ಬಿಗ್ ಬಾ ಶೋ ಇಂದ ಕಳೆದ ವಾರ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ. ಒಬ್ಬರು ಗೋಲ್ಡ್ ಸುರೇಶ್, ಇನ್ನೊಬ್ಬರು ಶಿಶಿರ್ ಶಾಸ್ತ್ರಿ. ಇವರಿಬ್ಬರು ಹೋದದ್ದು ಜನರಿಗೆ ಬೇಸರ ಇದೆ. ಶಿಶಿರ್ ಶಾಸ್ತ್ರಿ ಅವರು ಬಹಳ ಒಳ್ಳೆಯ ಸ್ಪರ್ಧಿ. ಉತ್ತಮವಾದ ಪರ್ಫಾರ್ಮರ್ ಸಹ ಹೌದು. ಫಿನಾಲೆ ತಲುಪುತ್ತಾರೆ ಅಂದುಕೊಂಡಿದ್ದ ಈ ಸ್ಪರ್ಧಿ ಇಷ್ಟು ಬೇಗ ಹೊರ ಬರುತ್ತಾರೆ ಎಂದು ಯಾರು ಕೂಡ ಅಂದುಕೊಂಡಿರಲಿಲ್ಲ. ಇವರೇನೋ ಎಲಿಮಿನೇಟ್ ಆಗಿ ಹೊರಬಂದರು. ಆದರೆ ಗೋಲ್ಡ್ ಸುರೇಶ್ ಅವರು ಹೊರಗಡೆ ಬಂದಿದ್ದೆ ಬೇರೆ ಕಾರಣಕ್ಕೆ. ಇದೀಗ ಸುರೇಶ್ ಅವರು ಕಾರಣ ತಿಳಿಸಿದ್ದರು ಸಹ, ಬೇರೆ ವಿಚಾರಗಳು ಕೇಳಿಬರುತ್ತಿದೆ.

ಗೋಲ್ಡ್ ಸುರೇಶ್ ಅವರಿಗೆ ಶನಿವಾರದ ಸಂಚಿಕೆ ಚಿತ್ರೀಕರಣ ನಡೆದ ಬಳಿಕ ಬಿಗ್ ಬಾಸ್ ಕಡೆಯಿಂದ ಒಂದು ಆದೇಶ ಬರುತ್ತದೆ. ಮನೆಯಲ್ಲಿ ತುರ್ತು ಪರಿಸ್ಥಿತಿ ಎದುರಾಗಿರುವ ಕಾರಣ ಗೋಲ್ಡ್ ಸುರೇಶ್ ಅವರು ಹೊರಗಡೆ ಹೋಗಬೇಕು, ಸುರೇಶ್ ಅವರ ಅವಶ್ಯಕತೆ ಬಿಗ್ ಬಾಸ್ ಮನೆಗಿಂತ ಅವರ ಮನೆಯವರಿಗೆ ಜಾಸ್ತಿ ಇದೆ ಎಂದು ಬಿಗ್ ಬಾಸ್ ಹೇಳಿದರು. ಈ ಕಾರಣಕ್ಕೆ ಭಾವುಕರಾಗಿ ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಮನೆಯಿಂದ ಹೊರಬರಬೇಕಾಯಿತು. ಎಲ್ಲಾ ಸ್ಪರ್ಧಿಗಳು ಸಹ ಬಹಳ ಬೇಸರದಿಂದಲೇ ಗೋಲ್ಡ್ ಸುರೇಶ್ ಅವರನ್ನು ಮನೆಯಿಂದ ಹೊರಗಡೆ ಕಳಿಸಲಾಯಿತು.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಗೋಲ್ಡ್ ಸುರೇಶ್ ಅವರು ಹೊರಗಡೆ ಬಂದಿರುವುದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಹಲವು ಕಾರಣಗಳು ಕೇಳಿಬರುತ್ತಿದೆ. ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಿದ್ದಾರೆ. ಕೆಲವರು ಗೋಲ್ಡ್ ಸುರೇಶ್ ಅವರ ತಂದೆಗೆ ಆರೋಗ್ಯ ಹದಗೆಟ್ಟಿದೆ, ಈ ಕಾರಣಕ್ಕೆ ಅವರು ಹೊರಬಂದಿದ್ದಾರೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಸುರೇಶ್ ಅವರಿಗೆ ಆರೋಗ್ಯ ಸಮಸ್ಯೆ ಇದೆ ಹಾಗಾಗಿ ಹೊರಬಂದಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಅಸಲಿ ವಿಷಯ ಏನು ಎಂದು ಇದುವರೆಗೂ ಯಾರಿಗೂ ಗೊತ್ತಿರಲಿಲ್ಲ. ಆದರೆ ಈಗ ಸುರೇಶ್ ಅವರೆ ಒಂದು ಸಂದರ್ಶನದಲ್ಲಿ ಕಾರಣ ತಿಳಿಸಿದ್ದಾರೆ.

ಗೋಲ್ಡ್ ಸುರೇಶ್ ಅವರ ಮಾತಿನ ಅನುಸಾರ ಅವರು ಒಬ್ಬ ಬ್ಯುಸಿನೆಸ್ ಮ್ಯಾನ್ ಆಗಿದ್ದು, ಬಿಗ್ ಬಾಸ್ ಗೆ ಬರುವುದಕ್ಕಿಂತ ಬ್ಯುಸಿನೆಸ್ ಅನ್ನು ಯಾರು ನೋಡಿಕೊಳ್ಳುತಾರೆ ಅಂತ ಆತಂಕ ಇತ್ತಂತೆ. ಎಲ್ಲಾ ಜವಾಬ್ದಾರಿಯನ್ನು ಪತ್ನಿಗೆ ಕೊಟ್ಟು ಬಿಗ್ ಬಾಸ್ ಗೆ ಬಂದರು. ಆದರೆ ಆ ಎಲ್ಲಾ ಜವಾಬ್ದಾರಿಯನ್ನು ನಿಭಾಯಿಸಲು ಸಾಧ್ಯ ಆಗದೇ ಗೋಲ್ಡ್ ಸುರೇಶ್ ಅವರ ಪತ್ನಿ ಕಷ್ಟಪಡುತ್ತಿದ್ದಾರಂತೆ. ನಿರ್ಧಾರಗಳನ್ನ ತೆಗೆದುಕೊಳ್ಳಲು ಸ್ಟ್ರೆಸ್ ಆಗಿದ್ದು ಈ ಕಾರಣಕ್ಕೆ ಪತ್ನಿಗೆ ಸಮಸ್ಯೆ ಆಗುತ್ತಿದ್ದ ಕಾರಣ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ ಎಂದು ಖುದ್ದು ಗೋಲ್ಡ್ ಸುರೇಶ್ ಅವರೇ ಹೇಳಿದ್ದಾರೆ. ಆದರೆ ಈ ವಿಷಯಕ್ಕೆ ಸಂಬಂಧಿಸಿದ ಹಾಗೆ ಬೇರೆ ವಿಷಯ ಕೂಡ ವೈರಲ್ ಆಗುತ್ತಿದೆ..
ಅದೇನು ಎಂದರೆ, ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಗೆ ದುಡ್ಡು ಕೊಟ್ಟು ಹೋಗಿದ್ದಾರಂತೆ. ಇಷ್ಟು ವಾರಗಳ ಇರುತ್ತೇನೆ, ಎಲಿಮಿನೇಟ್ ಮಾಡದೆಯೇ ಮನೆಯಿಂದ ಹೊರಗೆ ಕಳಿಸಬೇಕು ಎಂದು ಅಗ್ರಿಮೆಂಟ್ ಮಾಡಿಕೊಳ್ಳಲಾಗಿತ್ತಂತೆ. ಅದೇ ಪ್ರಕಾರವಾಗಿ ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ ಎನ್ನಲಾಗಿದ್ದು, ಈ ವಿಷಯಗಳು ಸುದೀಪ್ ಅವರಿಗೆ ಇಷ್ಟ ಆಗಿಲ್ಲ. ಈ ಎಲ್ಲಾ ಕಾರಣಗಳಿಗೆ ಸುದೀಪ್ ಅವರು ಬಿಗ್ ಬಾಸ್ ಶೋ ಕ್ವಿಟ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಈ ವಿಷಯದಲ್ಲಿ ಎಷ್ಟು ನಿಜಾಂಶ ಇದೆ ಅಥವಾ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರಾ ಎನ್ನುವುದನ್ನು ತಿಳಿದಿಕೊಳ್ಳಬೇಕಿದೆ.