ಸಧ್ಯಕ್ಕೆ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ನಲ್ಲಿ ಟಿ 20 ಸರಣಿಯನ್ನು ಆಡುತ್ತಿದೆ, ಇದಾದ ನಂತರ ಮೂರು ಟಿ 20 ಪಂದ್ಯಗಳ ಸರಣಿಯನ್ನು ಆಡಲು ಐರ್ಲ್ಯಾಂಡ್ ಗೆ ತೆರಳಲಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾದ ದೊಡ್ಡ ದೊಡ್ಡ ದಿಗ್ಗಜರು ರೆಸ್ಟ್ ತೆಗೆದುಕೊಳ್ಳುತ್ತಿದ್ದಾರೆ, ಇದರ ಜೊತೆಗೆ ಟೀಂ ಇಂಡಿಯಾದ ಕೋಚ್ ಇಲ್ಲದೇ ಈ ಟೀಂ ಈ ಸರಣಿಯನ್ನು ಆಡುತ್ತಿದೆ, ಅಂದರೆ ಈ ಸರಣಿಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ , ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೆಜಾ, ಶುಭ್ಮನ್ ಗಿಲ್ ಈ ರೀತಿ ಹಲವು ಪ್ರಮುಖ ಆಟಗಾರರು ಹೋಗುತ್ತಿಲ್ಲ, ಅದಕ್ಕಾಗಿ ಜಸ್ಪ್ರಿತ್ ಬೂಮ್ರರನ್ನು ನಾಯಕರಾಗಿ ಮಾಡಿ ಯುವಕರ ಟೀಂ ಅನ್ನು ಐರ್ಲ್ಯಾಂಡ್ ಸರಣಿಗೆ ಕಳುಹಿಸಲಾಗುತ್ತಿದೆ,

ಹೆಡ್ ಕೋಚ್ ಆದ ರಾಹುಲ್ ದ್ರಾವಿಡ್ ಅವರು, ಮುಂದೆ ಬರುವ ಏಷ್ಯಾ ಕಪ್ ಹಾಗೂ ವಿಶ್ವಕಪ್ ಗಾಗಿ ಕೆಲಸ ಮಾಡಲು ಈ ಸರಣಿಯಿಂದ ರೆಸ್ಟ್ ತೆಗೆದುಕೊಳ್ಳುತ್ತಿದ್ದಾರೆ, ಅದಕ್ಕಾಗಿ ಅವರ ಬದಲು ಸಬ್ಸ್ಟಿಟ್ಯೂಟ್ ಕೋಚ್ ಆಗಿ ವಿ.ವಿ.ಎಸ್ ಲಕ್ಷ್ಮಣ್ ಅವರನ್ನು ಬೂಮ್ರ ಅವರ ತಂಡದ ಜೊತೆ ಕಳುಹಿಸಬೇಕು, ಎಂದು ತೀರ್ಮಾನಿಸಲಾಗಿತ್ತು.

ಆದರೆ ಇದೀಗ ಬಂದಿರುವ ಸುದ್ಧಿಯ ಪ್ರಕಾರ ವಿ.ವಿ.ಎಸ್ ಲಕ್ಷ್ಮಣ್ ಕೂಡ ಐರ್ಲ್ಯಾಂಡ್ ಗೆ ಹೋಗುತ್ತಿಲ್ಲ, , ವಿ.ವಿ.ಎಸ್ ಲಕ್ಷ್ಮಣ್ ರವರು ಬೆಂಗಳೂರಿನ ಎನ್.ಸಿ.ಎ ಮುಖ್ಯಸ್ಥರಾಗಿದ್ದಾರೆ. ಅವರು ಐರ್ಲ್ಯಾಂಡ್ ಗೆ ಹೋಗುತ್ತಿಲ್ಲ ಆದರಿಂದ ಅವರ ಸ್ಟಾಪಿಂಗ್ ಕೋಚ್ ಆದ ಸಿತಾಂಚೂ ಕೋಟಕ್ ಮತ್ತು ಸಾಯಿರಾಜ್ ಬಹುತುಲೆ ಅವರು ಅವರ ಬದಲಾಗಿ ಟೀಂ ಇಂಡಿಯಾ ಜೊತೆ ಪ್ರಯಾಣ ಬೆಳೆಸುತ್ತಿದ್ದಾರೆ,
2007 ರಲ್ಲಿ ಟಿ 20 ವರ್ಲ್ಡ್ ಕಪ್ ಆಡಲು ಕೂಡ ಟೀಂ ಇಂಡಿಯಾ ಜೊತೆ ಕೋಚ್ ಹೋಗಿರಲಿಲ್ಲ. ಆ ಸಮಯದಲ್ಲಿ ಬೌಲಿಂಗ್ ಕೋಚ್, ಫೀಲ್ಡಿಂಗ್ ಕೋಚ್ ಹಾಗೂ ಮ್ಯಾನೇಜರ್ ಜೊತೆ ಟೀಂ ಹೋಗಿ ಟಿ 20 ವಿಶ್ವಕಪ್ ಅನ್ನು ಗೆದ್ದಿತ್ತು, ಧೋನಿಯವರ ನಾಯಕತ್ವದಲ್ಲಿ ಇದೆಲ್ಲಾ ನಡೆದಿತ್ತು, ಕೋಚ್ ಇಲ್ಲದೇಯೇ ಜಸ್ಪ್ರಿತ್ ಬೂಮ್ರ ರವರು ಐರ್ಲ್ಯಾಂಡ್ ವಿರುದ್ಧದ ಸರಣಿಯಲ್ಲಿ ನಾಯಕತ್ವವನ್ನು ನಡೆಸಬೇಕಿದೆ, ಆದರೆ ಸಪೋರ್ಟಿಂಗ್ ಸ್ಟಾಪ್ ಗಳು ಇರುತ್ತಾರೆ, ಅವರ ಗೈಡೆನ್ಸ್ ಸಿಗಬಹುದು.