ತಮಿಳಿನ ಸ್ಟಾರ್ ಹೀರೋಗಳಲ್ಲಿ ವಿಶಾಲ್ ಸಹ ಒಬ್ಬರು. ಸುಮಾರು 2 ದಶಕಗಳ ಅವಧಿ ಇಂದ ವಿಶಾಲ್ ಅವರು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ವಿಶಾಲ್ ಅವರು ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದು, ಇವರ ಆಕ್ಷನ್ ಸಿನಿಮಾಗಳು ಜನರಿಗೆ ತುಂಬಾ ಇಷ್ಟ. ಬಹಳ ಸ್ಟ್ರಾಂಗ್ ಆಗಿದ್ದ ವಿಶಾಲ್ ಅವರ ಆರೋಗ್ಯಕ್ಕೆ ಇದೀಗ ಸಮಸ್ಯೆ ಉಂಟಾಗಿದ್ದು, ಇವರ ಸಿನಿಮಾ ಪ್ರೀ ರಿಲೀಸ್ ಈವೆಂಟ್ ಕಾರ್ಯಕ್ರಮಕ್ಕೆ ಬಂದಾಗ ಇವರ ಸ್ಥಿತಿಯನ್ನು ನೋಡಿ ಫ್ಯಾನ್ಸ್ ಹಾಗೂ ನೆಟ್ಟಿಗರು, ಮಾಧ್ಯಮದವರು ಎಲ್ಲರೂ ಸಹ ಶಾಕ್ ಆಗಿದ್ದಾರೆ. ನಟನಿಗೆ ಏನಾಯ್ತು ಎನ್ನುವ ಪ್ರಶ್ನೆ ಕೂಡ ಶುರುವಾಗಿದೆ.
ಇದೀಗ ನಟ ವಿಶಾಲ ಅವರು ತಮ್ಮ ಮುಂಬರುವ ಸಿನಿಮಾ ಪ್ರೀರಿಲೀಸ್ ಈವೆಂಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ನಟಿ ಖುಷ್ಬೂ ಅವರ ಪತಿ ಸುಂದರ್ ಸಿ ಅವರು ನಿರ್ದೇಶನ ಮಾಡಿರುವ ಸಿನಿಮಾ ಆಗಿದ್ದು, 13 ವರ್ಷಗಳ ಹಿಂದೆಯೇ ತೆರೆ ಕಾಣಬೇಕಿದ್ದ ಸಿನಿಮಾ. ಆದರೆ ಹಣಕಾಸಿನ ಸಮಸ್ಯೆ ಇದ್ದ ಕಾರಣ, ಇನ್ನಷ್ಟು ತೊಂದರೆಗಳನ್ನು ಎದುರಿಸಿದ ಕಾರಣ ಈ ಸಿನಿಮಾ ಆಗ ತೆರೆಕಂಡಿರಲಿಲ್ಲ. ಸಿನಿಮಾದ ಹೆಸರು ಮದಗಜರಾಜ. ಈ ಸಿನಿಮಾದಲ್ಲಿ ವಿಶಾಲ್ ಅವರಿಗೆ ನಾಯಕಿಯರಾಗಿ ವರಲಕ್ಷ್ಮೀ ಶರತ್ ಕುಮಾರ್ ಹಾಗೂ ಅಂಜಲಿ ಇಬ್ಬರು ನಟಿಸಿದ್ದಾರೆ. ಸಿನಿಮಾ ಈ ವರ್ಷ ಪೊಂಗಲ್ ವೇಳೆಗೆ ತೆರೆ ಕಾಣಲಿದೆ.

ಈ ಸಿನಿಮಾದ ಪ್ರೀರಿಲೀಸ್ ಈವೆಂಟ್ ಸಹ ನಡೆದಿದ್ದು, ಚೆನ್ನೈ ನಲ್ಲಿ ನಡೆದ ಈವೆಂಟ್ ಗೆ ವಿಶಾಲ್ ಅವರು ಸಹ ಬಂದಿದ್ದರು. ಆದರೆ ವಿಶಾಲ್ ಅವರು ಬಹಳ ವೀಕ್ ಆಗಿ ಕಂಡರು, ಅವರ ಮಾತುಗಳು ನಡುಗುತ್ತಿತ್ತು, ಮೈಕ್ ಅನ್ನು ಗಟ್ಟಿಯಾಗಿ ಹಿಡಿದುಕೊಳ್ಳಲು ಸಹ ಅವರಿಂದ ಸಾಧ್ಯ ಆಗುತ್ತಿರಲಿಲ್ಲ. ನಿಲ್ಲುವುದಕ್ಕೆ ಸಹ ಸ್ವಲ್ಪ ನಿಶಕ್ತಿ ಕಾಡುತ್ತಿರುವ ಹಾಗಿತ್ತು. ಇದನ್ನೆಲ್ಲಾ ನೋಡಿದ ಅವರ ಫ್ಯಾನ್ಸ್ ಹಾಗೂ ನೆಟ್ಟಿಗರು ಶಾಕ್ ಆಗಿದ್ದಾರೆ. ವಿಶಾಲ್ ಅವರಿಗೆ ಏನಾಗಿದೆ, ಅನಾರೋಗ್ಯ ಇದ್ದರೂ ಯಾಕೆ ಬರಬೇಕಿತ್ತು, ಅವರು ರೆಸ್ಟ್ ಮಾಡಬಹುದಿತ್ತು ಎನ್ನುವ ಮಾತುಗಳು ಕೇಳಿ ಬರುತ್ತಿದೆ. ವಿಶಾಲ್ ಅವರಿಗೆ ವೈರಲ್ ಫೀವರ್ ಆಗಿದೆ ಎಂದು ಮಾಹಿತಿ ಸಿಕ್ಕಿದೆ.
ಈ ಕಾರಣಕ್ಕೆ ಅವರು ಸುಸ್ತಾಗಿದ್ದಾರೆ ಎನ್ನಲಾಗಿದೆ. ತಮ್ಮ ಸಿನಿಮಾ ಪ್ರೀ ರಿಲೀಸ್ ಗೆ, ಹೀರೋ ಆಗಿ ತಾವೇ ಬರದೇ ಹೋದರೆ ಚೆನ್ನಾಗಿರುವುದಿಲ್ಲ ಎಂದು ಬಂದಿದ್ದಾರೆ ವಿಶಾಲ್. ಹುಷಾರಿಲ್ಲ ಎಂದು ಕಾರಣ ಕೊಟ್ಟರು ಹೆಚ್ಚು ಜನ ಅದನ್ನು ನಂಬುವುದಿಲ್ಲ, ಬೇರೆಯದೇ ಅರ್ಥ ಕಟ್ಟಿ ಬಿಡುತ್ತಾರೆ ಎನ್ನುವ ಕಾರಣಕ್ಕೆ ವಿಶಾಲ್ ಅವರು ತಾವಿರುವ ಸ್ಥಿತಿಯಲ್ಲೇ ಕಾರ್ಯಕ್ರಮಕ್ಕೆ ಬಂದಿದ್ದಾರೆ. ವಿಶಾಲ್ ಅವರಿಗೆ ಕುಳಿತುಕೊಂಡು ಮಾತನಾಡಿ ಎಂದು ಆಂಕರ್ ಹೇಳಿದರು ಸಹ ಅವರು ವೇದಿಕೆಗೆ ಗೌರವ ಕೊಡಬೇಕು ಎಂದು ನಿಂತೆ ಮಾತನಾಡಿದ್ದಾರೆ. ಆದರೆ ಇವರನ್ನು ನೋಡಿದ ಫ್ಯಾನ್ಸ್ ಗೆ ಮಾತ್ರ ಬಹಳ ಬೇಸರ ಆಗಿದೆ..
ಹಾಗೆಯೇ ವಿಶಾಲ್ ಅವರ ಈ ಸಿನಿಮಾ 13 ವರ್ಷಗಳ ಹಿಂದೆ ಚಿತ್ರೀಕರಣ ಆಗಿದ್ದ ಕಾರಣ, ಈಗ ಈ ಸಿನಿಮಾ ಹಿಟ್ ಆಗುತ್ತಾ, ಜನರಿಗೆ ಇಷ್ಟ ಆಗುತ್ತಾ ಎನ್ನುವ ಪ್ರಶ್ನೆಗಳು ಸಹ ಕೇಳಿಬಂದಿವೆ. ಆದರೆ ಸಿನಿಮಾದ ಟ್ರೈಲರ್ ನೋಡಿರುವ ಫ್ಯಾನ್ಸ್, ಚೆನ್ನಾಗಿದೆ ಎಂದು ಹೇಳುತ್ತಿದ್ದಾರೆ. ಹಳೆ ಸಿನಿಮಾ ಅನ್ನಿಸೋದಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ವರ್ಷ ಸಂಕ್ರಾಂತಿ ವೇಳೆಗೆ ಯಾವುದೇ ದೊಡ್ಡ ತಮಿಳು ಸಿನಿಮಾ ಬಿಡುಗಡೆ ಆಗುತ್ತಿಲ್ಲ. ಹಾಗಾಗಿ ವಿಶಾಲ್ ಅವರ ಸಿನಿಮಾಗೆ ಯಾವುದೇ ಅಡೆತಡೆ ಇಲ್ಲ. ಸಿನಿಮಾ ಬಿಡುಗಡೆಯಾದ ನಂತರ ಜನರ ರೆಸ್ಪಾನ್ಸ್ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.