ನಟ ದರ್ಶನ್ ಅವರು 6 ತಿಂಗಳ ಹಿಂದೆ ರೇಣುಕಾಸ್ವಾಮಿ ಅವರ ಕೊ** ಪ್ರಕರಣಕ್ಕೆ ಜೈಲು ಸೇರಿದ್ದರು. ಮೈಸೂರಿನಲ್ಲಿ ಇದ್ದ ಅವರನ್ನು ಅರೆಸ್ಟ್ ಮಾಡಿ ಕರೆದುಕೊಂಡು ಬರಲಾಗಿತ್ತು, ಎಲ್ಲಾ ಸಾಕ್ಷಿಗಳು ಸಿಕ್ಕ ಕಾರಣ 6 ತಿಂಗಳ ಕಾಲ ಜೈಲಿನಲ್ಲಿ ಇದ್ದರು. ಈ ಕೇಸ್ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಎಲ್ಲರಿಗೂ ಸಹ 6 ತಿಂಗಳ ನಂತರ ಈಗ ಕೋರ್ಟ್ ರೆಗ್ಯುಲರ್ ಆಗಿಯೇ ಜಾ*ಮೀನು ಮಂಜೂರು ಮಾಡಿದೆ. ಇದರಿಂದ ದರ್ಶನ್ ಅವರ ಅಭಿಮಾನಿಗಳು ತುಂಬಾ ಸಂತೋಷಪಟ್ಟಿದ್ದಾರೆ. ಹಲವು ಕಡೆಗಳಲ್ಲಿ ದರ್ಶನ್ ಅವರ ಫೋಟೋಗೆ ಅಭಿಷೇಕ ಕೂಡ ಮಾಡಲಾಗುತ್ತಿದೆ. ಆದರೆ ರೇಣುಕಾಸ್ವಾಮಿ ಅವರ ಕುಟುಂಬ ದುಃಖದಲ್ಲಿದೆ.
ಈ ಥರದ ಕೆಲಸ ಮಾಡಿ ಅವರ ಮಗನನ್ನು ಬಲಿ ಪಡೆದುಕೊಂಡ ವ್ಯಕ್ತಿಗಳಿಗೆ ಎಲ್ಲರಿಗೂ ಈಗ ಜಾಮೀನು ಸಿಕ್ಕಿದೆ, ಇನ್ನುಮುಂದೆ ಅವರು ಸ್ವತಂತ್ರ್ಯವಾಗಿ ಇರಬಹುದು, ಅವರ ಮಗನಿಗೆ ಆದ ಅನ್ಯಾಯಕ್ಕೆ ಸರಿಯಾದ ನ್ಯಾಯ ದೊರಕಲಿಲ್ಲ ಎಂದು ಆ ಕುಟುಂಬದವರಲ್ಲಿ ನೋವು ಮನೆಮಾಡಿದೆ. ಆದರೆ ಇಲ್ಲಿ ಯಾವ ಕಾರಣಕ್ಕೆ ಕೋರ್ಟ್ ಇಂದ ಜಾಮೀನು ಸಿಕ್ಕಿದೆ ಎನ್ನುವ ಬಗ್ಗೆ ಇನ್ನೂ ಕೂಡ ಸರಿಯಾದ ಮಾಹಿತಿ ಹಾಗೂ ಕೇಸ್ ಡೀಟೇಲ್ಸ್ ಸಿಕ್ಕಿಲ್ಲ. ಹಾಗಾಗಿ ಈ ವಿಷಯದಲ್ಲಿ ಬೇರೆ ಬೇರೆ ರೀತಿಯ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಆದರೆ ಎಲ್ಲಾ ಆ*ರೋಪಿಗಳು ಕೂಡ ಇನ್ನುಮುಂದೆ ಫ್ರೀಯಾಗಿ ಇರಲಿದ್ದಾರೆ..
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ನಟ ದರ್ಶನ್ ಅವರಿಗೆ 6 ವಾರಗಳ ಹಿಂದೆ ಆರೋಗ್ಯದ ಕಾರಣಕ್ಕೆ ಕೋರ್ಟ್ ಇಂದ ಜಾಮೀನು ನೀಡಲಾಗಿತ್ತು, ಅವರಿಗೆ ವಿಪರೀತ ಬೆನ್ನು ನೋವು ಇರುವ ಕಾರಣ 6 ವಾರಗಳ ಮಧ್ಯಂತರ ಜಾಮೀನನ್ನು ಕೋರ್ಟ್ ನೀಡಿತ್ತು. ದರ್ಶನ್ ಅವರಿಗೆ ಚಿಕಿತ್ಸೆ ಸಿಕ್ಕಿ, ಅವರಿಗೆ ಆಪರೇಷನ್ ಮಾಡಬೇಕು ಎಂದು ವೈದ್ಯರು ಹೇಳಿದ್ದರು. ಆದರೆ ಇದುವರೆಗೂ ದರ್ಶನ್ ಅವರಿಗೆ ಆಪರೇಶ್ ಮಾಡಿಸಿಲ್ಲ. ಜಾ*ಮೀನಿಗೆ ಸಂಬಂಧಿಸಿದ ವಿಚಾರಣೆಯಲ್ಲಿ ಡಿಸೆಂಬರ್ 11ರಂದು ದರ್ಶನ್ ಅವರಿಗೆ ಆಪರೇಶನ್ ನಡೆಯುತ್ತದೆ ಎಂದು ಹೇಳಲಾಗಿತ್ತು. ಆದರೆ ಅಂದು ಕೂಡ ಆಪರೇಶನ್ ನಡೆದಿಲ್ಲ, ಇನ್ನು ಆಪರೇಷನ್ ಮಾಡಿಸುತ್ತಾರೋ ಎಂದು ಗೊತ್ತಿಲ್ಲ.

ದರ್ಶನ್ ಅವರ ಆರೋಗ್ಯದಲ್ಲಿ ಸಮಸ್ಯೆ ಇದ್ದು, ಸರ್ಜರಿ ಮಾಡಿಸಬೇಕು ಎನ್ನುವ ಕಾರಣಕ್ಕೆ ಜಾಮೀನು ನೀಡಿದ್ದು, ಆದರೆ ಆಪರೇಷನ್ ಆಗಿರಲಿಲ್ಲ. ಇಷ್ಟು ದಿನಗಳ ಕಾಲ ಮುಂದಕ್ಕೆ ಹಾಕಿಕೊಂಡು ಬರಲಾಗಿತ್ತು. ಆದರೆ ಈಗ ಜಾಮೀನು ಸಿಕ್ಕಿರುವ ಕಾರಣ ಸರ್ಜರಿ ಮಾಡಿಸಲೇಬೇಕು ಎನ್ನುವ ಹಾಗೇನು ಇಲ್ಲ. ಅವರಿಗೆ ಬೇಕು ಎಂದರೆ ಮಾಡಿಸಿಕೊಳ್ಳಬಹುದು, ಈಗ ಅವರಿಗೆ ಪೂರ್ತಿ ಫ್ರೀಡಂ ಸಿಕ್ಕ ಹಾಗೆ. ಆದರೆ ಜಾ*ಮೀನು ಸಿಕ್ಕಿದೆ ಎಂದು ತಕ್ಷಣವೇ ಆಸ್ಪತ್ರೆಯಿಂದ ಹೊರಗೆ ಬರುವುದಕ್ಕೆ ಕೂಡ ಆಗುವುದಿಲ್ಲ. ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲೇ ಇರಬೇಕಾಗುತ್ತದೆ. ಬಹುಶಃ ಕೆಲವು ದಿನಗಳ ಕಾಲ ದರ್ಶನ್ ಅವರಿಗೆ ಫಿಸಿಯೋಥೆರಪಿ ಮಾಡಿಸಬಹುದು.
6 ವಾರಗಳ ಹಿಂದೆ ದರ್ಶನ್ ಅವರಿಗೆ ಜಾಮೀನು ಸಿಕ್ಕಿತ್ತು, ಈಗ ಒಟ್ಟಿಗೆ ಎಲ್ಲರಿಗೂ ಸಿಕ್ಕಿದೆ. ಪವಿತ್ರಾ ಗೌಡ ಅವರಿಂದ ಹಿಡಿದು, ಕಂಬಿ ಹಿಂದೆ ಇದ್ದ ಎಲ್ಲರಿಗೂ ಸಹ 7 ತಿಂಗಳ ನಂತರ ಜಾಮೀನು ಸಿಕ್ಕಿದ್ದು, ಈಗ ಎಲ್ಲರೂ ಅವರ ಇಚ್ಛೆಗೆ ತಕ್ಕ ಹಾಗೆ ಇರಬಹುದು. ಒಟ್ಟಿನಲ್ಲಿ ರೇಣುಕಾಸ್ವಾಮಿ ಪ್ರಕರಣಕ್ಕೆ ಇದು ಬಿಗ್ ಟ್ವಿಸ್ಟ್ ಆಗಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಈ ಕೇಸ್ ಗತಿ ಏನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ಎಲ್ಲರಿಗೂ ಜಾ*ಮೀನು ಸಿಕ್ಕಿದೆ ಎಂದರೆ ಕೇಸ್ ಇನ್ನುಮುಂದೆ ಯಾವ ರೀತಿ ಬೇಕಾದರೂ ತಿರುಗಬಹುದು. ಹಾಗಾಗಿ ಪ್ರಕರಣಕ್ಕೆ ಯಾವ ರೀತಿಯ ಮುಕ್ತಿ ಸಿಗುತ್ತದೆ ಎಂದು ಕಾದು ನೋಡಬೇಕಿದೆ..