ನಟಿ ದೀಪಿಕಾ ದಾಸ್ ಅವರು ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಟಿ. ಇವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯವೇ ಇಲ್ಲ. ದೀಪಿಕಾ ದಾಸ್ ಅವರು ನಾಗಿಣಿ ಧಾರಾವಾಹಿಯ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿದ್ದರು, ಬಳಿಕ ಬಿಗ್ ಬಾಸ್ ಶೋ ಸ್ಪರ್ಧಿಯಾಗಿ ಬಂದು ಫಿನಾಲೆ ವರೆಗು ತಲುಪಿದ್ದರು. ದೀಪಿಕಾ ದಾಸ್ ಅವರಿಗೆ ಬಿಗ್ ಬಾಸ್ ಇಂದ ಒಳ್ಳೆಯ ಹೆಸರು ಸಹ ಬಂದಿತ್ತು. ಇತ್ತೀಚೆಗೆ ಇವರು ಮದುವೆ ಸಹ ಆದರು, ಇದೀಗ ಯಾರೋ ಕಿಡಿಗೇ*ಡಿ ದೀಪಿಕಾ ದಾಸ್ ಅವರ ತಾಯಿಗೆ ಕರೆಮಾಡಿ ಬೆದ*ರಿಕೆ ಹಾಕಿದ್ದಾನೆ. ಪೊಲೀಸ್ ಠಾಣೆಗೆ ಹೋದ ದೀಪಿಕಾ ದಾಸ್ ಅವರ ತಾಯಿ, ದೂರು ನೀಡಿದ್ದಾರೆ. ಅಷ್ಟಕ್ಕೂ ಆಗಿರೋದೇನು ಗೊತ್ತಾ?

ದೀಪಿಕಾ ದಾಸ್ ಅವರ ಮದುವೆಯಾಗಿ 8 ತಿಂಗಳು ಅಷ್ಟೇ ಕಳೆದಿದೆ. ಇವರು ಮದುವೆ ಆಗಿರುವ ಹುಡುಗನ ಹೆಸರು ದೀಪಕ್, ಇವರು ರಿಯಲ್ ಎಸ್ಟೇಟ್ ಉದ್ಯಮಿ ಆಗಿದ್ದು, ಇಬ್ಬರ ಮದುವೆ ಅದ್ಧೂರಿಯಾಗಿ ನಡೆಯಿತು. ಇವರ ಜೀವನ ಕೂಡ ಚೆನ್ನಾಗಿಯೇ ನಡೆಯುತ್ತಿದೆ. ಆಗಾಗ ವಿದೆಶಕ್ಕೆ ಪ್ರವಾಸಕ್ಕೆ ಹೋಗುತ್ತಾ, ಎಂಜಾಯ್ ಮಾಡುತ್ತಾರೆ. ಆದರೆ ಇದೀಗ ಇವರ ಕುಟುಂಬಕ್ಕೆ ಒಂದು ಸಂಕಷ್ಟ ಎದುರಾಗಿದೆ. ದೀಪಿಕಾ ಅವರ ತಾಯಿಗೆ ಯಾರೋ ಕರೆಮಾಡಿ, ಬೆದ*ರಿಕೆ ಹಾಕಿದ್ದು, ದೀಪಿಕಾ ಅವರ ತಾಯಿ ಪದ್ಮಲತಾ ಅವರು ಈ ವಿಚಾರವಾಗಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಆ ವ್ಯಕ್ತಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ ಎನ್ನಲಾಗಿದೆ.
ದೀಪಿಕಾ ದಾಸ್ ಹಾಗೂ ಅವರ ಪತಿ ವಿದೇಶಕ್ಕೆ ಟ್ರಿಪ್ ಗೆ ಹೋಗಿದ್ದ ವೇಳೆ, ಯಾರೋ ಒಬ್ಬ ದೀಪಿಕಾ ದಾಸ್ ಅವರ ತಾಯಿಗೆ ಕರೆಮಾಡಿ, ನಿಮ್ಮ ಅಳಿಯ ಸರಿಯಿಲ್ಲ, ಅಕ್ರಮವಾಗಿ ಬಡಾವಣೆಗಳನ್ನು ಮಾಡಿ ತುಂಬಾ ಜನರಿಗೆ ಮೋಸ ಮಾಡಿದ್ದಾನೆ, ಈ ವಿಷಯಕ್ಕೆ ಜೈ*ಲಿಗೆ ಕೂಡ ಹೋಗಿ ಬಂದಿದ್ದಾನೆ, ಇಂಥ ಹುಡುಗನಿಗೆ ನಿಮ್ಮ ಮಾಗಳನ್ನ ಕೊಟ್ಟು ಹೇಗೆ ಮದುವೆ ಮಾಡಿದ್ರಿ, ಇದೆಲ್ಲವನ್ನ ನೀವು ಒಪ್ಪಿಕೊಳ್ಳಬೇಕು ಎಂದು ಬೆದ*ರಿಕೆ ಹಾಕಿದ್ದಾನೆ. ಇವರು ಅದೆಲ್ಲಾ ಸುಳ್ಳು ಎಂದು ಹೇಳಿದ್ದಕ್ಕೆ, ನಾನು ಆತ್ಮ*ಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೆದರಿ*ಸಿದ್ದಾನೆ. ಪದ್ಮಲತಾ ಅವರಿಗೆ ಮಾತ್ರವಲ್ಲ ದೀಪಿಕಾ ದಾಸ್ ಅವರಿಗೂ ಇದೇ ರೀತಿ ಕರೆ ಮಾಡಿದ್ದಾನೆ.

ಹೌದು, ದೀಪಿಕಾ ದಾಸ್ ಅವರು ಟ್ರಿಪ್ ಮುಗಿಸಿಕೊಂಡು ಬಂದ ನಂತರ ಅವರಿಗೆ ಕರೆಮಾಡಿ, ನಿಮ್ಮ ಗಂಡ ಅಕ್ರಮವಾಗಿ ಬಡಾವಣೆಗಳನ್ನು ಮಾಡಿ ಜನರಿಗೆ ಮೋಸ ಮಾಡಿದ್ದಾನೆ ಎಂದು ಹೇಳಿದ್ದಕ್ಕೆ ದೀಪಿಕಾ ಅವರು ಇದೆಲ್ಲಾ ಸುಳ್ಳು ಆರೋಪ ಎಂದು ಹೇಳಿದ್ದಾರೆ. ಅದಕ್ಕೆ ಆ ವ್ಯಕ್ತಿ ಪುನೀತ್ ರಾಜ್ ಕುಮಾರ್ ಅವರ ಸಮಾಧಿ ಬಳಿ ಬಂದು ಪ್ರಮಾಣ ಮಾಡಿ ಎಂದಿದ್ದಾನೆ, ಅದಕ್ಕೆ ದೀಪಿಕಾ ಅವರು ಈ ವಿಷಯಕ್ಕೆ ಅವರನ್ನು ಮಧ್ಯದಲ್ಲಿ ಯಾಕೆ ತರುತ್ತೀರಾ, ಕಾನೂನಾತ್ಮಕವಾಗಿ ಮಾತನಾಡೋಣ ಎಂದು ಹೇಳಿದ್ದಾರೆ. ಕೊನೆಗೆ ದೀಪಿಕಾ ದಾಸ್ ಅವರ ತಾಯಿ ಪೊಲೀಸರ ಮೊರೆ ಹೋಗಿದ್ದಾರೆ.
ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಸ್ಟೇಶನ್ ನಲ್ಲಿ ದೀಪಿಕಾ ದಾಸ್ ಅವರ ತಾಯಿ ಈ ಕಿಡಿಗೇ*ಡಿಯ ವಿರುದ್ಧ ದೂರು ನೀಡಿದ್ದಾರೆ. ಪೊಲೀಸರು ಇನ್ನುಮುಂದೆ ವಿಚಾರಣೆ ನಡೆಸಿ, ಆ ವ್ಯಕ್ತಿ ಯಾರು? ಯಾತಕ್ಕೆ ಈ ರೀತಿ ಮಾಡಿದ್ದಾನೆ? ಇದೆಲ್ಲವನ್ನು ಪತ್ತೆ ಹಚ್ಚಬೇಕಿದೆ. ಒಟ್ಟಿನಲ್ಲಿ ಸೆಲೆಬ್ರಿಟಿಗಳು ಎಂದರೆ ಬಹಳ ಸುಲಭವಾಗಿ ಈ ರೀತಿ ಸಮಸ್ಯೆಗಳನ್ನು ತಂದೊಡ್ಡುತ್ತಾರೆ ಜನರು. ನಿಜಕ್ಕೂ ದೀಪಿಕಾ ದಾಸ್ ಅವರ ಗಂಡ ಈ ರೀತಿ ಮಾಡಿದ್ದಾರಾ? ಅಥವಾ ಬೇಕು ಎಂದೇ ಈ ಥರ ಮಾಡಿದ್ದಾರಾ? ಇದೆಲ್ಲವು ಪೊಲೀಸರು ವಿಚಾರಣೆ ಮಾಡಿದ ನಂತರ ಗೊತ್ತಾಗಲಿದೆ.