ಸೀತಾರಾಮ ಧಾರಾವಾಹಿ ಮೂಲಕ ಮನೆಮಾತಾಗಿರುವ ಪುಟ್ಟ ಪೋರಿ ಸಿಹಿ. ಕೆಲ ವರ್ಷಗಳ ಹಿಂದೆ ಡ್ರಾಮ ಜ್ಯೂನಿಯರ್ಸ್ ಶೋ ಮೂಲಕ ಸಿಹಿ ಅಂದರೆ ರೀತು ಸಿಂಗ್ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟ ಪುಟ್ಟ ಪ್ರತಿಭೆ. ಅಂದು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಮೆಚ್ಚಿನ ಮಗು ಆಗಿದ್ದ ರೀತು ಇಂದು ಕರ್ನಾಟಕದ ಫೇವರೆಟ್ ಸಿಹಿ ಆಗಿದ್ದಾಳೆ. ಸೀತಾರಾಮ ಸೀರಿಯಲ್ ನೋಡಿ ಸಿಹಿಯನ್ನು ಮೆಚ್ಚಿಕೊಳ್ಳದೆ ಇರುವವರು ಯಾರು ಇಲ್ಲ.
ಡ್ರಾಮ ಜ್ಯುನಿಯರ್ಸ್ ನಂತರ ಕೆಲ ವರ್ಷಗಳ ಬ್ರೇಕ್ ಪಡೆದ ರೀತು, ಕಳೆದ ವರ್ಷ ಶುರುವಾದ ಸೀತಾರಾಮ ಸೀರಿಯಲ್ ಮೂಲಕ ಕನ್ನಡ ಕಿರುತೆರೆಗೆ ಮತ್ತೆ ರೀಎಂಟ್ರಿ ಕೊಟ್ಟಿದ್ದಾಳೆ. ಸಿಹಿ ಮತ್ತು ಸೀತಾಳ ಅಮ್ಮ ಮಗಳ ಪ್ರೀತಿ, ಮಮತೆ ವಾತ್ಸಲ್ಯ ಎಲ್ಲರ ಮೆಚ್ಚುಗೆ ಪಡೆದಿದೆ ಎಂದರೆ ತಪ್ಪಲ್ಲ. ಈ ಪುಟ್ಟ ಸಿಹಿ, ನಟನೆಯ ಮೂಲಕ ಮನೆಮಾತಾಗಿರುವುದು ಮಾತ್ರವಲ್ಲ, ಈ ಮಗು ಮನೆಯನ್ನೇ ಬೆಳಗುವ ದೀಪವಾಗಿದೆ ಎನ್ನುವುದು ಅಷ್ಟೇ ಸತ್ಯ.
ಈ ವಿಚಾರ ಜೀಕುಟುಂಬ ಅವಾರ್ಡ್ ಕಾರ್ಯಕ್ರಮದ ನಾಮಿನೇಷನ್ ಪಾರ್ಟಿಯಲ್ಲಿ ಹೊರಬಂದಿದೆ. ಬೆಸ್ಟ್ ಮಗಳು ಕ್ಯಾಟಗರಿಗೆ ನಾಮಿನೇಟ್ ಆದವರನ್ನು ಸ್ಟೇಜ್ ಗೆ ಕರೆದಾಗ, ಬೇರೆ ಎಲ್ಲಾ ಕಲಾವಿದರ ಬಗ್ಗೆ ಮಾತಾನಾಡಿದ ನಿರೂಪಕ ಅಕುಲ್ ಬಾಲಾಜಿ ಸಿಹಿ ಅಂದ್ರೆ ರೀತು ಸಿಂಗ್ ಬಗ್ಗೆ ದೊಡ್ಡ ವಿಷಯವನ್ನೇ ತಿಳಿಸಿದ್ದಾರೆ. ರೀತು ಸಿಂಗ್ ಗೆ ಅವಕಾಶ ಸಿಗುವುದಕ್ಕಿಂತ ಮೊದಲು ಅವರಿಗೆ ವಾಸ ಮಾಡುವುದಕ್ಕೆ ಒಂದು ಮನೆ ಕೂಡ ಇರಲಿಲ್ಲ. ಮೆಜೆಸ್ಟಿಕ್ ಸುತ್ತ ಮುತ್ತಾ ರೀತು ಸಿಂಗ್ ಅವರ ಕುಟುಂಬ ಓಡಾಡಿತ್ತಂತೆ.

ಬಹಳ ಕಷ್ಟದಲ್ಲಿತ್ತು ರೀತು ಸಿಂಗ್ ಅವರ ಕುಟುಂಬ. ಆ ಸಮಯಕ್ಕೆ ಅವಕಾಶ ಸಿಕ್ಕಿತು, ಸಿಹಿ ನಟನೆಯ ಮೂಲಕ ಸಂಪಾದನೆ ಮಾಡುವುದಕ್ಕೆ ಶುರುವಾದ ನಂತರ ಅವರಿಗೆ ಇರುವುದಕ್ಕೆ ಒಂದು ಮನೆ, ಜೀವಿಸುವುದಕ್ಕೆ ಒಂದು ನೆಲೆ ಎಲ್ಲವು ಸಿಕ್ಕಿದೆ. ಸಿಹಿಯೇ ಆ ಮನೆಗೆ ಬೆಳಕಾಗಿ, ಮನೆಯನ್ನು ನಿಭಾಯಿಸುತ್ತಿದ್ದಾಳೆ. ಓದಿನ ಜೊತೆಗೆ ನಟನೆ ಎಲ್ಲವನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗುತ್ತಿದ್ದಾಳೆ ಈ ಪುಟ್ಟ ಮಗು. ಚಿಕ್ಕ ವಯಸ್ಸಿನಲ್ಲೇ ಮನೆಯ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾಳೆ.
ತಾನು ಈ ಮಟ್ಟಕ್ಕೆ ಬಂದಿರುವುದಕ್ಕೆ ಅಮ್ಮನೆ ಕಾರಣ, ಅಮ್ಮ ಎಲ್ಲದಕ್ಕೂ ಸಪೋರ್ಟ್ ಮಾಡುತ್ತಾರೆ ಎನ್ನುತ್ತಾಳೆ ಸಿಹಿ. ಸ್ಟೇಜ್ ಮೇಲೆ ತಮ್ಮ ಕಷ್ಟವನ್ನು ನೆನೆದು, ಕಣ್ಣೀರು ಹಾಕಿದ್ದಾಳೆ. ವೀಕ್ಷಕರು ಸಿಹಿಯ ಕಥೆ ಕೇಳಿ ಭಾವುಕರಾಗಿದ್ದಾರೆ. ಈ ಮಗು ಚೆನ್ನಾಗಿ ಬೆಳೆದು, ದೊಡ್ಡವಳಾಗಿ, ಒಳ್ಳೆ ಹೆಸರನ್ನು ಸಂಪಾದನೆ ಮಾಡಲಿ ಎನ್ನುವುದು ಎಲ್ಲರ ಆಶಯ ಆಗಿದೆ. ಮುಂದಿನ ದಿನಗಳಲ್ಲಿ ಈ ಮಗುವಿಗೆ ಇನ್ನು ಒಳ್ಳೆಯ ಅವಕಾಶಗಳು ಸಿಗಲಿ..