ಪುಟ್ಟಕ್ಕನ ಮಕ್ಕಳು ಧಾರಾವಾಹಿ ಇಂದ ಜನರಿಗೆ ತುಂಬಾ ಇಷ್ಟ ಆದವರು ನಟಿ ಅಕ್ಷರಾ. ಉಮಾಶ್ರೀ ಅವರು ನಟಿಸುತ್ತಿರುವ ಪುಟ್ಟಕ್ಕನ ಮೊದಲನೇ ಮಗಳು ಸಹನಾ ಪಾತ್ರದಲ್ಲಿ ಅಕ್ಷರಾ ಅವರು ನಟಿಸುತ್ತಿದ್ದಾರೆ. ಈ ಪಾತ್ರ ಜನರಿಗೆ ತುಂಬಾ ಇಷ್ಟವಾಗಿದೆ, ಹಾಗೆಯೇ ಹೆಚ್ಚಿನ ಜನರು ಪಾತ್ರದ ಜೊತೆಗೆ ಕನೆಕ್ಟ್ ಆಗಿದ್ದಾರೆ, ಈಕೆ ತಮ್ಮ ಅಕ್ಕ ಅಥವಾ ತಂಗಿ ಇರಬಹುದೇನೋ ಎನ್ನುವಷ್ಟು ಜನರಿಗೆ ಇಷ್ಟವಾಗಿದ್ದಾರೆ..ಅಕ್ಷರಾ ಅವರು ಧಾರಾವಾಹಿಯ ಜೊತೆಗೆ ಜೀಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಸ್ಪರ್ಧಿಯಾಗಿ ಬಂದರು, ಆದರೆ ಇದ್ದಕ್ಕಿದ್ದಂತೆ ಶೋ ಇಂದ ಹೊರಹೋದರು. ಇದಕ್ಕೆ ಅಸಲಿ ಕಾರಣ ಏನು ಎಂದು ಈಗ ತಿಳಿದುಬಂದಿದೆ..

ಅಕ್ಷರಾ ಅವರು ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಸಹನಾ ಪಾತ್ರದ ಮೂಲಕ ಜನರಿಗೆ ತುಂಬಾ ಫೇವರೆಟ್ ಆಗಿದ್ದಾರೆ. ಸಹನಾ ಪಾತ್ರ ಜನರಿಗೆ ಸ್ವಾಭಿಮಾನದ ಪಾಠ ಕಲಿಸುತ್ತದೆ ಎಂದರೆ ತಪ್ಪಲ್ಲ. ಅವ್ವನಿಗೆ ಸಹಾಯ ಮಾಡುತ್ತಿದ್ದ ಸಹನಾ, ಪ್ರೀತಿಸಿ ಮದುವೆಯಾಗಿ, ಗಂಡನ ಮನೆಯಲ್ಲಿ ತೊಂದರೆ ಆದರೂ ಎಲ್ಲವನ್ನು ಸಹಿಸಿ ಸರಿ ಮಾಡಿಕೊಳ್ಳಬೇಕು ಎನ್ನುವ ಮನಸ್ಸಿನಲ್ಲಿ, ಸಂಸಾರ ಮಾಡುತ್ತಿದ್ದ ಹುಡುಗಿ, ಅವಮಾನಗಳು ಅತಿಯಾಗಿ ಅತ್ತೆಯೇ ವಿಷ ಹಾಕಿ ತನ್ನನ್ನು ಸಾಯಿಸುವ ಪ್ರಯತ್ನ ಮಾಡಿದ ಬಳಿಕ ಅದನ್ನು ಗಂಡನಿಗೆ ಹೇಳುತ್ತಾಳೆ, ಗಂಡ ಅದನ್ನು ನಂಬದೇ ಇದ್ದಾಗ, ಮನೆಯಿಂದ ಹೊರಬರುತ್ತಾಳೆ ಸಹನಾ. ಮನೆಯಲ್ಲಿ ಆಕೆ ಇನ್ನಿಲ್ಲ ಎಂದುಕೊಂಡಿರುತ್ತಾರೆ.
ಆದರೆ ಬೆಂಗಳೂರಿಗೆ ಬಂದು, ಒಂದು ಮೆಸ್ ನಲ್ಲಿ ಕೆಲಸಕ್ಕೆ ಸೇರಿಕೊಂಡು, ಕನಸುಗಳನ್ನು ಕಟ್ಟಿಕೊಂಡು, ತನ್ನದೇ ಹೊಸ ಜೀವನ ರೂಪಿಸಿಕೊಳ್ಳುವ ಕನಸು ಕಂಡಿದ್ದ ಸಹನಾ ಬದುಕಲ್ಲಿ ತನ್ನ ಗಂಡನ ಇನ್ನೊಂದು ಮದುವೆಗೆ ತಾನೇ ಕ್ಯಾಟರಿಂಗ್ ಮಾಡುವ ಪರಿಸ್ಥಿತಿ ಬಂದಿತು. ಅರ್ಥ ಮಾಡಿಕೊಳ್ಳದ ಗಂಡ ಬೇಡ ಎಂದು, ಅವನು ಇನ್ನೊಂದು ಮದುವೆ ಮಾಡಿಕೊಂಡಾಗಲು ಸುಮ್ಮನಿದ್ದ ಸಹನಾ, ಈಗ ತಂಗಿ ಇಲ್ಲವಾದ ನಂತರ ಊರಿಗೆ ಬಂದಿದ್ದಾಳೆ. ಪುಟ್ಟಕ್ಕ ಮತ್ತೆ ಮಗಳನ್ನು ಒಪ್ಪಿಕೊಂಡಿದ್ದಾಳೆ. ಸಹನಾ ಈಗ ತನ್ನದೇ ಆದ ಸ್ವಂತ ಮೆಸ್ ಒಂದನ್ನು ಸಹ ಶುರು ಮಾಡಿದ್ದಾಳೆ. ಹೀಗೆ ಹೊಸ ಜೀವನ ಶುರು ಮಾಡಿದ್ದಾಳೆ. ಇನ್ನು ಕಾಳಿ ಮತ್ತು ವಿದೇಶದ ಮ್ಯಾಕ್ಸಿ ಇಬ್ಬರು ಸಹನಾಳನ್ನು ಲವ್ ಮಾಡುತ್ತಿದ್ದಾರೆ..

ಮ್ಯಾಕ್ಸಿ ಸಹನಾಗೆ ಪ್ರೊಪೋಸ್ ಮಾಡಿದಾಗ ಸಹನಾ ಅದಕ್ಕೆ ಒಪ್ಪಲಿಲ್ಲ, ಮ್ಯಾಕ್ಸಿಗೆ ಬುದ್ಧಿ ಹೇಳಿದಳು. ಮ್ಯಾಕ್ಸಿ ಈಗ ವಿದೇಶಕ್ಕೆ ಹೋಗೋಕೆ ಸಿದ್ಧವಾಗಿದ್ದಾನೆ. ಧಾರಾವಾಹಿಯಲ್ಲಿ ಸಹನಾ ಕಥೆ ಈ ರೀತಿಯಾಗಿ ಸಾಗುತ್ತಿದೆ. ಆದರೆ ಅಕ್ಷರಾ ಅವರು ಧಾರಾವಾಹಿ ಜೊತೆಗೆ ಡ್ಯಾನ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಸಹ ಭಾಗವಹಿಸಿದ್ದರು. ಉತ್ತಮವಾಗಿ ಪರ್ಫಾರ್ಮ್ ಕೂಡ ಮಾಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಅಕ್ಷರಾ ಅವರು ಶೋ ಇಂದ ಹೊರ ಬಂದಿದ್ದು ಜನರಿಗೆ ಶಾಕ್ ಆಗಿತ್ತು, ಇದಕ್ಕೆ ಕಾರಣ ಏನು ಎಂದು ತಿಳಿದು ಬಂದಿರಲಿಲ್ಲ. ಅದಕ್ಕೆ ಕಾರಣ ಏನು ಎಂದು ಇಂದು ನಿಮಗೆ ತಿಳಿಸುತ್ತೇವೆ..
ಅಕ್ಷರಾ ಅವರು ಒಂದು ಇಂಟರ್ವ್ಯೂ ನಲ್ಲಿ ಶೋ ಇಂದ ಹೊರಗಡೆ ಬರೋಕೆ ಕಾರಣ ಏನು ಎಂದು ತಿಳಿಸಿದ್ದಾರೆ. ಅಕ್ಷರಾ ಅವರು ಡ್ಯಾನ್ಸ್ ಪ್ರಾಕ್ಟೀಸ್ ಮಾಡೋವಾಗ ಕಾಲಿಗೆ ಏಟಾಗಿ, ಡ್ಯಾನ್ಸ್ ಮಾಡಿದರೆ ತೊಂದರೆ ಆಗುತ್ತದೆ ಎಂದು ಡಾಕ್ಟರ್ ಹೇಳಿದರಂತೆ, ಮತ್ತೆ ಡ್ಯಾನ್ಸ್ ಮಾಡಿದರೆ ಕಾಲಿಗೆ ತೊಂದರೆ ಆಗಿ ಓಡಾಡೋಕೆ ತೊಂದರೆ ಆಗುತ್ತದೆ ಎಂದು ಹೇಳಿದ್ದಕ್ಕೆ ಅಕ್ಷರಾ ಅವರು ಶೋ ಇಂದ ಹೊರ ಬರಬೇಕಾಯಿತು. ಇದರಿಂದ ಧಾರಾವಾಹಿಗು ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಅಕ್ಷರಾ ಅವರು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಇಂದ ಹೊರಗಡೆ ಬಂದಿದ್ದಾರೆ.