ಕೋಳಿ ಕಳ್ಳರನ್ನು ಹಿಡಿಯಲು ಕೋಳಿಗಳೇ ಸಹಾಯ ಮಾಡಿದ ಈ ವಿಚಿತ್ರ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಘಟನೆ ನಡೆದದ್ದು ಎಲ್ಲಿ ಎಂಬುದೇ ಎಲ್ಲರ ಪ್ರಶ್ನೆಯಾಗಿದೆ. ಈ ಘಟನೆ ನಡೆದಿರುವುದು ಪಾವಗಡ ತಾಲೂಕಿನ ಪಿ.ರೊಪ್ಪ ಗ್ರಾಮದಲ್ಲಿ ಎನ್ನಲಾಗಿದೆ. ಇಲ್ಲಿನ ಮನೆಯೊಂದರಲ್ಲಿ ಸಾಕಲಾಗಿದ್ದ ನಾಟಿ ಕೋಳಿಗಳನ್ನು ಕದಿಯಲು ಕಳ್ಳರು ಸ್ಕೆಚ್ ಹಾಕಿ, ರಾತ್ರಿಯ ಹೊತ್ತು ಇವುಗಳನ್ನು ಕದಿಯಲು ನೋಡಿದ್ದಾತೆ. ಆದರೆ ಕೋಳಿಗಳ ಸಹಾಯದಿಂದ ಕಳ್ಳರುವ ಮನೆಯವರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು, ವಿಡಿಯೋ ವೈರಲ್ ಆಗಿದೆ.
ಪಾವಗಡ ತಾಲೂಕಿನ ಪಿ.ರೊಪ್ಪ ಗ್ರಾಮದ ಸುಧಾ ಎಂಬವರು ಮನೆಯಲ್ಲಿ ನಾಟಿ ಕೋಳಿ ಸಾಕುತ್ತಿದ್ದರು. ಜೊತೆಗೆ ಕಳ್ಳರ ಕಾಟ ತಪ್ಪಿಸಲು ಸಿಸಿ ಟಿವಿ ಅಳವಡಿಸಿದ್ದರು. ಆದರೆ 5 ಜನರ ಕಳ್ಳ ಗ್ಯಾಂಗ್ ಈ ವಿಚಾರ ತಿಳಿಯದೆ ಗೂಡಿನಲ್ಲೊದ್ದ 40 ಕೋಳಿಗಳಲ್ಲಿ 15 ಕೋಳಿಗಳನ್ನು ಎಗರಿಸಿದ್ದರು. ವಿಡಿಯೋದಲ್ಲಿ ಕಳ್ಳರು ಕೋಳಿಗಳನ್ನು ಮೆಲ್ಲನೆ ಹಿಂಬಾಲಿಸಿ ಅವುಗಳನ್ನು ಕದಿಯುವುದನ್ನು ಕಾಣಬಹುದು.
ಅದಾಗಲೇ ಕಳ್ಳರ ಗ್ಯಾಂಗ್ ಇದ್ದ 40 ಕೋಳಿಗಳ ಪೈಕಿ 15 ಕೋಳಿಗಳನ್ನು ಎಗರಿಸಿದ್ದರು. ಆದರೂ ಅವರ ಅತಿ ಆಸೆ ಕಡಿಮೆಯಾಗಿಲ್ಲ. ಇನ್ನಷ್ಟು ಕೋಳಿಗಳನ್ನು ಕದಿಯುವ ಉದ್ದೇಶದಿಂದ ಗೂಡಿನ ಪಕ್ಕ ಬಂದಾಗ ಕೋಳಿಗಳು ಜೋರಾಗಿ ಕೂಗಿವೆ, ಆಗ ಸುಧಾ ಮತ್ತು ಮನೆಯವರು ಎಚ್ಚೆತ್ತುಕೊಂಡಿದ್ದಾರೆ. ಐವರು ಕಳ್ಳರಲ್ಲಿ ಎಲ್ಲರೂ ತಪ್ಪಿಸಿಕೊಂಡರೂ ಕೂಡ ಒಬ್ಬ ಮನೆಯವರ ಕೈಗೆ ಸಿಕ್ಕಿ ಬಿದ್ದು ಧರ್ಮದೇಟು ತಿಂದಿದ್ದಾನೆ.