ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್’ ಸಿನಿಮಾದ ಕಾವಾಲಯ್ಯ ಹಾಡು ಸದ್ಯ ಸೋಶಿಯಲ್ ಮಿಡೊಯಾದಲ್ಲಿ ಸಕ್ಕತ್ ಟ್ರೆಂಡಿಂಗ್ ನಲ್ಲಿದೆ. ಈ ಹಾಡಿಗೆ ನಟಿ ತಮನ್ನಾ ಬಾಟಿಯಾ ಸಕ್ಕತ್ ಸ್ಟೆಪ್ ಹಾಕಿದ್ದು ಅಭಿಮಾನಿಗಳು ಫಿದಾ ಆಗಿದ್ದಾರೆ. ಇದೀಗ ಮತ್ತೆ ತಮ್ಮನ್ನಾ ಫೋಟೋಶೂಟ್ ನಡೆಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಾಟ್&ಬೋಲ್ಡ್ ಫೋಟೋಗಳು ಸಕ್ಕತ್ ವೈರಲ್ ಆಗುತ್ತಿದೆ.

‘ಜೈಲರ್’ ಸಿನಿಮಾದ ಕಾವಾಲಯ್ಯ ಹಾಡಿಗೆ ತಮನ್ನಾ ಹಾಕಿರುವ ಸ್ಟೆಪ್ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. ಈ ಹಾಡು ಹಾಗೂ ತಮನ್ನಾ ಸೊಂಟ ಬಳುಕಿಸಿದ ಸ್ಟೆಪ್ ಸೋಶಿಯಲ್ ಮೀಡಿಯಾ ರೀಲ್ಸ್ ಗಳಲ್ಲಿ ಹವಾ ಎಬ್ಬಿಸಿದೆ. ಈ ಹಾಡಿನ ನಂತರ ಹಾಲ್ಗೆನ್ನೆ ಚೆಲುವೆ ತಮನ್ನಾಗೆ ಎಲ್ಲಿಲ್ಲದ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಜೊತೆಗೆ ಇದೀಗ ವೈರಲ್ ಆಗುತ್ತಿರುವ ಫೋಟೋಗಳು ತಮನ್ನಾ ನೇಮ್ ಫೇಮ್ ಹೆಚ್ಚಿಸುತ್ತಿದೆ.
ಮೊನ್ನೆಯಷ್ಟೇ ಜೈಲರ್ ಸಿನಿಮಾದ ಆಡಿಯೋ ಲಾಂಚಿಂಗ್ ವೇಳೆ ಸಾಕಷ್ಟು ಮಹಾನ್ ಕಲಾವಿದರ ಸಮಾಗಮವಾಗಿತ್ತು.ಇದೇ ವೇಳೆ ಮಿಲ್ಕಿ ಬ್ಯೂಟಿ ತಮನ್ನಾ ವಿಭಿನ್ನವಾಗಿ ಕಾಣಿಸಿಕೊಂಡಿದ್ದು ಅಭಿಮಾನಿಗಳು ಫುಲ್ಖುಷ್ ಆಗಿದ್ದಾರೆ. ತಮನ್ನಾ ಕಾರ್ಯಕ್ರಮಕ್ಕೆ ಕೆಂಪು ಬಣ್ಣದ ಲಾಂಗ್ ಡ್ರೆಸ್ ನಲ್ಲಿ ಸಕ್ಕತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಸಕ್ಕತ್ ವೈರಲ್ ಆಗುತ್ತಿವೆ.