ನಟ ಯಶ್ ಅವರು ಒಂದು ಕಾಲದಲ್ಲಿ ಸಾಮಾನ್ಯ ಹುಡುಗನಾಗಿ ಬೆಂಗಳೂರಿಗೆ ಬಂದವರು. ಆದರೆ ಯಶ್ ಅವರಿಗೆ ಬದುಕಿನಲ್ಲಿ ಏನಾದರೂ ಸಾಧಿಸಲೇಬೇಕು ಅನ್ನೋ ಛಲ, ಧೈರ್ಯ ಕೂಡ ಇತ್ತು. ಬೆಂಗಳೂರಿಗೆ ಬಂದು ಇಲ್ಲಿ ನಾನೊಬ್ಬ ಹೀರೋ ಆಗೇ ಆಗ್ತೀನಿ, ಗಾಂಧಿನಗರದಲ್ಲಿ ನನ್ನ ಕಟೌಟ್ ಬಿದ್ದೇ ಬೀಳುತ್ತೆ ಅನ್ನೋ ದೃಢ ನಿರ್ಧಾರ ಹೊಂದಿದ್ದರು. ಅದರಂತೆಯೇ ಮುಂದೆ ಹೆಜ್ಜೆ ಇಟ್ಟರು. ಧಾರಾವಾಹಿಗಳ ಮೂಲಕ ನಟನೆ ಶುರು ಮಾಡಿ, ಸಿಕ್ಕ ಒಂದೊಂದೇ ಅವಕಾಶಗಳನ್ನು ಉಪಯೋಗಿಸಿಕೊಂಡು. ಒಂದೊಂದೇ ಗೆಲುವುಗಳನ್ನು ಪಡೆಯುತ್ತಾ, ಮುಂದೆ ಕೆಜಿಎಫ್ ಅಂಥ ದೊಡ್ಡ ಸಿನಿಮಾ ಮಾಡಿದರು. ಕೆಜಿಎಫ್ ಚಾಪ್ಟರ್ 1 ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಎಷ್ಟು ದೊಡ್ಡ ಮಟ್ಟಕ್ಕೆ ಸದ್ದು ಮಾಡಿತು ಎಂದು ನಮಗೆಲ್ಲಾ ಗೊತ್ತೇ ಇದೆ.
ಇನ್ನು ಕೆಜಿಎಫ್2 ಸಿನಿಮಾ ಅದಕ್ಕಿಂತ ದೊಡ್ಡ ಹೆಸರು ಮಾಡಿತು.
ಕೆಜಿಎಫ್2 ನಂತರ ಯಶ್ ಅವರು ಇಡೀ ಭಾರತ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ, ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇವರ ಮುಂದಿನ ಸಿನಿಮಾಗಾಗಿ ಭಾರತಾದ್ಯಂತ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇನ್ನು ಟಾಕ್ಸಿಕ್ ಸಿನಿಮಾದ ಟೀಸರ್ ಸಹ ಬಿಡುಗಡೆಯಾಗಿ, ಜನರಿಂದ ಅದ್ಭುತವಾದ ರೆಸ್ಪಾನ್ಸ್ ಸಿಕ್ಕಿತು. ಇನ್ನು ಟಾಕ್ಸಿಕ್ ಸಿನಿಮಾ ಈ ವರ್ಷ ಬಿಡುಗಡೆ ಆಗುವುದಿಲ್ಲ. ಮುಂದಿನ ವರ್ಷ, 2026ರ ಮಾರ್ಚ್ 19ರಂದು ಯಶ್ ಅವರ ಟಾಕ್ಸಿಕ್ ಸಿನಿಮಾ ಬಿಡುಗಡೆ ಆಗಲಿದೆ. ಅಷ್ಟೇ ಅಲ್ಲ, ಮುಂದಿನ ವರ್ಷ ಯಶ್ ಅವರ ರಾಮಾಯಣ ಸಿನಿಮಾ ಕೂಡ ಬಿಡುಗಡೆ ಆಗಲಿದೆ. ಅಭಿಮಾನಿಗಳಿಗೆ ಇದಕ್ಕಿಂತ ಏನು ಸಂತೋಷ ಬೇಕು ಹೇಳಿ..

ಯಶ್ ಅವರು ನಡೆದುಬಂದ ಹಾದಿ ಸುಲಭದ್ದಲ್ಲ, ಒಂದು ಕಾಲದಲ್ಲಿ ಯಶ್ ಅವರು, ಗಾಂಧಿನಗರದಲ್ಲಿ ತನ್ಮ ಕಟೌಟ್ ಇರಬೇಕು ಎಂದು ಪಣ ತೊಟ್ಟಿದ್ದರು, ಆ ಕನಸನ್ನು ನನಸು ಮಾಡಿಕೊಂಡರು. ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಯಶ್ ಅವರ ಟಾಕ್ಸಿಕ್ ಸಿನಿಮಾ ಗ್ಲೋಬಲ್ ಲವೆಲ್ ನಲ್ಲಿ ಸದ್ದು ಮಾಡುವುದಕ್ಕೆ ಮುಂದಾಗಿದೆ. ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಇಂಗ್ಲಿಷ್ ಮತ್ತು ಕನ್ನಡ ಎರಡು ಭಾಷೆಯಲ್ಲಿ ಚಿತ್ರೀಕರಣ ಆಗುತ್ತಿರುವ ಸಿನಿಮಾ ಆಗಿದೆ ಟಾಕ್ಸಿಕ್. ನಿರ್ದೇಶಕಿ ಗೀತು ಮೋಹನ್ ದಾಸ್ ಅವರು ನೀಡಿರುವ ಮಾಹಿತಿಯ ಅನುಸಾರ, ಈ ಸಿನಿಮಾವನ್ನು ಗ್ಲೋಬಲ್ ಆಡಿಯನ್ಸ್ ಗಾಗಿ ತಯಾರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಸಿನಿಮಾದ ಕ್ವಾಲಿಟಿ ಹೇಗಿದೆ ಅನ್ನೋದು ಸಿನಿಮಾದ ಒಂದು ಟೀಸರ್ ನೋಡಿಯೇ ಗೊತ್ತಾಗಿದೆ. ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ಸಿನಿಮಾ ಮೂಲಕ ಯಶ್ ಅವರು ಕನ್ನಡ ಚಿತ್ರರಂಗವನ್ನು ಪ್ಯಾನ್ ಇಂಡಿಯಾ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದರು.
ಆದರೆ ಈಗ ಟಾಕ್ಸಿಕ್ ಮೂಲಕ ಗ್ಲೋಬಲ್ ಲೆವೆಲ್ ಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಯಶ್ ಅವರನ್ನು ಕಂಡರೆ ನಮ್ಮೆಲ್ಲರಿಗೂ ಬಹಳ ಹೆಮ್ಮೆ ಇದೆ. ಯಶ್ ಅವರು ಈಗ ಟಾಕ್ಸಿಕ್ ಸಿನಿಮಾ ಶೂಟಿಂಗ್ ಇಂದ ಒಂದು ಬ್ರೇಕ್ ಪಡೆದು, ರಾಮಾಯಣ ಶೂಟಿಂಗ್ ನಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ. ಯಶ್ ಅವರು ರಾಮಾಯಣ ಸಿನಿಮಾದಲ್ಲಿ ರಾವಣ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ಯಶ್ ಅವರು ನಟನೆ ಮಾತ್ರ ಮಾಡುತ್ತಿಲ್ಲ, ರಾಮಾಯಣ ಸಿನಿಮಾದ ನಿರ್ಮಾಪಕರಲ್ಲಿ ಇವರು ಸಹ ಒಬ್ಬರು. ಇದು ಯಶ್ ಅವರ ಕೆರಿಯರ್ ಗೆ ದೊಡ್ಡ ಪ್ಲಸ್ ಆಗಿದೆ. ಇನ್ನು ಟಾಕ್ಸಿಕ್ ಸಿನಿಮಾ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಕೊಡುವುದಾದರೆ, ಈ ಸಿನಿಮಾ ಮುಂದಿನ ವರ್ಷ ತೆರೆ ಕಾಣಲಿದೆ. ಟಾಕ್ಸಿಕ್ ಸಿನಿಮಾದ ಟೀಸರ್ ಅಥವಾ ಟ್ರೈಲರ್ ಅಪ್ಡೇಟ್ ಇನ್ನು ಕೂಡ ಸಿಕ್ಕಿಲ್ಲ.

ಆದರೆ ಯಶ್ ಅವರ ಹುಟ್ಟುಹಬ್ಬದ ದಿವಸ ಅವರ ಕ್ಯಾರೆಕ್ಟರ್ ರಿವೀಲ್ ಟೀಸರ್ ಬಿಡುಗಡೆ ಆಗಿದೆ. ಈ ಟೀಸರ್ ಎಷ್ಟರ ಮಟ್ಟಕ್ಕೆ ಸದ್ದು ಮಾಡಿತ್ತು ಎಂದು ನಮಗೆಲ್ಲಾ ಗೊತ್ತೇ ಇದೆ. 24 ಗಂಟೆಗಳಲ್ಲಿ ದಾಖಲೆಯ ವೀಕ್ಷಣೆ ಕಂಡಿತು ಟಾಕ್ಸಿಕ್. ಇದೀಗ ತಮಿಳು ನಟ ದಳಪತಿ ವಿಜಯ್ ಅವರ ಜನ ನಾಯಗನ್ ಸಿನಿಮಾ ಟೀಸರ್ ಬಿಡುಗಡೆ ಆಗಿದೆ. ನಿನ್ನೆ ವಿಜಯ್ ಅವರ ಹುಟ್ಟುಹಬ್ಬದ ವಿಶೇಷವಾಗಿ ಜ್ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಫ್ಯಾನ್ಸ್ ಗೆ ಬಹಳ ಸಂತೋಷ ಆಗಿದೆ. ಆದರೆ ಇದು ವಿಜಯ್ ಅವರ ಕೊನೆಯ ಸಿನಿಮಾ ಎನ್ನುವುದು ಅವರ ಫ್ಯಾನ್ಸ್ ಗೆ ಬೇಸರ ಆಗಿದೆ. ಈ ಸಿನಿಮಾ ಬಗ್ಗೆ ಎಲ್ಲರಿಗೂ ಬಹಳ ನಿರೀಕ್ಷೆ ಇದೆ. ಇನ್ನು ಈ ಸಿನಿಮಾ ಟೀಸರ್ ವ್ಯುಸ್ ಅನ್ನು ಟಾಕ್ಸಿಕ್ ವೀಕ್ಷಣೆ ಜೊತೆಗೆ ಕಂಪೇರ್ ಮಾಡಲಾಗುತ್ತಿದೆ.
ಟಾಕ್ಸಿಕ್ ಸಿನಿಮಾದ ವೀಕ್ಷಣೆಯನ್ನು ಇದುವರೆಗೂ ಯಾವ ಸಿನಿಮಾ ಕೂಡ ಮುರಿದಿಲ್ಲ. ಟಾಕ್ಸಿಕ್ ಮತ್ತು ಜನ ನಾಯಗನ್ ಎರಡು ಸಿನಿಮಾಗಳನ್ನು ಕೆವಿಎನ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಯಶ್ ಅವರ ಟಾಕ್ಸಿಕ್ ಸಿನಿಮಾ ಟೀಸರ್ ಬಿಡುಗಡೆಯಾದ 24 ಗಂಟೆಗಳಲ್ಲಿ ಬರೋಬ್ಬರಿ 36.1 ಕೋಟಿ ವೀಕ್ಷಣೆ ಪಡೆಯಿತು. ಇದು ನಿಜಕ್ಕೂ ಬಹಳ ಸಂತೋಷದ ವಿಚಾರ ಆಗಿದೆ. ಇನ್ನು ಈ ದಾಖಲೆಯನ್ನು ಬೇರೆ ಯಾವ ಸಿನಿಮಾ ಕೂಡ ಮುರಿದಿಲ್ಲ. ರಾಮ್ ಚರಣ್ ಅವರ ಪೆದ್ದಿ ಸಿನಿಮಾ ಈ ದಾಖಲೆ ಮುರಿಯುತ್ತದೆ ಎನ್ನಲಾಗಿದ್ದು, ಅದು ಆಗಿಲ್ಲ. ಪುಷ್ಪ2 ಸಿನಿಮಾ ಕೂಡ ಈ ದಾಖಲೆ ಮುರಿದಿಲ್ಲ. ಇನ್ನು ಜನ ನಾಯಗನ್ ಸಿನಿಮಾ ಬಗ್ಗೆ ಹೇಳೋದಾದರೆ, ಈ ಸಿನಿಮಾ 24 ಗಂಟೆಗಳಲ್ಲಿ 22.1 ಕೋಟಿ ವೀಕ್ಷಣೆ ಪಡೆದಿದೆ. ಇಷ್ಟು ವೀಕ್ಷಣೆ ಇಂದ ಅತಿಹೆಚ್ಚು ವೀಕ್ಷಣೆ ಪಡೆದಿರುವಲ್ಲಿ 5ನೇ ಸ್ಥಾನ ಪಡೆದಿದೆ.
ಇನ್ನು ವಿಜಯ್ ಅವರ ಕೆಲವು ಅಭಿಮಾನಿಗಳು, ಹೆಚ್ಚು ಚಂದಾದರರು ಇಲ್ಲದ ಯೂಟ್ಯೂಬ್ ಚಾನೆಲ್ ನಲ್ಲಿ ಟ್ರೈಲರ್ ಬಿಡುಗಡೆ ಮಾಡಿದರೆ, ರೀಚ್ ಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಟಾಕ್ಸಿಕ್ ಸಿನಿಮಾದ ಟೀಸರ್ ಕೂಡ ಇದೇ ಯೂಟ್ಯೂಬ್ ಚಾನೆಲ್ ನಲ್ಲೇ ಬಿಡುಗಡೆ ಆಗಿತ್ತು, ಆ ಟೀಸರ್ ಗೆ ಅಷ್ಟು ಒಳ್ಳೆಯ ವೀಕ್ಷಣೆ ಪಡೆಯಿತು.. ಇದೆಲ್ಲವನ್ನು ನೋಡಿದರೆ, ಜನ ನಾಯಗನ್ ಸಿನಿಮಾಗೆ ಅಷ್ಟೇನು ಕ್ರೇಜ್ ಇಲ್ಲ ಎಂದು ಗೊತ್ತಾಗುತ್ತಿದೆ.



