ಇತ್ತೀಚಿನ ದಿನಗಳಲ್ಲಿ ಒಬ್ಬ ವ್ಯಕ್ತಿ ತನ್ನ ವೈಯಕ್ತಿಕ ಬದುಕಿನಲ್ಲಿ ಏನು ಮಾಡುತ್ತಿದ್ದಾರೆ? ಎಂಥಾ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಊಹೆ ಮಾಡುವುದಕ್ಕೆ ಕೂಡ ಸಾಧ್ಯವಿಲ್ಲ. ಹಾಗೆಯೇ ಒಬ್ಬ ವ್ಯಕ್ತಿಯ ಮನಸ್ಸಿನಲ್ಲಿ ಏನು ನಡೆಯುತ್ತಿದೆ? ಅವರಲ್ಲಿ ಎಂಥಾ ಬದಲಾವಣೆ ಕಾಣಬಹುದು ಎನ್ನುವುದು ಕೂಡ ನಿರೀಕ್ಷೆಗೆ ಮೀರಿದ್ದು. ಇದೀಗ ಅಂಥದ್ದೇ ಒಂದು ಘಟನೆ ಸೋಷಿಯಲ್ ಮೀಡಿಯಾದಲ್ಲಿ ಬೆಳಕಿಗೆ ಬಂದಿದ್ದು, ಖ್ಯಾತ ಕ್ರಿಕೆಟಿಗನ ಮಗ ಲಿಂಗ ಬದಲಾವಣೆ ಮಾಡಿಸಿಕೊಂಡಿರುವ ವಿಚಾರ ತಿಳಿದುಬಂದ ನಂತರ ನೆಟ್ಟಿಗರು ಶಾಕ್ ಆಗಿದ್ದಾರೆ. ಪ್ರಪಂಚದಲ್ಲಿ ಏನಾಗ್ತಿದೆ ಎಂದು ಪ್ರಶ್ನೆ ಮಾಡಿದ್ದಾರೆ..

ಹೌದು ಈ ಘಟನೆ ನಡೆದಿರುವುದು ನಿಜ, ಭಾರತದ ಖ್ಯಾತ ಕ್ರಿಕೆಟಿಗನ ಮಗ ಲಿಂಗ ಬದಲಾಯಿಸಿಕೊಂಡಿದ್ದಾರೆ. ಆತ ಮತ್ಯಾರು ಅಲ್ಲ, ಟೀಮ್ ಇಂಡಿಯಾದ ಕೋಚ್ ಆಗಿ ಕೆಲಸ ಮಾಡಿರುವ ಸಂಜಯ್ ಬಂಗಾರ್ ಅವರ ಮಗ ಆರ್ಯನ್. ಹೌದು, ಇದು ನಂಬುವುದಕ್ಕೆ ಕಷ್ಟ ಅನ್ನಿಸುವ ವಿಷಯವೇ ಆದರೆ ಸತ್ಯ ಎನ್ನುವುದು ಸುಳ್ಳಲ್ಲ. ಈ ವಿಚಾರವನ್ನು ಸಂಜಯ್ ಬಂಗಾರ್ ಅವರ ಮಗ ಆರ್ಯನ್ ಅವರೇ ಸೋಶಿಯಲ್ ಮೀಡಿಯಾ ಮೂಲಕ ಎಲ್ಲರ ಜೊತೆಗೆ ಹಂಚಿಕೊಂಡಿದ್ದು, ನೆಟ್ಟಿಗರು ಆರ್ಯನ್ ಅವರನ್ನು ಈಗ ನೋಡಿ ಶಾಕ್ ಆಗಿದ್ದಾರೆ.
ಆರ್ಯನ್ ಈಗ ಹುಡುಗಿ ಆಗಿದ್ದು, ಅವರ ಹೆಸರು ಈಗ ಅನಾಯ. ಈ ವಿಷಯದ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಶೇರ್ ಮಾಡಿರುವ ಆರ್ಯನ್, ಇನ್ನುಮುಂದೆ ನಾನು ಅನಾಯ ಎಂದು ತಿಳಿಸಿದ್ದಾರೆ. ಈ ವಿಚಾರ ಕೇಳಿ ಶಾಕ್ ಆದ ನೆಟ್ಟಿಗರು, ಹೇಗೆ ರಿಯಾಕ್ಟ್ ಮಾಡಬೇಕೋ ಗೊತ್ತಾಗುತ್ತಿಲ್ಲ ಎಂದು ಕಮೆಂಟ್ ಬರೆದಿದ್ದಾರೆ. ಕೆಲವರು ಪಾಸಿಟಿವ್ ಆಗಿ ಬರೆದರೆ, ಇನ್ನಷ್ಟು ಜನರು ನೆಗಟಿವ್ ಆಗಿ ಕಾಮೆಂಟ್ಸ್ ಬರೆದಿದ್ದಾರೆ. ಒಟ್ಟಿನಲ್ಲಿ ಖ್ಯಾತ ಕ್ರಿಕೆಟಿಗ, ಟೀಮ್ ಇಂಡಿಯಾ ಕೋಚ್, ಐಪಿಎಲ್ ನ ಹಲವು ತಂಡಗಳ ಹೆಡ್ ಕೋಚ್ ಆಗಿದ್ದವರು ಸಂಜಯ್ ಬಂಗಾರ್.

ಇಂಥ ವ್ಯಕ್ತಿಯ ಮಗ ಇಂದು ಈ ರೀತಿಯ ತೀರ್ಮಾನ ತೆಗೆದುಕೊಂಡು, ಲಿಂಗ ಬದಲಾವಣೆ ಮಾಡಿಕೊಂಡಿದ್ದಾರೆ ಎನ್ನುವುದು ಆಶ್ಚರ್ಯದ ಸಂಗತಿ. ಅಷ್ಟಕ್ಕೂ ಆರ್ಯನ್ ಅವರು ಈಗ ಭಾರತದಲ್ಲಿಲ್ಲ, ಯುನೈಟೆಡ್ ಮ್ಯಾಂಚೆಸ್ಟರ್ ನಲ್ಲಿ ಇದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಹಾಗೆಯೇ ಇವರು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವುದು ಕೂಡ ಅಲ್ಲಿಯೇ, ಇವರು ಚಿಕಿತ್ಸೆ ಪಡೆದಿರುವ ಬಗ್ಗೆ ಕೂಡ ಮಾಹಿತಿಗಳು ತಿಳಿದುಬಂದಿದೆ. ಕಳೆದ 10 ತಿಂಗಳುಗಳಿಂದ ಹಾರ್ಮೋನಲ್ ವೇರಿಯೇಷನ್ ಗೆ ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತಿದ್ದಾರಂತೆ ಆರ್ಯನ್. ಹೊರದೇಶದಲ್ಲಿ ಇದ್ದುಕೊಂಡೇ ಈ ಕೆಲಸ ಮಾಡುತ್ತಿದ್ದರು..
10 ತಿಂಗಳ ಟ್ರೀಟ್ಮೆಂಟ್ ನಂತರ, ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು, ಈಗ ಹುಡುಗಿಯಾಗಿ ಬದಲಾಗಿದ್ದಾರೆ. ಇದು ಅವರ ವೈಯಕ್ತಿಕ ಜೀವನದ ನಿರ್ಧಾರ, ಹಾಗಿದ್ದರೂ ಸಹ ಸೋಶಿಯಲ್ ಮೀಡಿಯಾ ಹಾಗೂ ಸಮಾಜದಲ್ಲಿ ಭಾರಿ ಟೀಕೆಗೆ ಹಾಗೂ ಚರ್ಚೆಗೆ ಕಾರಣವಾಗಿದೆ. ತಂದೆಯ ಹಾಗೆ ತಾನು ಕೂಡ ದೊಡ್ಡ ಕ್ರಿಕೆಟರ್ ಆಗಬೇಕು ಎಂದು ಆರ್ಯನ್ ಕನಸು ಕಂಡಿದ್ದರು, ಕ್ರಿಕೆಟ್ ತರಬೇತಿ ಕೂಡ ಪಡೆಯುತ್ತಿದ್ದರು. ಆದರೆ ಈಗ ತಮ್ಮ ಎಲ್ಲಾ ಕನಸುಗಳನ್ನು ಅರ್ಧಕ್ಕೇ ಬಿಟ್ಟು, ಹುಡುಗಿ ಆಗಿ ಲಿಂಗ ಬದಲಾವಣೆ ಮಾಡಿಸಿಕೊಂಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ಸ್ ಮೂಲಕ ತಪ್ಪದೇ ತಿಳಿಸಿ..