ತನ್ನ ಗಾಯನದಿಂದ ಸಂಗೀತ ಪ್ರೇಮಿಗಳ ಮನ ಗೆದ್ದಿದ್ದ ಸುನಿಧಿ ಚೌಹಾಣ್ ಇದೀಗ ನೈಜೀರಿಯಾದ ಖ್ಯಾತ ಗಾಯಕ ಸೀಕೇಯ ‘ಎಮಿಲಿಯಾನ’ ಎಂಬ ಪ್ರಸಿದ್ಧ ಗೀತೆಗೆ ಬೋಲ್ಡ್ ಸ್ಟೆಪ್ ಹಾಕುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ಸುನಿಧಿ ತನ್ನ ಕೊರಿಯೋಗ್ರಾಫರ್ ಶೆರ್ಲೀನ್ ಫರ್ನಾಂಡೀಸ್ ಅವರೊಂದಿಗೆ ಹೆಜ್ಜೆ ಹಾಕಿದ್ದು, ಈ ಡ್ಯಾನ್ಸ್ ವಿಡಿಯೋ ಸಕ್ಕತ್ ವೈರಲ್ ಆಗುತ್ತಿದೆ.

ತಮ್ಮ ಫೇಮಸ್ ಹಾಡುಗಳಿಂದಷ್ಟೇ ಮನರಂಜನೆ ನೀಡುತ್ತಿದ್ದ ಸುನಿಧಿ ಚೌಹಾಣ್ ಇದೀಗ ಸಕ್ಕತ್ ಡ್ಯಾನ್ಸ್ ಮಾಡಿದ್ದು, ಅಭಿಮಾನಿಗಳು ಹುಬ್ಬೇರಿಸವಂತೆ ಮಾಡಿದೆ. ಸ್ಪೋರ್ಟಿ ಡ್ರೆಸ್ ಮತ್ತು ಬನ್ ಕೇಶವಿನ್ಯಾಸದಲ್ಲಿ ಸುನಿಧಿ ವಿಡಿಯೋದಲ್ಲಿ ಆಕರ್ಷಕವಾಗಿ ಕಾಣುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಸುನಿಧಿ ಇತ್ತೀಚೆಗಷ್ಟೇ ಈ ಡ್ಯಾನ್ಸ್ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೋವನ್ನು ಈವರೆಗೆ 5.5 ಲಕ್ಷ ಜನರು ನೋಡಿ, ಲೈಕ್ ಮಾಡಿದ್ದಾರೆ. ತಮ್ಮ ನೆಚ್ಚಿನ ಗಾಯಕಿಯ ಡ್ಯಾನ್ಸ್ ಕಂಡು ಖುಷಿ ಪಟ್ಟಿರುವ ಅಭಿಮಾನಿಗಳು, ಕಮೆಂಟ್ ಸುರಿಮಳೆ ಸುರಿಸಿದ್ದಾರೆ.