ಚುನಾವಣೆಗೂ ಮುನ್ನ ಸರ್ಕಾರ ಘೋಷಿಸಿದ್ದ 5 ಪ್ರಮುಖ ಗ್ಯಾರಂಟಿಗಳ ಸಮರ್ಪಕ ಜಾರಿಗಾಗಿ ಸಂಪತ್ತು ಕ್ರೋಡೀಕರಿಸಲು ರಾಜ್ಯ ಸರ್ಕಾರ ನಾನಾ ಕಸರತ್ತು ಮಾಡುತ್ತಿದೆ. ವಿವಿಧ ಮೂಲಗಳಿಂದ ಆದಾಯ ಸಂಗ್ರಹ ಮಾಡಲು ಪ್ರಯತ್ನಿಸುತ್ತಿದೆ. ಇತ್ತೀಚೆಗಷ್ಟೇ ವಿದ್ಯತ್ ಬಿಲ್ ಹೆಚ್ಚಿಸಿ ಗ್ರಾಹಕರಿಗೆ ‘ಕರೆಂಟ್ ಶಾಕ್’ ನೀಡಿದ್ದ ಸಿದ್ದು ಸರ್ಕಾರ, ಅದಾದ ಮೇಲೆ ಆಲ್ಕೋಹಾಲ್ ಬೆಲೆ ಹೆಚ್ಚಿಸಿತ್ತು.ಇದೀಗ ಸರ್ಕಾರ ಜನಸಾಮಾನ್ಯರ ದಿನ ಬಳಕೆಯ ಪ್ರಮುಖ ವಸ್ತುಗಳಾದ ತರಕಾರಿ, ಹಣ್ಣು ಹಾಗೂ ಸಂಬಾರು ಪದಾರ್ಥಗಳ ಬೆಲೆ ಏರಿಸಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಲು ಹೊರಟಿದೆ.

ರಾಜ್ಯಕ್ಕೆ ಮುಂಗಾರು ಪ್ರವೇಶ ವಿಳಂಬವಾದ ಕಾರಣ ಕೃಷಿ ಚಟುವಟಿಕೆ ಸರಿಯಾಗಿ ನಡೆಯದೆ ರಾಜ್ಯದ ಅನ್ನದಾತ ಕಂಗಾಲಾಗಿದ್ದಾನೆ. ಇದರ ನಡುವೆ ಇದೀಗ ಸರ್ಕಾರ ತರಕಾರಿಗಳ ಬೆಲೆ ಏರಿಕೆ ಮಾಡಿದೆ. ಹಣ್ಣುಗಳಂತು ಜನಸಾಮಾನ್ಯನ ಕೈಗೆಟುಕದಷ್ಟು ಎತ್ತರದಲ್ಲಿದೆ. ಇನ್ನು ಸಾಂಬಾರು ಪದಾರ್ಥಗಳ ಬೆಲೆ ನೋಡಿ ಕಣ್ಣೀರು ಹರಿಸುವಂತಾಗಿದೆ.ಕೊರೋನ,ಪ್ರಾಕೃತಿಕ ವಿಕೋಪ ಮತ್ತು ಹಣದುಬ್ಬರದಿಂದಾಗಿ ಈಗಾಗಲೇ ಜನರು ಕಂಗೆಟ್ಟಿದ್ದಾರೆ.

ಇದಲ್ಲದೆ ಇತ್ತೀಚೆಗೆ ತೈಲೋತ್ಪನ್ನಗಳಾದ ಪೆಟ್ರೋಲ್ ಡೀಸೆಲ್ ಬೆಲೆಯೂ ಕೂಡ ಏರಿಕೆಯಾಗಿದೆ. ಜೊತೆಗೆ ಅಡುಗೆ ಎಣ್ಟೆ, ಅಕ್ಕಿ, ಹಿಟ್ಟು ಇತ್ಯಾದಿಗಳ ಬೆಲೆ ಏರಿಕೆಯಿಂದ ಹೋಟೆಲ್ ಉದ್ಯಮಗಳು ಪತರಗುಟ್ಟುತ್ತಿವೆ. ಇದೀಗ ಮತ್ತೆ ರಾಜ್ಯ ಸರ್ಕಾರ ಗ್ಯಾರಂಟಿ ಜಾರಿಗಾಗಿ ಗ್ರಾಹಕರ ಬೆನ್ನಿಗೆ ಬರೆ ಎಳೆಯುತ್ತಿದ್ದು, ದಿನ ನಿತ್ಯದ ಬದುಕಿಗೆ ಅಗತ್ಯವಿರುವ ವಸ್ತುಗಳು ಗಗನಮುಖಿಯಾಗಿವೆ. ಸರ್ಕಾರ ಬೆಲೆ ಏರಿಸಿರುವ ದಿನನಿತ್ಯದ ವಸ್ತುಗಳ ಪಟ್ಟಿ ಈ ಕೆಳಗಿನಂತಿದೆ ನೋಡಿ-
ತರಕಾರಿಗಳ ಈಗಿನ ಬೆಲೆ :
ಬೀನ್ಸ್-₹110
ಟೊಮ್ಯಾಟೊ-₹120
ಕ್ಯಾರೆಟ್-₹90
ನವಿಲುಕೋಸು-₹70
ನುಗ್ಗೆಕಾಯಿ-₹100
ಬಿಟ್ರೋಟ್-₹50
ಹಸಿಮೆಣಸಿನಕಾಯಿ-₹110
ಬೆಳ್ಳುಳ್ಳಿ-₹165
ಬೆಂಡೆಕಾಯಿ-₹60
ಶುಂಠಿ-₹190
ಸಾಂಬಾರ ಪದಾರ್ಥಗಳ ಈಗಿನ ಬೆಲೆ:
ಬ್ಯಾಡಗಿ ಮೆಣಸು-₹840
ಉದ್ದಿನ ಬೇಳೆ-₹130
ಜೀರಾ-₹760
ಅರಿಶಿನ ಹುಡಿ-₹308
ಚಿಲ್ಲಿ ಪೌಡರ್- ₹430
ಹೆಸರು ಬೇಳೆ-₹110
ಪೆಪ್ಪರ್-₹515
ದನಿಯಾ ಪೌಡರ್-₹210