ಕನ್ನಡ ಕಿರುತೆರೆ ಮತ್ತು ಬೆಳ್ಳಿ ತೆರೆಯಲ್ಲಿ ಅಭಿನಯಿಸಿರುವ ಅಪೂರ್ವ ಮೊದಲ ಬಾರಿಗೆ ರಿಯಾಲಿಟಿ ಶೋಗೆ ಕಾಲಿಟ್ಟಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೂಪರ್ ಕ್ವೀನ್ ಶೋಲ್ಲಿ ಸ್ಪರ್ಧಿಸಿ ಕಿರೀಟ ಗೆಲ್ಲುವುದಕ್ಕೆ ಸಜ್ಜಾಗಿದ್ದಾರೆ. ಅಪೂರ್ವ ಜೀವನದ ಕಥೆಯನ್ನು ಕೇಳಿ ತೀರ್ಪುಗಾರರಾದ ರಾಘವೇಂದ್ರ ರಾಜ್ಕುಮಾರ್ ಮತ್ತು ರಚಿತಾ ರಾಮ್ ಭಾವುಕರಾಗಿದ್ದಾರೆ. ಕಷ್ಟಗಳು ಹೇಗೆ ಬರುತ್ತೆ ಅಂತ ಯಾರಿಗೂ ಹೇಳುವುದಕ್ಕೆ ಆಗೋಲ್ಲ ಊಹೆ ಮಾಡುವುದಕ್ಕೂ ಆಗೋಲ್ಲ ಯಾಕೆ ಈ ಮಾತು ಹೇಳುತ್ತಿರುವೆ ಅಂದ್ರೆ ನನ್ನ ತಂದೆ ಮನೆ ಕಡೆ ಮತ್ತು ತಾಯಿ ಮನೆ ಕಡೆ ದುಡ್ಡಿನ ವಿಷಯದಲ್ಲಿ ಕಷ್ಟ ಪಟ್ಟಿಲ್ಲ ತುಂಬಾ ಸುಖವಾಗಿದ್ದವರು.

ನಮ್ಮ ತಂದೆ ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳು ಯಾವತ್ತೂ ಸರಿಯಾಗಿರಲಿಲ್ಲ ಹೆಣ್ಣು ಮಕ್ಕಳು ಮನೆಯಿಂದ ಹೊರಗಡೆ ಹೋಗಬಾರದು ಹಾಗೆ ಹೀಗೆ ಎನ್ನುತ್ತಿದ್ದರು. ಒಬ್ಬಳೇ ಮಗಳು ಅಂತ ನನ್ನ ತಾಯಿಗೆ ಮದುವೆ ಮಾಡಿ ಮನೆ ಅಳಿಯನನ್ನು ಮಾಡಿಕೊಂಡರು ಎಷ್ಟು ಮೆಂಟಲಿ ಕಷ್ಟ ಪಟ್ಟಿದ್ದಾರೆ ಅಂದ್ರೆ ಯಾರಿಗೂ ಹೇಳಿಕೊಂಡಿರಲಿಲ್ಲ. ತಂದೆ ಅಮ್ಮನ ಬಿಟ್ಟು ಹೋದಾಗ ಅಜ್ಜಿ ಇಲ್ಲದಿದ್ದರೆ ಕಷ್ಟ ಆಗುತ್ತಿತ್ತು. ನನ್ನ ತಾಯಿಗೆ ಮೂರು ಜನ ಹೆಣ್ಣು ಮಕ್ಕಳು ಒಬ್ಬ ಗಂಡು ಮಗ. ನನ್ನ ತಾಯಿನೂ ಸೇರಿಸಿದ್ದರೆ ನನ್ನ ಅಜ್ಜಿಗೆ 5 ಜನ ಮಕ್ಕಳಿದ್ದರು.
ಅಜ್ಜಿ ಒಬ್ರು ಇರಲಿಲ್ಲ ಅಂದಿದ್ರೆ ಯಾರು ಹೇಗೆ ಏನ್ ಮಾಡಿಕೊಂಡು ಇರಬೇಕಿತ್ತು ಗೊತ್ತಿರಲಿಲ್ಲ. ಇವತ್ತು ನಾನು ಸೂಪರ್ ಕ್ವೀನ್ಗೆ ಬಂದ್ರೂ ನನ್ನ ಅಜ್ಜಿಗೆ ಕ್ವೀನ್ ಅಂತ ಕರೆಯುವುದು. ನಾನು ಮದುವೆ ಮಾಡಿಕೊಂಡಿದ್ದು ನಾನು ಮಾಡಿದ ದೊಡ್ಡ ತಪ್ಪು . ನನ್ನ ಯಜಮಾನರು ನನ್ನನ್ನು ಬಿಟ್ಟರು ಸಾಯಬೇಕು ಅಂತ ಯೋಚನೆ ಮಾಡಿದ್ದಾಗ ನನ್ನ ಮಗಳಿಗೆ ನಾನೇ ದಂಡಿಸಬೇಕು ನಾನೇ ಮುದ್ದು ಮಾಡಬೇಕು. ಅವಳು ಇಷ್ಟ ಪಟ್ಟಿದ್ದನ್ನು ಮಾಡಲು ಸಹಾಯ ಮಾಡಿ ಅವಳ ಹಿಂದೆ ನಾನು ನಿಲ್ಲಬೇಕು’ ಎಂದು ಅಪೂರ್ವ ವೇದಿಕೆ ಮೇಲೆ ಮಾತನಾಡಿದ್ದಾರೆ.
ಈ ಹಿಂದೆ ಜೀ ಕನ್ನಡ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲಿ ಅಪೂರ್ವ ಅವರ ಪುತ್ರ ಭಾಗಿಯಾಗಿದ್ದರು. ತಾಯಿ ವೃತ್ತಿ ಜೀವನದಲ್ಲಿ ಇಷ್ಟೊಂದು ಖುಷಿಯಾಗಿದ್ದಾರೆ ಆದರೆ ರಿಯಲ್ ಲೈಫ್ನಲ್ಲಿ ಎಷ್ಟು ಕಷ್ಟ ಪಟ್ಟಿದ್ದಾರೆ ಎಂದು ಮಾತನಾಡಿದ್ದರು. ‘ನಿಜ ಹೇಳಬೇಕು ಅಂದ್ರೆ ನನ್ನ ತಾಯಿಗೆ ಗಂಡ ಫ್ಯಾಮಿಲಿ ಮತ್ತು ಯಾರಿಂದಲೂ ಸಪೋರ್ಟ್ ಸಿಕ್ಕಿಲ್ಲ. ಚಿಕ್ಕ ವಯಸ್ಸಿನಿಂದ ಕಷ್ಟ ಪಟ್ಟು ಜೀವನ ನಡೆಸಿಕೊಂಡು ಬಂದಿದ್ದಾರೆ. ಈಗ 5-6 ವರ್ಷಗಳಿಂದ ಅಮ್ಮ ಖುಷಿಯಾಗಿರುವುದನ್ನು ನಾನು ನೋಡುತ್ತಿರುವುದು.
ಆ ಖುಷಿ ಏನೆಂದರೆ ಅವರು ಪಡುತ್ತಿರುವ ಕಷ್ಟಕ್ಕೆ ಸಾರ್ಥಕ ಆಯ್ತು ಅನ್ನೋ ಖುಷಿ ಅಷ್ಟೆ ಇದು ನಮ್ಮ ಲೈಫಲ್ಲಿ. ಜೀವನದಲ್ಲಿ ಬರೀ ನೋವು ನೋಡಿರುವುದು ಕಷ್ಟಗಳನ್ನು ಎದುರಿಸಿರುವುದು. ತುಂಬಾ ಕೆಲಸ ಮಾಡುತ್ತಾರೆ ಕಷ್ಟ ಪಡುತ್ತಾರೆ ನೋಡಿದವರು ಅಪೂರ್ವ ಒಳ್ಳೆಯ ಕಲಾವಿದರು ಅಂತ ಹೇಳುತ್ತಾರೆ ಆದರೆ ಅದಕ್ಕೆ ತಕ್ಕಂತ ಸಂಭಾವನೆ ಮತ್ತು ಜನರ ಮೆಚ್ಚಿಗೆ ಸಿಕ್ಕಿರಲಿಲ್ಲ. ಸಿನಿಮಾ ಮಾಡಿದ ಸಿಗದೇ ಇರುವ ಮೆಚ್ಚುಗೆ ಸೀರಿಯಲ್ ಮೂಲಕ ಸಿಕ್ಕಿದೆ. ಈ ವಿಚಾರದಲ್ಲಿ ನಮಗೆ ತುಂಬಾನೇ ಖುಷಿ ಇದೆ. ರೀಲ್ ಲೈಫಲ್ಲಿ ಮಾತ್ರವಲ್ಲ ರಿಯಲ್ ಲೈಫಲ್ಲೂ ನೀನು ಬೆಸ್ಟ್ ಅಮ್ಮ’ ಎಂದು ಹೇಳಿದ್ದರು.