ ಮಾತಿದೆ ಆದರೆ ನಮ್ಮ ಗಿಲ್ಲಿ ನಟ ಜನಾರ್ಧನನನ್ನು ಅಂದರೆ ಜನರನ್ನು ಮೆಚ್ಚಿಸುವ ಮೂಲಕ ದೇವರ ಆಶೀರ್ವಾದದಿಂದ ಈ ಸೀಸನ್ ವಿನ್ನರಾಗಲಿ ಎಂದು ಆಶಿಸುತ್ತೇವೆ. ಗಿಲ್ಲಿಯ ಅಭಿಮಾನಿಗಳು ಇದಕ್ಕೆ ನಿಮ್ಮ ಅಭಿಪ್ರಾಯವೇನು ಎಂಬುದನ್ನು ತಿಳಿಸಿ.



