ಬಿಗ್ ಬಾಸ್ ಮನೆಯಲ್ಲಿ ಜಗಳ ವಾದ ವಿವಾದ ಭಾವನೆ ತಂತ್ರ ಎಲ್ಲವೂ ಕೂಡ ಒಂದೇ ವೇದಿಕೆಯಲ್ಲಿ ಮಿಶ್ರಣವಾಗಿದೆ. ಈ ವಾರದ ಕಬ್ಬಡಿ ಕಬ್ಬಡಿ ಟಾಸ್ಕ್ ನ ನಂತರ ಮನೆಗೆ ಬಂದ ಗೇಮ್ ಚೇಂಜರ್ ವಿಷಯ ಎಂದರೆ ಅದು ಸ್ಟೂಡೆಂಟ್ ಆಫ್ ದ ವೀಕ್ ಆಯ್ಕೆಯ ಪ್ರಕ್ರಿಯೆ. ಈ ಆಯ್ಕೆಯು ಬ್ಲೂ ಟೀಮ್ನ ಒಗ್ಗಟ್ಟನ್ನು ಪರೀಕ್ಷಿಸಿತು. ಬ್ಲೂ ಹೌಸ್ ಟೀಮ್ ಕಬಡ್ಡಿ ಕಬ್ಬಡಿ ಟಾಸ್ಕ್ ನಲ್ಲಿ ಗೆದ್ದು ಸ್ಟುಡೆಂಟ್ ಆಫ್ ದ ವೀಕ್ ಅನ್ನು ಆಯ್ಕೆ ಮಾಡುವಲ್ಲಿ ವಿಫಲವಾಗಿದೆ. ಇದಕ್ಕೆ ಮುಖ್ಯ ಕಾರಣ ಗಿಲ್ಲಿ ನಟ ಮತ್ತು ಸ್ಪಂದನ.

ಬ್ಲೂ ಹೌಸ್ ಕಬಡಿ ಕಬಡ್ಡಿ ಟಾಸ್ಕ್ ನಲ್ಲಿ ಉತ್ತಮ ಪ್ರದರ್ಶನವನ್ನು ನೀಡಿ ಗೆಲುವನ್ನು ಸಾಧಿಸಿತು. ಈ ಗೆಲುವಿನ ನಂತರ ಬಿಗ್ ಬಾಸ್ ಈ ತಂಡಕ್ಕೆ ಒಂದು ಅದ್ಭುತವಾದ ಅವಕಾಶವನ್ನು ನೀಡಿದರು. ನಿಮ್ಮ ತಂಡದ ಸಹಮತದೊಂದಿಗೆ ಒಬ್ಬ ಸ್ಪರ್ಧಿಯನ್ನು ಸ್ಟೂಡೆಂಟ್ ಆಫ್ ದ ವೀಕ್ ಎಂದು ಆಯ್ಕೆ ಮಾಡಿ ಎಂದು ತಿಳಿಸಿದರು. ಈ ಆಯ್ಕೆಯನ್ನು ತಂಡದ ಎಲ್ಲಾ ಸ್ಪರ್ಧಿಗಳು ಪರಸ್ಪರ ಚರ್ಚಿಸಿ ಸಹಮತದಿಂದ ಒಬ್ಬರನ್ನು ಆಯ್ಕೆ ಮಾಡಬೇಕಿತ್ತು ತಂಡದಲ್ಲಿ ಆರು ಜನ ರಾಶಿಕ್ಕಾಗಿ ವೋಟ್ ಮಾಡಿದರೆ ಗಿಲ್ಲಿ ನಟ ಮತ್ತು ಸ್ಪಂದನ ತಮಗೆ ತಾವೇ ವೋಟ್ ಮಾಡಿಕೊಳ್ಳುವ ಮೂಲಕ ತಮಗೆ ಸ್ಟ್ಯಾಂಡ್ ತೆಗೆದುಕೊಳ್ಳುವ ಮೂಲಕ ವೀಕ್ಷಕರು ಮನ ಪಾತ್ರರಾಗಿದ್ದಾರೆ. ಬ್ಲೂ ಟೀಂ ನ ಸದಸ್ಯರಾದ ರಾಶಿಕ ಅಶ್ವಿನಿ ಗೌಡ ಕಾಕ್ರೋಚ್ ಬಾಳು ರಿಷಿ ಗೌಡ ಧನು ಸ್ಪಂದನ ಮತ್ತು ಗಿಲ್ಲಿ ನಟ ಈ ಚರ್ಚೆಯಲ್ಲಿ ಭಾಗವಹಿಸಿದ್ದರು. ಚರ್ಚೆಯ ವೇಳೆ ರಾಶಿಕ ಉತ್ತಮವಾದ ಆಟ ಆಡಿದ್ದಾರೆ ಎಂದು ಆರು ಜನ ವೋಟ್ ಮಾಡುತ್ತಾರೆ ಆದರೆ ಗಿಲ್ಲಿ ನಟ ಮತ್ತು ಸ್ಪಂದನ ನಾವು ಕೂಡ ಚೆನ್ನಾಗಿ ಆಟ ಆಡಿದ್ದೇವೆ ಎಂದು ತಮಗೆ ತಾವೇ ವೋಟ್ ಮಾಡಿಕೊಳ್ಳುತ್ತಾರೆ.

ಬಿಗ್ ಬಾಸ್ ಎರಡು ಬಾರಿ ಸಹಮತದಿಂದ ಒಬ್ಬರನ್ನ ಆಯ್ಕೆ ಮಾಡಿ ತಿಳಿಸಿ ಎಂದು ಹೇಳಿದರು ಕೂಡ ಬ್ಲೂ ಹೌಸ್ ಒಮ್ಮತಕ್ಕೆ ಬರಲಿಲ್ಲ. ಟೀಮ್ ನಿಂದ ಒಮ್ಮತದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದೆ ಇದ್ದುದರಿಂದ ಬಿಗ್ ಬಾಸ್ ಈ ಅವಕಾಶವನ್ನು ಪಡೆದುಕೊಂಡಿತು. ಬ್ಲೂ ಹೌಸ್ ಕಬಡ್ಡಿ ಟಾಸ್ಕ್ ನಲ್ಲಿ ಗೆದ್ದಿದ್ದರು ಕೂಡ ಆಯ್ಕೆಯ ವಿಫಲತೆಯಿಂದ ಸ್ಟೂಡೆಂಟ್ ಆಫ್ ದ ವೀಕ್ ಅವಕಾಶವನ್ನು ಕಳೆದುಕೊಂಡಿದೆ. ಗಿಲ್ಲಿ ಮತ್ತು ಸ್ಪಂದನ ತೆಗೆದುಕೊಂಡ ನಿಲುವಿಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಬೆಂಬಲವನ್ನು ಸೂಚಿಸಿದ್ದಾರೆ. ಬ್ಲೂ ಟೀಂ ಕಬ್ಬಡಿ ಟಾಸ್ಕ್ ನಲ್ಲಿ ಗೆಲುವನ್ನು ಸಾಧಿಸಿದರು ಕೂಡ ಒಗ್ಗಟಿನ ಕೊರತೆಯಿಂದಾಗಿ ಸ್ಟೂಡೆಂಟ್ ಆಫ್ ದ ವೀಕ್ ಎಂಬ ಅವಕಾಶ ಕಳೆದುಕೊಂಡಿದೆ ಈ ವಿಚಾರ ಮನೆಯಲ್ಲಿ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಈ ಘಟನೆಯು ಬಿಗ್ ಬಾಸ್ ಮನೆಯಲ್ಲಿ ಗೆಲುವುಗಿಂತ ಪರಸ್ಪರ ಗೌರವ ಮತ್ತು ತಂಡದ ಒಗ್ಗಟ್ಟು ಬಹಳ ಮುಖ್ಯ ಎಂಬುದನ್ನು ಸ್ಪಷ್ಟವಾಗಿ ತೋರಿಸಿಕೊಟ್ಟಿದೆ.
ಗಿಲ್ಲಿ ಮತ್ತು ಸ್ಪಂದನ ತಮ್ಮ ನಿಲುವಿನ ಮೇಲೆ ದೃಢವಾಗಿ ನಿಂತಿದ್ದರು ಮತ್ತು ರಾಶಿಕ ಶಾಂತವಾಗಿ ನಿರಾಸೆಯನ್ನು ಅಡಗಿಸಿಕೊಂಡರು. ವೀಕ್ಷಕರ ಕಣ್ಣಿನಲ್ಲಿ ಗಿಲ್ಲಿ ಮತ್ತು ಸ್ಪಂದನ ಗೇಮ್ ಚೇಂಜರ್ ಗಳಾಗಿ ಹೊರಹೊಮ್ಮಿದ್ದಾರೆ. ಧೈರ್ಯದಿಂದ ನಿಂತು ಸಮತೋಲನವನ್ನು ತೋರಿಸಿದವರಿಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದರಿಂದಾಗಿ ಮುಂದಿನ ವಾರ ಬಿಗ್ ಬಾಸ್ ಮನೆಯಲ್ಲಿ ಆಟ ಇನ್ನು ತೀವ್ರಗೊಳ್ಳಲಿದೆ. ಒಗ್ಗಟ್ಟಿನಿಂದಲೇ ಗೆಲುವು ಸಾಧ್ಯ ಇಲ್ಲದಿದ್ದರೆ ಗೆಲುವು ಕೈ ತಪ್ಪುವುದು ಖಂಡಿತ. ಇದರಿಂದ ಮನೆಯವರು ಹೇಗೆ ನಡೆದುಕೊಳ್ಳಬೇಕು ಹೇಗೆ ಒಬ್ಬರಿಗೊಬ್ಬರು ಗೌರವ ನೀಡಬೇಕು ಎಂಬುದು ರಾಶಿಕಾಳಿಂದ ತಿಳಿಯುತ್ತದೆ.
ಆಟದಲ್ಲಿ ನಿಯಮಗಳನ್ನು ಉಲ್ಲಂಘನೆ ಮಾಡಿದರು ಜೊತೆಗೆ ಗಿಲ್ಲಿ ನಟನ ಜೊತೆ ಮಾದ ವಿವಾದಗಳನ್ನು ನಡೆಸಿದರು. ಇದೆ ರಾಶಿಕಾಳಿಗೆ ಮುಂದೆ ಸ್ಟುಡೆಂಟ್ ಆಫ್ ದ ವೀಕ್ ಆಯ್ಕೆಯಲ್ಲಿ ಮುಳುವಾಗಿ ಪರಿಣಮಿಸಿತು. ಆಗ ರಾಶಿಕ ತನ್ನ ತಪ್ಪನ್ನು ಒಪ್ಪಿಕೊಂಡಿದ್ದರೆ ಸ್ಟುಡೆಂಟ್ ಆಫ್ ದ ವೀಕ್ ಆಯ್ಕೆಯ ಸಂದರ್ಭದಲ್ಲಿ ಗಿಲ್ಲಿ ರಾಶಿಕಾಳಿಗೆ ಓಟ್ ಮಾಡುತ್ತಿದ್ದರು. ತಪ್ಪು ಮಾಡಿದವರಿಗೆ ನಾನು ವೋಟ್ ಮಾಡುವುದಿಲ್ಲ ಎಂದು ತನಗೆ ತಾನೆ ವೋಟ್ ಮಾಡಿಕೊಂಡಿದ್ದಾನೆ ಗಿಲ್ಲಿ. ರಸಿಕ ಟಾಸ್ ಗೆದ್ದಿದ್ದರೂ ಕೂಡ ಅವಳ ನಡವಳಿಕೆಯಿಂದ ಸ್ಟೂಡೆಂಟ್ ಆಫ್ ದ ವೀಕ್ ಎಂಬ ಅವಕಾಶವನ್ನು ಕಳೆದುಕೊಂಡಿದ್ದಾಳೆ.
ಗಿಲ್ಲಿ ತೆಗೆದುಕೊಂಡು ಈ ಸ್ಟ್ಯಾಂಡ್ ಅವರ ಅಭಿಮಾನಿಗಳಿಗೆ ಮೆಚ್ಚುಗೆಯಾಗಿದೆ. ಗಿಲ್ಲಿ ನಟ ತನಗೆ ತಾನು ವೋಟ್ ಹಾಕಿಕೊಂಡು ಅಹಂಕಾರದಿಂದ ಮೆರೆಯುತ್ತಿರುವವರಿಗೆ ಪಾಠ ಕಲಿಸಿದ್ದು ಸರಿಯಾಗಿದೆ ಎನ್ನುವವರು ಕಮೆಂಟ್ ಮಾಡಿ ಮೆಚ್ಚಿಗೆ ತಿಳಿಸಿ.



