ಈಗ ಸೋಷಿಯಲ್ ಮೀಡಿಯಾ ತುಂಬಾ ಮುಂದುವರೆದಿದೆ. ಹಲವು ಜನರು ತಮಗೆ ಅನ್ನಿಸಿದ ವಿಷಯವನ್ನು, ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಹಾಗೆಯೇ ಅನೇಕ ಜನರು ಒಳ್ಳೆಯ ಕಾಂಟೆಂಟ್ ಗಳನ್ನು ಕೊಡುತ್ತಿದ್ದಾರೆ. ವಿಡಿಯೋಗಳ ಮೂಲಕ ಜನರಿಗೆ ಹಲವು ಪ್ರಶ್ನೆಗಳನ್ನು ಕೇಳಿ, ಅವರಿಂದ ಉತ್ತರ ಪಡೆಯುತ್ತಿದ್ದಾರೆ. ಅದೇ ರೀತಿ ಎಕ್ಸ್ ನಲ್ಲಿ Woke Pandemic ಎನ್ನುವ ಖಾತೆಯ ಮೂಲಕ, ಬೆಂಗಳೂರಿನಲ್ಲಿ ಇರುವ ಒಬ್ಬ ಉತ್ತರ ಭಾರತದ ಮಹಿಳೆಗೆ ಒಂದು ಪ್ರಶ್ನೆ ಕೇಳಿದ್ದಾಳೆ, ಅದಕ್ಕೆ ಆಕೆ ಕನ್ನಡಿಗರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾಳೆ.
ಮೈಕ್ ಹಿಡಿದ ವ್ಯಕ್ತಿಯೊಬ್ಬ, ತಮ್ಮ ಖಾತೆಯ ಕಾಂಟೆಂಟ್ ಗಾಗಿ, ಬೆಂಗಳೂರಿನಲ್ಲಿ ಒಬ್ಬ ಮಹಿಳೆಗೆ, ಇಲ್ಲಿನ ಕಲ್ಚರ್ ನಲ್ಲಿ ನಿಮಗೆ ಶಾಕ್ ಆಗಿದ್ದು ಯಾವ ವಿಷಯಕ್ಕೆ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರ ಕೊಟ್ಟ ಆ ಮಹಿಳೆ, ನನಗೆ ಇಲ್ಲಿನ ಕಲ್ಚರ್ ಶಾಕ್ ಅನ್ನಿಸಿಲ್ಲ ಆದರೆ ಇಲ್ಲಿನ ಜನರು ಬಿಹೆವ್ ಮಾಡುವ ರೀತಿ ಶಾಕ್ ಆಗಿದೆ. ಉತ್ತರ ಭಾರತದವರನ್ನ ಇಲ್ಲಿನ ಜನರು ಸುಮ್ಮನೆ ದ್ವೇಷ ಮಾಡುತ್ತಾರೆ, ಆದರೆ ಬೆಂಗಳೂರು ಇಷ್ಟು ಅಭಿವೃದ್ಧಿ ಆಗಿರೋದಕ್ಕೆ ಉತ್ತರ ಭಾರತದವರು ಇಲ್ಲಿಗೆ ಬಂದಿರೋದೆ ಕಾರಣ ಎಂದು ಹೇಳಿದ್ದಾಳೆ. ಹಾಗೆಯೇ ಜನರು ತಮ್ಮ ಜೊತೆಗೆ ವಿಚಿತ್ರವಾಗಿ ವರ್ತನೆ ಮಾಡುತ್ತಾರೆ ಎಂದು ಸಹ ಆಕೆ ಹೇಳಿದ್ದಾಳೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಆಟೋದವರು ತಮ್ಮ ಹತ್ತಿರ ಜಾಸ್ತಿ ದುಡ್ಡು ಕೇಳ್ತಾರೆ, ಹೆಚ್ಚು ದುಡ್ಡು ವಸೂಲಿ ಮಾಡ್ತಾರೆ, ಹೀಗೆಲ್ಲಾ ಇದ್ರು ಬೆಂಗಳೂರು ನನಗೆ ತುಂಬಾ ಇಷ್ಟ. ಈ ಸಿಟಿ ತುಂಬಾ ಚೆನ್ನಾಗಿದೆ ಎಂದು ಸಹ ಹೇಳಿದ್ದಾಳೆ. ಈ ವಿಡಿಯೋ ಎಕ್ಸ್ ಆಪ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, 6.7 ಲಕ್ಷಕ್ಕಿಂತ ಹೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತಿದೆ. ಸಧ್ಯಕ್ಕೆ ಈ ವಿಡಿಯೋಗೆ ಬಹಳಷ್ಟು ಜನರು ಕಾಮೆಂಟ್ ಬರೆದಿದ್ದಾರೆ. ಕೆಲವರು ಆಕೆ ಹೇಳಿದ್ದು ನಿಜ, ಉತ್ತರ ಭಾರತದವರು ಇಲ್ಲಿ ಬಂದು ಕೆಲಸ ಮಾಡ್ತಿರೋದಕ್ಕೆ ಐಟಿ ಉದ್ಯಮ ಅಭಿವೃದ್ಧಿ ಆಗಲು, ಬೆಳೆಯಲು ಕಾರಣ ಎಂದು ಉತ್ತರ ಭಾರತದ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
This girl thinks Banglore is Banglore because of North Indians pic.twitter.com/aOEAN6hoXN
— Woke Eminent (@WokePandemic) December 21, 2024
ಇನ್ನು ಕೆಲವರು ಆಕೆ ಹೇಳಿದ್ದು ತಪ್ಪು ಎಂದು ಅಭಿಪ್ರಾಯ ಹೊರ ಹಾಕಿದ್ದಾರೆ. ನೆಟ್ಟಿಗರು ಕನ್ನಡ ನಾಡಿಗೆ ಬಂದು ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸುತ್ತಿರೋರು ಇವರು, ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಮಾಡುತ್ತಾರೆ ಎಂದು ಹೇಳುತ್ತಿದ್ದಾರೆ. ಕಾಮೆಂಟ್ಸ್ ಗಳಲ್ಲಿ ಇದೆಲ್ಲವೂ ಚರ್ಚೆಗಳು ಜೋರಾಗಿ ನಡೆಯುತ್ತಿದೆ. ಬೆಂಗಳೂರು ಎಂದಾಗ, ಕನ್ನಡ ಭಾಷೆ ಎಂದು ಬಂದಾಗ ಈ ಥರ ಹೊರ ರಾಜ್ಯದವರು ತಪ್ಪಾದ ಹೇಳಿಕೆ ಕೊಡುವುದು ನಡೆಯುತ್ತಲೇ ಇರುತ್ತದೆ. ಇಲ್ಲಿನ ಐಟಿ ಇಂಡಸ್ಟ್ರಿಯಲ್ಲಿ ಹೆಚ್ಚಾಗಿ ಉತ್ತರ ಭಾರತದವರೆ ಕೆಲಸ ಮಾಡುತ್ತಿದ್ದು, ಅವರು ಯಾರು ಕೂಡ ನಮ್ಮ ಭಾಷೆಗೆ ಸಂಸ್ಕೃತಿಗೆ ಗೌರವ ಕೊಡುತ್ತಿಲ್ಲ.
ಹಾಗಾಗಿ ಈ ವಾದ, ವಿವಾದಾತ್ಮಕ ಹೇಳಿಕೆಗಳು ಇದೆಲ್ಲವೂ ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಕೆಲವು ದೊಡ್ಡ ವ್ಯಕ್ತಿಗಳು ಸಹ ಕನ್ನಡ ಭಾಷೆಯ ಹೇರಿಕೆ ಉತ್ತರ ಭಾರತೀಯರ ಮೇಲೆ ಹೇರಲಾಗುತ್ತಿದೆ ಎನ್ನುವ ಅಭಿಪ್ರಾಯ ಹೊರಹಾಕಿದ್ದು ಇದೆ. ಆದರೆ ಕನ್ನಡಿಗರು ತಮ್ಮ ಸ್ವಾಭಿಮಾನ ಬಿಟ್ಟುಕೊಡುವ ಮಾತೇ ಇಲ್ಲ. ಕರ್ನಾಟಕಕ್ಕೆ ಬಂದು, ಇಲ್ಲಿ ಕೆಲಸ ಮಾಡಿ, ಕಾವೇರಿ ನೀರು ಕುಡಿದು, ಕನ್ನಡ ಮಣ್ಣಿನ ಅನ್ನ ತಿನ್ನುವಾಗ ಕನ್ನಡ ಭಾಷೆಗೆ ಗೌರವ ಕೊಡಬೇಕು, ಕನ್ನಡ ಕಲಿಯೋ ಕನಿಷ್ಠ ಪ್ರಯತ್ನ ಮಾಡಬೇಕು. ಆದರೆ ಅದು ಬಹಳ ವಿರಳ ಆಗಿದ್ದು, ಈ ಸಮಸ್ಯೆಗಳು ಯಾವಾಗ ಸರಿ ಹೋಗುತ್ತೋ ಎಂದು ಕಾದು ನೋಡಬೇಕಿದೆ.