ಲಾಭದೆಡೆಗೆ ಮುಖ ಮಾಡಿದೆ. ಜಿಯೋ, ಏರೆಟೆಲ್ ನಂತಹ ಘಟಾನುಘಟಿ ಸ್ಪರ್ಧಿಗಳ ನಡುವೆ ಪೈಪೋಟಿ ನಡೆಸಿ ಬಿಎಸ್ಎನ್ಎಲ್ ಮತ್ತೊಮ್ಮೆ ತನ್ನ ಸ್ಥಾನ ಭದ್ರ ಪಡೆಸಿಕೊಳ್ಳುವತ್ತ ಗಮನ ಹರಿಸಿದೆ.
ಹೌದು, ಜಿಯೋ ಹಾಗೂ ಏರ್ಟೆಲ್ ಖಾಸಗಿ ಟೆಲಿಕಾಂ ನೆಟವರ್ಕ್ ಸಂಸ್ಥೆಗಳು ತನ್ನ ಗ್ರಾಹಕರನ್ನು ಹಿಡಿತದಲ್ಲಿಟ್ಟಿಕೊಳ್ಳಲು ಲೆಕ್ಕವಿಲ್ಲದಷ್ಟು ಆರ್ಸ್ಗಳೊಟ್ಟಿಗೆ ತಡೆ ರಹಿತ ಸೇವೆಯನ್ನು ಒದಗಿಸುತ್ತಾ ಬಂದಿವೆ. ಖಾಸಗಿ ನೆಟವರ್ಕ್ಗಳ ನಡುವೆ ಸಿಲುಕಿ ಬಿಎಸ್ಎನ್ಎಲ್ ತನ್ನ ಹಳೆಯ ಗ್ರಾಹಕರನ್ನು ಉಳಿಸಿಕೊಳ್ಳಲು ಹಾಗೂ ಹೊಸ ಗ್ರಾಹಕರನ್ನು ತನ್ನತ್ತ ಸೆಳೆಯಲು ಸಾಕಷ್ಟು ಕಷ್ಟಪಟ್ಟಿದೆ ಎಂದರೆ ಸುಳ್ಳಾಗುವುದಿಲ್ಲ.
ಸತತ ಏಳು-ಬೀಳುಗಳನ್ನು ಕಂಡರು ಕುಗ್ಗದೆ ಮುನ್ನುಗಿರುವ ಪರಿಣಾಮ ಬಿಎಸ್ಎನ್ಎಲ್ ಮತ್ತೆ ಲಾಭದೆಡೆಗೆ ಮುಖ ಮಾಡಿದೆ. 2007ರ ಬಳಿಕ ಇದೇ ಮೊದಲ ಬಾರಿಗೆ ಲಾಭದ ಸವಿಯುಂಡಿದ್ದು, ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.

2025ರ ಆರ್ಥಿಕ ವರ್ಷದ 3ನೇ ತ್ರೈಮಾಸಿಕದಲ್ಲಿ 2620ಕೋಟಿ ರೂಪಾಯಿಗಳ ನಿವ್ವಳ ಲಾಭ ಗಳಿಸಿದ್ದೇವೆ ಎಂದು ಬಿಎಸ್ಎನ್ಎಲ್ನ ಸಿಎಂಡಿ ಎ.ರಾಬರ್ಟ್ ಜೆ.ರವಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ತ್ರೈಮಾಸಿಕದಲ್ಲಿ ನಮ್ಮ ಆರ್ಥಿಕ ಕಾರ್ಯಕ್ಷಮತೆಯಿಂದ ನಾವು ಸಂತೋಷಗೊಂಡಿದ್ದೇವೆ. ನಾವಿನ್ಯತೆ, ಗ್ರಾಹಕ ತೃಪ್ತಿ ಹಾಗೂ ಪ್ರಬಲ ನೆಟ್ವರ್ಕ್ ವಿಸ್ತರಣೆಯೇ ಇದಕ್ಕೆ ಕಾರಣವಾಗಿದೆ. ಹೀಗಾಗಿ ಕಳೆದ ವರ್ಷಕ್ಕೆ ಹೋಲಿಸಿದ್ರೆ ಪ್ರಸಕ್ತ ಸಾಲಿನಲ್ಲಿ 1,800 ಕೋಟಿ ರೂ. ನಷ್ಟ ಇಳಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಗ್ರಾಹಕರ ಅನುಭವವನ್ನು ಹೆಚ್ಚಿಸಲು ರಾಷ್ಟಿçÃಯ ವೈಫೈ ರೋಮಿಂಗ್, ಬಿಐಟಿವಿ ಮೂಲಕ ಎಲ್ಲಾ ಮೊಬೈಲ್ ಗ್ರಾಹಕರಿಗೆ ಉಚಿತ ಮನರಂಜನೆ ಹಾಗೂ ಎಲ್ಲಾ ಎಫ್ಟಿಟಿಎಚ್ ಗ್ರಾಹಕರಿಗೆ ಐಎಫ್ಟಿವಿ ಮುಂತಾದ ಹೊಸ ಯೋಜನೆಗಳನ್ನು ಬಿಎಸ್ಎನ್ಎಲ್ ಪರಿಚಯಿಸಿತ್ತು. 262 ಕೋಟಿ ರೂಪಾಯಿ ಲಾಭವು ಬಿಎಸ್ಎನ್ನ ದೀರ್ಘಕಾಲಿನ ಸುಸ್ಥಿರತೆಯನ್ನು ತೋರಿಸುತ್ತದೆ. ಇದರ ಮೊಬಿಲಿಟಿ ಸೇವೆಗಳ ಆದಾಯವು ವರ್ಷದಿಂದ ವರ್ಷಕ್ಕೆ ಶೇ.15ರಷ್ಟು ಹೆಚ್ಚಾಗಿದ್ದು, ಫೈಬರ್-ಟು-ದಿ-ಹೋಮ್ ಮತ್ತು ಲೀಸ್ಟ್ ಲೈನ್ ಸೇವೆಗಳ ಆದಾಯವು ಅನುಕ್ರಮವಾಗಿ ಶೇ.18 ಹಾಗೂ ಶೇ.14ರಷ್ಟು ಏರಿಕೆಯಾಗಿದೆ.
ಇನ್ನೂ ಬಿಎಸ್ಎನ್ಎಲ್ಗೆ ಕೇಂದ್ರ ಸರ್ಕಾರವು ಸಾಕಷ್ಟು ಬೆಂಬಲ ನೀಡಿದ್ದು, 2019ರಲ್ಲಿ, 69,000 ಕೋಟಿ ರೂ., 2021ರಲ್ಲಿ 1.64 ಲಕ್ಷ ಕೋಟಿ ರೂ. ಹಾಗೂ 2023ರಲ್ಲಿ 89,೦೦೦ ಕೋಟಿ ರೂ.ಗಳ ಅ