ಸ್ಯಾಂಡ್ ವುಡ್ ನ ಖ್ಯಾತ ನಟಿ ಶ್ರುತಿ ಹರಿಹರನ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ನಟಿ ಶ್ರುತಿ ಹರಿಹರನ್ ಅವರು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಹುಡುಗಿ. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ಬಹಳ ಕಷ್ಟಪಟ್ಟು ಇಂದು ಹೀರೋಯಿನ್ ಆಗಿ ಹೆಸರು ಮಾಡಿದ್ದಾರೆ. ಶ್ರುತಿ ಹರಿಹರನ್ ಅವರು ನಟನೆ ಶುರು ಮಾಡಿದ್ದು ಕನ್ನಡ ಸಿನಿಮಾಗಳ ಮೂಲಕ ಆದರೆ ಬೇರೆ ಭಾಷೆಗಳಲ್ಲಿ ಸಹ ನಟಿಸಿದ್ದಾರೆ. ಆಗಾಗ ತಮ್ಮ ವೈಯಕ್ತಿಕ ಜೀವನದ ವಿಷಯಕ್ಕೆ ಸುದ್ದಿಯಾಗುತ್ತಾರೆ. ಆದರೆ ಇದೀಗ ಇವರು ನಿರ್ಮಾಪಕರೊಬ್ಬರ ವಿಷಯಕ್ಕೆ ನೀಡಿರುವ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಷ್ಟಕ್ಕೂ ಇವರಿಗೆ ಆಗಿರುವ ಅನುಭವ ಏನು? ಪೂರ್ತಿ ವಿಶಯ ತಿಳಿಸುತ್ತೇವೆ ನೋಡಿ..
ಕೆಲ ವರ್ಷಗಳ ಹಿಂದೆ ನಟಿ ಶ್ರುತಿ ಹರಿಹರನ್ ಅವರು ಮೀ ಟು ಪ್ರಕರಣದಿಂದ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಕನ್ನಡ ಖ್ಯಾತ ಹಿರಿಯನಟ ಅರ್ಜುನ್ ಸರ್ಜಾ ಅವರ ವಿರುದ್ಧ ಮೀ ಟು ಆರೋಪ ಹೊರಿಸಿದ್ದರು. ಈ ಕೇಸ್ ಒಂದೆರಡು ವರ್ಷಗಕ ಕಾಲ ನಡೆದು, ಬಳಿಕ ಕಅರ್ಜುನ್ ಸರ್ಜಾ ಅವರದ್ದು ಯಾವುದೇ ತಪ್ಪು ಇಲ್ಲೇ ಎಂದು ಸಾಬೀತಾಯಿತು. ಇದಾದ ಬಳಿಕ ಇವರು ಸಿನಿಮಾದಲ್ಲಿ ನಟಿಸಿದ್ದು ಸಹ ಕಡಿಮೆಯೇ. ಈಗ ಮತ್ತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಶ್ರುತಿ ಹರಿಹರನ್ ಅವರು ದಿನನಿತ್ಯ ಜೀವನದಲ್ಲಿ ಬಹಳ ಹತ್ತಿರ ಇರುವಂತಹ ಪಾತ್ರಗಳಲ್ಲೇ ಹೆಚ್ಚಾಗಿ ನಟಿಸುತ್ತಾರೆ ಎನ್ನುವುದಕ್ಕೆ ಜನರಿಗೆ ತುಂಬಾ ಇಷ್ಟ ಆಗುತ್ತಾರೆ. ಲೂಸಿಯಾ, ಹ್ಯಾಪಿ ನ್ಯೂ ಇಯರ್ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದೀಗ ಸಿನಿಮಾಗೆ ಮತ್ತೆ ಬಂದಿರುವ ಶ್ರುತಿ ಅವರು ತಮಗೆ ಬೇರೆ ಚಿತ್ರರಂಗದಲ್ಲಿ ಆಗಿರುವ ಕೆಟ್ಟ ಅನುಭವವನ್ನು ಇತ್ತೀಚಿನ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಶ್ರುತಿ ಹರಿಹರನ್ ಅವರಿಗೆ ತಮಿಳು ಸಿನಿಮಾ ಒಂದರಲ್ಲಿ ನಟಿಸುವ ಅವಕಾಶವನ್ನು ನಿರ್ಮಾಪಕರು ನೀಡಿದರಂತೆ. ಇದರಿಂದ ಶ್ರುತಿ ಅವರಿಗೆ ತುಂಬಾ ಸಂತೋಷ ಆಗಿತ್ತಂತೆ. ತಮಿಳು ಸಿನಿಮಾದಲ್ಲಿ ನಟಿಸೋ ಅವಕಾಶ ಸಿಕ್ಕಿದೆ ಎಂದು ಉತ್ಸುಕರಾಗಿದ್ದರಂತೆ. ಆದರೆ ಶ್ರುತಿ ಅವರನ್ನು ಭೇಟಿ ಮಾಡೋಕೆ ಕರೆದ ನಿರ್ಮಾಪಕರು ಹೇಳಿದ ಮಾತು ಕೇಳಿ, ಸಿಟ್ಟಿಗೆದ್ದು ಕೋಪ ಮಾಡಿಕೊಂಡು, ವಾಪಸ್ ಬಂದಿದ್ದರಂತೆ. ಆ ನಿರ್ಮಾಪಕರು ಹೇಳಿದ್ದು ಏನು, ಶ್ರುತಿ ಅವರಿಗೆ ಕೋಪ ಬಂದಿದ್ದು ಯಾಕೆ ಎಂದು ನೋಡುವುದಾದರೆ, ಇದರಿಂದ ಹಿಂದೆ ಮತ್ತೊಂದು ಸ್ಟೋರಿಯೇ ಇದೆ ಅನ್ನೋದು ಮರೆಯುವ ಹಾಗಿಲ್ಲ.

ಆ ವ್ಯಕ್ತಿ ಶ್ರುತಿ ಅವರನ್ನು ಭೇಟಿ ಮಾಡಲು ಕರೆದು, ಈ ಸಿನಿಮಾದಲ್ಲಿ 5 ಜನ ನಿರ್ಮಾಪಕರಿದ್ದಾರೆ. ನಿನಗೆ ಈ ಸಿನಿಮಾದಲ್ಲಿ ನಟಿಸಲು ಅವಕಾಶ ಬೇಕು ಎಂದರೆ, ನೀನು ನಮ್ಮ ಐದು ಜನರ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಹೇಳಿದರಂತೆ. ಈ ಮಾತನ್ನು ಕೇಳುತ್ತಿದ್ದ ಹಾಗೆಯೇ ಶ್ರುತಿ ಹರಿಹರನ್ ಅವರು, ಈ ಬುದ್ಧಿ ತೋರಿಸಿದರೆ ಕೈಯಲ್ಲಿ ಇರುವುದು ಕಾಲಿಗೆ ಬರುತ್ತದೆ ಎಂದು ಹೇಳಿ, ಅಲ್ಲಿಂದ ಹೊರಗಡೆ ಬಂದಿದ್ದರಂತೆ. ಈ ರೀತಿ ಬೇರೆ ಭಾಷೆಯ ನಿರ್ಮಾಪಕರು ಕರೆದು ಈ ರೀತಿ ವರ್ತಿಸಿದ ವಿಷಯವನ್ನು ಸಂದರ್ಶನ ಒಂದರಲ್ಲಿ ಹೇಳಿ, ಅದರಿಂದ ಕೋಪ ಬಂದು ವಾಪಸ್ ಬಂದಿದ್ದರ ಬಗ್ಗೆ ಮಾತನಾಡಿದ್ದಾರೆ. ಇಂಥವರನ್ನು ಹಾಗೆ ಸುಮ್ಮನೆ ಬಿಟ್ಟುಬಿಡಬಾರದು ಎಂದು ಸಹ ಹೇಳಿದ್ದಾರೆ.

ಶ್ರುತಿ ಅವರ ಈ ಮಾತಿಗೆ ನೆಟ್ಟಿಗರು ಸಹ ದನಿಗೂಡಿಸಿದ್ದಾರೆ. ಹೆಣ್ಣುಮಕ್ಕಳನ್ನು ತಮ್ಮಿಷ್ಟ ಬಂದ ಹಾಗೆ ಬಳಸಿಕೊಳ್ಳುವ ವ್ಯಕ್ತಿಗಳಿಂದ ದೂರ ಇರಬೇಕು, ಅಂಥವರಿಗೆ ಸರಿಯಾಗಿ ಪಾಠ ಕಲಿಸಬೇಕು ಎನ್ನುತ್ತಿದ್ದಾರೆ. ಸಿನಿಮಾ ಇಂದ ಕೆಲ ಸಮಯ ದೂರವಿದ್ದ ಶ್ರುತಿ ಹರಿಹರನ್ ಅವರು, ಮನೆಯವರು ಮತ್ತು ಫ್ಯಾಮಿಲಿ ಬಗ್ಗೆ ಹೆಚ್ಚು ಸಮಯ ಕೊಟ್ಟಿದ್ದರು. ಇವರ ಮಗಳು ಜಾನಕಿಯನ್ನು ನೋಡಿಕೊಂಡು, ಮಗುವಿಗೆ ಹೆಚ್ಚು ಸಮಯ ಕೊಡುತ್ತಿದ್ದರು ಶ್ರುತಿ. ಇದೀಗ ಇವರು ಸಿನಿಮಾಗೆ ಮತ್ತೆ ಕಂಬ್ಯಾಕ್ ಮಾಡಿದ್ದು, ಮುಂದೆ ಇನ್ನು ಹೆಚ್ಚಿನ ಸಿನಿಮಾಗಳಲ್ಲಿ ನಟಿಸಲಿ ಎನ್ನುವುದು ಇವರ ಅಭಿಮಾನಿಗಳ ಆಸೆ ಆಗಿದೆ.