ಬಾಕ್ಸ್ ಆಫೀಸ್ ದೂಳೆಬ್ಬಿಸಿದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾದಲ್ಲಿ ‘ಕಾವಾಲಯ್ಯ’ ಹಾಡಿನ ಮೂಲಕ ದೇಹ ಕುಣಿಸಿ ಸೋಶಿಯಲ್ ಮೀಡಿಯಾವನ್ನು ಕಬ್ಜ ಮಾಡಿದ ಮಿಲ್ಕಿ ಬ್ಯೂಟಿ ತಮನ್ನಾ ಇದೀಗ ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮನ್ನಾ ಅವರ ಹಾಟ್&ಬೋಲ್ಡ್ ಫೋಟೋಸ್ ಸಕ್ಕತ್ ವೈರಲ್ ಆಗುತ್ತಿದೆ.


ಸದಾ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇರುವ ತಮನ್ನಾ ಇದೀಗ ಅವುಗಳಿಂದ ಬಿಡುವು ಪಡೆದುಕೊಂಡು ವೆಕೇಷನ್ ಮೂಡ್ ನಲ್ಲಿದ್ದಾರೆ. ಮಾಲ್ಡೀವ್ಸ್ನ ಬೀಚ್ ನಲ್ಲಿ ತುಂಡುಡುಗೆ ತೊಟ್ಟು ವಿಹರಿಸುತ್ತಿರುವ, ಮರಳಿನಲ್ಲಿ ಆಡುತ್ತಿರುವ ಜೊತೆಗೆ ಉಯ್ಯಾಲೆಯಲ್ಲೆ ಮಲಗಿರುವ ಕ್ಯೂಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.


ನೆಚ್ಚಿನ ನಟಿ ಮಿಲ್ಕಿ ಬ್ಯೂಟಿ ತಮನ್ನಾ ಅವರ ತುಂಡುಡುಗೆಯ ಹಸಿಬಿಸಿ ಫೋಟೋಗಳನ್ನು ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ. ವೈರಲ್ ಫೋಟಗಳನ್ನು ನೋಡಿ ಅಭಿಮಾನಿಗಳು, ‘ಅಬ್ಬಬ್ಬಾ ತಮನ್ನಾ ನಿಮ್ಮ ಸೌಂದರ್ಯ ನೋಡಲು ಎರಡು ಕಣ್ಣು ಸಾಲದು, ಬಿಕಿನಿಯಲ್ಲಿ ನಿಮ್ಮಷ್ಟು ಚೆನ್ನಾಗಿ ಯಾರೂ ಕಾಣಿಸುವುದಿಲ್ಲ’ ಎಂದೆಲ್ಲ ಕಮೆಂಟ್ ಹಾಕುತ್ತಿದ್ದಾರೆ.