ಈಗಷ್ಟೇ ಐಎಎಸ್ ಆದ ಸ್ನೇಹಾ ಪಾತ್ರವನ್ನೇ ಮುಗಿಸಿದ ಡೈರೆಕ್ಟರ್! ಪುಟ್ಟಕ್ಕನ ಧಾರಾವಾಹಿ ಅಭಿಮಾನಿಗಳು ಗರಂ!
ಕನ್ನಡ ಕಿರುತೆರೆಯಲ್ಲಿ ಅತಿಹೆಚ್ಚಿನ ಜನಪ್ರಿಯತೆ ಪಡೆದುಕೊಂಡ ಧಾರಾವಾಹಿಗಳಲ್ಲಿ ಪುಟ್ಟಕ್ಕನ ಮಕ್ಕಳು ಕೂಡ ಒಂದು. ಈ ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ನಟಿ ಉಮಾಶ್ರೀ ಅದ್ಭುತವಾಗಿ ಅಭಿನಯಿಸುತ್ತಿದ್ದಾರೆ. ಮೂರು ಹೆಣ್ಣುಮಕ್ಕಳ ತಾಯಿ ಪುಟ್ಟಕ್ಕ, ಮೆಸ್ ನಡೆಸಿಕೊಂಡು, ಮಕ್ಕಳನ್ನು ಚೆನ್ನಾಗಿ ಓದಿಸಿ, ಬೆಳೆಸಿ, ಸ್ವಾವಲಂಬಿಗಳನ್ನಾಗಿ ಮಾಡಿರುವ, ಹೆಣ್ಣುಮಕ್ಕಳಿಗೆ ಬಹಳ ಆಪ್ತ ಎನ್ನಿಸುವ ಧಾರಾವಾಹಿ ಇದು. ಟಿಆರ್ಪಿ ಯಲ್ಲಿ ಸಹ ಪುಟ್ಟಕ್ಕನ ಮಕ್ಕಳು ರಾಜ್ಯಕ್ಕೆ ನಂಬರ್ 1 ಸ್ಥಾನದಲ್ಲಿತ್ತು.
ಈಗ ಈ ಧಾರಾವಾಹಿಯ ಟೆಲಿಕಾಸ್ಟ್ ಸಮಯ ಬದಲಾಗಿದ್ದರೂ ಸಹ, ಜನರಿಗೆ ಪುಟ್ಟಕ್ಕನ ಮೇಲೆ ಪ್ರೀತಿ ಕಡಿಮೆ ಆಗಿರಲಿಲ್ಲ. ಆದರೆ ಪುಟ್ಟಕ್ಕನ ಮಗಳು ಸ್ನೇಹಾ ಪಾತ್ರವನ್ನೇ ಈಗ ಧಾರಾವಾಹಿಯಲ್ಲಿ ಮುಗಿಸಿದ್ದು, ವೀಕ್ಷಕರ ಕೋಪಕ್ಕೆ ಗುರಿಯಾಗಿದೆ ಜೀಕನ್ನಡ ವಾಹಿನಿ. ಈ ಧಾರಾವಾಹಿಯ ಮುಖ್ಯಪಾತ್ರಗಳಲ್ಲಿ ಸ್ನೇಹಾ ಕೂಡ ಒಂದು. ಪುಟ್ಟಕ್ಕನ ಎರಡನೇ ಮಗಳು ಸ್ನೇಹಾ, ಚಿಕ್ಕಂದಿನಿಂದ ಅಮ್ಮನಿಗೆ ಆದ ಅವಮಾನಗಳನ್ನು ನೋಡಿಕೊಂಡು ಬೆಳೆದ ಹುಡುಗಿ, ಐಎಎಸ್ ಆಫೀಸರ್ ಆಗೇ ಆಗ್ತೀನಿ ಅಂತ ಕನಸು ಕಂಡ ಹುಡುಗಿ ಸ್ನೇಹ.
ಅದೆಷ್ಟೇ ಅಡೆತಡೆಗಳು ಬಂದರೂ, ಗುರಿಯಿಂದ ಹಿಂದೆ ಸರಿಯದೇ ಮದುವೆಯಾದ ನಂತರ ಕೂಡ ಓದಿ, ಇತ್ತೀಚೆಗೆ ಸ್ನೇಹಾ ಐಎಎಸ್ ಆಫೀಸರ್ ಆಗಿದ್ದಳು. ಈ ಪಾತ್ರ ಒಂದು ರೀತಿ ಹೆಣ್ಣುಮಕ್ಕಳಿಗೆ ಸ್ಪೂರ್ತಿ ತುಂಬಿತ್ತು ಎಂದರೂ ತಪ್ಪಲ್ಲ. ಆದರೆ ಇದೀಗ ಸ್ನೇಹಾ ಪಾತ್ರವನ್ನೇ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಮುಗಿಸಿದ್ದಾರೆ. ಆಕ್ಸಿಡೆಂಟ್ ನಲ್ಲಿ ಸ್ನೇಹಾ ಪಾತ್ರ ಪ್ರಾಣ ಕಳೆದುಕೊಂಡಿದೆ. ನಟಿ ಸಂಜನಾ ಬುರ್ಲಿ ಅವರು ಪುಟ್ಟಕ್ಕನ ಮಕ್ಕಳು ಧಾರಾವಾಹಿ ಇಂದ ಹೊರನಡೆದಿದ್ದಾರೆ..
ಸ್ನೇಹಾಳಿಗೆ ಬ್ರೇನ್ ಡೆಡ್ ಆಗಿದೆ, ಆದರೆ ಹೃದಯ ಇನ್ನು ಇದೆ, ಈಗ ಸ್ನೇಹಾಳ ಹೃದಯವನ್ನು ಮತ್ತೊಬ್ಬರಿಗೆ ಅಳವಡಿಸಬಹುದು ಎನ್ನುವ ಹೊಸ ಟ್ರ್ಯಾಕ್ ಕೂಡ ಶುರುವಾಗುತ್ತಿದೆ. ಆದರೆ ಅಭಿಮಾನಿಗಳಿಗೆ ಮಾತ್ರ ಸ್ನೇಹಾ ಪಾತ್ರ ಮುಕ್ತಾಯ ಆಗಿರುವುದು ಇಷ್ಟವಾಗುತ್ತಿಲ್ಲ. ಚೆನ್ನಾಗಿದ್ದ ಕಥೆನಾ ಈ ಥರ ಮಾಡಿಬಿಟ್ರಿ ಎಂದು ಜೀಕನ್ನಡ ವಾಹಿನಿಗೆ ಬಯ್ಯುತ್ತಿದ್ದಾರೆ ಪುಟ್ಟಕ್ಕನ ಮಕ್ಕಳು ಫ್ಯಾನ್ಸ್. ಟಿಆರ್ಪಿ ಟಾಪರ್ ಆಗಿದ್ದ ಧಾರಾವಾಹಿ ಕಥೆನಾ ಈ ಥರ ಮಾಡಬಾರದಿತ್ತು, ಮುಖ್ಯ ಕಥಾಪಾತ್ರ ಆಗಿರೋ, ಸ್ನೇಹಾ ಪಾತ್ರವನ್ನೇ ಮುಗಿಸಿದ್ದು, ಬೇಜಾರಾಗಿದೆ ಎನ್ನುತ್ತಿದ್ದಾರೆ ವೀಕ್ಷಕರು.
ಇನ್ನು ಹಲವರು ಇನ್ನುಮುಂದೆ ನಾವು ಧಾರಾವಾಹಿ ನೋಡೋದಿಲ್ಲ, ಸ್ನೇಹಾ ಪಾತ್ರ ನಮಗೆಲ್ಲಾ ತುಂಬಾ ಇಷ್ಟವಾಗಿದ್ದ ಪಾತ್ರ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಕಿರುತೆರೆಯಲ್ಲಿ ಮೂಡಿಬರುವ ಪಾತ್ರಗಳು ಜನರ ಜೊತೆಗೆ ಹೆಚ್ಚಾಗಿ ಕನೆಕ್ಟ್ ಆಗಿರುತ್ತದೆ. ಅಂಥ ಪಾತ್ರವನ್ನು ಮುಗಿಸಿದಾಗ ವೀಕ್ಷಕರಿಗೆ ಬೇಸರ ಆಗುವುದು ಸಹಜ. ಇನ್ನುಮುಂದೆ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಕಥೆ ಯಾವ ರೀತಿ ಸಾಗುತ್ತದೆ ಎಂದು ಕಾದು ನೋಡಬೇಕಿದೆ.