ಕನ್ನಡದ ಹಲವು ಖಾಸಗಿ ವಾಹಿನಿಗಳಲ್ಲಿ ನೂರಾರು ಧಾರವಾಹಿಗಳು ಪ್ರಸಾರವಾಗುತ್ತಿವೆ. ಅವುಗಳ ಪೈಕಿಕೆಲವೊಂದು ಧಾರವಾಹಿಗಳು ಭಾರಿ ಜನಮೆಚ್ಚುಗೆ ಗಳಿಸುತ್ತಿವೆ. ಇದೀಗ ಕನ್ನಡದ ಬ್ಲಾಕ್ ಬಸ್ಟರ್ ಧಾರವಾಹಿ ಎನಿಸಿಕೊಂಡಿರುವ ‘ಅಮೃತಧಾರೆ’ ಹೊಸ ಪ್ರಯತ್ನಕ್ಕೆ ಕೈಹಾಕಿದ್ದು, ಅಭಿಮಾನಿಗಳ ಹಾಗೂ ವೀಕ್ಷಕರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಿನಿಮಾ ಮಾತ್ರವಲ್ಲದೇ ಸೀರಿಯಲ್ ಹಾಡುಗಳು, ಟೈಟಲ್ ಟ್ರ್ಯಾಕ್ ಗಳು ಕೂಡ ಜನ ಮೆಚ್ಚುಗೆ ಗಳಿಸುತ್ತಿವೆ. ಅಮೃತಧಾರೆ ಹಾಡುಗಳು ಕೂಡ ಸಾಕಷ್ಟು ಮೆಚ್ಚುಗೆ ಗಳಿಸಿದೆ.

ಈ ಕಾರಣಕ್ಕೆ ಇದೀಗ ಅಮೃತಧಾರೆ ಧಾರವಾಹಿಯ ಆಡಿಯೋ ಜ್ಯೂಕ್ ಬಾಕ್ಸ್ ರಿಲೀಸ್ ಮಾಡಲಾಗಿದೆ, ಇದರೊಂದಿಗೆ ಆಡಿಯೋ ಜ್ಯೂಕ್ ಬಾಕ್ಸ್ ಬಿಡುಗಡೆಗೊಳಿಸಿದ ಏಕೈಕ ಹಾಗೂ ಮೊಟ್ಟಮೊದಲ ಧಾರವಾಹಿ ಎನಿಸಿಕೊಂಡಿದೆ. ಜನರನ್ನು ತಲುಪುವ ಹಾಗೂ ವೀಕ್ಷಕರನ್ನು ಹೆಚ್ಚಿಸುವ ಉದ್ದೇಶದಿಂದ ಹಲವು ಧಾರವಾಹಿಗಳು ಹಾಡುಗಳನ್ನು ಸೃಷ್ಟಿಸುತ್ತವೆ. ಆದರೆ ಮೊದಲ ಬಾರಿಗೆ 9 ಹಾಡುಗಳಿರುವ ಏಕೈಕ ಸಿರಿಯಲ್ ಎಂಬ ಹೆಗ್ಗಳಿಕೆ ಅಮೃತಧಾರೆಗೆ ಸಲ್ಲುತ್ತದೆ.
ಅಷ್ಟೇ ಅಲ್ಲದೇ ಈ 9 ಹಾಡುಗಳನ್ನೂ ಕೂಡ ಅಮೃತಧಾರೆ ತಂಡ ಸ್ವಂತ ಸಂಯೋಜನೆ ಮಾಡಿ, ಧಾರವಾಹಿಗೆ ಸಂಬಂಧಪಟ್ಟಂತೆ ಹಾಡುಗಳನ್ನು ಬರೆದು ಇದೀಗ ಅವುಗಳನ್ನು ಜ್ಯೂಕ್ ಬಾಕ್ಸ್ ಮೂಲಕ ಬಿಡುಗಡೆ ಗೊಳಿಸಲಾಗಿದೆ. ಈ ಧಾರವಾಹಿಗಾಗಿ ಹಾಡುಗಳನ್ನು ಸುನಾದ್ ಗೌತಮ್ ಸಂಯೋಜನೆ ಮಾಡಿದ್ದಾರೆ. ಜೊತೆಗೆ ಚೇತನ್ ಸೋಲಗಿ ಹಾಗೂ ಸುದೀಂದ್ರ ಭಾರದ್ವಾಜ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಸರಿಗಮಪ ಖ್ಯಾತಿಯ ಐಶ್ವರ್ಯ ರಂಗರಾಜನ್, ನಿಹಾಲ್ ತಾವ್ರೋ ಹಾಗೂ ರಜತ್ ಹೆಗ್ಡೆ ಹಾಡಿದ್ದಾರೆ.
1.ನಾ ಭುವಿಯಂತೆ ಕಾದೆ
2.ಏನೋ ನವಿರಾದ ಭಾವ
3.ನಿನ್ನವರ ನಗುವಲಿ
4.ಒಡನಾಡಿ ಬೇಕಿದೆ
5.ಸನಿಹ ಸೆಳೆದಂತೆ
6.ಬೆಳಗುವ ದೀಪವು
7.ಜೊತೆ ಸಾಗೋ ಕನಸಿದೆ
8.ತನ್ನವರ ಬದುಕಲಿ
9.ಯಾರೊ ಕರೆದಂತೆ ಹೆಸರ
ಇವಿಷ್ಟು ಹಾಡುಗಳ ಆಡಿಯೋ ಜ್ಯೂಕ್ ಬಾಕ್ಸ್ ಸದ್ಯ ಎಲ್ಲೆಡೆ ಸದ್ದು ಮಾಡುತ್ತಿದ್ದು, ಅಮೃತಧಾರೆ ಧಾರವಾಹಿಗರ ಇನ್ನಷ್ಟು ಜನಮನ್ನಣೆ ದೊರೆಯುವ ಸಾಧ್ಯತೆ ಇದೆ.



