ದುಶ್ಚಟಗಳ ದಾಸರಗಬೇಡಿ ಅಂತ ಶಿಕ್ಷಕರು ಮನವರಿಕೆ ಮಾಡಿ ಸುಸ್ತಾಗಿದ್ದಾರೆ.. ಈ ಸಂಬಂಧ ಅರ್ಥ ಮಾಡಿಸುವಲ್ಲಿ ಪೋಷಕರು ಕೂಡ ವಿಫಲ ಆಗ್ತಾ ಇದ್ದಾರೆ. ಈ ಹಿನ್ನಲೆ ಖಾಸಗಿ ಶಾಲೆಗಳ ಒಕ್ಕೂಟ ಬಾರ್, ರೆಸ್ಟುರೆಂಟ್ ಗಳ ಮೇಲೆ ಹದ್ದಿನ ಕಣ್ಣು ಇಟ್ಟಿದ್ದು ಕಡಿವಾಣ ಹಾಕಿ ಅಂತ ಗೃಹ ಸಚಿವರಿಗೆ ಪತ್ರ ಬರೆದು ಖಾಸಗಿ ಶಾಲೆಗಳ ಒಕ್ಕೂಟ ಆಗ್ರಹಿಸಿದೆ. ವಿದ್ಯಾರ್ಥಿಗಳ ಅಬ್ಸೆನ್ಸ್ ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿಗೆ ತಲೇಬೇನೆ ಹೆಚ್ಚಿದೆ. ಅಪ್ರಾಪ್ತರಿಗೆ ಪ್ರವೇಶ ಕೊಡುವ ಪಬ್, ಹುಕ್ಕಾ ಭಾರ್ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ. ಕ್ರಮ ಕೈಗೊಳ್ಳುವಂತೆ ಕ್ಯಾಮ್ಸ್ ಸಂಘಟನೆಇಂದ ಗೃಹ ಸಚಿವರಿಗೆ ಪತ್ರ ಕೂಡ ಬರೆಯಾಲಗಿದೆ.

ಕ್ಯಾಮ್ಸ್ ಖಾಸಗಿ ಶಾಲೆಗಳ ಒಕ್ಕೂಟದಿಂದ ಗೃಹ ಸಚಿವ್ರಿಗೆ ಪತ್ರ ಬರೆದಿದ್ದು ಆ ಪತ್ರದಲ್ಲಿ ಏನಿದೆ ಅಂತ ನೋಡೋದಾದ್ರೆ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ Pub, Resto-Bar , Hukka Joints ಅಥವಾ ಮದ್ಯಪಾನ, ಧೂಮಪಾನ ಸೇವಿಸುವಂತಹ ತಾಣಗಳಿಗೆ ಮುಕ್ತವಾದ ಅವಕಾಶ ಸಿಗುತ್ತದೆ. ಕೆಲ ಶಿಕ್ಷಣ ಸಂಸ್ಥೆಗಳಿಂದ ಪೋಷಕರಿಂದ ನಿರಂತರ ದೂರು ಬಂದಿದೆ. ಅಪ್ರಾಪ್ತ ವಯಸ್ಸಿನವರಿಗೆ ಮದ್ಯಪಾನ, ಧೂಮಪಾನ ಮಾರಾಟ ಮಾಡುವುದು ನಿಷೇಧ ಅಂತ ಈಗಾಗಲೇ ರೂಲ್ಸ್ ಇದೆ.
ಹೀಗಿದ್ದರೂ ನಗರದ ಪಬ್ ಬಾರ್ ಗಳಿಗೆ ಮಕ್ಕಳಿಗೆ ಎಂಟ್ರಿ ಸಿಗ್ತಾ ಇದೆಈ ಹಿನ್ನೆಲೆ ಕ್ರಮ ಕೈಗೊಳ್ಳುವಂತೆ ಖಾಸಗಿ ಶಾಲೆಗಳ ಒಕ್ಕೂಟದಿಂದ ಮನವಿ ಮಾಡಲಾಗಿದೆ. ರಾಜ್ಯ ಸರ್ಕಾರದ ಅಬಕಾರಿ ಇಲಾಖೆಯ ಕಾನೂನಿನ ಪ್ರಕಾರ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮದ್ಯ ಕೊಡುವ ಹಾಗಿಲ್ಲ ಬಟ್ ನಗರದಲ್ಲಿ ಎಷ್ಟು ಬಾರ್ ಗಳು ಈ ರೂಲ್ ಫಾಲೋ ಮಾಡ್ತಿವೆ ಅನ್ನೋ ಪ್ರಶ್ನೆ ಎದ್ದಿದೆ.. ಹೀಗಿದ್ದರೂ ಕಾನೂನು ಉಲ್ಲಂಘನೆ ಆಗ್ತಿದ್ದರೂ ಯಾಕೆ ಯಾರು ಕಡಿವಾಣ ಹಾಕ್ತಾ ಇಲ್ಲ ಅಂತ ಅಭಿಪ್ರಾಯ ವ್ಯಕ್ತ ಆಗ್ತಿದೆ.
ಒಟ್ಟಿನಲ್ಲಿ ಪೋಷಕರು ಮಕ್ಕಳ ಕೈಗೆ ಸಿಗ್ತಿಲ್ಲ ದುಶ್ಚಟಗಳ ದಾಸರಗ್ತಾ ಇದ್ದಾರೆ ಅಂತ ಹೇಳಿದ್ರೆ ಶಿಕ್ಷಕರು ನೈತಿಕ ಪಾಠ ಹೇಳಿದ್ರೆ ಕೇಳುವ ಪರಿಸ್ಥಿತಿಯಲ್ಲಿ ಮಕ್ಕಳಿಲ್ಲ ಅಂತ ದೂರುತ್ತಿದ್ದಾರೆ. ಈ ಮಧ್ಯೆ ಖಾಸಗಿ ಸಂಘಟನೆಗಳ ಒಕ್ಕೂಟ ಗೃಹ ಸಚಿವರ ಬಳಿ ಮಕ್ಕಳಿಗೆ ಸುಲಭವಾಗಿ ಬಾರ್ ರೆಸ್ಟುರೆಂಟ್ ಹುಕ್ಕಾ ಬಾರ್ ಗಳಿಗೆ ಅನುಮತಿ ಕೊಡದೇ ಇರೋ ತರ ರೂಲ್ ಮಾಡಲು ಮನವಿ ಮಾಡಿದ್ದಾರೆ. ಗೃಹ ಸಚಿವರು ಈ ಬಗ್ಗೆ ಕ್ರಮ ಕೈ ಗೊಳ್ತಾರಾ ಕಾದು ನೋಡಬೇಕು