ಜೀಕನ್ನಡ ವಾಹಿನಿಯ ಲಕ್ಷ್ಮೀ ನಿವಾಸ ಧಾರಾವಾಹಿ ಕನ್ನಡದಲ್ಲಿ ಅತಿಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಧಾರಾವಾಹಿಗಳಲ್ಲಿ ಒಂದು. ಈ ಧಾರಾವಾಹಿಯು ಟಿಆರ್ಪಿ ರೇಟಿಂಗ್ ನಲ್ಲಿ ಸದಾ ಮುಂಚೂಣಿಯಲ್ಲಿ ಇರುತ್ತದೆ. ಹಾಗೆಯೇ ಜನಪ್ರಿಯತೆ ವಿಷಯದಲ್ಲಿ ಸಹ ಮುಂದಿದೆ. ಲಕ್ಷ್ಮಿನಿವಾಸ ಕೂಡು ಕುಟುಂಬ ಕೂತು ಜೊತೆಯಾಗಿ ನೋಡುವಂಥ ಒಳ್ಳೆಯ ಕಥೆ ಇರುವಂಥ ಧಾರಾವಾಹಿ. ಪ್ರತಿದಿನ ಸಂಜೆ 8 ರಿಂದ 9 ಗಂಟೆಯವರೆಗೂ 1 ಗಂಟೆಗಳ ಅವಧಿಯ ವರೆಗು ಪ್ರಸಾರ ಆಗುತ್ತದೆ. ವೀಕ್ಷಕರು ಸಹ ಬಹಳ ಇಷ್ಟಪಟ್ಟು ಈ ಧಾರಾವಾಹಿಯನ್ನು ನೋಡುತ್ತಿದ್ದಾರೆ. ಎಲ್ಲಾ ಪಾತ್ರಗಳು ಒಂದೊಂದು ರೀತಿಯಲ್ಲಿ ಜನರಿಗೆ ಇಷ್ಟವಾಗಿದೆ.

ಈ ಧಾರಾವಾಹಿಯ ಜಯಂತ್ ಪಾತ್ರ ವೀಕ್ಷಕರ ಮನಸ್ಸಲ್ಲಿ ಹೇಗೆ ಪರಿಣಾಮ ಬೀರಿದೆ ಎನ್ನುವುದಕ್ಕೆ ಜನರು ಈ ಪಾತ್ರವನ್ನು ಅಷ್ಟು ಚೆನ್ನಾಗಿ ಬಯ್ಯುವುದೇ ಸಾಕ್ಷಿ. ಈ ಪಾತ್ರ ಸ್ವಲ್ಪ ಸೈಕೋ ತರವೇ ಆಡುತ್ತದೆ. ಚಿಕ್ಕಂದಿನಿಂದ ನಾರ್ಮಲ್ ಜೀವನ ಕಾಣದ ಜಯಂತ್ ಒಂಟಿಯಾಗಿಯೇ ಹೆಚ್ಚು ಬೆಳೆದಿದ್ದು, ತಾತನಿಂದ ಪ್ರೀತಿ ಸಿಕ್ಕಿರುವುದಿಲ್ಲ, ಅವರಿಂದ ಓಸಿಡಿ ಕೂಡ ಜಯಂತ್ ಗೆ ಬಂದಿರುತ್ತದೆ. ಹಾಗಾಗಿ ಇವರ ವರ್ತನೆ ನಾರ್ಮಲ್ ಆಗಿಲ್ಲ. ಜಾಹ್ನವಿಯನ್ನ ಪ್ರೀತಿಸಿ ಮದುವೆ ಆಗಿರೋ ಜಯಂತ್ ಗೆ, ಹೆಂಡತಿ ಅಂದ್ರೆ ಪ್ರಾಣ, ಆಕೆಯ ಪ್ರೀತಿ ತನಗೆ ಮಾತ್ರ ಸಿಗಬೇಕು ಎನ್ನುವ ಹುಚ್ಚು ಭ್ರಮೆ..ಅದಕ್ಕೆ ಏನನ್ನು ಬೇಕಾದರೂ ಮಾಡಲು ಸಿದ್ಧವಾಗಿರೋ ಪಾತ್ರ ಜಯಂತ್.
ಹೆಂಡತಿಯ ಫ್ರೆಂಡ್ಸ್ ಗಳಿಗು ಅಟ್ಯಾಕ್ ಮಾಡಿ, ತಮ್ಮಿಬ್ಬರ ಮಧ್ಯೆ ಬರಬಾರದು ಎಂದು ವಾರ್ನಿಂಗ್ ಕೊಟ್ಟಿರುತ್ತಾನೆ. ಯಾವಾಗಲೂ ಚಿನ್ನಮರಿ ಚಿನ್ನಮರಿ ಎನ್ನುತ್ತಾ ಜಾಹ್ನವಿಯ ಹಿಂದೆಯೇ ಸುತ್ತುತ್ತಾ ಇರುತ್ತಾನೆ. ಹೆಂಡತಿಯನ್ನು ಮನೆಯಿಂದ ಹೊರಗೆ ಕಾಲಿಡುವುದಕ್ಕೂ ಬಿಡುವುದಿಲ್ಲ ಪುಣ್ಯಾತ್ಮ. ಜನರು ಇವನ ಸ್ವಭಾವ ನೋಡಿ, ಇಂಥ ಗಂಡ ಸಿಕ್ಕಿಬಿಟ್ರೆ ಬದುಕಿನ ಕಥೆ ಮುಗಿದ ಹಾಗೆ ಎನ್ನುವ ಭಾವನೆ ತಳೆದಿದ್ದಾರೆ. ಜಯಂತ ಕ್ಯಾರೆಕ್ಟರ್ ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಪ್ರತಿಕ್ರಿಯೆ ಇದೆ . ಎಲ್ಲರೂ ಈ ಪಾತ್ರಕ್ಕೆ ಬಯ್ಯುವವರೇ. ಒಬ್ಬ ನಟನ ಪಾತ್ರ ನೋಡಿ ಅಷ್ಟು ಬಯ್ಯುತ್ತಾರೆ ಅಂದ್ರೆ ಅವರ ಅಭಿನಯ ಎಷ್ಟು ಚೆನ್ನಾಗಿರಬೇಕು ಅನ್ನೋದು ಅರ್ಥ ಆಗುತ್ತದೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಜಯಂತ್ ಪಾತ್ರದಲ್ಲಿ ನಟ ದೀಪಕ್ ನಟಿಸುತ್ತಿದ್ದಾರೆ, ಇವರು ರಂಗಭೂಮಿ ಮೂಲದ ಕಲಾವಿದ. ಈ ಹಿಂದೆ ದಾಸ ಪುರಂಧರ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಈಗ ಲಕ್ಷ್ಮಿನಿವಾಸ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿನ ಸಂಚಿಕೆಗಳಲ್ಲಿ ದೀಪಕ್ ಅವರು ಮೂಗಿಗೆ ಪ್ಲಾಸ್ಟರ್ ಹಾಕಿಕೊಂಡು, ಗಡ್ಡ ಬಿಟ್ಟು ಬೇರೆ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ವಾರ ಜೀ ಎಂಟರ್ಟೈನರ್ಸ್ ಕಾರ್ಯಕ್ರಮಕ್ಕೆ ಕೂಡ ಇವರು ಬಂದಿದ್ದು, ಅಲ್ಲಿ ಕೂಡ ಮೂಗಿಗೆ ಬ್ಯಾಂಡ್ ಏಡ್ ಹಾಕಿಕೊಂಡೇ ಬಂದಿದ್ದಾರೆ. ಇದನ್ನು ನೋಡಿದ ಜನರಿಗೆ ದೀಪಕ್ ಅವರಿಗೆ ಏನಾಗಿದೆ ಎನ್ನುವ ಕುತೂಹಲ ಶುರುವಾಗಿದೆ. ದೀಪಕ್ ಅವರ ಆರೋಗ್ಯದಲ್ಲಿ ಏನಾದರೂ ಸಮಸ್ಯೆ ಶುರುವಾಗಿದ್ಯಾ ಎನ್ನುವ ಚರ್ಚೆ ನಡೆಯುತ್ತಿದೆ.

ಇನ್ನು ಕೆಲವು ಜಯಂತ್ ನ ಸೈಕೋ ಬುದ್ಧಿ ನೋಡಿ ಬೇಸತ್ತು ಹೋಗಿರೋ ಜನರು, ದೀಪಕ್ ಅವರು ಹೊರಗಡೆ ಹೋದಾಗ ಭಾರಿಸಿರಬೇಕು ಎನ್ನುತ್ತಿದ್ದಾರೆ. ದೀಪಕ್ ಅವರಿಗೆ ನಿಜಕ್ಕೂ ಏನಾಗಿದೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಆದರೆ ಈ ರೀತಿ ಆಗಿರಬಹುದು ಎಂದು ಜನರು ತಮಾಷೆಯಾಗಿ ಊಹೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಕಲಾವಿದರ ಬಗ್ಗೆ ನಮ್ಮ ಜನರು ಒಂದಲ್ಲ ಒಂದು ವಿಷಯವನ್ನು ಚರ್ಚೆ ಮಾಡುತ್ತಲೇ ಇರುತ್ತಾರೆ. ಜಯಂತ್ ಪಾತ್ರ ಜನರ ಮೇಲೆ ಬೀರಿರುವ ಪ್ರಭಾವದ ಕಾರಣ ಈ ರೀತಿ ಆಗುತ್ತಿದೆ. ಒಟ್ಟಿನಲ್ಲಿ ದೀಪಕ್ ಅವರು ಬೇಗ ಹುಷಾರಾಗಿ ಬರಲಿ ಎನ್ನೋಣ..