ಸೀರೆ ಅನ್ನೋದು ಭಾರತೀಯರಿಗೆ ಪಾರಂಪರಿಕ ಉಡುಗೆ. ಸೀರೆಗೆ ತನ್ನದೇ ಆದ ಮಹತ್ವವಿದೆ. ಆದರೆ ಇತ್ತೀವಿನ ಡ್ರೆಸ್ಸಿಂಗ್ ಟ್ರೆಂಡ್ ಗೆ ಸಿಲುಕಿ ಸಾರಿಯೂ ಕೂಡ ತನ್ನ ಮಹತ್ವ ಕಳೆದುಕೊಳ್ಳುತ್ತಿದೆ. ಇದೀಗ ಸ್ಟಾರ್ ನಟಿಯೊಬ್ಬರು ಬ್ಲೌಸ್ ಇಲ್ಲದೆ ಸಾರಿ ಉಟ್ಟಿದ್ದು, ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಆ ನಟಿ ಯಾರು?, ಬ್ಲೌಸ್ ಇಲ್ಲದ ಸಾರಿ ಹೇಗಿದೆ? ಎಂಬ ಪ್ರಶ್ನೆ ನಿಮ್ಮಲ್ಲಿದ್ರೆ ಈ ಸ್ಟೋರಿ ಓದಿ.


ಸೌತ್ ನಟಿ ನಿಹಾರಿಕಾ ಕೊನಿಡೆಲಾ ಸದಾ ಹೊಸ ಬಗೆಯ ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಲೇ ಇರುತ್ತಾರೆ. ಈಗ ಬ್ಲೌಸ್ ಇಲ್ಲದೇ ಸೀರೆಯುಟ್ಟು ನಿಹಾರಿಕಾ, ಕ್ಯಾಮೆರಾ ಮುಂದೆ ಬಂದಿದ್ದಾರೆ.ನೀಲಿ ಬಣ್ಣದ ಸೀರೆಯುಟ್ಟು ಸಿಂಪಲ್ ಆಭರಣ ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಎರಡು ಜಡೆಯ ಹೇರ್ ಸ್ಟೈಲ್ ಜೊತೆಗೆ ನಟಿಯ ಲುಕ್ ನೋಡಿ ಅಭಿಮಾನಿಗಳು ಕಳೆದುಹೋಗಿದ್ದಾರೆ. ಇನ್ನು ಕೆಲವು ನೆಟ್ಟಿಗರು ನಟಿಯ ಅವತಾರ ಕಂಡು ಗರಂ ಆಗಿದ್ದಾರೆ.
ಚೈತನ್ಯ ಜೊತೆಗಿನ ಡಿವೋರ್ಸ್ ನಂತರ ಸಿಂಗಲ್ ಆಗಿ ಲೈಫ್ ಲೀಡ್ ಮಾಡ್ತಿದ್ದಾರೆ. ನಿರ್ಮಾಣದ ಜೊತೆ ಆ್ಯಕ್ಟಿಂಗ್ ಕಡೆ ಕೂಡ ಗಮನ ವಹಿಸುತ್ತಿದ್ದಾರೆ.ಸದ್ಯ, ಸಹೋದರ ವರುಣ್ ತೇಜ್- ಲಾವಣ್ಯ ಮದುವೆಯ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಹಲವು ವರ್ಷಗಳ ಪ್ರೀತಿಗೆ ವರುಣ್- ಲಾವಣ್ಯ ಜೋಡಿ ಮದುವೆಯೆಂಬ ಮುದ್ರೆ ಒತ್ತಲು ರೆಡಿಯಾಗಿದ್ದಾರೆ.