ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟಿಯರಲ್ಲಿ ರೇಖಾ ದಾಸ್ ಸಹ ಒಬ್ಬರು. ಇವರು ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿದ್ದು ಅನೇಕ ರೀತಿಯ ಪಾತ್ರಗಳಲ್ಲಿ ನಟಿಸಿರುವವರು ರೇಖಾ ದಾಸ್. ಇವರು ಬಹಳ ಕಷ್ಟಪಟ್ಟು ಬೆಳೆದು ಬಂದಿರುವ ನಟಿ ಎಂದು ನಮಗೆಲ್ಲಾ ಗೊತ್ತೇ ಇದೆ. ಬೇರೆ ದೇಶದವರಾಗಿ ಕರ್ನಾಟಕಕ್ಕೆ ಬಂದು, ಕನ್ನಡ ಕಲಿತು, ಕನ್ನಡ ಚಿತ್ರರಂಗದಲ್ಲಿ ಬೆಳೆದು ನಿಲ್ಲುವುದು, ನೆಲೆ ಕಂಡುಕೊಳ್ಳುವುದು ಸುಲಭದ ವಿಷಯ ಅಂತೂ ಅಲ್ಲ. ರೇಖಾ ದಾಸ್ ಅವರು ಹೆಚ್ಚಾಗಿ ಕಾಮಿಡಿ ಪಾತ್ರಗಳಲ್ಲಿ ನಟಿಸಿ, ಹೆಸರು ಮಾಡಿರುವವರು. ಇತ್ತೀಚಿನ ಸಂದರ್ಶನದಲ್ಲಿ ಇವರು ತಮ್ಮ ಜೀವನದ ಪ್ರಮುಖ ವ್ಯಕ್ತಿಯ ಬಗ್ಗೆ ಮತ್ತು ಅವರೊಡನೆ ಹೊರಟು ಹೋದ ತಮ್ಮ ಬದುಕಿನ ಸೀಕ್ರೆಟ್ ಗಳ ಬಗ್ಗೆ ಮಾತನಾಡಿದ್ದಾರೆ.

ನಟಿ ರೇಖಾ ದಾಸ್ ಅವರು ಇಷ್ಟು ಭಾವುಕರಾಗಿ ಮಾತನಾಡಿರುವುದು ಮತ್ಯಾರ ಬಗ್ಗೆ ಕೂಡ ಅಲ್ಲ, ಕನ್ನಡದ ಖ್ಯಾತ ಹಿರಿಯನಟ ಬ್ಯಾಂಕ್ ಜನಾರ್ಧನ್ ಅವರ ಬಗ್ಗೆ. ಇತ್ತೀಚೆಗೆ ಬ್ಯಾಂಕ್ ಜನಾರ್ಧನ್ ಅವರು ವಿಧಿವಶರಾದರು. ಇವರಿಗೆ ಕನ್ನಡ ಚಿತ್ರರಂಗದ ಸಾಕಷ್ಟು ಕಲಾವಿದರು ಬಂದು, ಅಂತಿಮ ನಮನ ಸಲ್ಲಿಸಿ, ಶ್ರದ್ಧಾಂಜಲಿ ಹೇಳಿ ಹೋದರು. ಕೆಲವರು ಬ್ಯಾಂಕ್ ಜನಾರ್ಧನ್ ಅವರ ಮಗನಿಗೆ ಸಮಾಧಾನ ಹೇಳಿದರು. ಹಲವು ಸ್ನೇಹಿತರು ಬ್ಯಾಂಕ್ ಜನಾರ್ಧನ್ ಅವರ ಬಗ್ಗೆ ಸಂತಾಪ ಸೂಚಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದರು. ನಟಿ ರೇಖಾ ದಾಸ್ ಅವರಿಗೆ ಬ್ಯಾಂಕ್ ಜನಾರ್ಧನ್ ಅವರ ಜೊತೆಗೆ ಒಳ್ಳೆಯ ಒಡನಾಟ ಇತ್ತು. ಇವರು ಒಂದೇ ಕುಟುಂಬದ ಹಾಗೆ ಇದ್ದರು. ಹಾಗಾಗಿ ರೇಖಾ ದಾಸ್ ಅವರಿಗೆ ಬ್ಯಾಂಕ್ ಜನಾರ್ಧನ್ ಅವರ ಅಗಲಿಕೆ ಬಹಳ ನೋವು ನೀಡಿದೆ.

ಬ್ಯಾಂಕ್ ಜನಾರ್ಧನ್ ಅವರನ್ನು ತಮ್ಮ ಸ್ವಂತ ತಂದೆಯ ಹಾಗೆ ಕಾಣುತ್ತಿದ್ದರು ರೇಖಾ ದಾಸ್. ರೇಖಾ ಅವರು ಅಭಿನಯಿಸಿದ ಮೊದಲ ಸಿನಿಮಾದಲ್ಲಿ ಬ್ಯಾಂಕ್ ಜನಾರ್ಧನ್ ಅವರು ತಂದೆಯ ಪಾತ್ರದಲ್ಲಿ ನಟಿಸಿದ್ದರಂತೆ. ಅದಾದ ಬಳಿಕ ಬ್ಯಾಂಕ್ ಜನಾರ್ಧನ್ ಅವರನ್ನು ತಂದೆಯಂತೆ ಭಾವಿಸುತ್ತಿದ್ದ ರೇಖಾ ದಾಸ್ ಅವರು ಅವರನ್ನು ಪಪ್ಪಾ ಎಂದೇ ಕರೆಯುತ್ತಿದ್ದರು. ಈ ರೀತಿಯ ಬಾಂಧವ್ಯ ಅವರಿಬ್ಬರ ನಡುವೆ ಇತ್ತು. ಇವರಿಬ್ಬರು ಜೊತೆಯಾಗಿ ಸುಮಾರು 100 ಸಿನಿಮಾಗಳಲ್ಲಿ ನಟಿಸಿದ್ದಾರೆ. ತಂದೆ ಮಗಳಾಗಿ, ಗಂಡ ಹೆಂಡತಿಯಾಗಿ ವಿಭಿನ್ನ ಪಾತ್ರಗಳಲ್ಲಿ ಇಬ್ಬರೂ ಜೊತೆಯಾಗಿ ನಟಿಸಿದ್ದಾರೆ. ಬ್ಯಾಂಕ್ ಜನಾರ್ಧನ್ ಅವರು ಇದ್ದಷ್ಟು ದಿವಸ ಅವರನ್ನು ಹತ್ತಿರದಿಂದ ನೋಡಿದವರಲ್ಲಿ ರೇಖಾ ದಾಸ್ ಸಹ ಒಬ್ಬರು. ಇವರಿಬ್ಬರು ಒಂದೇ ಕುಟುಂಬದ ಹಾಗೆ ಇದ್ದವರು.

ಪಪ್ಪಾ ಎಂದು ಕರೆಯುತ್ತಾ, ಅವರೊಡನೆ ಅಷ್ಟು ಆತ್ಮೀಯವಾಗಿದ್ದ ವ್ಯಕ್ತಿ ಇಲ್ಲ ಎಂದಾಗ ರೇಖಾ ದಾಸ್ ಅವರಿಗೆ ಎಷ್ಟು ದುಃಖ ಆಗಿರಬೇಡಾ? ಈ ಬಗ್ಗೆ ಅವರು ಇತ್ತೀಚಿನ ಸಂದರ್ಶನದಲ್ಲಿ ತಿಳಿಸಿದ್ದಾರೆ. ಬ್ಯಾಂಕ್ ಜನಾರ್ಧನ್ ಅವರು ವಿಧಿವಶರಾದ ಹಿಂದಿನ ದಿನ ರೇಖಾ ದಾಸ್ ಅವರು ಶೂಟಿಂಗ್ ಗಾಗಿ ಶೃಂಗೇರಿಗೆ ಹೋಗಿದ್ದರು, ಬೆಳಗಿನ ಜಾವಕ್ಕೆ ತಲುಪಿ, ಸ್ವಲ್ಪ ಹೊತ್ತು ರೆಸ್ಟ್ ಮಾಡೋಣ ಎಂದು ಮಲಗಿದ್ದಾಗ ಸಹನಟಿ ಬಂದು ಎಬ್ಬಿಸಿ, ನಿಮ್ಮ ಪಪ್ಪಾ ಹೋಗ್ಬಿಟ್ರಂತೆ ಎಂದು ಹೇಳಿದರಂತೆ. ಇದನ್ನು ಕೇಳಿದ ರೇಖಾ ದಾಸ್ ಅವರಿಗೆ ದೊಡ್ಡ ಶಾಕ್ ಆಗಿತ್ತು. ಈ ಸುದ್ದಿಯನ್ನು ಅರಗಿಸಿಕೊಳ್ಳಲು ಆಗದೇ, ನಿಜವೇ ಎಂದು ಅಳುತ್ತಾ ಚೆಕ್ ಮಾಡುವಾಗ, ಶೂಟಿಂಗ್ ಸೆಟ್ ನಲ್ಲಿ ಇದ್ದ ಎಲ್ಲರೂ ಸಹ ಬಂದು ಸಮಾಧಾನ ಮಾಡಿದರಂತೆ.
ಮಾಧ್ಯಮದವರ ಎದುರು ಹೋಗಿ ಮಾತನಾಡಿ ಎಂದರಂತೆ. ಆ ಕ್ಷಣಕ್ಕೆ ರೇಖಾ ದಾಸ್ ಅವರಿಗೆ ಏನು ಮಾತನಾಡಬೇಕು ಎನ್ನುವುದು ಕೂಡ ಗೊತ್ತಾಗಲಿಲ್ಲ ಎಂದು ಹೇಳಿದ್ದಾರೆ. ತಮ್ಮಿಬ್ಬರ ನಡುವೆ ಒಳ್ಳೆಯ ಬಾಂಧವ್ಯ ಇತ್ತು ಎಂದು ತಿಳಿಸಿದ್ದು, ಅವರಿಗೆ ಹುಷಾರಿಲ್ಲದೇ ಆಸ್ಪತ್ರೆಗೆ ಹೋಗುವಾಗೆಲ್ಲಾ ನಾನು ಅವರನ್ನು ನೋಡಲು ಹೋಗುತ್ತಿದ್ದೆ, ನನ್ನನ್ನು ನೋಡಿದಾಗ ನೀನು ಯಾಕೆ ಬಂದೆ, ನಿನಗೆ ಇದನ್ನೆಲ್ಲ ನೋಡಿ ತಡ್ಕೊಳ್ಳೋಕೆ ಆಗೋದಿಲ್ಲ ಅಂತ ಹೇಳ್ತಿದ್ರು. ಅವರು ಆಸ್ಪತ್ರೆಗೆ ಅಡ್ಮಿಟ್ ಆದಾಗ, ಯಾರಿಗೂ ಹೇಳಬೇಡ ಎಂದು ಮಗನಿಗೆ ಹೇಳ್ತಾ ಇದ್ರು ಎಂದು ರೇಖಾ ದಾಸ್ ಅವರು ತಿಳಿಸಿದ್ದಾರೆ. ಬ್ಯಾಂಕ್ ಜನಾರ್ಧನ್ ಅವರು ಸಹ ರೇಖಾ ದಾಸ್ ಅವರನ್ನು ತಮ್ಮ ಸ್ವಂತ ಮಗಳು ಎನ್ನುವಂತೆ ಪ್ರೀತಿಯಿಂದ, ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರಂತೆ.

ರೇಖಾ ದಾಸ್ ಅವರ ಲೈಫ್ ನಲ್ಲಿ ನಡೆದ ಅನೇಕ ಘಟನೆಗಳು, ಕಷ್ಟಗಳು, ಅವರು ಅನುಭವಿಸಿದ ಇದೆಲ್ಲವೂ ಬೇರೆ ಯಾರಿಗೂ ಗೊತ್ತಿರಲಿಲ್ಲವಂತೆ, ಬ್ಯಾಂಕ್ ಜನಾರ್ಧನ್ ಅವರಿಗೆ ಮಾತ್ರ ಗೊತ್ತಿತ್ತು. ಪ್ರತಿ ಸಾರಿ ಭೇಟಿ ಮಾಡಿದಾಗಲೂ ಆ ವಿಚಾರಗಳು ನನ್ನ ಜೊತೆಗೆ ಇರುತ್ತದೆ, ನನ್ನ ಜೊತೆಗೆ ಹೋಗುತ್ತದೆ ಎಂದು ಬ್ಯಾಂಕ್ ಜನಾರ್ಧನ್ ಅವರು ಹೇಳುತ್ತಿದ್ದರಂತೆ. ಅದೇ ರೀತಿ ಬ್ಯಾಂಕ್ ಜನಾರ್ಧನ್ ಅವರ ಜೊತೆಗೆ ರೇಖಾ ದಾಸ್ ಅವರ ಜೀವನದ ಎಲ್ಲಾ ಸೀಕ್ರೆಟ್ ಗಳು ಹೊರಟು ಹೋಗಿದೆ ಎಂದು ಕಣ್ಣೀರು ಹಾಕುತ್ತಾ ತಿಳಿಸಿದ್ದಾರೆ. ಇನ್ನು ಬ್ಯಾಂಕ್ ಜನಾರ್ಧನ್ ಅವರೊಡನೆ ನಡೆದ ಮತ್ತೊಂದು ಘಟನೆಯನ್ನು ಸಹ ನೆನಪಿಸಿಕೊಂಡಿದ್ದಾರೆ. ಒಂದು ಸಾರಿ ನಾಟಕಕ್ಕಾಗಿ ಅವರನ್ನು ಕರೆದುಕೊಂಡು ಹೋಗುತ್ತಿದ್ದರಂತೆ, ಸ್ವಲ್ಪ ದಿನಗಳ ಹಿಂದೆಯಷ್ಟೇ ಬ್ಯಾಂಕ್ ಜನಾರ್ಧನ್ ಅವರಿಗೆ ಅನಾರೋಗ್ಯ ಆಗಿತ್ತು.
ಹುಷಾರಾಗಿ ಕರೆದುಕೊಂಡು ಹೋಗಿ, ವಾಪಸ್ ಕರೆತರುತ್ತೇವೆ ಎಂದು ಬ್ಯಾಂಕ್ ಜನಾರ್ಧನ್ ಅವರ ಮಗನಿಗೆ ಹೇಳಿ, ಕರೆದುಕೊಂಡು ಹೋಗುವಾಗ ದಾರಿ ಮಧ್ಯದಲ್ಲೇ ಅವರಿಗೆ ಎದೆ ನೋವು ಶುರುವಾಗಿ, ಹತ್ತಿರದಲ್ಲೇ ಇದ್ದ ಸರ್ಕಾರಿ ಆಸ್ಪತ್ರೆಗೆ ಸೇರಿಸಿದರಂತೆ. ಎರಡು ದಿನಗಳ ಕಾಲ ಚಿಕಿತ್ಸೆ ಕೊಡಿಸಿ ಬೆಂಗಳೂರಿಗೆ ವಾಪಸ್ ಕರೆದುಕೊಂಡು ಬಂದರಂತೆ.ಇಷ್ಟೆಲ್ಲಾ ನೆನಪುಗಳು ಇರುವ ವ್ಯಕ್ತಿ ಇದ್ದಕ್ಕಿದ್ದಂತೆ ಬದುಕಿನಿಂದ ಶಾಶ್ವತವಾಗಿ ದೂರವಾದಾಗ ಎಂಥವರಿಗೆ ಆದರೂ ತುಂಬಾ ನೋವಾಗುತ್ತದೆ. ರೇಖಾ ದಾಸ್ ಅವರು ಕೂಡ ಅದೇ ರೀತಿ ನೋವಿನಲ್ಲಿದ್ದು, ತಂದೆಯ ಸ್ಥಾನದಲ್ಲಿದ್ದ ಬ್ಯಾಂಕ್ ಜನಾರ್ಧನ್ ಅವರನ್ನು ಕಳೆದುಕೊಂಡು ತೀವ್ರವಾದ ದುಃಖದಲ್ಲಿ ಇದ್ದಾರೆ.