ಇತ್ತೀಚಿನ ದಿನಗಳಲ್ಲಿ ಸಿರಿಯಲ್ ಹಾಗೂ ಸಿನಿಮಾ ನಟಿಯರು ಬೋಲ್ಡ್ ಫೋಟೋಶೂಟ್ ನಡೆಸುವ ಟ್ರೆಂಡ್ ಹೆಚ್ಚಾಗುತ್ತಿದೆ. ಈ ಮೂಲಕ ತಮ್ಮ ಸಿನಿ ಕೆರಿಯರ್ ಗಟ್ಟಿ ಮಾಡಿಕೊಳ್ಳುವ ಯೋಚನೆ ನಟಿಯರದ್ದು. ಇದೀಗ ಕರಾವಳಿಯ ಬೆಡಗಿ ಸೋನಲ್ ಮೊಂತೇರೊ ಆ ಸಾಲಿಗೆ ಸೇರಿದ್ದು, ಕೆಂಬಣ್ಣದ ಸಾರಿಯಲ್ಲಿ ಬೋಲ್ಡ್ ಫೋಟೋಶೂಟ್ ನಡೆಸಿದ್ದಾರೆ. ಈ ಫೋಟೋಗಳಲ್ಲಿ ನಟಿ ಮಾದಕವಾಗಿ ನೋಟ ಬೀರಿದ್ದು, ನೆಟ್ಟಿಗರು ಸೋನಲ್ ಮೈಮಾಟಕ್ಕೆ ಫಿದಾ ಆಗಿದ್ದಾರೆ.



ಅಂದಹಾಗೆಯೇ ರೆಡ್ಕಾರ್ಪೆಟ್ ಸ್ಟುಡಿಯೋ ಸೋನಲ್ ಮೊಂತೆರೋ ಅವರ ಫೋಟೋಶೂಟ್ ಮಾಡಿಸುವ ಮಾಡುವ ಮೂಲಕ ಇನ್ಸ್ಟಾದಲ್ಲಿ ಫೋಟೋ ಹಂಚಿಕೊಂಡಿದೆ. ಹಸಿರು ಬಣ್ಣದ ರವಿಕೆ ಜೊತೆಗೆ ಕೆಂಪು ಬಣ್ಣದ ಸೀರೆ ಧರಿಸಿರುವ ನಟಿ ಮಾತ್ರ ಡಿಫರೆಂಟ್ ಆಗಿ ಪೋಸು ನೀಡಿದ್ದಾರೆ. ಬನಾರಸ್ ಸಿನಿಮಾದ ನಟಿಯ ಈ ಬೋಲ್ಡ್ ಫೋಟೋಶೂಟ್ ಕಂಡು ನೆಟ್ಟಿಗರು ಸಖತ್ ಥ್ರಿಲ್ಲ್ ಅಗಿದ್ದಾರೆ. ಸೋನಲ್ ಹೊಸ ಅವತಾರವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದು ಕಮೆಂಟ್ ಸುರಿಮಳೆ ಸುರಿಸುತ್ತಿದ್ದಾರೆ.
ನಟಿ ಸೋನಲ್ ಮೊಂತೆರೋ ಸಿನಿಮಾ ಜರ್ನಿ ಬಗ್ಗೆ ಮಾತನಾಡುವುದಾದರೆ, ಕರಾವಳಿ ಮೂಲದ ಈ ನಟಿ ಒಟ್ಟು 10 ಸಿನಿಮಾದಲ್ಲಿ ನಟಿಸಿದ್ದಾರೆ. ಎಕ್ಕಸಕ ಎಂಬ ತುಳು ಸಿನಿಮಾದ ಮೂಲಕ ಸಿನಿ ಜರ್ನಿ ಆರಂಭಿಸಿದ ಸೋನಲ್ ಮೊಂತೆರೋ 2018ರಿಂದ ಕನ್ನಡ ಸಿನಿಮಾದಲ್ಲಿ ಅವಕಾಶ ಸಿಕ್ಕಿತ್ತು. ಸದ್ಯ ಅವರ ಕೈಯಲ್ಲಿ 4 ಸಿನಿಮಾಗಳಿವೆ, ಅದರಲ್ಲಿ ಬುದ್ಧಿವಂತ 2, ಶುಗರ್ ಫಾಕ್ಟರಿ, ಮಾರ್ಗರೇಟ್ ಲವ್ವರ್ ಆಫ್ ರಾಮಚಾರಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.