ವೃಕ್ಷ ಮಾತೆ ಪದ್ಮಶ್ರೀ ಪುರಸ್ಕೃತ ಸಾಲು ಮರದ ತಿಮ್ಮಕ್ಕ ಆಸ್ಪತ್ರೆಗೆ ದಾಖಲಾಗಿದ್ದಾರೆ.. ಅದೆಷ್ಟೋ ಮರಗಳ ಪೋಷಿಸಿ ಗಿಡವನ್ನು ಮಗು ಅಂತ ಆರೈಕೆ ಮಾಡಿ ಅದಕ್ಕೆ ನೀರುಣಿಸಿದ ತಾಯಿ ಈಗ ಆಸ್ಪತ್ರೆ ದಾಖಲಾಗಿದ್ದಾರೆ.. ತಿಮ್ಮಕ್ಕ ಆಸ್ಪತ್ರೆ ದಾಖಲಾಗಿರುವುದು ಅನೇಕರಲ್ಲಿ ತಳಮಳ ಸೃಷ್ಟಿ ಉಂಟು ಮಾಡಿದೆ.. ಅಷ್ಟಕ್ಕೂ ಸಾಲು ಮರದ ತಿಮ್ಮಕ್ಕ ಅವರಿಗೆ ಏನಾಯ್ತು? ಆಸ್ಪತ್ರೆಗೆ ಯಾಕೆ ದಾಖಲಾದರು ಹೇಳ್ತಾ ಹೋಗ್ತೀವಿ ಕೇಳಿ..

ನಿನ್ನೆ ಸಂಜೆ 4.30ರ ವೇಳೆಗೆ ಮನೆಯಲ್ಲಿ ತಿಮ್ಮಕ್ಕ ಕಾಲುಜಾರಿ ಬಿದ್ದಿದ್ದರಾಂತೆ.. ವಯಸ್ಸಾಯಿತು ಇನ್ನೇನೋ ಸಮಸ್ಯೆ ಆಗಬಾರದು ಅನ್ನೋ ಕಾರಣಕ್ಕೆ ತಕ್ಷಣ ಅವರನ್ನ ಅಪೋಲೊ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಈಗ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊಳ್ಳುತ್ತಿದ್ದಾರೆ. ಅವರು ಅಡ್ಮಿಟ್ ಆದ ತಕ್ಷಣ ಅಗತ್ಯ ಚಿಕಿತ್ಸೆ ಕೊಡಲಾಗಿದೆ.MRI ಸ್ಕ್ಯಾನಿಂಗ್ ಕೂಡ ಮಾಡಲಾಗಿದೆ..
ಇನ್ನೂ ತಿಮ್ಮಕ್ಕ ಅವರು ಬಿದ್ದ ಎಫೆಕ್ಟ್ ಬೆನ್ನು ನೋವು ಕಾಣಿಸಿ ಕೊಂಡಿದ್ಯಂತೆ ಹೆಚ್ಚಾಗಿ ಬೆನ್ನು ನೋವು ಆಗುತ್ತಿರುವುದರಿಂದ ಆ ಸಂಬಂಧ ಚಿಕಿತ್ಸೆ ನಡೆಯುತ್ತಿದೆ.. ಸದ್ಯ ಯಾರು ಗಾಬರಿ ಪಡುವಂತಹ ಅವಶ್ಯಕತೆ ಇಲ್ಲ ಎಂಬ ಪ್ರಾಥಮಿಕ ಮಾಹಿತಿ ಲಭ್ಯ ಆಗಿದೆ.. ಇನ್ನೂ ಇಂದು ಮಧ್ಯಾಹ್ನದ ಹೊತ್ತಿಗೆ ಗೃಹ ಸಚಿವ ಪರಮೇಶ್ವರ್ ಆಸ್ಪತ್ರೆಗೆ ಭೇಟಿ ನೀಡಿ ಸಾಲು ಮರದ ತಿಮ್ಮಕ್ಕ ಅವರ ಆರೋಗ್ಯ ಕ್ಷೇಮ ವಿಚಾರಿಸಿ ಕೊಳ್ಳುವ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ.
ಅದೇನೇ ಇರಲಿ ತನಗೆ ಮಗು ಆಗಿಲ್ಲ ಅಂತ ಅದೆಷ್ಟೋ ಹೆಣ್ಣು ಮಕ್ಕಳು ಖಿನ್ನತೆಗೆ ಜಾರುತ್ತಾರೆ. ಇಲ್ಲವಾದಲ್ಲಿ ಬೇಸರದಲ್ಲಿ ಜೀವನ ನಡೆಸುತ್ತಾರೆ. ಆದ್ರೆ ಸಾಲು ಮರದ ತಿಮ್ಮಕ್ಕ ಮಾತ್ರ ತಮ್ಮ ನೋವನ್ನು ನೋವು ಅಂತ ಭಾವಿಸದೆ ಗಿಡಗಳ ನೆಡುವುದಕ್ಕೆ ಶುರು ಮಾಡಿದ್ರು. ಸಾಸಿರ ಗಿಡಗಳ ನೆಟ್ಟು ಸಾವಿರ ಮರಗಳ ತಾಯಿ ಆದ್ರೂ.. ಇವರ ಈ ಪರಿಸರ ಪ್ರೇಮಕ್ಕೆ ಕೋಟ್ಯಂತರ ಅಭಿಮಾನಿಗಳು ಫಿದಾ ಆಗಿದ್ದಾರೆ.. ಇಂತಹ ತಾಯಿ ಆದಷ್ಟು ಬೇಗ ಗುಣಮುಖ ಆಗಲಿ ಅಂತ ಹಾರೈಕೆ ಮಾಡುತ್ತಿದ್ದಾರೆ.