17 ಆಟಗಾರರ ಭಾರತ ತಂಡವನ್ನು ಏಷ್ಯಾ ಕಪ್ ಗಾಗಿ ಆಯ್ಕೆ ಮಾಡಲಾಗಿದೆ . ಜೊತೆಗೆ ಒಬ್ಬ ಬ್ಯಾಕ್ ಅಪ್ ಪ್ಲೇಯರ್ ನ ಕೂಡ ಆಯ್ಕೆ ಮಾಡಿದ್ದಾರೆ .

ಏಷ್ಯಾಕಪ್ಗೆ ಟೀಂ ಇಂಡಿಯಾ ಹೀಗಿದೆ :
ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ತಿಲಕ್ ವರ್ಮಾ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ. ಬ್ಯಾಕ್ ಅಪ್ ಪ್ಲೇಯರ್ – ಸಂಜು ಸ್ಯಾಮ್ಸನ್.

ಶ್ರೇಯಸ್ ಅಯ್ಯರ್ ಹಾಗು ಕೆ ಎಲ್ ರಾಹುಲ್ ಇಂಜುರಿ ನಂತ್ರ ಕಮ್ ಬ್ಯಾಕ್ ಮಾಡಿದ್ದಾರೆ. ಒಂದು ಏಕದಿನ ಪಂದ್ಯ ಆಡಿಲ್ಲದ ತಿಲಕ್ ವರ್ಮಾ ನನ್ನ ಸರ್ಪ್ರೈಜ್ ಎಂಟ್ರಿ ಮಾಡಿಸಿದ್ದಾರೆ.ಜಸ್ಪ್ರೀತ್ ಬುಮ್ರಾ ಹಾಗು ಪ್ರಸಿದ್ ಕೃಷ್ಣ ಏಕದಿನ ಫಾರ್ಮ್ಯಾಟ್ ಗೆ ವಾಪಾಸ್ ಮರಳಿದ್ದಾರೆ .ಹಾರ್ದಿಕ್ ಪಾಂಡ್ಯ ಉಪನಾಯಕನಾಗಿ ಮುಂದುವರೆಯಲಿದ್ದಾರೆ . ಆಲ್ರೌಂಡರ್ಸ್ ಗಳಾಗಿ - ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್ ರನ್ನು ಆಯ್ಕೆ ಮಾಡಲಾಗಿದೆ .
ಆರ್ ಅಶ್ವಿನ್ ಹಾಗು ಚಹಲ್ ನ ಡ್ರಾಪ್ ಮಾಡಲಾಗಿದೆ. ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿ ಕುಲದೀಪ್ ಯಾದವ್ ನ ಆಯ್ಕೆ ಮಾಡಿದ್ದಾರೆ. ಕೆ ಎಲ್ ರಾಹುಲ್ ಹಾಗು ಇಶಾನ್ ಕಿಶನ್ ವಿಕೆಟ್ ಕೀಪರ್ ಗಳಾಗಿ ಆಯ್ಕೆ ಆಗಿದ್ದಾರೆ.

ನಿಮಗೆ ಗೊತ್ತಿರುವ ಹಾಗೆ 30 ಆಗಸ್ಟ್ ಇಂದ 17 ಸೆಪ್ಟೆಂಬರ್ ವರಎಗೆ ಏಷ್ಯಾ ಕಪ್ ನಡೆಯಲಿದೆ . ಸೆಪ್ಟೆಂಬರ್ 2 ರಂದು ಭಾರತ ಪಾಕಿಸ್ತಾನವನ್ನು ಎದುರಿಸಲಿದೆ .